KANNADA

ಯುವತಿ ಮಾಡಿದ ಕೆಲಸಕ್ಕೆ ರೊಚ್ಚಿಗೆದ್ದ ವಿರಾಟ್‌..! ವಿಮಾನ ನಿಲ್ದಾಣದಲ್ಲೇ ಸುಂದರಿ ಜೊತೆ ಕೊಹ್ಲಿ ಜಗಳ.. ವಿಡಿಯೋ ವೈರಲ್‌

Virat Kohli angry on Australian Media : ಬ್ರಿಸ್ಬೇನ್ ಟೆಸ್ಟ್ ಪಂದ್ಯ ಡ್ರಾ ಆದ ನಂತರ ಭಾರತ ತಂಡ ನಾಲ್ಕನೇ ಪಂದ್ಯಕ್ಕಾಗಿ ಮೆಲ್ಬೋರ್ನ್ ತಲುಪಿದೆ. ಡಿಸೆಂಬರ್ 26 ರಿಂದ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ನಡೆಯಲಿದೆ. ಎರಡೂ ತಂಡಗಳು ಈ ಪಂದ್ಯವನ್ನು ಗೆದ್ದು ಸರಣಿಯಲ್ಲಿ 2-1 ಮುನ್ನಡೆ ಸಾಧಿಸಲು ಪ್ರಯತ್ನಿಸಲಿವೆ. ಆದರೆ ಇದಕ್ಕೂ ಮುನ್ನ ಮೆಲ್ಬೋರ್ನ್ ವಿಮಾನ ನಿಲ್ದಾಣದಲ್ಲಿ ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಆಸ್ಟ್ರೇಲಿಯದ ಮಾಧ್ಯಮಗಳೊಂದಿಗೆ ತೀವ್ರ ವಾಗ್ವಾದ ನಡೆಸಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ಆರ್ ಅಶ್ವಿನ್ ನಿರ್ಧಾರಕ್ಕೆ ಸ್ಪಿನ್ ಮಾಂತ್ರಿಕನ ಬೇಸರ ! ನಿವೃತ್ತಿಗೂ ಮುನ್ನ ಇದೊಂದು ಕೆಲಸ ಮಾಡಬೇಕಿತ್ತು ಎಂದ ಕುಂಬ್ಳೆ ! ಮೆಲ್ಬೋರ್ನ್ ವಿಮಾನ ನಿಲ್ದಾಣದಲ್ಲಿ ಭಾರತೀಯ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಮಹಿಳಾ ಪತ್ರಕರ್ತೆಯೊಂದಿಗೆ ತೀವ್ರ ವಾಗ್ವಾದ ನಡೆಸುತ್ತಿರುವುದು ಕಂಡುಬಂದಿದೆ. ವರದಿಗಳ ಪ್ರಕಾರ, ಚಾನೆಲ್ 7 ವರದಿಗಾರ್ತಿ ಕೊಹ್ಲಿ ಮತ್ತು ಅವರ ಕುಟುಂಬ ವಿಮಾನ ನಿಲ್ದಾಣದಿಂದ ಹೊರಬರುತ್ತಿರುವುದನ್ನು ನೋಡಿ ಅವರತ್ತ ಕ್ಯಾಮೆರಾವನ್ನು ತಿರುಗಿಸಿದರು, ಇದರಿಂದ ಕೊಹ್ಲಿ ಅಸಮಾಧಾನಗೊಂಡರು.. Indian cricket superstar Virat Kohli has been involved in a fiery confrontation at Melbourne Airport. @theodrop has the details. #AUSvIND #7NEWS pic.twitter.com/uXqGzmMAJi — 7NEWS Melbourne (@7NewsMelbourne) December 19, 2024 ಇದರಿಂದ ಕೋಪಗೊಂಡ ವಿರಾಟ್‌, ನನ್ನನ್ನು ಕೇಳದೆ ನನ್ನ ಮಕ್ಕಳ ಫೋಟೋ ಮತ್ತು ವಿಡಿಯೋ ಸೆರೆಹಿಡಿಯಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಮಾಧ್ಯಮದವರ ಈ ಕೆಲಸಕ್ಕೆ ವಿರಾಟ್ ತುಂಬಾ ಬೇಸರಗೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು.. ಇದನ್ನೂ ಓದಿ: ಕೊನೆಗೂ ಭಾರತ ತೊರೆಯಲು ವಿರಾಟ್‌ ಕೊಹ್ಲಿ ನಿರ್ಧಾರ.. ಪತ್ನಿ ಮಕ್ಕಳೊಂದಿಗೆ ಈ ದೇಶದಲ್ಲಿ ಸೆಟಲ್‌ !? ಆದರೆ, ಇದು ವಿರಾಟ್‌ ತಮ್ಮನ್ನು ತಪ್ಪಾಗಿ ತಿಳಿದುಕೊಂಡಿದ್ದಾರೆ ಎಂದು ಚಾನೆಲ್ ಹೇಳಿಕೊಂಡಿದೆ. ಕೊಹ್ಲಿ ಮತ್ತು ಅವರ ಕುಟುಂಬ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಾಗ, ಕೆಲವು ಪತ್ರಕರ್ತರು ಆಸ್ಟ್ರೇಲಿಯಾದ ವೇಗದ ಬೌಲರ್ ಸ್ಕಾಟ್ ಬೋಲ್ಯಾಂಡ್ ಅವರನ್ನು ಸಂದರ್ಶಿಸುತ್ತಿದ್ದರು ಎಂದು ಹೇಳಲಾಗಿದೆ. ಈ ವೇಳೆ ಕ್ಯಾಮೆರಾ ಕೊಹ್ಲಿಯತ್ತ ಫೋಕಸ್ ಮಾಡಿದ್ದು ಅವರಿಗೆ ಬೇಸರ ತಂದಿದೆ ಎಂದು ಸ್ಪಷ್ಟಪಡಿಸಿದ್ದಾರೆ.. ಇನ್ನು ಕೊಹ್ಲಿ ಯಾವಾಗಲೂ ತಮ್ಮ ಮಕ್ಕಳ ಒಳಿತಿನ ದೃಷ್ಟಿಯಿಂದ ಖಾಸಗಿತನವನ್ನು ಬಯಸುತ್ತಾರೆ. ಅದು ಭಾರತದಲ್ಲಿರಲಿ ಅಥವಾ ವಿದೇಶದಲ್ಲಿರಲಿ. ಅಲ್ಲದೆ, ತಾವೇ ಮಕ್ಕಳ ಫೊಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವಾಗ, ಎಮೋಜಿಗಳೊಂದಿಗೆ ಮರೆಮಾಡುತ್ತಾರೆ. ಅಲ್ಲದೆ, ವಿರಾಟ್ ಹಲವಾರು ಬಾರಿ ತಮ್ಮ ಮಕ್ಕಳ ಫೋಟೋ ಮತ್ತು ವೀಡಿಯೊಗಳನ್ನು ತೆಗೆದುಕೊಳ್ಳಬೇಡಿ ಎಂದು ಮನವಿ ಮಾಡಿದ್ದುಂಟು.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.