KANNADA

ಮನುಷ್ಯರ ಬದುಕನ್ನೇ ನುಂಗುತ್ತಿದೆ ಈ ಸಾಫ್ಟ್‌ʼವೇರ್: ಎಚ್ಚರಿಕೆ ವಹಿಸದಿದ್ದರೆ ನಿಮ್ಮನ್ನೂ ಕಾಡುವುದು ಖಚಿತ! ಆ ತಂತ್ರಜ್ಞಾನ ಬೇರಾವುದು ಅಲ್ಲ...

Dangerous Deep Live Cam Software: ಹಿಂದೆ ದೊಡ್ಡವರು ಅನೇಕ ಒಳ್ಳೆಯ ಮಾತುಗಳನ್ನು ಹೇಳುತ್ತಿದ್ದರು. ಸ್ವಂತ ಕಣ್ಣುಗಳಿಂದ ನೋಡಿದರೂ, ಇತರರು ಏನೇ ಹೇಳಿದರೂ ಅದನ್ನು ಆಧಾರವಿಲ್ಲದ ಹೊರತು ನಂಬಬಾರದು ಎಂಬುದನ್ನೂ ಕೂಡ ತಿಳಿಹೇಳುತ್ತಿದ್ದರು. ಆದರೆ ಇಂದು ಕಾಲ ಬದಲಾಗಿದೆ. ನಾವು ಕಣ್ಣಾರೆ ಕಂಡದ್ದು ನಿಜವೋ ಸುಳ್ಳೋ ಎಂಬ ಅನುಮಾನ ಮೂಡುವ ಹಂತಕ್ಕೆ ಬಂದು ತಲುಪಿದೆ. ಇದನ್ನೂ ಓದಿ: "2 ಲಕ್ಷ ಹಣ ಕೊಡೋದು ಬೇಡ, ಆದ್ರೆ ರಾತ್ರಿ ಮನೆಗೆ ಬಾ"- ಮಂಚಕ್ಕೆ ಕರೆದ ನಟನ ಬಗ್ಗೆ ನಟಿ ಹೇಳಿಕೆ ಆಧುನಿಕ ತಂತ್ರಜ್ಞಾನ ಮನುಷ್ಯನಿಗೆ ಎಲ್ಲಾ ಕೆಲಸಗಳಲ್ಲಿ ಸಹಾಯ ಮಾಡುವ ಮಟ್ಟದಿಂದ ಮನುಷ್ಯನನ್ನೇ ಮಾಯ ಮಾಡುವ ಮಟ್ಟಕ್ಕೆ ಬೆಳೆದಿದೆ. ಯಾವುದು ಸತ್ಯ, ಯಾವುದು ಸುಳ್ಳು ಎಂಬ ಅರಿವಿಗೇ ಬಾರದ ಸ್ಥಿತಿಗೆ ಕಾರಣವಾಗುತ್ತಿದೆ. ಇಂತಹ ತಂತ್ರಜ್ಞಾನಗಳನ್ನು ಮನರಂಜನೆಗೆ ಎಷ್ಟೇ ಬಳಸಿದರೂ ತಪ್ಪಿಲ್ಲ. ಆ ವ್ಯಾಪ್ತಿಯನ್ನು ಮೀರಿ ವಂಚನೆಗೆ ಮತ್ತು ದಾರಿತಪ್ಪಿಸಲು ಬಳಸಲಾಗುತ್ತದೆ. ಅದರಲ್ಲೂ ಸೆಲೆಬ್ರಿಟಿಗಳನ್ನು ಗುರಿಯಾಗಿಸಿಕೊಂಡು ನಕಲಿ ವಿಡಿಯೋಗಳನ್ನು ಮಾಡಲಾಗುತ್ತಿದೆ. ಆ ವೀಡಿಯೋಗಳ ಮೂಲಕ ವೈಯಕ್ತಿಕ ಘನತೆಗೆ ಧಕ್ಕೆ ತರುತ್ತಿದ್ದಾರೆ. ಇದಕ್ಕೆ ನಟಿ ರಶ್ಮಿಕಾ ಹೆಸರಲ್ಲಿ ಡೀಪ್ ಫೇಕ್ ವಿಡಿಯೋ ರಿಲೀಸ್ ಆಗಿದ್ದೇ ಒಂದು ಉದಾಹರಣೆ. ಡೀಪ್‌ ಫೇಕ್ ತಂತ್ರಜ್ಞಾನವು ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದೆ. ಈ ಬೆನ್ನಲ್ಲೇ ಇದರ ದುರುಪಯೋಗ ವಿಪರೀತವಾಗಿ ಹೆಚ್ಚಿದೆ. ಇತ್ತೀಚೆಗೆ ಡೀಪ್ ಲೈವ್ ಕ್ಯಾಮ್ ಎಂಬ ಹೊಸ ಸಾಫ್ಟ್‌ವೇರ್ ಪ್ಯಾಕೇಜ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇವುಗಳ ಮೂಲಕ, ನೈಜ-ಸಮಯದ ಡೀಪ್‌ಫೇಕ್‌ಗಳನ್ನು ಬಹಳ ಸುಲಭವಾಗಿ ರಚಿಸಲಾಗುತ್ತದೆ. ಸಾಫ್ಟ್‌ವೇರ್ ವ್ಯಕ್ತಿಯ ಫೋಟೋವನ್ನು ತೆಗೆದುಕೊಂಡು, ಆ ಮುಖವನ್ನು ಲೈವ್ ವೆಬ್‌ಕ್ಯಾಮ್ ಫೀಡ್‌ʼಗೆ ಕಳುಹಿಸುತ್ತದೆ. ಅದರಿಂದ ಆ ಫೋಟೋದಲ್ಲಿ ಹಲವು ಬದಲಾವಣೆಗಳನ್ನು ಮಾಡಬಹುದು. ಉದಾಹರಣೆಗೆ, ಗಡ್ಡ ಇದ್ದರೆ, ಅದನ್ನು ತೆಗೆಯಬಹುದು. ಕೂದಲನ್ನು ಬದಲಾಯಿಸಬಹುದು. ಮೀಸೆ ಇಲ್ಲದಿದ್ದರೂ ಹಾಕಿಕೊಳ್ಳಬಹುದು. ಇದನ್ನೂ ಓದಿ: ಟೆಸ್ಟ್‌ ಬಿಟ್ಟರೆ ಬೇರಾವ ಸ್ವರೂಪವನ್ನೂ ಆಡದ ಈ ದಿಗ್ಗಜ ಇಂದು ಕ್ರಿಕೆಟ್‌ ಲೋಕಕ್ಕೇ ʼಅರಸʼ ಡೀಪ್ ಲೈವ್ ಕ್ಯಾಮ್ ಯೋಜನೆಯು ಕಳೆದ ವರ್ಷಾಂತ್ಯದಿಂದ ಅಭಿವೃದ್ಧಿಯಲ್ಲಿದೆ. ಆದರೆ ಅದರ ವೀಡಿಯೊಗಳು ಇತ್ತೀಚೆಗೆ ಆನ್‌ಲೈನ್‌ನಲ್ಲಿ ಪ್ರಸಾರ ಮಾಡಲು ಪ್ರಾರಂಭವಾಗಿದ್ದು, ನಂತರ ವೈರಲ್ ಆಗಿವೆ. ಈ ಕ್ಲಿಪ್‌ಗಳಲ್ಲಿ, ಕೆಲವು ಜನರು ಡೀಪ್ ಲೈವ್ ಕ್ಯಾಮ್ ಅನ್ನು ಬಳಸಿಕೊಂಡು ಎಲೋನ್ ಮಸ್ಕ್ ಮತ್ತು ಜಾರ್ಜ್ ಕ್ಲೂನಿಯಂತಹ ಸೆಲೆಬ್ರಿಟಿಗಳನ್ನು ಅನುಕರಿಸುತ್ತಿದ್ದಾರೆ. ಇನ್ನು ಈ ವಿಡಿಯೋ ಕಂಡ ಅನೇಕರು ಡೀಪ್ ಲೈವ್ ಕ್ಯಾಮ್‌ ದುರುಪಯೋಗದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.