Tax Saving Tips: ಸಂಬಳದ ಅಥವಾ ಕಷ್ಟಪಟ್ಟು ದುಡಿದ ಹಣದಲ್ಲಿ ಒಂದಿಷ್ಟು ದುಡ್ದು ತೆರಿಗೆ ಪಾಲಾಗುತ್ತದೆ. ಅದು ಬಹುತೇಕ ಜನರಿಗೆ ಬೇಸರವನ್ನೂ ಉಂಟು ಮಾಡುತ್ತದೆ. ಸರಿಯಾದ ರೀತಿಯ ತೆರಿಗೆ ಯೋಜನೆಯನ್ನು ಮಾಡಿದರೆ ಈ ಸಮಸ್ಯೆಯಿಂದ ಪಾರಾಗಬಹುದು. ಪ್ರತಿ ವರ್ಷ, ಏಪ್ರಿಲ್ 1ರಿಂದ ಹೊಸ ಹಣಕಾಸಿನ ವರ್ಷ ಆರಂಭವಾಗುತ್ತದೆ. ಅದಕ್ಕೂ ಮುನ್ನ ನೀವು ಜನವರಿ 1ರಿಂದಲೇ ಕೆಲವೊಂದು ತೆರಿಗೆ ಯೋಜನೆಗಳನ್ನು ರೂಪಿಸಿಕೊಳ್ಳಿ. ಆಗ ತೆರಿಗೆ ಪಾಲಾಗುವ ಬಹಳಷ್ಟು ಹಣವನ್ನು ಉಳಿಸಬಹುದು. ತೆರಿಗೆ ಉಳಿಸಲು ಸಹಾಯಕ ವಾಗುವ ಅಂತಹ ಕೆಲವು ಉಪಾಯಗಳೆಂದರೆ... 1. ಸೆಕ್ಷನ್ 80C ಅಡಿಯಲ್ಲಿ ಹೂಡಿಕೆ: ತೆರಿಗೆಯನ್ನು ಉಳಿಸಲು ಆದಾಯ ತೆರಿಗೆ ಇಲಾಖೆ ಸೆಕ್ಷನ್ 80C ಅತ್ಯಂತ ಸುಲಭವಾದ ಹಾಗು ಅತ್ಯಂತ ಜನಪ್ರಿಯ ಮಾರ್ಗವಾಗಿದೆ. ಇದರಿಂದ 1.5 ಲಕ್ಷದ ರೂಪಾಯಿವರೆಗೆ ಸೇವ್ ಮಾಡಬಹುದು. ಸಾರ್ವಜನಿಕ ಭವಿಷ್ಯ ನಿಧಿ (PPF), ELSS (ಇಕ್ವಿಟಿ-ಲಿಂಕ್ಡ್ ಸೇವಿಂಗ್ಸ್ ಸ್ಕೀಮ್), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC), ಸುಕನ್ಯಾ ಸಮೃದ್ಧಿ ಯೋಜನೆ (SSY) ಇತ್ಯಾದಿ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ನೀವು 80C ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು. ಇದನ್ನೂ ಓದಿ- ರೈಲಿನಲ್ಲಿ ಪ್ರಯಾಣಿಸುವಾಗ ಈ 4 ಸೌಲಭ್ಯಗಳನ್ನು ಉಚಿತವಾಗಿ ಪಡೆಯಬಹುದು: ಯಾವ್ಯಾವ ಸೌಲಭ್ಯ, ಹೇಗೆ ಪಡೆಯುವುದು ಇಲ್ಲಿದೆ ಮಾಹಿತಿ 2. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ (NPS) ಹೂಡಿಕೆ: ತೆರಿಗೆ ಉಳಿಸುವ ವಿಷಯ ದಲ್ಲಿ ಎನ್‌ಪಿಎಸ್ ಕೂಡ ಉತ್ತಮ ಆಯ್ಕೆಯಾಗಿದೆ. ಎನ್‌ಪಿಎಸ್ ನಲ್ಲಿ ಹೂಡಿಕೆ ಮಾಡಿದರೆ ಆದಾಯ ತೆರಿಗೆಯ ಸೆಕ್ಷನ್ 80CCD ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ. ಇದು 80CCD(1) ಮತ್ತು 80CCD(2) ಎಂಬ ಎರಡು ಉಪ-ವಿಭಾಗಗಳನ್ನು ಹೊಂದಿದೆ. ಇದಲ್ಲದೆ 80CCD(1)ರಲ್ಲಿ 80CCD(1B) ಮತ್ತೊಂದು ಉಪವಿಭಾಗವಿದೆ. 80CCD(1) ಅಡಿಯಲ್ಲಿ 1.5 ಲಕ್ಷ ರೂಪಾಯಿ ಮತ್ತು 80CCD(1B) ಅಡಿಯಲ್ಲಿ 50,000 ರೂಪಾಯಿವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು. 80CCD(2) ಮೂಲಕ 2 ಲಕ್ಷದ ರೂಪಾಯಿವರೆಗೆ ಉಳಿಸಬಹುದು. 