KANNADA

ಈ ಬಡವರ ಬಾದಾಮಿ ಪೋಷಕಾಂಶಗಳ ಪವರ್ ಹೌಸ್!! ಚಳಿಗಾಲದಲ್ಲಿ ಪ್ರತಿನಿತ್ಯ ಒಂದು ಹಿಡಿ ನೆನೆಸಿದ ಶೇಂಗಾ ತಿಂದ್ರೆ ಏನಾಗುತ್ತೆ?

Benefits of soaked peanuts: ಶೇಂಗಾವನ್ನು ಆರೋಗ್ಯಕ್ಕೆ ಪೋಷಕಾಂಶಗಳ ಪವರ್ ಹೌಸ್ ಎಂದು ಪರಿಗಣಿಸಲಾಗುತ್ತದೆ​​​​. ಶೇಂಗಾ ನಿಮ್ಮ ಒಟ್ಟಾರೆ ಆರೋಗ್ಯವನ್ನು ಉತ್ತೇಜಿಸುವ ಪೋಷಕಾಂಶಗಳನ್ನು ಒಳಗೊಂಡಿದೆ​​. ವಿಟಮಿನ್ ʼಇʼ, ಕೊಬ್ಬುಗಳು, ಪ್ರೋಟೀನ್, ಫೈಬರ್, ಪೊಟ್ಯಾಸಿಯಮ್, ವಿಟಮಿನ್ ಬಿ, ಮೆಗ್ನೀಸಿಯಮ್, ರಂಜಕದಂತಹ ಪೋಷಕಾಂಶಗಳು ಶೇಂಗಾದಲ್ಲಿ ಕಂಡುಬರುತ್ತವೆ.​​​ ಹೆಚ್ಚಿನ ಕ್ಯಾಲೋರಿಗಳ ಹೊರತಾಗಿಯೂ ಶೇಂಗಾ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.​​​ ನಿಮ್ಮ ಆಹಾರದಲ್ಲಿ ಶೇಂಗಾ ವನ್ನು ಹಲವು ವಿಧಗಳಲ್ಲಿ ಸೇರಿಸಿಕೊಳ್ಳಬಹುದು​​​​​. ಹೆಚ್ಚಿನ ಜನರು ಹುರಿದ ಶೇಂಗಾವನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ನೀವು ಎಂದಾದರೂ ನೆನೆಸಿದ ಶೇಂಗಾ ತಿಂದಿದ್ದೀರಾ?​ ನೆನೆಸಿದ ಶೇಂಗಾ ತಿನ್ನುವುದು ನಿಮಗೆ ಹೆಚ್ಚುವರಿ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ​. ಇದು ಮಲಬದ್ಧತೆ ಮತ್ತು ಜೀರ್ಣಕ್ರಿಯೆಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದನ್ನೂ ಓದಿ: ಮಲಗುವ ಮುನ್ನ ಒಂದು ಚಮಚ ಈ ಹಣ್ಣಿನ ರಸ ಕುಡಿದರೆ ಸಾಕು: ದಿಂಬಿಗೆ ತಲೆ ಇಡುತ್ತಿದ್ದಂತೆ ಗಾಢ ನಿದ್ದೆಗೆ ಜಾರುವಿರಿ! ನಿದ್ರಾಹೀನತೆಗೆ ಇದೇ ದಿವ್ಯೌಷಧಿ ನೆನೆಸಿದ ಶೇಂಗಾ ತಿನ್ನುವುದರ ಪ್ರಯೋಜನಗಳು ನೆನೆಸಿದ ಶೇಂಗಾ ತಿನ್ನುವುದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ​​. ಇದು ಹೆಚ್ಚಿನ ಪ್ರಮಾಣದ ಡಯೆಟರಿ ಫೈಬರ್ ಅನ್ನು ಹೊಂದಿರುತ್ತದೆ. ಇದು ಹೊಟ್ಟೆಯನ್ನು ಸುಲಭವಾಗಿ ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ನೆನೆಸಿದ ಶೇಂಗಾ ತಿನ್ನುವುದು ಮಲಬದ್ಧತೆ ಮತ್ತು ಗ್ಯಾಸ್‌ನಿಂದ ಪರಿಹಾರವನ್ನು ನೀಡುತ್ತದೆ.​​ ಎಲ್ಲಾ ಪೋಷಕಾಂಶಗಳು ದೇಹದಲ್ಲಿ ಸುಲಭವಾಗಿ ಹೀರಲ್ಪಡುತ್ತವೆ​​​​ ನೆನೆಸಿದ ಶೇಂಗಾ ತಿನ್ನುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ. ಮೊನೊಸಾಚುರೇಟೆಡ್ ಮತ್ತು ಬಹುಅಪರ್ಯಾಪ್ತ ಕೊಬ್ಬುಗಳು ಶೇಂಗಾದಲ್ಲಿ ಕಂಡುಬರುತ್ತವೆ. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಶೇಂಗಾ ತಿನ್ನುವುದರಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ​. ​ದೇಹವನ್ನು ಬೆಚ್ಚಗಿಡಲು ಕಡಲೆಕಾಯಿ ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಜನರು ಚಳಿಗಾಲದಲ್ಲಿ ಹೆಚ್ಚು ಶೇಂಗಾ ತಿನ್ನುತ್ತಾರೆ. ಶೇಂಗಾ ತಿನ್ನುವುದರಿಂದ ಇಡೀ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ​​​. ಆಂಟಿ-ಆಕ್ಸಿಡೆಂಟ್ ರೆಸ್ವೆರಾಟ್ರೊಲ್ ಶೇಂಗಾ ದಲ್ಲಿ ಕಂಡುಬರುತ್ತದೆ. ಇದು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದನ್ನೂ ಓದಿ: ಫ್ಯಾಟಿ ಲಿವರ್ ಹೆಚ್ಚಾದ್ರೆ ದೇಹದ ಈ ಭಾಗದಲ್ಲಿ ತೀವ್ರ ನೋವು ಕಾಣಿಸುತ್ತೆ; ಹೃದಯಾಘಾತದ ಅಪಾಯ ಹೆಚ್ಚಾಗುತ್ತೆ! ಅದನ್ನು ನಿಯಂತ್ರಿಸುವುದು ಹೇಗೆ? (ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಒಳಗೊಂಡಿರುತ್ತದೆ. ಇಲ್ಲಿನ ಸಲಹೆ ಪಾಲಿಸುವ ಮೊದಲು ನೀವು ಕಡ್ಡಾಯವಾಗಿ ವೈದ್ಯರ ಸಲಹೆ ಪಡೆದುಕೊಳ್ಳಬೇಕು. Kannada News ಇದನ್ನು ದೃಢಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.