KANNADA

13 ಗಂಟೆ ಬ್ಯಾಟಿಂಗ್‌, 141 ಓವರ್‌ ಆಟ, 364 ರನ್‌ ಕೊಡುಗೆ... ಸುದೀರ್ಘ ಇನ್ನಿಂಗ್ಸ್‌ ಆಡಿದ ಈ ದಾಂಡಿಗನ ಆಟಕ್ಕೆ ಬೆರಗಾಯ್ತು ಕ್ರಿಕೆಟ್‌ ಜಗತ್ತು!

Longest Individual Innings by balls: ಟೆಸ್ಟ್ ಕ್ರಿಕೆಟ್‌ ಎಂಬುದು ಸುದೀರ್ಘ ಮತ್ತು ಆಸಕ್ತಿದಾಯಕ ಕ್ರಿಕೆಟ್ ಸ್ವರೂಪ‌ ಎಂದರೆ ತಪ್ಪಾಗಲ್ಲ. ಐದು ದಿನಗಳ ಕಾಲ ನಡೆಯುವ ಟೆಸ್ಟ್ ಪಂದ್ಯದಲ್ಲಿ ಕೆಲವೊಮ್ಮೆ ಯಾರೂ ಊಹಿಸಲೂ ಸಾಧ್ಯವಾಗದಂತಹ ವಿಚಿತ್ರ ಘಟನೆಗಳು ನಡೆಯುತ್ತವೆ. ಇದನ್ನೂ ಓದಿ: ಒಂದು ಮಗುವಿನ ತಾಯಿಯಾದ್ರೂ ಇನ್ನೂ ಸ್ವರ್ಣಸುಂದರಿ ರಾಧಿಕಾ ಕುಮಾರಸ್ವಾಮಿ! ಇವರ ನಿಜವಾದ ವಯಸ್ಸೆಷ್ಟು ಗೊತ್ತಾ? 1938 ರಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ನಡೆದ ಓವಲ್ ಟೆಸ್ಟ್ ಪಂದ್ಯದಲ್ಲಿ ಆಂಗ್ಲ ಬ್ಯಾಟ್ಸ್‌ʼಮನ್ ಒಬ್ಬರು ಆಸ್ಟ್ರೇಲಿಯಾದ ಬೌಲರ್‌ʼಗಳನ್ನು ಬೆಂಡೆತ್ತಿದಾಗ ಅಂತಹದ್ದೇ ಒಂದು ಪವಾಡ ಸಂಭವಿಸಿತ್ತು. ಈ ಆಂಗ್ಲ ಬ್ಯಾಟ್ಸ್‌ಮನ್ 13 ಗಂಟೆಗಳ ಕಾಲ ಕ್ರೀಸ್‌ʼನಲ್ಲಿ ಆಡಿದ್ದಲ್ಲದೆ, ದಾಖಲೆಯ 141 ಓವರ್‌ಗಳನ್ನು ಬ್ಯಾಟಿಂಗ್ ಮಾಡಿ 364 ರನ್‌ʼಗಳ ಕೊಡುಗೆ ನೀಡಿದ್ದರು. ಇದು 1938ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಅದ್ಭುತ ಇನ್ನಿಂಗ್ಸ್ ಆಡಿದ ಮಾಜಿ ಇಂಗ್ಲೆಂಡ್ ಕ್ರಿಕೆಟಿಗ ಲಿಯೊನಾರ್ಡ್ ಹಟ್ಟನ್ ಅವರ ಕಥೆಯಾಗಿದೆ. ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಹಟ್ಟನ್ ಮೊದಲ ಇನಿಂಗ್ಸ್ ನಲ್ಲಿ 364 ರನ್ ಗಳಿಸುವ ಮೂಲಕ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ದೊಡ್ಡ ವಿಷಯವೆಂದರೆ ಇಷ್ಟು ರನ್ ಗಳಿಸಲು, ಅವರು 847 ಎಸೆತಗಳನ್ನು (141. ಓವರ್‌) ಆಡಿದ್ದರು. ಇದು ಟೆಸ್ಟ್ ಪಂದ್ಯದ ಇನ್ನಿಂಗ್ಸ್‌ನಲ್ಲಿ ಯಾವುದೇ ಬ್ಯಾಟ್ಸ್‌ಮನ್ ಆಡಿದ ಅತಿ ಸುದೀರ್ಘ ಇನ್ನಿಂಗ್ಸ್‌ ಆಗಿದೆ. ಇಷ್ಟೇ ಅಲ್ಲ, ಹಟ್ಟನ್ 797 ನಿಮಿಷಗಳ ಕಾಲ (ಸುಮಾರು ಹದಿಮೂರು ಗಂಟೆಗಳು) ಕ್ರೀಸ್‌ʼನಲ್ಲಿದ್ದರು. ಇದನ್ನೂ ಓದಿ: ರಾಖಿ ಯಾವ ಕೈಗೆ ಕಟ್ಟಬೇಕು ಗೊತ್ತೆ..? ಸಹೋದರಿಯರೇ ಗೊತ್ತಿಲ್ಲದೇ ತಪ್ಪು ಮಾಡ್ಬೇಡಿ.. ಲಿಯೊನಾರ್ಡ್ ಹಟ್ಟನ್ ಅವರ 364 ರನ್‌ʼಗಳ ಇನ್ನಿಂಗ್ಸ್‌ʼನಲ್ಲಿ 35 ಬೌಂಡರಿ ಬಲದ ಮೇಲೆ, ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ʼನಲ್ಲಿ 903/7 ರನ್‌ʼಗಳ ಬೃಹತ್ ಸ್ಕೋರ್ ಅನ್ನು ಡಿಕ್ಲೇರ್ ಮಾಡಿಕೊಂಡಿತು. ಇದು ಆ ಸಮಯದಲ್ಲಿ ಯಾವುದೇ ತಂಡದಿಂದ ಟೆಸ್ಟ್ ಇನ್ನಿಂಗ್ಸ್‌ʼನಲ್ಲಿ ಅತ್ಯಧಿಕ ಸ್ಕೋರ್ ಆಗಿತ್ತು. ಇದನ್ನು ಶ್ರೀಲಂಕಾ 1997 ರಲ್ಲಿ 952 ರನ್ ಗಳಿಸುವ ಮೂಲಕ ಬ್ರೇಕ್‌ ಮಾಡಿತ್ತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.