Cricketers with highest duckouts: ಶ್ರೀಲಂಕಾ ಪ್ರವಾಸದ ನಂತರ ಟೀಂ ಇಂಡಿಯಾ ಸದ್ಯಕ್ಕೆ ವಿಶ್ರಾಂತಿ ಪಡೆಯುತ್ತಿದೆ. ರೋಹಿತ್ ಸೇನೆ ಸೆಪ್ಟೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಟೀಂ ಇಂಡಿಯಾದಲ್ಲಿ ಬ್ಯಾಟರ್‌ಗಳು ಫೀಲ್ಡ್‌ಗೆ ಇಳಿದರೆ ರನ್‌ಗಳ ಸುರಿಮಳೆ ಆಗಲಿದೆ ಎಂದೇ ಅರ್ಥ, ಆದರೆ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ ಅತಿ ಹೆಚ್ಚು ಭಾರಿ ಡಕ್‌ಔಟ್ ಆಗಿದ್ದ ಟೀಂ ಇಂಡಿಯಾದ ಆ ಆಟಗಾರರು ಯಾರು ಎಂದು ತಿಳಿಯಲು, ಮುಂದೆ ಓದಿ... ಪ್ರಸ್ತುತ ಟೆಸ್ಟ್ ಕ್ರಿಕೆಟ್ ಸೀಸನ್ ಆರಂಭವಾಗಿದೆ, ಒಂದೆಡೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ಟೆಸ್ಟ್ ಸರಣಿ ನಡೆಯುತ್ತಿದ್ದರೆ, ಇನ್ನೊಂದೆಡೆ ಇಂಗ್ಲೆಂಡ್ ಮತ್ತು ಶ್ರೀಲಂಕಾ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗುತ್ತಿವೆ. ಸದ್ಯ ಟೀಂ ಇಂಡಿಯಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ವಿಶ್ರಾಂತಿ ಪಡೆಯುತ್ತಿದೆ. ರೋಹಿತ್ ಸೇನಾ ಸೆಪ್ಟೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದ್ದು, ಇದಕ್ಕೂ ಮುಂಚಿತವಾಗಿ ದುಲೀಪ್ ಟ್ರೋಫಿಯಲ್ಲಿ ಟೀಂ ಇಂಡಿಯಾದ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ಹರ್ಭಜನ್ ಸಿಂಗ್ ಭಾರತದ ಮಾಜಿ ಆಟಗಾರ ಹಾಗೂ ಸ್ಪಿನ್ನರ್ ಹರ್ಭಜನ್ ಸಿಂಗ್ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಭಾರತಕ್ಕಾಗಿ 103 ಟೆಸ್ಟ್, 236 ODI ಮತ್ತು 28 T20I ಗಳನ್ನು ಆಡಿದ್ದಾರೆ. ಬೌಲಿಂಗ್‌ನಲ್ಲಿ ಭಾರತದ ಪರವಾಗಿ ಭಜ್ಜಿ ಟೆಸ್ಟ್‌ನಲ್ಲಿ 417, ಏಕದಿನದಲ್ಲಿ 269 ಮತ್ತು ಟಿ20 ಕ್ರಿಕೆಟ್‌ನಲ್ಲಿ 25 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆದರೆ, ಬೌಲಿಂಗ್‌ಗೆ ಇಳಿದರೆ ಎದುರಾಲಿ ತಂಡದ ಆಟಗಾರರ ಬೆವರಿಳಿಸುವ ಹರ್ಭಜನ್ ಸಿಂಗ್ ಹೆಚ್ಚು ಭಾರಿ ಡಕ್ ಔಟ್ ಆದ ಮೂರನೇ ಭಾರತೀಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ: ಕೊಹ್ಲಿ ಧೊನಿ ಅಲ್ಲ ಭಾರತದ ಶ್ರೀಮಂತ ಕ್ರಿಕೆಟಿಗ ಈತ!