KANNADA

ಮನಿ ಪ್ಲಾಂಟ್ ಅಲ್ಲ ಶ್ರಾವಣ ಶನಿವಾರ ಈ ಗಿಡವನ್ನು ನೆಟ್ಟು ನೋಡಿ ! ಅದೃಷ್ಟ ಲಕ್ಷ್ಮೀ ಮನೆಗೆ ಕಾಲಿಡುವುದು ಗ್ಯಾರಂಟಿ !

Vastu Tips For Plants : ಮನೆ ಅಥವಾ ಮನೆ ಮುಂದೆ ಗಿಡ ಮರಗಳು ಇದ್ದರೆ ತಾಜಾತನ ಮತ್ತು ಧನಾತ್ಮಕತೆಯ ಭಾವ ಇರುವುದು.ಇದಲ್ಲದೆ, ಕೆಲವು ಸಸ್ಯಗಳು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತವೆ. ವಾಸ್ತು ಶಾಸ್ತ್ರದಲ್ಲಿ,ಕೆಲವು ಸಸ್ಯಗಳನ್ನು ಮನೆಗೆ ತುಂಬಾ ಮಂಗಳಕರ ಮತ್ತು ಸಮೃದ್ಧವೆಂದು ಪರಿಗಣಿಸಲಾಗುತ್ತದೆ.ಈ ಗಿಡಗಳನ್ನು ಮನೆಗೆ ತಂದರೆ ಹಣದ ಕೊರತೆ ಇರುವುದಿಲ್ಲ.ಬದಲಿಗೆ ಸಂಪತ್ತು ಹೆಚ್ಚುತ್ತಲೇ ಇರುತ್ತದೆ.ಇದಲ್ಲದೆ, ಈ ಸಸ್ಯಗಳನ್ನು ನೆಡುವುದರಿಂದ ಮನೆಯಲ್ಲಿ ಸಮೃದ್ಧಿ ನೆಲೆಯಾಗುತ್ತದೆ. ಪ್ರಗತಿಯ ಹಾದಿ ತೆರೆದುಕೊಳ್ಳುತ್ತದೆ.ಅಲ್ಲದೆ,ಇದು ಜಾತಕದಲ್ಲಿನ ಅನೇಕ ಗ್ರಹಗಳು ದೋಷಗಳನ್ನು ತೆಗೆದುಹಾಕುತ್ತವೆ.ಈ ಗಿಡಗಳನ್ನು ಮನೆಯಲ್ಲಿ ನೆಟ್ಟರೆ ಅಪಾರ ಪ್ರಮಾಣದ ಆರ್ಥಿಕ ಲಾಭವಾಗುವುದು. ಅದೃಷ್ಟವನ್ನೇ ಬದಲಿಸುತ್ತದೆ ಈ ಸಸ್ಯ : ಮನಿ ಪ್ಲಾಂಟ್ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ. ಮನಿ ಪ್ಲಾಂಟ್ ಹೊರತುಪಡಿಸಿ ಯಾವ ಸಸ್ಯಗಳನ್ನು ನೆಟ್ಟರೆ ಹಣವನ್ನು ಆಕರ್ಷಿಸುತ್ತದೆ ಎನ್ನುವುದನ್ನು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ವಾಸ್ತುವಿನಲ್ಲಿ ಹೇಳಲಾಗಿರುವ ಬಹಳ ಮುಖ್ಯವಾದ ಸಸ್ಯವೇ ಶಮಿ. ಮನೆಯಲ್ಲಿ ಶಮಿ ಗಿಡ ಅಥವಾ ಶಮಿ ವೃಕ್ಷವಿದ್ದರೆ ಶನಿದೇವನ ಆಶೀರ್ವಾದವು ಕುಟುಂಬದ ಮೇಲೆ ಸದಾ ಇರುತ್ತದೆ.ಅಲ್ಲದೆ,ಇದು ಶನಿ ಸಾಡೇಸಾತಿ ಅಂದರೆ ಏಳೂವರೆ ವರ್ಷದ ಶನಿದೆಸೆ ಅಥವಾ ಧೈಯಾ ಅಂದರೆ ಎರಡೂವರೆ ವರ್ಷದ ಶನಿ ದೆಸೆಯಿದ್ದವರಿಗೆ ವಿಶೇಷ ಪ್ರಯೋಜನ ನೀಡುತ್ತದೆ.