KANNADA

Weekly Horoscope: ಶ್ರೀ ಕೃಷ್ಣ ಜನ್ಮಾಷ್ಟಮಿಯಿಂದ ಆರಂಭವಾಗುತ್ತಿರುವ ಈ ವಾರ ದ್ವಾದಶ ರಾಶಿಗಳಿಗೆ ಹೇಗಿದೆ

Varabhavishya in Kannada From August 26th to September 01st: ಶ್ರೀ ಕೃಷ್ಣ ಜನ್ಮಾಷ್ಟಮಿಯಿಂದ ಆರಂಭವಾಗುತ್ತಿರುವ ಈ ವಾರ ದ್ವಾದಶ ರಾಶಿಗಳಲ್ಲಿ ಯಾವ ರಾಶಿಯವರಿಗೆ ಶುಭ, ಯಾವ ರಾಶಿಯವರಿಗೆ ಅಶುಭ ಫಲಗಳನ್ನು ನೀಡಲಿದೆ ತಿಳಿಯಿರಿ. ಮೇಷ ರಾಶಿಯವರ ವಾರ ಭವಿಷ್ಯ (Aries Weekly Horoscope): ಮೇಷ ರಾಶಿಯ ಜನರಿಗೆ ಈ ವಾರ ಸಮಸ್ಯೆಗಳು ಉಲ್ಬಣಿಸಬಹುದು. ಆದಾಗ್ಯೂ, ವ್ಯಾಪಾರದಲ್ಲಿ ನಿಮ್ಮ ಚಾಣಾಕ್ಷತನದಿಂದ ಉತ್ತಮ ಲಾಭವನ್ನು ಅನುಭವಿಸುವಿರಿ. ನಿಮ್ಮ ವ್ಯಾಪಾರ-ವ್ಯವಹಾರವನ್ನು ವಿಸ್ತರಿಸಲು ಇದು ಅತ್ಯುತ್ತಮ ವಾರವಾಗಿದೆ. ಪ್ರೀತಿಯ ಜೀವನದಲ್ಲಿರುವವರಿಗೆ ಶುಭ ವಾರ್ತೆ ದೊರೆಯಲಿದೆ. ಮಕ್ಕಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಶುಭಫಲಗಳನ್ನು ಕೇಳುವಿರಿ, ಇದು ನಿಮ್ಮ ಮನಸ್ಸಿನ ಸಂತಸವನ್ನು ಇಮ್ಮಡಿಗೊಳಿಸಲಿದೆ. ವೃಷಭ ರಾಶಿಯವರ ವಾರ ಭವಿಷ್ಯ (Taurus Weekly Horoscope): ಶ್ರೀ ಕೃಷ್ಣ ಜನ್ಮಾಷ್ಟಮಿಯೊಂದಿಗೆ ಆರಂಭವಾಗುವ ಈ ವಾರದ ಮೊದಲಾರ್ಧದಲ್ಲಿ ವೃಷಭ ರಾಶಿಯವರು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಸುಖಾಸುಮ್ಮನೆ ಬೇರೆಯವರ ಮುಂದೆ ಆಡಂಬರದಿಂದ ಇರುವುದನ್ನು ತಪ್ಪಿಸಿ. ಆದಾಗ್ಯೂ, ವಾರದ ದ್ವಿತೀಯಾರ್ಧದಲ್ಲಿ ಉದ್ಯಮಿಗಳು ಬಯಸಿದ ಯಶಸ್ಸಿನಿಂದ ಲಾಭ ಪಡೆಯುತ್ತಾರೆ. ಪ್ರೇಮ ಸಂಗಾತಿಯೊಂದಿಗೆ ವಾರಾಂತ್ಯವನ್ನು