KANNADA

ದುಬಾರಿ ಫೋನ್‌ʼಗಳಿಗಿರುವ ಫೀಚರ್ಸ್‌... ಕ್ಯಾಮರಾ-ಬ್ಯಾಟರಿ ಎಲ್ಲವೂ ಸೂಪರ್‌!‌ ಕೇವಲ 6,499 ರೂ.ಗೆ ಲಭ್ಯವಿದೆ ಈ ಸ್ಮಾರ್ಟ್‌ಫೋನ್!

Lava Yuva Star 4G: Lava Yuva Star 4G ಭಾರತದಲ್ಲಿ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಈ ಹ್ಯಾಂಡ್‌ ಸೆಟ್ ಆಕ್ಟಾ-ಕೋರ್ ಯುನಿಸೊಕ್ ಪ್ರೊಸೆಸರ್ ಅನ್ನು ಹೊಂದಿದ್ದು, 4GB ಯ RAM ನೊಂದಿಗೆ ಜೋಡಿಸಲ್ಪಟ್ಟಿದೆ. ಈ ಸ್ಮಾರ್ಟ್‌ಫೋನ್ 13MP ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, Android 14 Go ಆವೃತ್ತಿ OS ನಲ್ಲಿ ಕಾರ್ಯನಿರ್ವಹಿಸುತ್ತದೆ. ಕ್ಲೈಮ್ ಪ್ರಕಾರ, ಇದರಲ್ಲಿ ಯಾವುದೇ ಬ್ಲೋಟ್‌ ವೇರ್ ಅಪ್ಲಿಕೇಶನ್‌ʼಗಳನ್ನು ಒದಗಿಸಲಾಗಿಲ್ಲ. ಇದನ್ನು ಮೂರು ಬಣ್ಣದ ಆಯ್ಕೆಗಳಲ್ಲಿ ಮತ್ತು ಸಿಂಗಲ್ RAM + ಶೇಖರಣಾ ರೂಪಾಂತರದಲ್ಲಿ ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ: ಅದು ನನ್ನ ಜೀವನದ ಅತ್ಯಂತ ಕಷ್ಟಕರವಾದ ಸಮಯ: ಮಾಜಿ ಕೋಚ್‌ ರಾಹುಲ್‌ ದ್ರಾವಿಡ್‌ ಶಾಕಿಂಗ್‌ ಹೇಳಿಕೆ ಭಾರತದಲ್ಲಿ Lava Yuva Star 4G ಬೆಲೆ ರೂ 6,499 ಆಗಿದ್ದು, 4GB + 64GB ರೂಪಾಂತರವಾಗಿದೆ. ಈ ಫೋನ್ ಪ್ರಸ್ತುತ ದೇಶಾದ್ಯಂತ ಸಸ್ತಾ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಹ್ಯಾಂಡ್‌ ಸೆಟ್ ಮೂರು ಬಣ್ಣ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಅವುಗಳೆಂದರೆ ಕಪ್ಪು, ಲ್ಯಾವೆಂಡರ್ ಮತ್ತು ಬಿಳಿ. Lava Yuva Star 4G 6.75-ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದೆ. ಮುಂಭಾಗದ ಕ್ಯಾಮರಾಗೆ ಮೇಲ್ಭಾಗದಲ್ಲಿ ವಾಟರ್‌ ಡ್ರಾಪ್ ನಾಚ್ ಕೇಂದ್ರೀಕೃತವಾಗಿದೆ. ಹ್ಯಾಂಡ್‌ ಸೆಟ್ ಯುನಿಸೊಕ್ 9863 ಎ ಪ್ರೊಸೆಸರ್ ಅನ್ನು ಹೊಂದಿದ್ದು, ಇದು 4 ಜಿಬಿ RAM ಮತ್ತು 64 ಜಿಬಿ ಆನ್‌ ಬೋರ್ಡ್ ಸ್ಟೋರೇಜ್‌ʼನೊಂದಿಗೆ ಕಾರ್ಯನಿರ್ವಹಿಸುತ್ತದೆ. RAM ಅನ್ನು 4GB ವರೆಗೆ ವಿಸ್ತರಿಸಬಹುದು. ಅಂದರೆ ಬಳಕೆದಾರರು ಫೋನ್‌ʼನಲ್ಲಿ ಒಟ್ಟು 8GB RAM ಬಳಸಲು ಸಾಧ್ಯವಾಗುತ್ತದೆ. ಕ್ಯಾಮೆರಾದ ಬಗ್ಗೆ ಮಾತನಾಡುವುದಾದರೆ, Lava Yuva Star 4G ಡ್ಯುಯಲ್ ಹಿಂಬದಿಯ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದ್ದು ಅದು 13-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ ಮತ್ತು LED ಫ್ಲ್ಯಾಷ್ ಘಟಕವನ್ನು ಒಳಗೊಂಡಿದೆ. ಹ್ಯಾಂಡ್‌ ಸೆಟ್ ಅನೇಕ AI-ಬೆಂಬಲಿತ ಕ್ಯಾಮೆರಾ ವೈಶಿಷ್ಟ್ಯಗಳಿಗೆ ಸಪೋರ್ಟ್‌ ಮಾಡುತ್ತದೆ. ಮುಂಭಾಗದ ಕ್ಯಾಮೆರಾವು 5 ಮೆಗಾಪಿಕ್ಸೆಲ್ ಹೊಂದಿದೆ. ಇದನ್ನೂ ಓದಿ: ಈ ಐವರು ವಿದೇಶಿ ಕ್ರಿಕೆಟಿಗರೆಂದರೆ ಭಾರತೀಯರ ಪಾಲಿಗೆ ವಿಲನ್‌ʼಗಳಿದ್ದಂತೆ! ಕಂಡರೆ ಉರಿದುಬೀಳ್ತಾರೆ ಈ ಸ್ಮಾರ್ಟ್‌ಫೋನ್ 5,000mAh ಬ್ಯಾಟರಿಯನ್ನು ಹೊಂದಿದ್ದು 10W ವೈರ್ಡ್ ಚಾರ್ಜಿಂಗ್ ಅನ್ನು ಸಪೋರ್ಟ್‌ ಮಾಡುತ್ತದೆ. USB ಟೈಪ್-C ಚಾರ್ಜಿಂಗ್ ಪೋರ್ಟ್‌ʼನೊಂದಿಗೆ ಬರುತ್ತದೆ. ಸುರಕ್ಷತೆಗಾಗಿ, ಫೋನ್ ಸೈಡ್-ಮೌಂಟೆಡ್ ಫಿಂಗರ್‌ ಪ್ರಿಂಟ್ ಹೊಂದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.