Reliance Jio: ದೇಶಾದ್ಯಂತ ತನ್ನ ನೆಟ್‌ವರ್ಕ್ ಹರಡಿರುವ ಮುಖೇಶ್ ಅಂಬಾನಿ (Mukesh Ambani) ಮಾಲೀಕತ್ವದ ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ನಾಲ್ಕು ಪೈಸಾ ವಸೂಲ್ ಯೋಜನೆಗಳನ್ನು (Paisa Vasul Plans) ಪರಿಚಯಿಸಿದೆ. ಜುಲೈ 3ರಿಂದ ಬೆಲೆ ತನ್ನ ಎಲ್ಲಾ ಪ್ರಿಪೇಯ್ಡ್ ಯೋಜನೆಗಳ ಬೆಲೆಗಳನ್ನು ಹೆಚ್ಚಿಸಿದ್ದ ರಿಲಯನ್ಸ್ ಜಿಯೋ 'ನಾಲ್ಕು' ಪೈಸಾ ವಸೂಲ್ ಯೋಜನೆಗಳನ್ನು ಪರಿಚಯಿಸಿದೆ. ರಿಲಯನ್ಸ್ ಜಿಯೋದ ಈ ನಾಲ್ಕೂ ಪ್ರಿಪೇಯ್ಡ್ ಯೋಜನೆಗಳು ಸಾಕಷ್ಟು ಅಗ್ಗವಾಗಿದೆ ಮತ್ತು ಅನೇಕ ಪ್ರಯೋಜನಗಳನ್ನು ಹೊಂದಿದೆ... * ಜಿಯೋ ರೂ. 199 ಯೋಜನೆ: ರಿಲಯನ್ಸ್ ಜಿಯೋದ (Reliance Jio) ಪೈಸಾ ವಸೂಲ್ ಯೋಜನೆಯಲ್ಲಿ 199 ರೂ.ಗಳ ಪ್ರಿಪೇಯ್ಡ್ ಯೋಜನೆಯೂ ಇದೆ. 18 ದಿನಗಳ ವ್ಯಾಲಿಡಿಟಿಯೊಂದಿಗೆ ಲಭ್ಯವಿರುವ ಈ ಯೋಜನೆಯಲ್ಲಿ ಗ್ರಾಹಕರು ನಿತ್ಯ 1.5ಜಿಬಿ ಡೇಟಾ, ಅನ್ಲಿಮಿಟೆಡ್ ಕಾಲ್, ನಿತ್ಯ 100 ಉಚಿತ ಎಸ್‌ಎಮ್‌ಎಸ್ ಮತ್ತು ಜಿಯೋ ಟಿವಿ. ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್‌ನ ಚಂದಾದಾರಿಕೆಯೂ ಲಭ್ಯವಾಗಲಿದೆ. ಇದನ್ನೂ ಓದಿ- Amazon Sale: ಆಪಲ್, ಸ್ಯಾಮ್‌ಸಂಗ್ ಸೇರಿದಂತೆ ಹೆಸರಾಂತ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್ * ಜಿಯೋ 209 ರೂ. ಯೋಜನೆ: ರಿಲಯನ್ಸ್ ಜಿಯೋದ 209ರೂ.ಗಳ ಯೋಜನೆಯು 22 ದಿನಗಳವರೆಗೆ ಲಭ್ಯವಿದೆ. ಇದರಲ್ಲಿ, ಪ್ರತಿದಿನ 1ಜಿಬಿ ಡಾಟಾ, ಅನಿಯಮಿತ ಕರೆ ಹಾಗೂ 100 ಉಚಿತ ಎಸ್‌ಎಮ್‌ಎಸ್ ಗಳ ಪ್ರಯೋಜನವನ್ನು ಪಡೆಯಬಹುದು. ಇದರಲ್ಲಿ, ನೀವು ಜಿಯೋದ ಮನರಂಜನಾ ಸೇವೆಗಳನ್ನು ಆನಂದಿಸಬಹುದು. * ಜಿಯೋ 249 ರೂ. ಯೋಜನೆ: ರಿಲಯನ್ಸ್ ಜಿಯೋ ಪರಿಚಯಿಸಿರುವ ಮತ್ತೊಂದು ಯೋಜನೆ 249 ರೂ.ಗಳಲ್ಲಿ ಲಭ್ಯವಿದೆ. 28 ದಿನಗಳವರೆಗೆ ಲಭ್ಯವಿರುವ ಈ ಯೋಜನೆಯಲ್ಲಿ ನಿತ್ಯ 1ಜಿಬಿ ಡೇಟಾ, ಅನ್ಲಿಮಿಟೆಡ್ ಕರೆ, ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್ ಜೊತೆಗೆ ಜಿಯೋದ ಮನರಂಜನಾ ಸೇವೆಗಳನ್ನು ಆನಂದಿಸಬಹುದು. * ಜಿಯೋ 299ರೂ. ಯೋಜನೆ: ರಿಲಯನ್ಸ್ ಜಿಯೋದ 299ರೂ.