ಆನಂದಿಸುವಿರಿ. ಕುಟುಂಬದೊಂದಿಗೆ ಧಾರ್ಮಿಕ ಪ್ರವಾಸಕ್ಕೆ ಯೋಜಿಸಲು ಶುಭ ಸಮಯ ಇದಾಗಿದೆ. ಮಿಥುನ ರಾಶಿಯವರ ವಾರ ಭವಿಷ್ಯ (Gemini Weekly Horoscope): ಮಿಥುನ ರಾಶಿಯ ಜನರು ಈ ವಾರ ನಿಮ್ಮವರ ಸುಖ-ಶಾಂತಿಗಾಗಿ ಯಾವುದೋ ಒಂದು ವಿಷಯದಲ್ಲಿ ರಾಜಿ ಮಾಡಿಕೊಳ್ಳಬೇಕಾಗಬಹುದು. ವೃತ್ತಿ ಬದುಕಿನಲ್ಲಿ ಪ್ರಗತಿಯ ಹೊಸ ಹಾದಿಗಳು ತೆರೆಯಲಿವೆ. ಕಚೇರಿಯಲ್ಲಿ ತಂಡದ ಬೆಂಬಲವು ನಿಮಗೆ ಸಹಾಯಕವಾಗಿದೆ ಎಂದು ಸಾಬೀತುಪಡಿಸುತ್ತದೆ. ಆಸ್ತಿ ವಿವಾದಗಳಲ್ಲಿ ಅಗತ್ಯವಿರುವವರಿಗೆ ನಿಮ್ಮ ಸಹಾಯ ಹಸ್ತ ಚಾಚುವುದರಿಂದ ಶುಭವಾಗಲಿದೆ. ಈ ವಾರ ನಿಮ್ಮ ಮಕ್ಕಳಿಗೆ ಸಂಬಂಧಿಸಿದ ಯಾವುದೋ ವಿಷಯದ ಬಗ್ಗೆ ನೀವು ಚಿಂತಿತರಾಗಬಹುದು. ಕರ್ಕಾಟಕ ರಾಶಿಯವರ ವಾರ ಭವಿಷ್ಯ (Cancer Weekly Horoscope): ಕರ್ಕಾಟಕ ರಾಶಿಯ ಜನರು ಈ ವಾರ ತಮ್ಮ ವೃತ್ತಿ ಮತ್ತು ವ್ಯವಹಾರವನ್ನು ಮುನ್ನಡೆಸಲು ಹೊಸ ಹೊಸ ಅವಕಾಶಗಳನ್ನು ಪಡೆಯುತ್ತಾರೆ. ಶ್ರೀ ಕೃಷ್ಣನ ಕೃಪೆಯಿಂದ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಬಗೆಹರಿದು ನಿಮ್ಮ ಹಣಕಾಸಿನ ಪರಿಸ್ಥಿತಿಯೂ ಸುಧಾರಿಸುತ್ತದೆ. ಕೌಟುಂಬಿಕ ಭಿನ್ನಾಭಿಪ್ರಾಯಗಳು ಕಡಿಮೆಯಾಗಿ ನೀವು ಕುಟುಂಬದೊಂದಿಗೆ ಅದ್ಭುತ ಕ್ಷಣಗಳನ್ನು ಆನಂದಿಸುವಿರಿ. ಆದಾಗ್ಯೂ, ನಿಮ್ಮ ಆರೋಗ್ಯವು ಕಾಳಜಿಯ ವಿಷಯವಾಗಿದ್ದು, ಈ ಬಗ್ಗೆ ಜಾಗರೂಕರಾಗಿರಿ. ಇದನ್ನೂ ಓದಿ- ಕೃಷ್ಣ ಜನ್ಮಾಷ್ಟಮಿಯಂದು ಮಡಿಕೆಯನ್ನು ಹೊಡೆಯುವುದು ಏಕೆ ಗೊತ್ತಾ? ಇದರ ಹಿಂದಿದೆ ಬಹುಕಾಲದ ರಹಸ್ಯ! ಸಿಂಹ ರಾಶಿಯವರ ವಾರ ಭವಿಷ್ಯ (Leo Weekly Horoscope): ಸಿಂಹ ರಾಶಿಯ ಜನರಿಗೆ ಈ ವಾರ ಅದ್ಭುತವಾಗಿದೆ. ವೃತ್ತಿ ಬದುಕಿನಲ್ಲಿ ಹೊಸ ಎತ್ತರಕ್ಕೆ ಏರುವಿರಿ. ವ್ಯಾಪಾರದಲ್ಲಿ ಬೆಳವಣಿಗೆಯು ಹಣಕಾಸಿನ ಹೆಚ್ಚಳಕ್ಕೆ ಕಾರಣವಾಗುತ್ತದೆ. ಮಾತ್ರವಲ್ಲ, ವೈಯಕ್ತಿಕ ಜೀವನದಲ್ಲೂ ಸಮಸ್ಯೆಗಳು ಬಗೆಹರಿದು ಪ್ರೇಮ ಸಂಗಾತಿಯೊಂದಿಗಿನ ಪ್ರೇಮ ಸಂಬಂಧಗಳು ಬಲಗೊಳ್ಳುತ್ತವೆ. ಹಳೆಯ ಕಾಯಿಲೆಗಳು ಹಿಂದುರುಗದಂತೆ ತಪ್ಪಿಸಲು ಆರೋಗ್ಯದ ಬಗ್ಗೆ ಸೂಕ್ತ ಕಾಳಜಿ ವಹಿಸಿ. ಕನ್ಯಾ ರಾಶಿಯವರ ವಾರ ಭವಿಷ್ಯ (Virgo Weekly Horoscope): ಕನ್ಯಾ ರಾಶಿಯವರೇ, ಈ ವಾರ ನಿಮ್ಮ ಆರೋಗ್ಯ ಮತ್ತು ಸಂಬಂಧಗಳ ಬಗ್ಗೆ ಉತ್ತಮ ಕಾಳಜಿ ವಹಿಸಿ. ನಿಮ್ಮ ಆರೋಗ್ಯ ವಿಚಾರದಲ್ಲಿ ಸಣ್ಣ ನಿರ್ಲಕ್ಷ್ಯವೂ ಕೂಡ ನಿಮ್ಮನ್ನು ದೊಡ್ಡ ಬಿಕ್ಕಟ್ಟಿನಲ್ಲಿ ಸಿಲುಕಿಸಬಹುದು. ಈ ವಾರ ನೀವು ನಿಮ್ಮ ಜೀವನದಲ್ಲಿ ಬದಲಾವಣೆಗಳನ್ನು ಪ್ರಾರಂಭಿಸಬಹುದು. ಕುಟುಂಬದಲ್ಲಿ ಕೆಲವು ವಿಷಯಗಳ ಬಗ್ಗೆ ಕಲಹ ಉಂಟಾಗಬಹುದು. ಆದರೂ, ಶಾಂತಚಿತ್ತರಾಗಿ ವರ್ತಿಸುವುದರಿಂದ ಸಮಸ್ಯೆಗಳಿಂದ ಕೊಂಚ ಪರಿಹಾರವನ್ನು ಅನುಭವಿಸುವಿರಿ. ತುಲಾ ರಾಶಿಯವರ ವಾರ ಭವಿಷ್ಯ (Libra Weekly Horoscope): ತುಲಾ ರಾಶಿಯವರಿಗೆ ಈ ವಾರ ತುಂಬಾ ಶುಭಕರವಾಗಿರುತ್ತದೆ. ಈ ವಾರ ನೀವು ವ್ಯಾಪಾರಕ್ಕಾಗಿ ದೂರದ ಊರಿಗೆ ಪ್ರಯಾಣವು ಲಾಭದಾಯಕ ಎಂದು ಸಾಬೀತುಪಡಿಸಲಿದೆ. ಪ್ರೀತಿ-ಪ್ರೇಮದಲ್ಲಿರುವವರಿಗೆ ಮನೆಯವರ ಒಪ್ಪಿಗೆ ದೊರೆತು ಜೀವನವು ಅದ್ಭುತವಾಗಿರುತ್ತದೆ. ಈ ವಾರ ನೀವು ಹೊಸ ಆದಾಯದ ಮೂಲಗಳನ್ನು ಪಡೆಯುತ್ತೀರಿ. ಇದರಿಂದ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಸಾಧ್ಯವಾಗುತ್ತದೆ. ವೃಶ್ಚಿಕ ರಾಶಿಯವರ ವಾರ ಭವಿಷ್ಯ (Scorpio Weekly Horoscope): ಈ ವಾರ ವೃಶ್ಚಿಕ ರಾಶಿಯವರ ಜೀವನದಲ್ಲಿ ದೊಡ್ಡ ಬದಲಾವಣೆಗಳಾಗಬಹುದು. ವೃತ್ತಿ ಬದುಕಿನಲ್ಲಿ ನಿಮ್ಮ ಕೆಲಸ ಕಾರ್ಯಗಳಿಂದ ಎಲ್ಲರನ್ನೂ ನಿಮ್ಮತ್ತ ಆಕರ್ಷಿಸುವಿರಿ. ನೀವು ಕಚೇರಿಯಲ್ಲಿ ಪ್ರಾಬಲ್ಯ ಸಾಧಿಸುವಿರಿ, ನಿರೀಕ್ಷೆಗಿಂತ ಹೆಚ್ಚಿನ ಜನರು ನಿಮ್ಮನ್ನು ಗೌರವಿಸುತ್ತಾರೆ. ನಿಮ್ಮ ಸೌಕರ್ಯಗಳಿಗಾಗಿ ನೀವು ಹಣವನ್ನು ಖರ್ಚು ಮಾಡಬಹುದು. ಈ ವಾರ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರೆ ಫಲಿತಾಂಶವು ಧನಾತ್ಮಕವಾಗಿರುತ್ತದೆ. ಹೊಸ ಕೆಲಸಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಶುಭವಾಗಲಿದೆ. ಇದನ್ನೂ ಓದಿ- ಈ ರಾಶಿಯವರಿಗೆ ಅದೃಷ್ಟ ತಂದ ಕೃಷ್ಣ ಜನ್ಮಾಷ್ಟಮಿ.. ಸರ್ವಾರ್ಥ ಸಿದ್ಧಿಯೋಗದಿಂದ ಅಷ್ಟೈಶ್ವರ್ಯ ಪ್ರಾಪ್ತಿ, ಸಿರಿ ಸಂಪತ್ತು ತುಂಬಿ ಹರಿಯುವುದು! ಧನು ರಾಶಿಯವರ ವಾರ ಭವಿಷ್ಯ (Sagittarius Weekly Horoscope): ಕೃಷ್ಣ ಜನ್ಮಾಷ್ಟಮಿಯು ಧನು ರಾಶಿ ಜನರ ಜೀವನದಲ್ಲಿ ಶುಭ ವಾರ್ತೆಯನ್ನು ನೀಡಲಿದೆ. ವ್ಯಾಪಾರದಲ್ಲಿ ಯಶಸ್ಸು ಮತ್ತು ವೃತ್ತಿಯಲ್ಲಿ ಪ್ರಗತಿ ಕಂಡು ಬರಲಿದೆ. ಜೀವನದಲ್ಲಿ ಸಮಸ್ಯೆಗಳನ್ನು ನಿವಾರಿಸಿ, ಹೊಸತನವನ್ನು ಅಳವಡಿಸಿಕೊಳ್ಳಲು ಸೂಕ್ತ ಸಮಯ ಇದಾಗಿದೆ. ನೀವು ಯಾವುದೇ ದೊಡ್ಡ ವಿಷಯಕ್ಕೆ ಸಂಬಂಧಿಸಿದಂತೆ ಯೋಜಿಸುತ್ತಿದ್ದರೆ, ಈ ನಿಟ್ಟಿನಲ್ಲಿ ನೀವು ಖಂಡಿತವಾಗಿಯೂ ಯಶಸ್ವಿಯಾಗುತ್ತೀರಿ. ಮಕರ ರಾಶಿಯವರ ವಾರ ಭವಿಷ್ಯ (Capricorn Weekly