KANNADA

ಈ ಫೋಟೋದಲ್ಲಿರುವ ಪುಟ್ಟ ಕಂದಮ್ಮ ಯಾರೆಂದು ಗುರುತಿಸಬಲ್ಲಿರಾ? ಸುಳಿವು- ಬಿಗ್‌ ಬಾಸ್‌ʼನಲ್ಲಿ ಸ್ಪರ್ಧಿಸಿ ಸಖತ್‌ ಕ್ರೇಜ್‌ ಸೃಷ್ಟಿಸಿದ್ದ ಖ್ಯಾತ ಹೀರೋಯಿನ್‌ ಈಕೆ

Tejaswini Madiwada childhood photo: ಸಾಮಾನ್ಯವಾಗಿ ಚಿತ್ರರಂಗದಲ್ಲಿ ಯಶಸ್ಸು ಗಳಿಸಲು ಸೌಂದರ್ಯ ಮತ್ತು ನಟನೆ ಎರಡೂ ಇರಬೇಕು. ಇವುಗಳ ಜೊತೆಗೆ ಸಾಸಿವೆ ಕಾಳಷ್ಟಾದ್ರೂ ಅದೃಷ್ಟ ಇರಬೇಕು. ಅದರಲ್ಲೂ ಸಿನಿಮಾ ನಾಯಕಿಯರ ವಿಷಯದಲ್ಲಿ ಈ ಲೆಕ್ಕಾಚಾರಗಳು ಇದ್ದೇ ಇರುತ್ತವೆ. ಇಲ್ಲದಿದ್ದರೆ ಸೌಂದರ್ಯ, ಅಭಿನಯ ಹೇರಳವಾಗಿದ್ದರೂ ಅವಕಾಶಗಳ ಕೊರತೆಯಿಂದ ಬಳಲುತ್ತಾರೆ. ಇದನ್ನೂ ಓದಿ: Actress Shruti: ಎರಡು ಮದ್ವೆ ಆದ್ರೂ ಸಿಗಲಿಲ್ಲ ನೆಮ್ಮದಿ.. ನಟಿ ಶ್ರುತಿಯ ಇಬ್ಬರು ಗಂಡಂದಿರು ದೂರವಾಗಿದ್ದೇಕೆ? ಮೇಲಿನ ಫೋಟೋ ದಲ್ಲಿರುವ ನಾಯಕಿ ನಿಖರವಾಗಿ ಈ ವಿಭಾಗಕ್ಕೆ ಸೇರುತ್ತಾರೆ. ತೆಲುಗು ಸಿನಿ ಲೋಕದ ಈ ಮೋಹನಾಂಗಿ ಸೌಂದರ್ಯ ಮತ್ತು ನಟನೆ ಎಂಬ ಪ್ರತಿಭೆಯನ್ನು ಹೊಂದಿದ್ದಾರೆ. ಆದರೆ ಸಿನಿಮಾ ಅವಕಾಶಗಳು ಬರುತ್ತಿಲ್ಲ. ಹಾಗಾಗಿಯೇ ಈ ನಟಿ ನಾಯಕಿಯ ಗೆಳತಿಯಾಗಿ, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಕೆಲವು ಸಿನಿಮಾಗಳಲ್ಲಿ ಎರಡನೇ ನಾಯಕಿ ಪಾತ್ರ ಮಾಡಿದರೂ ಮನ್ನಣೆ ಸಿಕ್ಕಿಲ್ಲ. ಆದರೆ ಈ ಬೆಡಗಿಗೆ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಕ್ರೇಜ್ ಇದೆ. ಅಂದಹಾಗೆ ಈ ನಟಿ ಬೇರಾರು ಅಲ್ಲ, ತೇಜಸ್ವಿನಿ ಮಡಿವಾಡ. ಇದು ಆಕೆಯ ಬಾಲ್ಯದ ಫೋಟೋ. ಇದನ್ನೂ ಓದಿ: ಬಿಗ್‌ ಬಾಸ್ ಮಾಜಿ ಸ್ಪರ್ಧಿ ನೀತು ವನಜಾಕ್ಷಿ ನಿಜವಾದ ಮಕ್ಕಳು ಯಾರು ಗೊತ್ತಾ? ಅವರೇ ಪರಿಚಯಿಸಿದ್ರು ನೋಡಿ ತೇಜಸ್ವಿನಿ ನೃತ್ಯಗಾರ್ತಿಯಾಗಿರುವಾಗಲೇ ಸಿನಿಮಾಗಳಿಗೆ ಎಂಟ್ರಿ ಕೊಟ್ಟಿದ್ದರು. ಈ ನಟಿ ಮಹೇಶ್ ಬಾಬು ಅಭಿನಯದ ʼಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟುʼ ಚಿತ್ರದಲ್ಲಿ ಅಭಿನಯಿಸಿ ಪ್ರೇಕ್ಷಕರಲ್ಲಿ ಉತ್ತಮ ಮನ್ನಣೆ ಗಳಿಸಿದರು. ಆರ್.ಜಿ.ವಿ ನಿರ್ದೇಶನದ ಐಸ್ ಕ್ರೀಂ ಚಿತ್ರದಲ್ಲಿ ನಟಿಸಿದ್ದರೂ ಸಹ, ಆ ನಂತರ ಹೆಚ್ಚಾಗಿ ಈಕೆ ಕಾಣಿಸಿಕೊಂಡಿದ್ದು ಎರಡನೇ ಮಹಿಳಾ ನಾಯಕಿ ಮತ್ತು ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ. ಇನ್ನು ಬಿಗ್ ಬಾಸ್ ಮನೆ ಪ್ರವೇಶಿಸಿ ಕಿರುತೆರೆ ಪ್ರೇಕ್ಷಕರನ್ನು ತಲುಪಿದ ತೇಜಸ್ವಿ ಮಡಿವಾಡ ಸದ್ಯ ಕಿರುತೆರೆ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.