KANNADA

ಇನ್ನು ಬಿಸಿಲಿನಿಂದಲೇ ಚಾರ್ಜ್ ಆಗುವುದು ಸ್ಮಾರ್ಟ್ ಫೋನ್! ವಿಜ್ಞಾನಿಗಳ ಹೊಸ ಆವಿಷ್ಕಾರವಿದು

ಬೆಂಗಳೂರು : ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಸೌರ ಶಕ್ತಿಯನ್ನು ಅತ್ಯಂತ ಸುಲಭವಾಗಿ ಬಳಸಬಹುದಾದ ಹೊಸ ತಂತ್ರಜ್ಞಾನವನ್ನು ಪತ್ತೆ ಹಚ್ಚಿದ್ದಾರೆ.ಈ ವಸ್ತುವು ತುಂಬಾ ತೆಳುವಾದದ್ದು ಮತ್ತು ಯಾವುದೇ ಮೇಲ್ಮೈಗೆ ಅನ್ವಯಿಸಿದಾಗ ವಿದ್ಯುಚ್ಛಕ್ತಿಯನ್ನು ಉತ್ಪಾದಿಸುವ ವಿಶೇಷ ರೀತಿಯ ಲೇಪನವನ್ನು ಹೊಂದಿದೆ.ಈ ಹೊಸ ತಂತ್ರಜ್ಞಾನದೊಂದಿಗೆ, ಬ್ಯಾಗ್‌,ಕಾರು ಮತ್ತು ಕಟ್ಟಡಗಳಂತಹ ದೈನಂದಿನ ವಸ್ತುಗಳ ಮೇಲೆ ಸೋಲಾರ್ ಪ್ಯಾನಲ್ ಗಳನ್ನು ಸ್ಥಾಪಿಸಲು ಸಾಧ್ಯವಾಗುತ್ತದೆ.ಅಂದರೆ,ಭವಿಷ್ಯದಲ್ಲಿ ಸೂರ್ಯನ ಬೆಳಕಿನ ಸಹಾಯದಿಂದ ಫೋನ್‌ಗಳಂತಹ ಎಲೆಕ್ಟ್ರಾನಿಕ್ ವಸ್ತುಗಳನ್ನು ಚಾರ್ಜ್ ಮಾಡುವುದು ಕೂಡಾ ಸಾಧ್ಯವಾಗುತ್ತದೆ ಎಂದರೆ ತಪ್ಪಾಗುವುದಿಲ್ಲ. ಈ ಹೊಸ ವಸ್ತುವಿಗೆ ಹಲವಾರು ಪದರಗಳನ್ನು ಸೇರಿಸುವ ಮೂಲಕ ವಿಜ್ಞಾನಿಗಳು 27 ಪ್ರತಿಶತಕ್ಕಿಂತ ಹೆಚ್ಚು ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವನ್ನು ಹೆಚ್ಚಿಸಿದ್ದಾರೆ.ಇಂತಹ ವಸ್ತುವು ಸಾಮಾನ್ಯ ಸೋಲಾರ್ ಪ್ಯಾನೆಲ್‌ನಷ್ಟು ವಿದ್ಯುತ್ ಉತ್ಪಾದಿಸುತ್ತಿರುವುದು ಇದೇ ಮೊದಲು.ಕೇವಲ ಐದು ವರ್ಷಗಳಲ್ಲಿ ಈ ತಂತ್ರಜ್ಞಾನವನ್ನು ಇಷ್ಟು ಸುಧಾರಿಸಿದ್ದಾರೆ ಎಂದು ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದ ವಿಜ್ಞಾನಿ ಡಾ.