ಗಳ ಪ್ರಿಪೇಯ್ಡ್ ಯೋಜನೆ ಯು (Reliance Jio Prepaid Plans) 28 ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಇದರಲ್ಲಿ ನಿತ್ಯ 1.5ಜಿಬಿ ಡೇಟಾವನ್ನು ಪಡೆಯುತ್ತೀರಿ. ಇದರೊಂದಿಗೆ ಅನಿಯಮಿತ ಕರೆ, ಪ್ರತಿದಿನ 100 ಎಸ್‌ಎಮ್‌ಎಸ್ ಕಳುಹಿಸಬಹುದು. ಅಷ್ಟೇ ಅಲ್ಲದೆ, ಯೋಜನೆಯಲ್ಲಿ ಜಿಯೋದ ಮನರಂಜನಾ ಸೇವೆಗಳನ್ನು ಸಹ ಆನಂದಿಸಬಹುದು. ಇದನ್ನೂ ಓದಿ- ಬದಲಾಗಲಿದೆ ಯುಪಿಐ ಪೇಮೆಂಟ್ ವಿಧಾನ : ಇನ್ನು ಹಣ ಪಾವತಿ ಮಾಡುವಾಗ ಹಾಕಬೇಕಾಗಿರುವುದು ಪಿನ್ ಅಲ್ಲ ಬದಲಿಗೆ ಇದು ! * ಜಿಯೋ ಡೇಟಾ ಯೋಜನೆ: ಒಂದೊಮ್ಮೆ ನಿಮ್ಮ ಡೇಟಾ ಖಾಲಿಯಾದರೆ, ಇದಕ್ಕಾಗಿ ರಿಲಯನ್ಸ್ ಜಿಯೋ 49 ರೂ.ಗಳ ಡೇಟಾ ಪ್ಲಾನ್ ಅನ್ನು ಕೂಡ ಪರಿಚಯಿಸಿದೆ. ಇದರಲ್ಲಿ ದಿನಕ್ಕೆ ಅನಿಯಮಿತ ಡೇಟಾ ಲಭ್ಯವಿದೆ. ಅಂತೆಯೇ ಇಡೀ ತಿಂಗಳಿಗಾಗಿ ನೀವು ಡೇಟಾ ಸೌಲಭ್ಯವನ್ನು ಬಯಸಿದರೆ 359 ರೂ. ಗಳಲ್ಲಿ 50GB ಡೇಟಾವನ್ನು ಪಡೆಯಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. None
Popular Tags:
Share This Post:
ಒಡೆದ ಹಿಮ್ಮಡಿಯನ್ನು 15 ನಿಮಿಷದಲ್ಲೇ ಸರಿಪಡಿಸುವ ಪರಿಣಾಮಕಾರಿ ಮನೆಮದ್ದು!
- by Sarkai Info
- December 24, 2024
ಜೈಲಿನಲ್ಲಿ ವಿವಸ್ತ್ರ ಮಾಡಿ ಕೂರಿಸಿದ್ರು, ಪ್ರೈವೇಟ್ ಪಾರ್ಟ್ ಅನ್ನು ಬಿಡಲಿಲ್ಲ ಎಂದು ಅಳಲುತೋಡಿಕೊಂಡ ನಟಿ!
December 24, 2024What’s New
Spotlight
Today’s Hot
-
- December 24, 2024
-
- December 23, 2024
-
- December 23, 2024
Featured News
Latest From This Week
ಮಹಿಳೆಯರ ಬಗ್ಗೆ ಪ್ರತಿಯೊಬ್ಬ ಪುರುಷನೂ ತಿಳಿದುಕೊಳ್ಳಲೇಬೇಕಾದ ಕಹಿ ಸತ್ಯಗಳು!!
KANNADA
- by Sarkai Info
- December 23, 2024
ರಾಮ್ ಚರಣ್ ಪುತ್ರಿ ಕ್ಲಿಂಕಾರ ಫೇಸ್ ರಿವೀಲ್! ಎಷ್ಟೊಂದು ಮುದ್ದಾಗಿದ್ದಾಳೆ ಗೊತ್ತಾ ಚಿರಂಜೀವಿ ಮೊಮ್ಮಗಳು!!
KANNADA
- by Sarkai Info
- December 23, 2024
Subscribe To Our Newsletter
No spam, notifications only about new products, updates.