ಈ ಗಿಡವನ್ನು ಮನೆಯಲ್ಲಿರಿಸಿ ಪ್ರತಿದಿನ ಪೂಜಿಸಬೇಕು. ಇದು ಶನಿಯ ದುಷ್ಪರಿಣಾಮಗಳಿಂದ ಪರಿಹಾರವನ್ನು ನೀಡುತ್ತದೆ. ಇದನ್ನೂ ಓದಿ : ಮನೆಯ ಮುಂದೆ ಇದೊಂದು ಗಿಡ ನೆಟ್ಟು ನೋಡಿ... ಒಂದೇ ಒಂದು ಹಾವು ಕೂಡ ಅತ್ತಕಡೆ ಸುಳಿಯಲ್ಲ! ಇದರ ವಾಸನೆಗೆ ಓಡಿ ಹೋಗುತ್ತೆ ವಿಶೇಷ ಕೃಪೆ ತೋರುತ್ತಾಳೆ ಧನ -ಧಾನ್ಯ ಲಕ್ಷ್ಮೀ : ಮನೆಯಲ್ಲಿ ಶಮಿ ಗಿಡ ನೆಟ್ಟರೆ ಲಕ್ಷ್ಮೀ ದೇವಿ ಪ್ರಸನ್ನಳಾಗುತ್ತಾಳೆ.ಮನೆಯಲ್ಲಿ ಹಣದ ಹರಿವು ಹೆಚ್ಚುತ್ತದೆ. ಮನೆ ಮಂದಿಯ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚುತ್ತಲೇ ಇರುತ್ತದೆ. ಶ್ರಾವಣ ಮಾಸದಲ್ಲಿ ಶಮಿ ಗಿಡವನ್ನು ನೆಡಬೇಕು. ಇನ್ನು ಶ್ರಾವಣ ಶನಿವಾರ ಈ ಗಿಡವನ್ನು ಮನೆಯಲ್ಲಿ ನೆಡಬೇಕು. ಹಾಗೆಯೇ ಪ್ರತಿದಿನ ಬೆಳಗ್ಗೆ ಶಮಿ ಗಿಡಕ್ಕೆ ನೀರು ಅರ್ಪಿಸಿ ಸಂಜೆ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಬೇಕು. ಮನೆಯಲ್ಲಿ ಶಮಿ ಗಿಡ ಇಡಲು ಸೂಕ್ತ ಸ್ಥಳ : ಶಮಿ ಗಿಡವನ್ನು ಮನೆಯ ಮುಖ್ಯ ದ್ವಾರದ ಬಳಿ ನೆಟ್ಟರೆ ಅದು ಅತ್ಯಂತ ಶ್ರೇಯಸ್ಕರ. ಮನೆಯಿಂದ ಹೊರಗೆ ಬಂದಾಗ, ನಿಮ್ಮ ಬಲಭಾಗದಲ್ಲಿ ಈ ಸಸ್ಯ ಇರಬೇಕು. ಇದಲ್ಲದೇ ಮನೆಯ ಛಾವಣಿಯ ಮೇಲೂ ಶಮಿ ಗಿಡ ನೆಡಬಹುದು.ಅಲ್ಲದೆ, ಶಮಿ ಗಿಡವನ್ನು ಮನೆಯ ದಕ್ಷಿಣ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ನೆಡಬಹುದು. ಇದನ್ನೂ ಓದಿ : ಮದುವೆಯಾದ ಸ್ತ್ರೀ ಹಣೆಯ ಮೇಲೆ ಕುಂಕುಮ ಇಡಬೇಕು ಎನ್ನುವುದಕ್ಕಿದೆ ವೈಜ್ಞಾನಿಕ ಕಾರಣ ..! (ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. NEWS ಇದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.