KANNADA

ಟೀಂ ಇಂಡಿಯಾದ ಅದೆಷ್ಟೋ ಗೆಲುವಿಗೆ ಕಾರಣನಾದ ಈತ ಇದುವರೆಗೆ ಪಾಕ್ ವಿರುದ್ಧ ಒಂದೇ ಒಂದು ಟೆಸ್ಟ್‌ ಪಂದ್ಯ ಆಡಿಲ್ಲ!

Indian Cricketer who never played Test cricket against Pakistan ರವಿಚಂದ್ರನ್ ಅಶ್ವಿನ್ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದು, ಸದ್ಯ ಅವರ ಈ ದಿಢೀರ್‌ ನಿರ್ಧಾರಕ್ಕೆ ಕಾರಣ ಏನು ಎಂಬುದೇ ಟಾಕ್‌ ಆಫ್‌ ದಿ ಟೌನ್‌ ಆಗಿದೆ. ಇನ್ನು ಟೀಂ ಇಂಡಿಯಾಗೆ ತನ್ನ ಸ್ವಂತ ಬಲದಿಂದಲೇ ಅದೆಷ್ಟೋ ಗೆಲುವುಗಳನ್ನು ತಂದುಕೊಟ್ಟ ಅಶ್ವಿನ್‌, ಇದುವರೆಗೆ ಒಂದೇ ಒಂದು ಟೆಸ್ಟ್‌ ಪಂದ್ಯವನ್ನು ಪಾಕ್‌ ವಿರುದ್ಧ ಆಡಿಲ್ಲವಂತೆ. ಆ ಒಂದು ಕೊರಗು ಇನ್ನೂ ಅವರನ್ನು ಕಾಡುತ್ತಿದೆಯಂತೆ. ಇದನ್ನೂ ಓದಿ: ಪ್ರಯಾಣಿಕರಿಗೆ ಆಟೋ ದರ ಏರಿಕೆ ಬಿಸಿ: ಪ್ರತಿ ಕಿಲೋ ಮೀಟರ್ ಗೆ 5 ರೂಪಾಯಿ ಹೆಚ್ಚಳ ಸಾಧ್ಯತೆ! 2007 ರಲ್ಲಿ ಪಾಕಿಸ್ತಾನ ಮತ್ತು ಭಾರತ ಕೊನೆಯ ಬಾರಿಗೆ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಿದ್ದವು. ಅಂದಿನಿಂದ ಪ್ರತಿಸ್ಪರ್ಧಿ ದೇಶಗಳ ನಡುವಿನ ಉದ್ವಿಗ್ನತೆಯು ಕ್ರಿಕೆಟ್‌ ಆಯೋಜಿಸಲು ಅಡ್ಡಿಯನ್ನೇ ಮಾಡುತ್ತಿದೆ. ಅಶ್ವಿನ್‌ ಮಾತ್ರವಲ್ಲದೆ, ಇದುವರೆಗೆ ಪಾಕ್‌ ವಿರುದ್ಧ ಟೆಸ್ಟ್‌ ಕ್ರಿಕೆಟ್‌ ಆಡದ ಟೀಂ ಇಂಡಿಯಾದ ಕ್ರಿಕೆಟಿಗರಿದ್ದಾರೆ. ಅವರಲ್ಲಿ ಒಬ್ಬರು ಚೇತೇಶ್ವರ್‌ ಪೂಜಾರ. ಭಾರತೀಯ ಟೆಸ್ಟ್ ತಂಡದ ದೀರ್ಘಕಾಲದ ಧೀಮಂತ ಆಟಗಾರ, ಟೆಸ್ಟ್ ಸ್ಪೆಷಲಿಸ್ಟ್ ಎಂದೇ ಖ್ಯಾತಿ ಪಡೆದಿರುವ ಪೂಜಾರ ಇದುವರೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ವಿರುದ್ಧ ಸ್ಪರ್ಧಿಸುವ ಅವಕಾಶವನ್ನು ಪಡೆದಿಲ್ಲ. ಇನ್ನೋರ್ವ ಕ್ರಿಕೆಟಿಗ ಅಜಿಂಕ್ಯಾ ರಹಾನೆ. ಇವರು ಕೂಡ ಪಾಕಿಸ್ತಾನದ ವಿರುದ್ಧ ಟೆಸ್ಟ್‌ ಆಡಲು ಸಾಧ್ಯವಾಗಿಲ್ಲ. ಮುಂದಿನ ಹೆಸರು ನಿಮಗೆ ಖಂಡಿತವಾಗಿಯೂ ಅಚ್ಚರಿಯನ್ನುಂಟು ಮಾಡದೆ ಇರದು. ಏಕೆಂದರೆ ಆ ಹೆಸರು ಬೇರಾರದ್ದು ಅಲ್ಲ, ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾರದ್ದು. ಇದನ್ನೂ ಓದಿ: ಈ ಹಣ್ಣಿನ ಬೀಜವನ್ನು ದಿನಕ್ಕೊಮ್ಮೆ ಸೇವಿಸಿ.. ಔಷಧವಿಲ್ಲದೆಯೇ ನಿಯಂತ್ರಣಕ್ಕೆ ಬರುತ್ತೆ ಬ್ಲಡ್‌ ಶುಗರ್‌! ವಿರಾಟ್ ಕೊಹ್ಲಿ ವೈಟ್ ಬಾಲ್‌ ಕ್ರಿಕೆಟ್ನಲ್ಲಿ ಪಾಕಿಸ್ತಾನವನ್ನು ಬಗ್ಗುಬಡಿದವರು. ಆದರೆ ಅವರಿಗೆ ಪಾಕ್‌ ವಿರುದ್ಧ ಟೆಸ್ಟ್‌ ಆಡುವ ಅವಕಾಶ ಸಿಕ್ಕಿಲ್ಲ. ಇನ್ನೊಂದೆಡೆ ರೋಹಿತ್‌ ಶರ್ಮಾ ಕೂಡ ಪಾಕಿಸ್ತಾನದ ವಿರುದ್ಧ ಟೆಸ್ಟ್‌ನಲ್ಲಿ ಎಂದಿಗೂ ಕ್ರಿಕೆಟ್‌ ಆಡಿಲ್ಲ. 2007 ರಲ್ಲಿ ವೈಟ್ ಬಾಲ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರೂ ಇದೊಂದು ಕನಸು ಈಡೇರಿಲ್ಲ. ಇನ್ನು ಈ ಇಬ್ಬರು ನಿವೃತ್ತಿಯ ಹಾದಿಯಲ್ಲಿದ್ದು, ಪಾಕ್‌ ವಿರುದ್ಧ ಟೆಸ್ಟ್‌ ಆಡದೆಯೇ ವಿದಾಯ ಘೋಷಣೆ ಮಾಡುತ್ತಾರೆಯೇ ಎಂಬ ಅನುಮಾನ ಎಲ್ಲರಲ್ಲೂ ಮೂಡುತ್ತಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.