KANNADA

ದಿನಭವಿಷ್ಯ 24-12-2024: ಮಂಗಳವಾರದಂದು ಹಸ್ತ ನಕ್ಷತ್ರದಲ್ಲಿ ಶೋಭನ ಯೋಗ: ಈ ರಾಶಿಯವರಿಗಿಂದು ಆದಾಯದಲ್ಲಿ ಹೆಚ್ಚಳ, ಬಡ್ತಿ ಸಾಧ್ಯತೆ

Mangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ ೧೯೪೬, ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ನವಮಿ ತಿಥಿ, ಮಂಗಳವಾರದ ಈ ದಿನ, ಹಸ್ತ ನಕ್ಷತ್ರ, ಶೋಭನ ಯೋಗ, ವಣಿಜ ಕರಣ. ಇಂದಿನ ಎಲ್ಲಾ 12 ರಾಶಿಗಳ ದಿನ ಭವಿಷ್ಯ ಹೇಗಿದೆ ತಿಳಿಯಿರಿ. ಮೇಷ ರಾಶಿಯವರ ಭವಿಷ್ಯ (Aries Horoscope): ಇಂದು ವ್ಯಾಪಾರಸ್ಥರಿಗೆ ದಿನವು ಅತ್ಯುತ್ತಮವಾಗಿದೆ. ಯಾವುದೇ ವಿಚಾರದಲ್ಲಿ ನೀವು ಇತರ ಅಭಿಪ್ರಾಯಗಳಿಗೆ ಪ್ರಭಾವಿತರಾಗುವುದನ್ನು ತಪ್ಪಿಸಬೇಕು. ನಿಮ್ಮ ಸುತ್ತಲೂ ಯಾವುದೇ ವಿವಾದಗಳಿದ್ದರೂ ವಿನಾಕಾರಣ ಯಾವುದೇ ವಿಚಾರದಲ್ಲಿ ಮೂಗು ತೂರಿಸುವುದನ್ನು ತಪ್ಪಿಸಿದರೆ ಒಳ್ಳೆಯದು. ಪಾಲುದಾರಿಕೆ ವ್ಯವಹಾರದಲ್ಲಿ ಜಾಗರೂಕರಾಗಿರಿ. ವೃಷಭ ರಾಶಿಯವರ ಭವಿಷ್ಯ (Taurus Horoscope): ಈ ದಿನ ನೀವು ನಿಮ್ಮ ಪ್ರೀತಿ ಪಾತ್ರರಿಂದ ಶುಭ ಸುದ್ದಿಯನ್ನು ನಿರೀಕ್ಷಿಸಬಹುದು. ಮನೆಯಲ್ಲಿ ವಾತಾವರಣವು ಆಹ್ಲಾದಕರವಾಗಿರುತ್ತದೆ. ಆದಾಯದ ಹೊಸ ಮೂಲಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಉದ್ಯೋಗದಲ್ಲಿ ಹೊಸ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವುದರಿಂದ ಹೊಸ ಎತ್ತರಕ್ಕೆ ಏರುವಿರಿ. ಮಿಥುನ ರಾಶಿಯವರ ಭವಿಷ್ಯ (Gemini Horoscope): ವೃತ್ತಿ ಬದುಕಿನಲ್ಲಿ ಹೊಸ ಭರವಸೆಯ ಬೆಳಕನ್ನು ಕಾಣುವಿರಿ. ಕೌಟುಂಬಿಕ ವ್ಯವಹಾರಗಳಲ್ಲಿ ಮುಂದುವರೆಯುವಾಗ ನಿಮ್ಮ ಪೋಷಕರ ಸಲಹೆ ಪಡೆಯುವುದು ಪ್ರಯೋಜನಕಾರಿ ಆಗಲಿದೆ. ಆಸ್ತಿ ಅಥವಾ ಭೂ ವ್ಯವಹಾರಕ್ಕೆ ಸಂಬಂಧಿಸಿದಂತ ಪ್ರಕರಣಗಳು ನ್ಯಾಯಾಲಯದಲ್ಲಿದ್ದರೆ ತಾಳ್ಮೆಯಿಂದ ಇರುವುದು ಉತ್ತಮ. ದೀರ್ಘಾವಧಿಯ ವ್ಯಾಪಾರ ಯೋಜನೆಗಳಲ್ಲಿ ಪ್ರಗತಿಯನ್ನು ಪಡೆಯುವಿರಿ. ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): ಇಂದು ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯಲಿದ್ದೀರಿ. ಇದರಿಂದಾಗಿ ನೀವು ಕೈಗೊಳ್ಳುವ ಯಾವುದೇ ಕೆಲಸದಲ್ಲಿ ಯಶಸ್ಸು ನಿಮ್ಮದಾಗಲಿದೆ. ಬೇರೆಡೆ ಸಿಲುಕಿರುವ ನಿಮ್ಮ ಹಣ ಇಂದು ಕೈ ಸೇರಬಹುದು. ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚು ತೊಡಗಿಕೊಳ್ಳುವಿರಿ. ಹಿರಿಯರ ಆಶೀರ್ವಾದದಿಂದ ಸ್ಥಗಿತಗೊಂಡಿದ್ದ ಕೆಲಸಗಳಲ್ಲಿ ವೇಗವನ್ನು ಕಾಣಬಹುದು. ಇದನ್ನೂ ಓದಿ- 2025ರಲ್ಲಿ ಈ ರಾಶಿಯವರ ಮೇಲೆ ಸಂಪತ್ತಿನ ಸುರಿಮಳೆ ! ಶನಿದೇವನ ಕೃಪೆಯಿಂದ ಸಾಲದಿಂದ ಸಿಗುವುದು ಮುಕ್ತಿ ! ಒಲಿದು ಬರುವುದು ಮನೆ ನಿರ್ಮಾಣದ ಭಾಗ್ಯ ಸಿಂಹ ರಾಶಿಯವರ ಭವಿಷ್ಯ (Leo Horoscope): ಇಂದು ನಿಮಗೆ ಮಧ್ಯಮ ಫಲಪ್ರದವಾದ ದಿನವಾಗಿರಲಿದೆ. ಬೇರೆಡೆ ಸಿಲುಕಿರುವ ಹಣ ಮರಳಿ ಕೈ ಸೇರಲಿದೆ. ಆದರೂ, ವೆಚ್ಚಗಳು ಅಧಿಕವಾಗಲಿವೆ. ಸಂಗಾತಿಯಿಂದ ಬೆಂಬಲ ದೊರೆಯಲಿದೆ. ಹಣಕಾಸಿನ ವಿಷಯಗಳಲ್ಲಿ ಬೇರೆಯವರನ್ನು ನಂಬುವುದನ್ನು ತಪ್ಪಿಸಿ. ದೀರ್ಘಾವಧಿಯ ಯೋಜನೆಗಳಲ್ಲಿ ಪ್ರಗತಿಯನ್ನು ಕಾಣುವಿರಿ. ಕೆಲಸದಲ್ಲಿ ನಿಮ್ಮ ಬಾಸ್ ನಿಮ್ಮ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುವರು. ಕನ್ಯಾ ರಾಶಿಯವರ ಭವಿಷ್ಯ (Virgo Horoscope): ವೃತ್ತಿಪರರಿಗೆ ಕೆಲಸದಲ್ಲಿ ನಿಮ್ಮ ನಾವಿನ್ಯತೆಗೆ ಹೊಸ ಗುರುತು ಸಿಗಲಿದೆ. ಮೇಲಾಧಿಕಾರಿಗಳು ನಿಮ್ಮ ಕೆಲಸಕ್ಕೆ ಆಕರ್ಷಿತರಾಗುವರು. ಇದರಿಂದಾಗಿ ಬಡ್ತಿ ಸಂಭವವೂ ಇದೆ. ಇಂದು ನೀವು ಬೇರೆಯವರ ಸಮಸ್ಯೆಗಳಲ್ಲಿ ಅನಗತ್ಯವಾಗಿ ಮೂಗು ತೂರಿಸುವುದನ್ನು ತಪ್ಪಿಸಿ. ಇಲ್ಲವೇ, ಸಮಸ್ಯೆಗಳು ಹೆಚ್ಚಾಗಬಹುದು. ಈ ವಿಚಾರದಲ್ಲಿ ಜಾಗರೂಕರಾಗಿರಿ. ತುಲಾ ರಾಶಿಯವರ ಭವಿಷ್ಯ (Libra Horoscope): ಸಮಾಜದಲ್ಲಿ ಇಂದು ನಿಮ್ಮ ಸ್ಥಾನಮಾನ, ಗೌರವ, ಪ್ರತಿಷ್ಠೆ ಹೆಚ್ಚಾಗಬಹುದು. ಸಾಮಾಜಿಕ ಔತಣಕೂಟಗಳಲ್ಲಿ ನೀವು ಭಾಗವಹಿಸಬಹುದು. ಉದ್ಯೋಗಸ್ಥರಿಗೆ ಕೆಲಸದಲ್ಲಿ ಹೆಚ್ಚಿನ ಜವಾಬ್ದಾರಿಗಳು ಹೆಗಲೇರಬಹುದು. ಹೂಡಿಕೆಯಿಂದ ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ಕೌಟುಂಬಿಕ ವಿಚಾರಗಳಲ್ಲಿ ಗಮನವಹಿಸಬೇಕಾಗಬಹುದು. ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope): ಇಂದು ನಿಮ್ಮ ಮಾತು, ನಡವಳಿಕೆಯಲ್ಲಿ ಸಂಯಮವನ್ನು ಕಾಪಾಡಿಕೊಳ್ಳಿ. ರಾಜಕೀಯ ವ್ಯಕ್ತಿಗಳು ನೀವು ಆಡುವ ಮಾತಿನ ಬಗ್ಗೆ ನಿಗಾವಹಿಸಿ. ಕೆಲಸದಲ್ಲಿ ಕೆಲವು ಬದಲಾವಣೆಗಳನ್ನು ನಿರೀಕ್ಷಿಸಬಹುದು. ಮಕ್ಕಳಿಂದ ಹರ್ಷಚಿತ್ತದ ವಾತಾವರಣವನ್ನು ಅನುಭವಿಸುವಿರಿ. ಸ್ನೇಹಿತರೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಇದನ್ನೂ ಓದಿ- Weekly Horoscope: ಡಿಸೆಂಬರ್ ಕೊನೆ ವಾರ ಈ ರಾಶಿಯವರಿಗೆ ತುಂಬಾ ಲಕ್ಕಿ, ವೃತ್ತಿಯಲ್ಲಿ ಯಶಸ್ಸು, ಕೀರ್ತಿ..! ಧನು ರಾಶಿಯವರ ಭವಿಷ್ಯ (Sagittarius Horoscope): ನೀವಿಂದು ನ್ಯಾಯಾಲಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಶುಭ ಫಲವನ್ನು ಪಡೆಯುವಿರಿ. ವ್ಯಾಪಾರದಲ್ಲಿ ಹೊಸ ಹೊಸ ಅವಕಾಶಗಳು ನಿಮ್ಮನ್ನು ಮೇಲೇರಿಸಬಹುದು. ಆದಾಗ್ಯೂ, ಇಂದು ಹಣದ ವಿಚಾರಗಳು ನಿಮ್ಮ ಕಾಳಜಿಯನ್ನು ಹೆಚ್ಚಿಸಬಹುದು. ಉದ್ಯೋಗಸ್ಥರು ನಿಮ್ಮ ಕೆಲಸವನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದರೆ ಸದ್ಯಕ್ಕೆ ನಿಮ್ಮ ಈ ಚಿಂತನೆಯನ್ನು ಮುಂದೂಡುವುದು ಒಳ್ಳೆಯದು. ಮಕರ ರಾಶಿಯವರ ಭವಿಷ್ಯ (Capricorn Horoscope): ಇಂದು ಯಾವುದೇ ಕೆಲಸಗಳನ್ನು ಪೂರ್ಣಗೊಳಿಸಲು ಕಠಿಣ ಪರಿಶ್ರಮದ ಅಗತ್ಯವಿದೆ. ಉದ್ಯೋಗದ ಹುಡುಕಾಟದಲ್ಲಿರುವವರಿಗೆ ಶುಭ ದಿನ. ಕುಟುಂಬದಲ್ಲಿ ಪ್ರೀತಿ ಸಹಕಾರ ವೃದ್ಧಿಯಾಗಲಿದೆ. ಯಾವುದೇ ಪ್ರಮುಖ ಕೆಲಸಗಳಲ್ಲಿ ಆತುರದ ನಿರ್ಧಾರ ಕೈಗೊಳ್ಳುವುದನ್ನು ತಪ್ಪಿಸಿ. ಇಲ್ಲವೇ ಇದರಿಂದ ಭಾರೀ ನಷ್ಟ ಅನುಭವಿಸಬೇಕಾಗಬಹುದು. ಕುಂಭ ರಾಶಿಯವರ ಭವಿಷ್ಯ (Aquarius Horoscope): ಇಂದು ಕೆಲಸಕ್ಕೆ ಸಂಬಂಧಿಸಿದಂತೆ ನಿಮ್ಮ ಚಿಂತೆ ಹೆಚ್ಚಾಗಬಹುದು. ಹೂಡಿಕೆಗಳಿಂದ ಭಾರೀ ನಷ್ಟ ಸಾಧ್ಯತೆ ಇರುವುದರಿಂದ ಈ ಬಗ್ಗೆ ಎಚ್ಚರಿಕೆಯಿಂದ ಇರಿ. ಯಾವುದೇ ಆಸ್ತಿ ಖರೀದಿಯ ಬಗ್ಗೆ ಯೋಚಿಸುತ್ತಿದ್ದರೂ ಸಹ ಸ್ವಲ್ಪ ಸಮಯದ ಬಗ್ಗೆ ಇದನ್ನು ಮುಂದೂಡುವುದು ಒಳ್ಳೆಯದು. ಮನೆಯಲ್ಲಿ ಅಲಂಕಾರಿಕ ವಸ್ತುಗಳಿಗಾಗಿ ಹೆಚ್ಚಿನ ಹಣ ವ್ಯಯವಾಗಬಹುದು. ಮೀನ ರಾಶಿಯವರ ಭವಿಷ್ಯ (Pisces Horoscope): ಇಂದು ಮಿಶ್ರ ಫಲಗಳಿಂದ ಕೂಡಿದ ದಿನ. ವಿವಾಹಿತರು ಸಂಗಾತಿಯೊಂದಿಗೆ ಆಹ್ಲಾದಕರ ಸಮಯವನ್ನು ಆನಂದಿಸುವಿರಿ. ಆದರೆ, ಲವ್ ಲೈಫ್ ನಲ್ಲಿರುವವರಿಗೆ ದಿನ ಅಷ್ಟು ಉತ್ತಮವಾಗಿಲ್ಲ. ವ್ಯವಹಾರದಲ್ಲಿ ನಿರೀಕ್ಷಿತ ಲಾಭ ದೊರೆಯದೆ ಇರುವುದು ನಿಮ್ಮ ನಿರಾಸೆಗೆ ಕಾರಣವಾಗಬಹುದು. ಆದರೆ, ನಿಮ್ಮ ಪ್ರಯತ್ನವನ್ನು ಮುಂದುವರೆಸಿದರೆ ಕಷ್ಟಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. NEWS ಇದನ್ನು ಖಚಿತಪಡಿಸುವುದಿಲ್ಲ. ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - ಸಬ್ ಸ್ಕ್ರೈಬ್ಆಗಿರಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.