KANNADA

ಆರ್ ಅಶ್ವಿನ್ ನಿರ್ಧಾರಕ್ಕೆ ಸ್ಪಿನ್ ಮಾಂತ್ರಿಕನ ಬೇಸರ ! ನಿವೃತ್ತಿಗೂ ಮುನ್ನ ಇದೊಂದು ಕೆಲಸ ಮಾಡಬೇಕಿತ್ತು ಎಂದ ಕುಂಬ್ಳೆ !

ಭಾರತದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ Anil Kumble Words on Ashwin Retirement: ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಅಶ್ವಿನ್ ಅವರ ಈ ನಿರ್ಧಾರದಿಂದ ಅಭಿಮಾನಿಗಳು ಮಾತ್ರವಲ್ಲ, ವಿಶ್ವದಾದ್ಯಂತದ ಶ್ರೇಷ್ಠ ಕ್ರಿಕೆಟಿಗರು ಕೂಡಾ ಆಘಾತಕ್ಕೊಳಗಾಗಿದ್ದಾರೆ. ಅಶ್ವಿನ್ ನಿವೃತ್ತಿ ವಿಚಾರದ ಬಗ್ಗೆ ಅನಿಲ್ ಕುಂಬ್ಳೆ ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ. ಅಶ್ವಿನ್ ಭಾರತೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ದಾಖಲೆಯನ್ನು ಮುರಿಯಬೇಕೆಂದು ಕುಂಬ್ಳೆ ಬಯಕೆಯಾಗಿತ್ತು. ಇದರಿಂದಾಗಿ ಕುಂಬ್ಳೆ ಅಶ್ವಿನ್ ನಿರ್ಧಾರದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಭಾರತದ ಎರಡನೇ ಅತ್ಯಂತ ಯಶಸ್ವಿ ಬೌಲರ್ : ಅಶ್ವಿನ್ 106 ಟೆಸ್ಟ್‌ಗಳಲ್ಲಿ 24 ಸರಾಸರಿಯಲ್ಲಿ 537 ವಿಕೆಟ್‌ಗಳೊಂದಿಗೆ ತಮ್ಮ 14 ವರ್ಷಗಳ ಅಂತರರಾಷ್ಟ್ರೀಯ ವೃತ್ತಿಜೀವನವನ್ನು ಕೊನೆಗೊಳಿಸಿದರು. ಶ್ರೇಷ್ಠ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ನಂತರ ಅವರು ಭಾರತದ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. ಅಶ್ವಿನ್ ಅವರ ನಿರ್ಧಾರದಿಂದ ಕುಂಬ್ಳೆ ನಿರಾಶೆಗೊಂಡಿದ್ದಾರೆ. ಏಕೆಂದರೆ ಈ ಆಫ್ ಸ್ಪಿನ್ನರ್ ಭಾರತೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳ ದಾಖಲೆಯನ್ನು ಮುರಿಯಬೇಕು ಎನ್ನುವುದು ಕುಂಬ್ಳೆ ಆಸೆಯಾಗಿತ್ತು. ಇದನ್ನೂ ಓದಿ : ಡ್ರೆಸ್ಸಿಂಗ್‌ ರೂಮ್‌ನಲ್ಲಿ ಒಂಟಿಯಾಗಿ ನಿಂತು ಕಣ್ಣೀರಿಟ್ಟ ವಿರಾಟ್‌ ಕೊಹ್ಲಿ! ವಿಡಿಯೋ ವೈರಲ್‌ ಇಂದು ನೀವು ನಿಮ್ಮ ಅಂತರಾಷ್ಟ್ರೀಯ ವೃತ್ತಿಜೀವನವನ್ನು ಕೊನೆಗೊಳಿಸಿದ್ದೀರಿ ಎಂದು ನನಗೆ ಸ್ವಲ್ಪ ನಿರಾಶೆಯಾಗಿದೆ ಎಂದು ಕುಂಬ್ಳೆ ಹೇಳಿದ್ದಾರೆ. 