KANNADA

ಸೋಲಿನ ಮೇಲೆ ಸೋಲು... ಕಳಪೆ ದಾಖಲೆ ಪಟ್ಟಿಯಲ್ಲಿ ರೋಹಿತ್ ಶರ್ಮಾ ಹೆಸರು! ವಿರಾಟ್, ಧೋನಿ ಸಮಕ್ಕೆ ನಿಂತ ಟೀಂ ಇಂಡಿಯಾ ಕ್ಯಾಪ್ಟನ್‌

India vs Australia, Rohit Sharma Record: ಭಾನುವಾರ (ಡಿಸೆಂಬರ್ 8) ಅಡಿಲೇಡ್‌ನಲ್ಲಿ ಟೀಂ ಇಂಡಿಯಾ 10 ವಿಕೆಟ್‌ಗಳಿಂದ ಸೋತ ನಂತರ ರೋಹಿತ್ ಶರ್ಮಾ ತಮ್ಮ ಹೆಸರಿಗೆ ಕಳಪೆ ದಾಖಲೆಯೊಂದನ್ನು ಸೇರಿಸಿಕೊಂಡಿದ್ದಾರೆ. ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತ್ತು. ಆ ಪಂದ್ಯದಲ್ಲಿ ರೋಹಿತ್ ಅನುಪಸ್ಥಿತಿಯಲ್ಲಿ ಜಸ್ಪ್ರೀತ್ ಬುಮ್ರಾ ನಾಯಕತ್ವ ವಹಿಸಿದ್ದರು. ಇದೀಗ ಎರಡನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿ 1-1ರಲ್ಲಿ ಸಮಬಲ ಸಾಧಿಸಿದೆ. ಇದನ್ನೂ ಓದಿ: ಈ ರಾಶಿಯವರಿಗೆ 19 ವರ್ಷಗಳ ಶನಿ ಮಹಾದಶ.. ನಿರಂತರ ಹಣದ ಮಳೆ, ಮಣ್ಣೂ ಸಹ ಹೊನ್ನಾಗುವ ಕಾಲ, ಹೆಚ್ಚಾಗಲಿದೆ ಬ್ಯಾಂಕ್ ಬ್ಯಾಲೆನ್ಸ್.. ಜೀವನದ ಸರ್ವ ಸುಖವೂ ಪ್ರಾಪ್ತಿ! ಆಸ್ಟ್ರೇಲಿಯಾಕ್ಕೆ ಬರುವ ಮೊದಲು, ರೋಹಿತ್ ನ್ಯೂಜಿಲೆಂಡ್ ವಿರುದ್ಧ ತಮ್ಮ ನಾಯಕತ್ವದಲ್ಲಿ ಸತತ ಮೂರು ಪಂದ್ಯಗಳನ್ನು ಸೋತಿದ್ದರು. ಈಗ ಅಡಿಲೇಡ್‌ನಲ್ಲಿನ ಸೋಲು ಈ ಅನುಕ್ರಮವನ್ನು ಮುಂದಕ್ಕೆ ಕೊಂಡೊಯ್ದಿದೆ. ಟೆಸ್ಟ್‌ನಲ್ಲಿ ಸತತ 4 ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳಲ್ಲಿ ಸೋತ ಭಾರತೀಯ ನಾಯಕರ ಪಟ್ಟಿಗೆ ರೋಹಿತ್‌ ಹೆಸರು ಸೇರಿಕೊಂಡಿದೆ. ಈ ವಿಚಾರದಲ್ಲಿ ರೋಹಿತ್ ಮಾಜಿ ನಾಯಕ ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ ಮತ್ತು ದತ್ತಾ ಗಾಯಕ್ವಾಡ್ ಅವರನ್ನು ಸರಿಗಟ್ಟಿದ್ದಾರೆ. ಈ ಮೂವರ ನಾಯಕತ್ವದಲ್ಲಿಯೂ ಟೀಂ ಇಂಡಿಯಾ ಸತತ 4 ಪಂದ್ಯಗಳಲ್ಲಿ ಸೋತಿತ್ತು. ಇದನ್ನೂ ಓದಿ: ತೆಂಗಿನ ಎಣ್ಣೆಗೆ ʼಈʼ ಪುಡಿ ಬೆರೆಸಿ ಹಚ್ಚಿದ್ರೆ ಒಂದೇ ವಾರದಲ್ಲಿ ಗಾಢಕಪ್ಪು ಕೂದಲು ನಿಮ್ಮದಾಗುತ್ತೆ! ಇಂದೇ ಟ್ರೈ ಮಾಡಿ.. ಸತತ 4 ಅಥವಾ ಅದಕ್ಕಿಂತ ಹೆಚ್ಚು ಟೆಸ್ಟ್ ಪಂದ್ಯಗಳಲ್ಲಿ ಸೋತ ಭಾರತೀಯ ನಾಯಕರು 6- ಎಂಎಕೆ ಪಟೌಡಿ (1967-68) 5- ಸಚಿನ್ ತೆಂಡೂಲ್ಕರ್ (1999-00) 4- ದತ್ತಾ ಗಾಯಕ್ವಾಡ್ (1959) 4- ಮಹೇಂದ್ರ ಸಿಂಗ್ ಧೋನಿ (2011) 4- ಮಹೇಂದ್ರ ಸಿಂಗ್ ಧೋನಿ (2014) 4- ವಿರಾಟ್ ಕೊಹ್ಲಿ (2020-21) 4- ರೋಹಿತ್ ಶರ್ಮಾ (2024) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.