KANNADA

Viral Video: ಅಯ್ಯೋ ಶಿವನೇ.!..ಮದುವೆ ಕಾರ್ಯ ನಡಿಬೇಕಾದ್ರೆ ವರನ ತಲೆಗೆ ಬೆಂಕಿ ಹತ್ತಿಕೊಳ್ಳೋದಾ..!.. ಅಷ್ಟಕ್ಕೂ ಅಲ್ಲಿ ಮುಂದೇನಾಯ್ತು ಗೊತ್ತಾ?

ಮದುವೆಯ ದಿನವು ಪ್ರತಿಯೊಬ್ಬರ ಜೀವನದಲ್ಲಿ ವಿಶೇಷವಾಗಿ ವಧುವರರಿಗೆ ವಿಶೇಷವಾಗಿರುತ್ತದೆ. ಈ ಸಂದರ್ಭದಲ್ಲಿ ಎಲ್ಲರೂ ಸಂತಸದಿಂದ ಈ ಸಮಾರಂಭದಲ್ಲಿ ಭಾಗವಹಿಸುತ್ತಾರೆ.ಈ ಸ್ಮರಣೀಯ ಕ್ಷಣಗಳನ್ನು ಪಾಲಿಸಲು ಛಾಯಾಚಿತ್ರಗಳನ್ನು ತೆಗೆದುಕೊಳ್ಳಲಾಗುತ್ತದೆ, ಆದರೆ ಕೆಲವೊಮ್ಮೆ ನಮ್ಮ ಅದೃಷ್ಟ ಸರಿ ಇಲ್ಲದಿದ್ದರೆ ಅನಾಹುತವೂ ಸಂಭವಿಸಬಹುದು. ಈಗ ಇದಕ್ಕೆ ಪೂರಕ ಎನ್ನುವಂತೆ ಇಂತಹದ್ದೇ ಒಂದು ವಿಡಿಯೋ ಈಗ ಸಾಮಾಜಿಕ ಮಾಧ್ಯಮ ಗಳಲ್ಲಿ ವೈರಲ್ ಆಗಿದೆ.ಈ ವಿಡಿಯೋ ನೋಡಿದ ನೆಟ್ಟಿಗರಂತೂ ಅಚ್ಚರಿಗೊಂಡಿದ್ದಾರೆ.ಈ ವೈರಲ್ ವಿಡಿಯೋದಲ್ಲಿ ಮದುವೆ ಕಾರ್ಯದ ವಿಧಿ ವಿಧಾನಗಳು ನಡೆಯುತ್ತಿದ್ದಾಗ ವಧು-ವರರು ವೇದಿಕೆ ಮೇಲೆ ಉಪಸ್ಥಿತರಿರುತ್ತಾರೆ.ಈ ಸಂತದ ಕ್ಷಣವನ್ನು ಫೋಟೋ ಶೂಟ್ ಮೂಲಕ ಸೆರೆ ಹಿಡಿಯುತ್ತಿದ್ದಾಗ ಅದ್ದೂರಿಯಾಗಿ ಪಟಾಕಿ ಸಿಡಿಸಲಾಗುತ್ತದೆ.ಆಗ ಇದ್ದಕ್ಕಿದ್ದಂತೆ ವರನ ಮುಖದಿಂದ ಹೊಗೆ ಬರಲು ಪ್ರಾರಂಭಿಸಿತು. ಮೊದಮೊದಲು ಅಲ್ಲಿದ್ದ ಜನ ಇದೇನು ಹೊಸ ಮದುವೆಯ ಟ್ರೆಂಡ್ ಎಂದು ಯೋಚಿಸುತ್ತಿದ್ದರೂ ಕೆಲವೇ ಕ್ಷಣಗಳಲ್ಲಿ ಹೊಗೆ ಬೆಂಕಿಯ ರೂಪ ತಳೆಯಿತು. ಬೆಂಕಿ ಹೊತ್ತಿಕೊಂಡ ತಕ್ಷಣ ಸಮಾರಂಭದಲ್ಲಿ ಗೊಂದಲ ಉಂಟಾಯಿತು.ಛಾಯಾಗ್ರಾಹಕರು ಓಡೋಡಿ ಬಂದು ವರನ ತಲೆಯಲ್ಲಿ ಉರಿಯುತ್ತಿದ್ದ ಪೇಟಾ ತೆಗೆಯುವುದನ್ನು ವಿಡಿಯೋ ದಲ್ಲಿ ಕಾಣಬಹುದಾಗಿದೆ.ಈ ಅವಘಡದಲ್ಲಿ ಅಳಿಯನ ಮುಖ ಸಂಪೂರ್ಣ ಸುಟ್ಟು ಹೋಗಿದ್ದರೂ ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂಬುದು ಸಮಾಧಾನದ ಸಂಗತಿ. A post shared by Rj37 Aala 😎🫶👊 (@didwana_rj37__) ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ "@didwana_rj37__" ಹೆಸರಿನ Instagram ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದನ್ನು ಲಕ್ಷಾಂತರ ಜನರು ವೀಕ್ಷಿಸಿಸಿದ್ದಾರೆ.ಬಹುತೇಕರು ಇಂತಹ ಕಾರ್ಯಕ್ರಮ ನಡೆಯುತ್ತಿರುವಾಗ ಮುನ್ನೆಚ್ಚರಿಕೆ ವಹಿಸಬೇಕೆಂದು ನೆಟ್ಟಿಗರು ಸಲಹೆ ನೀಡಿದ್ದಾರೆ. ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - ಸಬ್ ಸ್ಕ್ರೈಬ್ಆಗಿರಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.