Horoscope): ಈ ವಾರ ಮಕರ ರಾಶಿಯವರು ತಮ್ಮ ವೃತ್ತಿ ಮತ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು. ಶ್ರೀ ಕೃಷ್ಣನ ಆಶೀರ್ವಾದದಿಂದ ತಾಳ್ಮೆಯಿಂದ ಯೋಚಿಸಿ ನಿರ್ಧರಿಸುವುದರಿಂದ ಎಲ್ಲವೂ ಶುಭವೇ ಆಗಲಿದೆ. ಉದ್ಯೋಗಸ್ಥ ಮಹಿಳೆಯರ ಸ್ಥಾನಮಾನ ಹೆಚ್ಚಾಗಲಿದೆ. ಪ್ರೇಮ ಸಂಬಂಧದಲ್ಲಿ ಸಂತೋಷದಿಂದ ಸಮಯ ಕಳೆಯುವಿರಿ. ಆರ್ಥಿಕ ವಿಷಯಗಳಲ್ಲಿ ಆತುರದ ನಿರ್ಧಾರಗಳನ್ನು ತಪ್ಪಿಸಿ. ಕುಂಭ ರಾಶಿಯವರ ವಾರ ಭವಿಷ್ಯ (Aquarius Weekly Horoscope): ಈ ವಾರ, ಕುಂಭ ರಾಶಿಯವರು ತಮ್ಮ ಯೋಜಿತ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗುತ್ತಾರೆ. ಇದರಿಂದ ದೊಡ್ಡ ಆರ್ಥಿಕ ಪ್ರಯೋಜನವನ್ನು ಪಡೆಯಬಹುದು. ಈ ವಾರ ನಿಮ್ಮ ವೃತ್ತಿ ಮತ್ತು ವ್ಯವಹಾರವನ್ನು ಮುನ್ನಡೆಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಈ ವಾರ ನೀವು ದೊಡ್ಡ ಒಪ್ಪಂದವನ್ನು ಪಡೆಯಬಹುದು. ಕುಟುಂಬದ ವಿಚಾರದಲ್ಲೂ ಮಕ್ಕಳ ವಿಷಯದಲ್ಲಿ ಸಂತಸದ ಸುದ್ದಿಯನ್ನು ಕೇಳುವಿರಿ. ಮೀನ ರಾಶಿಯವರ ವಾರ ಭವಿಷ್ಯ (Pisces Weekly Horoscope): ಮೀನ ರಾಶಿಯವರಿಗೆ ಈ ವಾರ ಮಿಶ್ರ ಫಲಗಳಿಂದ ಕೂಡಿದ ವಾರ. ನಿಗದಿತ ಸಮಯದಲ್ಲಿ ಕೆಲವು ಕೆಲಸಗಳು ಪೂರ್ಣಗೊಳ್ಳದ ಕಾರಣ ನಿಮ್ಮ ಮನಸ್ಸು ಚಂಚಲ ಮತ್ತು ಭಾರವಾಗಿರುತ್ತದೆ. ಆದಾಗ್ಯೂ, ವಾರದ ದ್ವಿತೀಯಾರ್ಧದಲ್ಲಿ ಹಠಾತ್ ಧನಲಾಭವು ಸಂತೋಷವನ್ನು ತರಲಿದೆ. ಕುಟುಂಬ ಜೀವನವೂ ಆನಂದದಾಯಕವಾಗಿರುತ್ತದೆ. ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.