KANNADA

2025ಕ್ಕೆ ಹೊಸ ನಿಯಮ ಜಾರಿ..! ವಾರಕ್ಕೆ 4 ದಿನ ಮಾತ್ರ ಕೆಲಸ, 3 ದಿನ ರಜೆ..

Viral news : 100 ವರ್ಷಗಳಿಗಿಂತ ಹೆಚ್ಚು ಜೀವಿತಾವಧಿಯನ್ನು ಹೊಂದಿರುವ ವಿಶ್ವದ ಮೊದಲ ದೇಶ ಜಪಾನ್. ಅಂಕಿಅಂಶಗಳ ಪ್ರಕಾರ ದೇಶದ ಒಟ್ಟು ಜನಸಂಖ್ಯೆಯ ಶೇಕಡಾ 28 ರಷ್ಟು ಜನರು 65 ವರ್ಷಕ್ಕಿಂತ ಮೇಲ್ಪಟ್ಟವರು. ಹೀಗೇ ಮುಂದುವರಿದರೆ ದೇಶದಲ್ಲಿ ವಯೋವೃದ್ಧರೇ ಹೆಚ್ಚು ವಾಸಿಸುವ ದೇಶವಾಗಿಬಿಡುತ್ತದೆ ಎಂಬ ಭಯ ಜಪಾನ್‌ ಸರ್ಕಾರದ್ದು... ಇದಕ್ಕೆ ಪರಿಹಾರವೆಂಬಂತೆ ಅಧೋಗತಿಗೆ ಹೋಗಿರುವ ಜನನ ಸಂಖ್ಯೆಯ ಪ್ರಮಾಣವನ್ನು ಮರುಸ್ಥಾಪಿಸಲು ದೇಶದ ಸರ್ಕಾರ ಎಲ್ಲ ರೀತಿಯ ಪ್ರಯತ್ನಗಳಲ್ಲಿ ತೊಡಗಿದೆ. ಅದರ ಭಾಗವಾಗಿ ಇದೀಗ ಜಪಾನ್‌ ಹೊಸ ಪ್ಲಾನ್ ಮಾಡಿದ್ದು, ವಾರದಲ್ಲಿ 3 ದಿನ ರಜೆ ನೀಡಲು ಮುಂದಾಗಿದೆ.. ಇದನ್ನೂ ಓದಿ: ಸಿಂಗಲ್‌ ಬಾಯ್ಸ್‌ಗೆ ಕ್ರಿಸ್ಮಸ್ ಬಂಪರ್ ಆಫರ್..! ಈಕೆಯ ಈ ಬೇಡಿಕೆ ಈಡೇರಿಸಿದ್ರೆ, ನೀವಾಗ್ತಿರ ಬಾಯ್‌ಫ್ರೆಂಡ್.. ಕಷ್ಟಪಟ್ಟು ದುಡಿಯುವ ಜಪಾನ್ ದೀರ್ಘಾವಧಿ ಕೆಲಸ ಮಾಡುವ ಸಂಸ್ಕೃತಿಯನ್ನು ಹೊಂದಿದೆ. ವಿಶ್ವ ಬ್ಯಾಂಕ್ ಪ್ರಕಾರ, ಜಪಾನ್‌ನಲ್ಲಿ 72 ಪ್ರತಿಶತ ಪುರುಷರು ಮತ್ತು 55 ಪ್ರತಿಶತ ಮಹಿಳೆಯರು ಕಳೆದ ವರ್ಷ ಕೆಲಸಕ್ಕೆ ಹೋಗುತ್ತಿದ್ದಾರೆಂದು ವರದಿ ಮಾಡಿದ್ದಾರೆ. ಈ ಪ್ರಮಾಣವು ಹೆಚ್ಚಿನ ಆದಾಯದ ದೇಶಗಳಿಗಿಂತ ಹೆಚ್ಚು ಎಂದು ಹೇಳಲಾಗುತ್ತದೆ. ಈ ಕಾರಣದಿಂದಾಗಿ, ಹೆಚ್ಚಿನ ಸಮಯ ಪುರುಷರು ಕೆಲಸದ ಕಾರಣದಿಂದ ಕುಟುಂಬದೊಂದಿಗೆ ಸಮಯ ಕಳೆಯುತ್ತಿಲ್ಲ ಎಂದು ತಿಳಿದು ಬಂದಿದೆ. ಕಚೇರಿ ಕೆಲಸಗಳನ್ನು ನೋಡಿಕೊಳ್ಳುವುದು ಮತ್ತು ಮಕ್ಕಳನ್ನು ಹೆರುವುದು ಮಹಿಳೆಯರಿಗೆ ಹೆಚ್ಚುವರಿ ಹೊರೆಯಾಗುತ್ತದೆ. ಇದಕ್ಕಾಗಿ, ಜಪಾನ್‌ನ್‌ ಸರ್ಕಾರ ಹೊಸ ನಿಯಮ ಜಾರಿಗೊಳಿಸಲು ಮುಂದಾಗಿದೆ.. ಇದನ್ನೂ ಓದಿ : ಸೆ*ಕ್ಸ್‌ ಇಲ್ಲ, ಟಚಿಂಗ್‌ ಇಲ್ಲವೇ ಇಲ್ಲ.. ಆದ್ರೂ, ಮಹಿಳಾ ಖೈದಿಯನ್ನ ಜೈಲಿನಲ್ಲೇ ಗರ್ಭಿಣಿ ಮಾಡಿದ ಖೈದಿ..! ಹೇಗೆ ಸಾಧ್ಯ ಗುರು..? ಜಪಾನ್‌ನ ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ ವರ್ಷ ದೇಶದಲ್ಲಿ ಕೇವಲ 7,27,277 ಮಕ್ಕಳ ಜನನವಾಗಿದೆ. ಇಂತಹ ಕಡಿಮೆ ಜನನ ಪ್ರಮಾಣ ಮತ್ತು ಹೆಚ್ಚುತ್ತಿರುವ ವೃದ್ಧರ ಸಂಖ್ಯೆಯು ಜನರ ಜೀವನೋಪಾಯ ಮತ್ತು ಆರ್ಥಿಕತೆಯ ಮೇಲೆ ಗಂಭೀರವಾಗಿ ಪರಿಣಾಮ ಬೀರಲು ಪ್ರಾರಂಭಿಸುತ್ತಿದೆ. ಈ ಪರಿಸ್ಥಿತಿಯಲ್ಲಿ ಗವರ್ನರ್ ಯುರಿಕೊ ಕೊಯಿಕೆ ರಾಜಧಾನಿ ಟೋಕಿಯೊದ ಸರ್ಕಾರಿ ನೌಕರರಿಗೆ ವಾರದಲ್ಲಿ ಮೂರು ದಿನ ರಜೆ ನೀಡುವುದಾಗಿ ಘೋಷಿಸಿದ್ದಾರೆ. ಈ ಪ್ರಕ್ರಿಯೆಯು ಏಪ್ರಿಲ್‌ನಿಂದ ಜಾರಿಗೆ ಬರಲಿದೆ.. ಒಟ್ಟಾರೆಯಾಗಿ ಈ ಯೋಜನೆ ಮುಂದಿನ ಜನನ ಪ್ರಮಾಣದ ಹೆಚ್ಚಳಕ್ಕೆ ಕಾರಣವಾಗುತ್ತಾ.. ಅಥವಾ ಇಲ್ಲಾ..? ಅಂತ ಕಾಯ್ದು ನೋಡೋಣ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.