3. ಗೃಹ ಸಾಲದ ಮೇಲಿನ ತೆರಿಗೆ ಪ್ರಯೋಜನಗಳು ಗೃಹ ಸಾಲದ ಮೂಲಕವೂ ಆದಾಯ ತೆರಿಗೆಯನ್ನು ಉಳಿಸಬಹುದು. ಸೆಕ್ಷನ್ 24(b) ಅಡಿಯಲ್ಲಿ ಗೃಹ ಸಾಲದ ಬಡ್ಡಿಯ ಮೇಲೆ 2 ಲಕ್ಷ ರೂಪಾಯಿವರೆಗೆ ಕ್ಲೈಮ್ ಮಾಡಬಹುದು. ಸೆಕ್ಷನ್ 80C ಅಡಿಯಲ್ಲಿ ಅಸಲು ಮರುಪಾವತಿಯ ಮೇಲೆ 1.5 ಲಕ್ಷ ರೂಪಾಯಿವರೆಗೆ ವಿನಾಯಿತಿ ಪಡೆಯಬಹುದು. ಮೊದಲ ಬಾರಿಗೆ ಮನೆ ಖರೀದಿಸಿದರೆ ಸೆಕ್ಷನ್ 80EEA ಅಡಿಯಲ್ಲಿ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಬಹುದು. 4. ಆರೋಗ್ಯ ವಿಮೆ: ಸೆಕ್ಷನ್ 80D ಅಡಿಯಲ್ಲಿ ಕುಟುಂಬ ಮತ್ತು ಪೋಷಕರಿಗೆ ಆರೋಗ್ಯ ವಿಮಾ ಪ್ರೀಮಿಯಂ ಮಾಡಿಸಿದರೆ ತೆರಿಗೆ ಕಡಿಮೆ ಆಗುತ್ತದೆ. ಕುಟುಂಬಕ್ಕೆ 25,000 ರೂಪಾಯಿವರೆಗೆ ಮತ್ತು ಹಿರಿಯ ನಾಗರಿಕರಿಗೆ 50,000 ರೂಪಾಯಿವರೆಗೆ ಪಾವತಿಸಿದ್ದಾರೆ ರಿಟರ್ನ್ ಕ್ಲೈಮ್ ಮಾಡಬಹುದು. 5. ಶಿಕ್ಷಣ ಮತ್ತು ಬೋಧನಾ ಶುಲ್ಕಗಳು: ಸೆಕ್ಷನ್ 80ಸಿ ಅಡಿಯಲ್ಲಿ ಮಕ್ಕಳ ಶಾಲಾ ಅಥವಾ ಕಾಲೇಜು ಬೋಧನಾ ಶುಲ್ಕಕ್ಕೆ 1.5 ಲಕ್ಷ ರೂಪಾಯಿವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು. 6. ಸೆಕ್ಷನ್ 80TTA ಅಡಿಯಲ್ಲಿ ಬಡ್ಡಿಯ ಮೇಲಿನ ಕಡಿತ: ಸೆಕ್ಷನ್ 80TTA ಅಡಿಯಲ್ಲಿ ಉಳಿತಾಯ ಖಾತೆಯಿಂದ ಗಳಿಸಿದ ಬಡ್ಡಿಯ ಮೇಲೆ 10,000 ರೂಪಾಯಿವರೆಗೆ ತೆರಿಗೆ ಉಳಿಸಬಹುದು. ಇದನ್ನೂ ಓದಿ- ತಿಂಗಳಿಗೆ 80-85ಸಾವಿರ ದುಡಿಯುವ ಬೆಂಗಳೂರು ಉಬರ್ ಡ್ರೈವರ್ ಸಾಧನೆಗೆ ಮೆಚ್ಚುಗೆ ಸುರಿಮಳೆ: ವಿಡಿಯೋ ವೈರಲ್ 7. ರಜೆ ಪ್ರಯಾಣ ಭತ್ಯೆ (LTA): ರಜೆ ಪ್ರಯಾಣ ಭತ್ಯೆ (LTA) ಮೂಲಕ ಸ್ವೀಕರಿಸಿದ ಹಣವು ತೆರಿಗೆ ಮುಕ್ತವಾಗಿದೆ. ಆದಾಯ ತೆರಿಗೆ ಕಾಯಿದೆ 1961ರ ಅಡಿ ಉದ್ಯೋಗಿಗಳು ದೇಶೀಯ ಪ್ರಯಾಣಕ್ಕಾಗಿ ಮಾಡಿದ ವೆಚ್ಚಗಳ ಮೇಲೆ ತೆರಿಗೆ ವಿನಾಯಿತಿ ಪಡೆಯಬಹುದು. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 10(5)ರ ಪ್ರಕಾರ ರಜೆ ಪ್ರಯಾಣ ಭತ್ಯೆ (LTA) ವಿನಾಯಿತಿಗೆ ಅರ್ಹವಾಗಿರುತ್ತದೆ. 8. HRA ಮೇಲೆ ತೆರಿಗೆ ವಿನಾಯಿತಿ (ಮನೆ ಬಾಡಿಗೆ ಭತ್ಯೆ): ಬಾಡಿಗೆ ಮನೆಯಲ್ಲಿ ವಾಸಿಸುವವರು HRA ಮೇಲೆ ತೆರಿಗೆ ಉಳಿಸಬಹುದು. ಮೂಲ ವೇತನದ ಶೇಕಡಾ 40/50 ಆಗಿರಬೇಕು. ಈ ಮಿತಿಯು ಮೆಟ್ರೋ ನಗರಗಳಿಗೆ (ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈ) ಶೇಕಡಾ 50 ಮತ್ತು ಮೆಟ್ರೋ ಅಲ್ಲದ ನಗರಗಳಿಗೆ ಶೇಕಡಾ 40. 9. ಸೆಕ್ಷನ್ 80G ಅಡಿಯಲ್ಲಿ ಲಾಭ: ಸೆಕ್ಷನ್ 80G ಅಡಿಯಲ್ಲಿ ಸರ್ಕಾರದಿಂದ ಗುರುತಿಸಲ್ಪಟ್ಟ ನಿಧಿ, ಸಂಸ್ಥೆ ಅಥವಾ ಸಂಸ್ಥೆಯಲ್ಲಿ ಹೂಡಿಕೆ ಮಾಡಿದರೆತೆರಿಗೆ ವಿನಾಯಿತಿ ಪಡೆಯಬಹುದು. ನಗದು ರೂಪದಲ್ಲಿ 2,000 ರೂಪಾಯಿವರೆಗಿನ ದೇಣಿಗೆಗಳ ಮೇಲೆ ತೆರಿಗೆ ವಿನಾಯಿತಿಯನ್ನು ಪಡೆಯಬಹುದು. 2,000 ರೂಪಾಯಿಗಿಂತ ಹೆಚ್ಚಿದ್ದರೆ ಚೆಕ್, ಡಿಮ್ಯಾಂಡ್ ಡ್ರಾಫ್ಟ್ ಅಥವಾ ಇತರ ಪಾವತಿ ಮೋಡ್ ಬಳಸಬೇಕಾಗುತ್ತದೆ. ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - ಸಬ್ ಸ್ಕ್ರೈಬ್ಆಗಿರಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. None
Popular Tags:
Share This Post:
ಒಡೆದ ಹಿಮ್ಮಡಿಯನ್ನು 15 ನಿಮಿಷದಲ್ಲೇ ಸರಿಪಡಿಸುವ ಪರಿಣಾಮಕಾರಿ ಮನೆಮದ್ದು!
- by Sarkai Info
- December 24, 2024
ಜೈಲಿನಲ್ಲಿ ವಿವಸ್ತ್ರ ಮಾಡಿ ಕೂರಿಸಿದ್ರು, ಪ್ರೈವೇಟ್ ಪಾರ್ಟ್ ಅನ್ನು ಬಿಡಲಿಲ್ಲ ಎಂದು ಅಳಲುತೋಡಿಕೊಂಡ ನಟಿ!
December 24, 2024What’s New
Spotlight
Today’s Hot
-
- December 20, 2024
-
- December 20, 2024
-
- December 20, 2024
ಗ್ಯಾರಂಟಿ ಯೋಜನೆಗಳಿಂದ ಬಡ ಕುಟುಂಬಗಳಿಗೆ ಆಸರೆ : ಸಚಿವ ಮಧು ಬಂಗಾರಪ್ಪ
- By Sarkai Info
- December 20, 2024
ಸಿಟಿ ರವಿ ಹೇಳಿಕೆಯಿಂದ ಇಡೀ ಹೆಣ್ಣು ಕುಲಕ್ಕೇ ದೊಡ್ಡ ಅಪಮಾನ: ಡಿಸಿಎಂ ಡಿಕೆ ಶಿವಕುಮಾರ್
- By Sarkai Info
- December 20, 2024
Featured News
ಸಿನಿಮಾದಲ್ಲಿ ಖಳನಾಯಕ, ನಿಜಜೀವನದಲ್ಲಿ ರಾಕಿ ಬಾಯ್ ಅಂಗರಕ್ಷಕ..! ಯಾರೀತ...!
- By Sarkai Info
- December 20, 2024
Latest From This Week
Daily GK Quiz: ಗೋದಿಯನ್ನು ಅಧಿಕವಾಗಿ ಬೆಳೆಯುವ ದೇಶ ಯಾವುದು..?
KANNADA
- by Sarkai Info
- December 20, 2024
ಡೇಂಜರ್.! ಡೇಂಜರ್!! ಡಿಸೆಂಬರ್ ಡೇಂಜರ್!!!; ಪ್ರತಿವರ್ಷ ಡಿಸೆಂಬರ್ನಲ್ಲೇ ಅತಿಹೆಚ್ಚು ಸಾವು ನೋವು!!
KANNADA
- by Sarkai Info
- December 20, 2024
Subscribe To Our Newsletter
No spam, notifications only about new products, updates.