619 ವಿಕೆಟ್ ಗಳ ದಾಖಲೆಯನ್ನು ನೀವು ಮುರಿಯಬೇಕು ಎಂದು ಬಯಸಿದ್ದೆ. ಆದರೆ ನಿಮ್ಮ ನಿರ್ಧಾರಕ್ಕೂ ನಿಮ್ಮದೇ ಆದ ಕಾರಣಗಳಿವೆ.ಅದನ್ನು ನಾನು ಗೌರವಿಸುತ್ತೇನೆ ಎಂದು ಅಶ್ವಿನ್ ಅವರ ಭವಿಷ್ಯಕ್ಕೆ ಕುಂಬ್ಳೆ ಶುಭ ಹಾರೈಸಿದ್ದಾರೆ.'ನಿಮ್ಮ ಎರಡನೇ ಅಧ್ಯಾಯಕ್ಕೆ ನಿಮಗೆ ಶುಭವಾಗಲಿ, ಎರಡೇ ಅಧ್ಯಾಯ ಮೊದಲ ಅಧ್ಯಾಯದಂತೆ ಅದ್ಭುತವಾಗಿರುತ್ತದೆ ಎನ್ನುವ ಭರವಸೆಯಿದೆಎಂದು ಹೇಳಿದ್ದಾರೆ. ಅಶ್ವಿನ್ ಸಾಧನೆ : ಅಶ್ವಿನ್ ಕೊನೆಯ ಅಂತರಾಷ್ಟ್ರೀಯ ಪಂದ್ಯವು ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಡೇ ಅಂಡ್ ನೈಟ್ ಟೆಸ್ಟ್ ಆಗಿತ್ತು. ಅಶ್ವಿನ್ ಅವರು ಭಾರತಕ್ಕಾಗಿ 116 ODI ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ ಅವರು 156 ವಿಕೆಟ್ ಗಳನ್ನೂ ಪಡೆದಿದ್ದಾರೆ. ಅಶ್ವಿನ್ 65 ಟಿ20 ಪಂದ್ಯಗಳನ್ನಾಡಿದ್ದು, 72 ವಿಕೆಟ್ ಪಡೆದಿದ್ದಾರೆ. ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - ಸಬ್ ಸ್ಕ್ರೈಬ್ಆಗಿರಿ. ಅಶ್ವಿನ್ ಅವರ ಸ್ಪಿನ್‌ನ ಮ್ಯಾಜಿಕ್ ಕೆಂಪು ಚೆಂಡು ಕ್ರಿಕೆಟ್‌ನಲ್ಲಿ ಮಾತ್ರವಲ್ಲ, ಅವರು ಬಿಳಿ ಬಾಲ್ ಮಾದರಿಯಲ್ಲೂ ಅದ್ಭುತವಾಗಿ ಕಂಡು ಬಂದಿದೆ. 116 ಏಕದಿನ ಪಂದ್ಯಗಳಲ್ಲಿ 156 ವಿಕೆಟ್ ಹಾಗೂ 65 ಟಿ20 ಪಂದ್ಯಗಳಲ್ಲಿ 72 ವಿಕೆಟ್ ಪಡೆದಿದ್ದಾರೆ. 2011 ರ ವಿಶ್ವಕಪ್ ಮತ್ತು 2013 ರ ಚಾಂಪಿಯನ್ಸ್ ಟ್ರೋಫಿ ವಿಜೇತ ಭಾರತದ ತಂಡಗಳ ಪ್ರಮುಖ ಸದಸ್ಯರಾಗಿದ್ದು, ಅಶ್ವಿನ್ ಅವರ ಬಹುಮುಖ ಪ್ರತಿಭೆ ಮತ್ತು ಕ್ರಿಕೆಟ್ ಜ್ಞಾನ ಅವರನ್ನು ಎಲ್ಲರ ಮಧ್ಯೆ ಎದ್ದು ಕಾಣುವಂತೆ ಮಾಡಿತ್ತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.