ಶುಯೆಫೆಂಗ್ ಹೂ ಹೇಳಿದ್ದಾರೆ. ಭವಿಷ್ಯದಲ್ಲಿ ಈ ವಸ್ತುವು ಶೇಕಡಾ 45 ಕ್ಕಿಂತ ಹೆಚ್ಚು ವಿದ್ಯುತ್ ಉತ್ಪಾದಿಸುತ್ತದೆ ಎಂದು ಹೇಳಲಾಗಿದೆ. ಜಪಾನ್‌ನ ಪ್ರಮುಖ ವೈಜ್ಞಾನಿಕ ಸಂಸ್ಥೆ (ಜಪಾನ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಇಂಡಸ್ಟ್ರಿಯಲ್ ಸೈನ್ಸ್ ಅಂಡ್ ಟೆಕ್ನಾಲಜಿ)ಸಹ ಈ ಹೊಸ ವಸ್ತುವನ್ನು ಪರೀಕ್ಷಿಸಿದ್ದು, ಅದು ಸರಿಯಾಗಿದೆ ಎಂದು ಹೇಳಿದೆ. ಇದನ್ನೂ ಓದಿ : OnePlus 12 specifications: ಅತ್ಯಂತ ಅಗ್ಗದ ಬೆಲೆಗೆ OnePlus 12 ಲಭ್ಯ, ಇಂದೇ ಖರೀದಿಸಿ ಸೌರ ಫಲಕಗಳಿಗಿಂತ ಇದು ಏಕೆ ಉತ್ತಮವಾಗಿದೆ? : ಈ ಹೊಸ ವಸ್ತುವು ಅಸ್ತಿತ್ವದಲ್ಲಿರುವ ಸೌರ ತಂತ್ರಜ್ಞಾನಕ್ಕಿಂತ ಹೆಚ್ಚಿನ ಪ್ರಯೋಜನಗಳನ್ನು ಹೊಂದಿದೆ.ಇದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.ಇದನ್ನು ಯಾವುದೇ ಬಾಗಿದ ಮೇಲ್ಮೈ ಮೇಲೆ ಜೋಡಿಸಬಹುದು ಮತ್ತು ಸೂರ್ಯನ ಬೆಳಕಿನಿಂದ ವಿದ್ಯುತ್ ಉತ್ಪಾದಿಸುತ್ತದೆ.ಇದು ಅತ್ಯುತ್ತಮ ಮತ್ತು ಪರಿಸರ ಸ್ನೇಹಿ ಶಕ್ತಿಯಾಗಲಿದೆ ಎಂದು ವಿಜ್ಞಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಯಾವುದಕ್ಕೂ ಅನ್ವಯಿಸಬಹುದಾದ ಹೊಸ ರೀತಿಯ ವಸ್ತುವನ್ನು ರಚಿಸಿದ್ದೇವೆ. ಈ ವಸ್ತುವು ಸಿಲಿಕೋನ್‌ಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಮತೊಬ್ಬ ವಿಜ್ಞಾನಿ ಹೇಳಿದ್ದಾರೆ. ಇದು ಬಹಳ ಮುಖ್ಯ ಏಕೆಂದರೆ ಇದರೊಂದಿಗೆ ನಾವು ಸಾಕಷ್ಟು ಸೌರ ಶಕ್ತಿಯನ್ನು ಉತ್ಪಾದಿಸಬಹುದು ಮತ್ತು ದೊಡ್ಡ ಸೌರ ಫಲಕಗಳನ್ನು ಸ್ಥಾಪಿಸುವ ಅಗತ್ಯವೂ ಕಡಿಮೆಯಾಗುತ್ತದೆ. ಇದನ್ನೂ ಓದಿ : ಆನ್‌ʼಲೈನ್‌ʼನಲ್ಲಿ ಫೋಟೋ-ವಿಡಿಯೊ ಅಪ್‌ಲೋಡ್ ಮಾಡುತ್ತಿದ್ದೀರಾ? ಅದಕ್ಕೂ ಮುನ್ನ ಇದನ್ನು ಆಫ್ ಮಾಡಿ.. ಇಲ್ಲದಿದ್ದರೆ ಡೇಂಜರ್! ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.