KANNADA

ಚಿನ್ನ ಖರೀದಿಸುವ ಪ್ಲಾನ್‌ ಇದೆಯಾ..? ಆಭರಣ ಪ್ರಿಯರಿಗೆ ಬಂಪರ್‌ ಆಫರ್‌..! ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ

Gold Price Today: ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲಯಲ್ಲಿ ಭಾರಿ ಕುಸಿತವನ್ನು ನಾವು ಕಾಣಬಹುದು, ಶನಿವಾರ, ಜುಲೈ 27ರಂದು ಕೂಡ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತವಾಗಿದೆ. ಹಾಗಾದರೆ ಹೇಗಿದೆ ಇಂದಿನ ಚಿನ್ನದ ಬೆಲೆ..? ತಿಳಿಯಲು ಮುಂದೆ ಓದಿ... ದೇಶದಲ್ಲಿ ಚಿನ್ನದ ಬೆಲೆ ಶನಿವಾರ ಮತ್ತಷ್ಟು ಕುಸಿದಿದೆ. 10 ಗ್ರಾಂನ 22 ಕ್ಯಾರೆಟ್ ಚಿನ್ನದ ಬೆಲೆಯ ಮೇಲೆ ರೂ. 10 ಇಳಿಕೆಯಾಗಿದ್ದು, ಒಟ್ಟು ಬೆಲೆ ರೂ. 62,990. ಶುಕ್ರವಾರ ಬೆಲೆ ರೂ. 63,000 ಇತ್ತು. 100 ಗ್ರಾಂ 22 ಕ್ಯಾರೆಟ್‌ನ ಚಿನ್ನದ ಬೆಲೆ ರೂ. 100 ಇಳಿಕೆಯಾಗುವ ಮೂಲಕ ರೂ. 6,29,900 ಪ್ರಸ್ತುತ 1 ಗ್ರಾಂ ಚಿನ್ನದ ಬೆಲೆ 6,299 ಆಗಿದೆ. 10 ಗ್ರಾಂನ 24 ಕ್ಯಾರೆಟ್ ಚಿನ್ನದ ಬೆಲೆ ರೂ. 10 ಇಳಿಕೆ ಕಂಡಿದ್ದು, ರೂ. 68,720ಕ್ಕೆ ಇಳಿದಿದೆ.ಇನ್ನೂ 24 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ ರೂ. 6,87,200 ಆಗಿದ್ದು,24 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆ ರೂ. 6,872ಕ್ಕೆ ಇಳಿದಿದೆ. ಶನಿವಾರವೂ ದೇಶದ ಪ್ರಮುಖ ಭಾಗಗಳಲ್ಲಿ ಚಿನ್ನದ ಬೆಲೆ ಕುಸಿದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್‌ನ ಬೆಲೆ ರೂ. 63,140. 24 ಕ್ಯಾರೆಟ್ ಚಿನ್ನದ ಬೆಲೆ ರೂ. 68,870. ಪ್ರಸ್ತುತ ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ ಚಿನ್ನದ ಬೆಲೆ ರೂ. 62,990. 24 ಕ್ಯಾರೆಟ್ ಚಿನ್ನಕ್ಕೆ 68,720 ರೂ. ಮುಂಬೈ, ಬೆಂಗಳೂರು ಮತ್ತು ಕೇರಳದಲ್ಲೂ ಇದೇ ದರ ಮುಂದುವರಿದಿದೆ. ಏತನ್ಮಧ್ಯೆ, ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ರೂ. 64,140, ​​24 ಕ್ಯಾರೆಟ್‌ನ ಚಿನ್ನದ ಬೆಲೆ ರೂ. 69,970 ಆಗಿದ್ದು, ಪುಣೆಯಲ್ಲಿ 22 ಕ್ಯಾರೆಟ್ ಚಿನ್ನ ರೂ. 62,990 ಹಾಗೂ 24 ಕ್ಯಾರೆಟ್‌ನ ಚಿನ್ನದ ಬೆಲೆ ರೂ. 68,720 ಆಗಿದೆ. ಪ್ರಸ್ತುತ ಹೈದರಾಬಾದ್‌ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ರೂ. 62,990. 24 ಕ್ಯಾರೆಟ್‌ನ ಬೆಲೆ ರೂ. 68,720 ದಾಖಲಾಗಿದೆ. ಅಹಮದಾಬಾದ್ ನಲ್ಲಿ 22 ಕ್ಯಾರೆಟ್‌ನ ಚಿನ್ನದ ಬೆಲೆ ರೂ. 63,040 ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ ರೂ. 68,770ನಲ್ಲಿ ಮುಂದುವರಿದಿದೆ. ತಜ್ಞರ ಪ್ರಕಾರ, ಚಿನ್ನದ ಮೇಲಿನ ಕಸ್ಟಮ್ ಸುಂಕ ಕಡಿತ, ಆರ್‌ಬಿಐ ಬಡ್ಡಿ ದರಗಳು ಮತ್ತು ಫೆಡ್ ಬಡ್ಡಿದರಗಳಲ್ಲಿನ ಹೆಚ್ಚಳದಂತಹ ಅಂಶಗಳು ಕಚ್ಚಾ ಬೆಲೆಯಲ್ಲಿ ಏರಿಳಿತಕ್ಕೆ ಕಾರಣವಾಗಿವೆ. ಬೆಳ್ಳಿ ದೇಶದಲ್ಲಿ ಬೆಳ್ಳಿ ಬೆಲೆ ಶನಿವಾರ ಕುಸಿದಿದೆ. ಪ್ರಸ್ತುತ 100 ಗ್ರಾಂ ಬೆಳ್ಳಿ ಬೆಲೆ ರೂ. 8,440 ಆಗಿದ್ದು, ಒಂದು ಕೆಜಿ ಬೆಳ್ಳಿ ರೂ. 100 ಇಳಿಕೆಯಾಗುವ ಮೂಲಕ ರೂ. 84,400 ಆಗಿದೆ, ಇನ್ನೂ ಶುಕ್ರವಾರ 1 ಕೆಜಿ ಬೆಳ್ಳಿಯ ಬೆಲೆ ರೂ. 84,500 ಇತ್ತು. ಪ್ಲಾಟಿನಂ ಬೆಲೆ ದೇಶದಲ್ಲಿ ಪ್ಲಾಟಿನಂ ದರಗಳು ಶನಿವಾರ ಕುಸಿದಿವೆ. 10 ಗ್ರಾಂ ಪ್ಲಾಟಿನಂ ಬೆಲೆ ರೂ. 50 ಇಳಿಕೆಯಾಗಿ 25,240 ರೂ. ಹಿಂದಿನ ದಿನ ಈ ಬೆಲೆ ರೂ. 25,290. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.