ಯಾರು ಗೊತ್ತಾ? ಇಶಾಂತ್ ಶರ್ಮಾ ಟೀಂ ಇಂಡಿಯಾದ ವೇಗದ ಬೌಲರ್ ಇಶಾಂತ್ ಶರ್ಮಾ ಭಾರತ ಪರ ಇದುವರೆಗೆ 105 ಟೆಸ್ಟ್, 80 ಏಕದಿನ ಮತ್ತು 14 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇಶಾಂತ್ ಟೆಸ್ಟ್‌ನಲ್ಲಿ 311, ಏಕದಿನದಲ್ಲಿ 115 ಮತ್ತು ಟಿ20ಯಲ್ಲಿ 8 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆದರೆ, ಇಶಾಂತ್ ಶರ್ಮಾ ಹೆಚ್ಚು ಭಾರಿ ಡಕ್ ಔಟ್ ಆದ ಎರಡನೇ ಭಾರತೀಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಜಹೀರ್ ಖಾನ್ ಭಾರತದ ಮಾಜಿ ವೇಗಿ ಜಹೀರ್ ಖಾನ್ ಟೀಂ ಇಂಡಿಯಾ ಪರ ಸುದೀರ್ಘ ಕಾಲ ಕ್ರಿಕೆಟ್ ಆಡಿದ್ದರು. ಜಹೀರ್ 2011 ರಲ್ಲಿ ವಿಶ್ವಕಪ್ ಚಾಂಪಿಯನ್ ಟೀಮ್ ಇಂಡಿಯಾದ ಸದಸ್ಯರಾಗಿದ್ದರು. ತಮ್ಮ ವೃತ್ತಿಜೀವನದಲ್ಲಿ ಜಹೀರ್ ಭಾರತಕ್ಕಾಗಿ 92 ಟೆಸ್ಟ್, 200 ODI ಮತ್ತು 17 T20I ಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ 311, ಏಕದಿನದಲ್ಲಿ 282 ಮತ್ತು ಟಿ20ಯಲ್ಲಿ 17 ವಿಕೆಟ್‌ಗಳನ್ನು ಪಡೆದಿದ್ದಾರೆ. ಆದರೆ, ಜಹೀರ್ ಖಾನ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಭಾರಿ ಡಕೌಟ್ ಆದ ಟೀಂ ಇಂಡಿಯಾದ ಆಟಗಾರರ ಪಟ್ಟಿಯಲ್ಲಿ ಮೊದಲನೆ ಸ್ಥಾನದಲ್ಲಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. None
Popular Tags:
Share This Post:
ಒಡೆದ ಹಿಮ್ಮಡಿಯನ್ನು 15 ನಿಮಿಷದಲ್ಲೇ ಸರಿಪಡಿಸುವ ಪರಿಣಾಮಕಾರಿ ಮನೆಮದ್ದು!
- by Sarkai Info
- December 24, 2024
ಜೈಲಿನಲ್ಲಿ ವಿವಸ್ತ್ರ ಮಾಡಿ ಕೂರಿಸಿದ್ರು, ಪ್ರೈವೇಟ್ ಪಾರ್ಟ್ ಅನ್ನು ಬಿಡಲಿಲ್ಲ ಎಂದು ಅಳಲುತೋಡಿಕೊಂಡ ನಟಿ!
December 24, 2024What’s New
Spotlight
Today’s Hot
-
- December 24, 2024
-
- December 23, 2024
-
- December 23, 2024
Featured News
Latest From This Week
ಮಹಿಳೆಯರ ಬಗ್ಗೆ ಪ್ರತಿಯೊಬ್ಬ ಪುರುಷನೂ ತಿಳಿದುಕೊಳ್ಳಲೇಬೇಕಾದ ಕಹಿ ಸತ್ಯಗಳು!!
KANNADA
- by Sarkai Info
- December 23, 2024
ರಾಮ್ ಚರಣ್ ಪುತ್ರಿ ಕ್ಲಿಂಕಾರ ಫೇಸ್ ರಿವೀಲ್! ಎಷ್ಟೊಂದು ಮುದ್ದಾಗಿದ್ದಾಳೆ ಗೊತ್ತಾ ಚಿರಂಜೀವಿ ಮೊಮ್ಮಗಳು!!
KANNADA
- by Sarkai Info
- December 23, 2024
Subscribe To Our Newsletter
No spam, notifications only about new products, updates.