PV Sindhu wedding photo viral: ಭಾರತದ ಬ್ಯಾಡ್ಮಿಂಟನ್ ತಾರೆ ಪುಸರ್ಲಾ ವೆಂಕಟ ಸಿಂಧು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಭಾನುವಾರ ನಡೆದ ಅದ್ಧೂರಿ ಮದುವೆ ಸಮಾರಂಭದಲ್ಲಿ ಉದ್ಯಮಿ ವೆಂಕಟ ದತ್ತ ಸಾಯಿ ಅವರ ಕೈಹಿಡಿದಿದ್ದಾರೆ, ಇನ್ನು ಈ ಸಂಭ್ರಮದ ಮೊದಲ ಫೋಟೋ ರಿವೀಲ್ ಆಗಿದೆ. ಇದನ್ನೂ ಓದಿ: ಅಫೇರ್ ವದಂತಿಗಳ ಬಗ್ಗೆ ಅನುಷ್ಕಾ ಓಪನ್ ಕಾಮೆಂಟ್ಸ್, ಒಬ್ಬರಲ್ಲ, ಐವರೂ... ಯಾರು ಗೊತ್ತಾ? ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಪಿವಿ ಸಿಂಧು ಮತ್ತು ವೆಂಕಟ ದತ್ತಾ ಸಾಯಿ ಅವರ ವಿವಾಹದ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಶುಭಕೋರಿದ ಅವರು, "ನಿನ್ನೆ ಸಂಜೆ ಉದಯಪುರದಲ್ಲಿ ನಡೆದ ಬ್ಯಾಡ್ಮಿಂಟನ್ ಚಾಂಪಿಯನ್ ಹಾಗೂ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು-ವೆಂಕಟ ದತ್ತ ಸಾಯಿ ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ನನಗೆ ಸಂತೋಷವಾಯಿತು" ಎಂದು ಬರೆದುಕೊಂಡಿದ್ದಾರೆ. "ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸಲಿರುವ ನವದಂಪತಿಗೆ ನನ್ನ ಶುಭ ಹಾರೈಕೆ ಹಾಗೂ ಆಶೀರ್ವಾದ" ಎಂದು ಗಜೇಂದ್ರ ಸಿಂಗ್ ಶೇಖಾವತ್ ಅವರು 'ಎಕ್ಸ್'ನಲ್ಲಿ ಹೇಳಿದ್ದಾರೆ. ಸಿಂಧು-ವೆಂಕಟ ದತ್ತಾ ಸಾಯಿ ಜೀವನದ ವಿಶೇಷ ಘಳಿಗೆಯಲ್ಲಿ ಸಿಲ್ವರ್ ಕಲರ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮದುವೆಯಲ್ಲಿ ಕೇಂದ್ರ ಸಚಿವರ ಜೊತೆಗೆ ಹಲವು ಕ್ರೀಡಾ ಗಣ್ಯರು ಭಾಗವಹಿಸಿದ್ದರು ಎಂದು ವರದಿಯಾಗಿದೆ. ಇದನ್ನೂ ಓದಿ: ಮೂರು ಮಕ್ಕಳಿದ್ದರೂ 43ನೇ ವಯಸ್ಸಿಗೆ 4ನೇ ಮದುವೆಯಾದ ಖ್ಯಾತ ನಟಿ ! ರಾಜಸ್ಥಾನದಲ್ಲಿ ಮದುವೆ ರಾಜಸ್ಥಾನದ ಉದಯಪುರದ ರಾಜ್‌ಕೋಟ್‌ನಂತಹ ಸ್ಥಳದಲ್ಲಿ ಸಿಂಧು-ವೆಂಕಟ ದತ್ತ ಸಾಯಿ ವಿವಾಹ ಅದ್ಧೂರಿಯಾಗಿ ನಡೆದಿದೆ. ಸಿಂಧು ಅವರ ಫ್ಯಾಮಿಲಿ ಫ್ರೆಂಡ್ ಆಗಿದ್ದ ವೆಂಕಟ ಅವರನ್ನೇ ಸಿಂಧು ಮದುವೆಯಾಗಿದ್ದಾರೆ. ಎರಡೂ ಕುಟುಂಬದ ಹಿರಿಯರ ನಿರ್ಧಾರದಂತೆ ಒಂದಾಗಿದ್ದಾರೆ. ಸಿಂಧು-ವೆಂಕಟ ದತ್ತ ಸಾಯಿ ಅವರ ವಿವಾಹ ಆರತಕ್ಷತೆ ಮಂಗಳವಾರ (ಡಿಸೆಂಬರ್ 24) ನಡೆಯಲಿದೆ. Pleased to have attended the wedding ceremony of our Badminton Champion Olympian PV Sindhu with Venkatta Datta Sai in Udaipur last evening and conveyed my wishes & blessings to the couple for their new life ahead. @Pvsindhu1 pic.twitter.com/hjMwr5m76y — Gajendra Singh Shekhawat (@gssjodhpur) December 23, 2024 ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ None
Popular Tags:
Share This Post:
ಒಡೆದ ಹಿಮ್ಮಡಿಯನ್ನು 15 ನಿಮಿಷದಲ್ಲೇ ಸರಿಪಡಿಸುವ ಪರಿಣಾಮಕಾರಿ ಮನೆಮದ್ದು!
- by Sarkai Info
- December 24, 2024
ಜೈಲಿನಲ್ಲಿ ವಿವಸ್ತ್ರ ಮಾಡಿ ಕೂರಿಸಿದ್ರು, ಪ್ರೈವೇಟ್ ಪಾರ್ಟ್ ಅನ್ನು ಬಿಡಲಿಲ್ಲ ಎಂದು ಅಳಲುತೋಡಿಕೊಂಡ ನಟಿ!
December 24, 2024What’s New
Spotlight
Today’s Hot
-
- December 24, 2024
-
- December 23, 2024
-
- December 23, 2024
Featured News
Latest From This Week
ಮಹಿಳೆಯರ ಬಗ್ಗೆ ಪ್ರತಿಯೊಬ್ಬ ಪುರುಷನೂ ತಿಳಿದುಕೊಳ್ಳಲೇಬೇಕಾದ ಕಹಿ ಸತ್ಯಗಳು!!
KANNADA
- by Sarkai Info
- December 23, 2024
ರಾಮ್ ಚರಣ್ ಪುತ್ರಿ ಕ್ಲಿಂಕಾರ ಫೇಸ್ ರಿವೀಲ್! ಎಷ್ಟೊಂದು ಮುದ್ದಾಗಿದ್ದಾಳೆ ಗೊತ್ತಾ ಚಿರಂಜೀವಿ ಮೊಮ್ಮಗಳು!!
KANNADA
- by Sarkai Info
- December 23, 2024
Subscribe To Our Newsletter
No spam, notifications only about new products, updates.