KANNADA

ಜೈಲಿನಲ್ಲಿ ವಿವಸ್ತ್ರ ಮಾಡಿ ಕೂರಿಸಿದ್ರು, ಪ್ರೈವೇಟ್ ಪಾರ್ಟ್ ಅನ್ನು ಬಿಡಲಿಲ್ಲ ಎಂದು ಅಳಲುತೋಡಿಕೊಂಡ ನಟಿ!

Actress Jail Days: ಇತ್ತೀಚಿಗೆ ಭಾರಿ ವಿವಾದ ಸೃಷ್ಟಿಸಿಕೊಂಡು ಜೈಲಿಗೆ ಹೋಗಿ ಸದ್ಯ ಜಾಮೀನಿನ ಮೇಲೆ ಹೊರಗೆ ಬಂದಿರುವ ನಟಿ ತಾನು ಜೈಲಿನಲ್ಲಿ ಅನುಭವಿಸಿದ ಚಿತ್ರಹಿಂಸೆಯನ್ನು ಹೇಳಿಕೊಂಡಿದ್ದಾರೆ. ಜೈಲಿನಲ್ಲಿ ಪ್ರೈವೇಟ್ ಪಾರ್ಟ್ ಅನ್ನು ಮುಚ್ಚಿಕೊಳ್ಳಲು ಬಿಡದಂತೆ ಬೆತ್ತಲೆ ಮಾಡಿ ಅತ್ಯಂತ ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆಯಂತೆ! ಮೊನ್ನೆ ಪುಷ್ಪಾ 2 ಚಿತ್ರದ ಬಿಡುಗಡೆ ವೇಳೆ ಅಭಿಮಾನಿಯೊಬ್ಬರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟ ಅಲ್ಲು ಅರ್ಜುನ್ ಅವರನ್ನು ಬಂಧಿಸಿ ಬಿಡುಗಡೆ ಮಾಡಲಾಗಿತ್ತು. ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ತಾನು ಜೈಲಿನಲ್ಲಿ ಅನುಭವಿಸಿದ ನರಕಯಾತನೆಯನ್ನು ತಿಳಿಸಿದ್ದಾರೆ. ಜೈಲು ಅಧಿಕಾರಿಗಳ ಅಮಾನುಷ ವರ್ತನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ- ಐಶ್ವರ್ಯ ರೈ ಅಭಿಷೇಕ್ ಬಚ್ಚನ್ ಬಿಟ್ಟು ಪ್ರತ್ಯೇಕವಾಗಿ ವಾಸ ಮಾಡುತ್ತಿರುವುದು ಏಕೆ ಗೊತ್ತಾ? ಅವರೇ ತಮಿಳು ನಟಿ ಕಸ್ತೂರಿ . ಚೆನ್ನೈ ಪೊಲೀಸರು ಕಸ್ತೂರಿ ಅವರನ್ನು ಇದೆ ನವೆಂಬರ್ 16ರಂದು ಹೈದರಾಬಾದ್‌ನಲ್ಲಿ ಬಂಧನಕ್ಕೊಳಪಡಿಸಿದ್ದರು. ನಂತರ ಚೆನ್ನೈ ಮ್ಯಾಜಿಸ್ಟ್ರೇಟ್ ಕೋರ್ಟ್ ನವೆಂಬರ್ 22ರಂದು ಅವರಿಗೆ ಜಾಮೀನು ನೀಡಿತ್ತು. ಮೂರೂ ದಿನ ಜೈಲಿನಲ್ಲಿ ಇದ್ದ ಅವರು ಅಲ್ಲಿ ಅನುಭವಿಸಿದ ನೋವು ಎಷ್ಟು ಕರುಣಾಜನಕವಾಗಿತ್ತು ಎನ್ನುವುದನ್ನು ವಿವರಿಸಿದ್ದಾರೆ. ಇದನ್ನೂ ಓದಿ- ಜೈಲಿನಿಂದ ರಿಲೀಸ್‌ ಬೆನ್ನಲ್ಲೆ ಅಲ್ಲು ಅರ್ಜುನ್ ಭೇಟಿಯಾದ ನಟ ಉಪೇಂದ್ರ..! ವಿಡಿಯೋ ವೈರಲ್‌ ಜೈಲು ಸಿಬ್ಬಂದಿ ಪರಿಶೀಲನೆ ನೆಪದಲ್ಲಿ ಸಂಪೂರ್ಣವಾಗಿ ಬಟ್ಟೆ ಬಿಚ್ಚಿಸುತ್ತಾರೆ. ಮೈಯೆಲ್ಲಾ ಮುಟ್ಟಿ ಪರಿಶೀಲನೆ ಮಾಡುತ್ತಾರೆ. ಪ್ರೈವೇಟ್ ಪಾರ್ಟ್ ಅನ್ನೂ ಬಿಡುವುದಿಲ್ಲ. ಅಲ್ಲಿ ಏನಾದರೂ ಇಟ್ಟುಕೊಂಡಿದ್ದೇವಾ ಅಂತಾ ಚಕ್ ಮಾಡುತ್ತಾರೆ. ಒಳ ಉಡುಪುಗಳಲ್ಲಿ ಬಸ್ಕಿ ಹೊಡೆಯುವಂತೆ ಸೂಚಿಸುತ್ತಾರೆ. ಅತ್ಯಂತ ಅಸಹ್ಯವಾಗಿ ನಡೆಸಿಕೊಳ್ಳುತ್ತಾರೆ ಎಂದು ಕಸ್ತೂರಿ ಹೇಳಿದ್ದಾರೆ. ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - ಸಬ್ ಸ್ಕ್ರೈಬ್ಆಗಿರಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.