KANNADA

ಸಿನಿಮಾ ಹಾಲ್ ನ ಅನುಭವ ನೀಡುವ ಟಿವಿ ! Acer ಬಿಡುಗಡೆ ಮಾಡಿದೆ 75 ಇಂಚಿನ Google TV

New Google TV Launch : Indkal Technologies ಏಸರ್ ಬ್ರಾಂಡ್ ಅಡಿಯಲ್ಲಿ ಸೂಪರ್ ಸೀರೀಸ್ ಟಿವಿ ಮಾದರಿಗಳನ್ನು ಬಿಡುಗಡೆ ಮಾಡಿದೆ.ಇದರೊಂದಿಗೆ ಕಂಪನಿಯು ಆಂಡ್ರಾಯ್ಡ್ 14 ಆಧಾರಿತ ಗೂಗಲ್ ಟಿವಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ ಮೊದಲ ಕಂಪನಿಯಾಗಿದೆ.ಇದಲ್ಲದೆ,ಇಂಡಿಕಲ್ ತನ್ನ ಹೊಸ ಏಸರ್ ಬ್ರ್ಯಾಂಡ್ M ಸರಣಿ ಮತ್ತು L ಸರಣಿ ಟಿವಿಗಳನ್ನು ಪರಿಚಯಿಸಿದೆ. ಏಸರ್ ಸೂಪರ್,ಎಲ್ ಮತ್ತು ಎಂ ಸರಣಿ ಟಿವಿಗಳು: ಸೂಪರ್ ಸಿರೀಸ್‌ನ ಬೆಲೆ 32,999 ರೂ.ನಿಂದ ಪ್ರಾರಂಭವಾಗುತ್ತದೆ.M ಸರಣಿಯ ಆರಂಭಿಕ ಬೆಲೆ 89,999 ರೂ. ಆಗಿದ್ದರೆ, L ಸರಣಿಯ ಆರಂಭಿಕ ಬೆಲೆ 14,999 ರೂ. ಆಗಿದೆ. ಇದನ್ನೂ ಓದಿ : ರಾತ್ರಿ ವೇಳೆ ಪುರುಷರು ಗೂಗಲ್‌ʼನಲ್ಲಿ ಅತಿ ಹೆಚ್ಚು ಸರ್ಚ್ ಮಾಡುವುದು ಈ ವಿಷಯವನ್ನಂತೆ! ಈ ಟಿವಿಯ ವಿಶೇಷಣಗಳು : ಈ ಹೊಸ ಟಿವಿಗಳು ಅತ್ಯಂತ ವಿಶೇಷವಾದವು ಏಕೆಂದರೆ ಅವುಗಳು ಆಂಡ್ರಾಯ್ಡ್ 14 ಆಧಾರಿತ ಗೂಗಲ್ ಟಿವಿಯನ್ನು ಹೊಂದಿರುವ ಮೊದಲ ಟಿವಿಗಳಾಗಿವೆ.ಸೂಪರ್ ಸೀರೀಸ್ ಟಿವಿಯು ಉತ್ತಮ ಗುಣಮಟ್ಟದ ಅಲ್ಟ್ರಾ-ಕ್ಯೂಎಲ್‌ಇಡಿ ಪರದೆಯನ್ನು ಹೊಂದಿದ್ದು ಅದು ಡಾಲ್ಬಿ ವಿಷನ್, MEMC, ಸೂಪರ್ ಬ್ರೈಟ್‌ನೆಸ್, WCG+, HDR10+ ಮತ್ತು ಇತರ ಹಲವು ವೈಶಿಷ್ಟ್ಯಗಳನ್ನು ಸಪೋರ್ಟ್ ಮಾಡುತ್ತದೆ. ALM ಮತ್ತು VRR 120Hz ಅನ್ನು ಬೆಂಬಲಿಸುವ ಕಾರಣ ಈ ಟಿವಿಗಳಲ್ಲಿನ ಚಿತ್ರದ ಗುಣಮಟ್ಟವು ತುಂಬಾ ಉತ್ತಮವಾಗಿದೆ.ಆದ್ದರಿಂದ,ಈ ಟಿವಿ ಗೇಮರ್ ಗಳಿಗೆ ತುಂಬಾ ಒಳ್ಳೆಯದು.ಸೂಪರ್ ಸಿರೀಸ್‌ನ ಮತ್ತೊಂದು ವಿಶೇಷವೆಂದರೆ ಇದು 80 ವ್ಯಾಟ್‌ಗಳ ಉತ್ತಮ ಧ್ವನಿ ವ್ಯವಸ್ಥೆಯನ್ನು ಹೊಂದಿದೆ. ಏಸರ್ ಬ್ರಾಂಡ್‌ನ M ಸರಣಿಯ ಟಿವಿಗಳು ಗಾತ್ರದಲ್ಲಿ ದೊಡ್ಡದಾಗಿದ್ದು, ಮಿನಿ LED ಯೊಂದಿಗೆ QLED ಡಿಸ್ಪ್ಲೇಯನ್ನು ಹೊಂದಿವೆ.ಈ ಮಾದರಿಗಳು 65 ಇಂಚು ಮತ್ತು 75 ಇಂಚಿನ ಗಾತ್ರದಲ್ಲಿ ಲಭ್ಯವಿದೆ.ಎರಡೂ ಮಾದರಿಗಳು 1400 ನಿಟ್‌ಗಳ ಗರಿಷ್ಠ ಹೊಳಪು, 144 Hz ನ ರಿಫ್ರೆಶ್ ದರ ಮತ್ತು ಹಿಂಭಾಗದಲ್ಲಿ ವೂಫರ್‌ನೊಂದಿಗೆ 2.1 ಚಾನಲ್ 60-ವ್ಯಾಟ್ ಸ್ಪೀಕರ್‌ಗಳನ್ನು ಹೊಂದಿವೆ. ಇದನ್ನೂ ಓದಿ : Reliance Jio: ಗ್ರಾಹಕರಿಗಾಗಿ '4' ಪೈಸಾ ವಸೂಲ್ ಯೋಜನೆಗಳನ್ನು ಪರಿಚಯಿಸಿದ ಮುಖೇಶ್ ಅಂಬಾನಿ ಹೊಸ L ಸರಣಿಯು ಸುತ್ತಲೂ ಫ್ರೇಮ್‌ಲೆಸ್ ವಿನ್ಯಾಸವನ್ನು ಹೊಂದಿದೆ. L ಸರಣಿಯ ಟಿವಿಗಳು 32 ಇಂಚುಗಳಿಂದ (HD ಡಿಸ್ಪ್ಲೇಯೊಂದಿಗೆ)65 ಇಂಚುಗಳವರೆಗಿನ (4K-UHD ರೆಸಲ್ಯೂಶನ್ನೊಂದಿಗೆ) ಗಾತ್ರದಲ್ಲಿ ಬರುತ್ತವೆ.ಎಂ ಮತ್ತು ಎಲ್ ಸರಣಿಗಳೆರಡೂ ಆಂಡ್ರಾಯ್ಡ್ 14 ಮತ್ತು ಎಐ-ಶಕ್ತಗೊಂಡ ಡ್ಯುಯಲ್-ಪ್ರೊಸೆಸರ್ ಎಂಜಿನ್ ಆಧಾರಿತ ಗೂಗಲ್ ಟಿವಿಯನ್ನು ಹೊಂದಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.