Lion Viral Video: ಬಹುತೇಕ ಹುಡುಗರು ತಮ್ಮ ಗೆಳತಿಯರನ್ನು ಮೆಚ್ಚಿಸಲು ಇನ್ನಿತರ ಸರ್ಕಸ್ ಮಾಡುತ್ತಾರೆ. ದುಬಾರಿ ಬೆಲೆಯ ಉಡುಗೊರೆ, ಸರ್‌ಪ್ರೈಸ್ ಆಗಿ ಗಿಫ್ಟ್ ನೀಡುವುದು, ಅವರಿಗೆ ಇಷ್ಟವಾದ ಕೆಲಸ ಮಾಡುವುದು ಹೀಗೆ ವಿವಿಧ ರೀತಿಯಲ್ಲಿ ತಮ್ಮ ಗರ್ಲ್‌ಫ್ರೆಂಡ್‌ಅನ್ನು ಮೆಚ್ಚಿಸಲು ಪ್ರಯತ್ನಿಸುತ್ತಾರೆ. ಆದರೆ ಇಲ್ಲೊಬ್ಬ ಆಸಾಮಿ ತನ್ನ ಗೆಳತಿಯನ್ನ ಮೆಚ್ಚಿಸಲು ದೊಡ್ಡ ಸಾಹಕ್ಕೆ ಕೈಹಾಕಿ ಪ್ರಾಣವನ್ನೇ ಕಳೆದಕೊಂಡಿದ್ದಾನೆ. ಹೌದು, ವ್ಯಕ್ತಿಯೊಬ್ಬ ತನ್ನ ಗೆಳತಿ ಯನ್ನು ಮೆಚ್ಚಿಸಲು ಆಫ್ರಿಕನ್ ಸಿಂಹಗಳಿದ್ದ ಬೋನಿನೊಳಗೆ ಪ್ರವೇಶಿಸಿ ವಿಡಿಯೋ ಮಾಡಿದ್ದಾನೆ. ಆದರೆ ಆತನ ಮೇಲೆ ಸಿಂಹಗಳು ಅಟ್ಯಾಕ್ ಮಾಡಿವೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ವರದಿಯ ಪ್ರಕಾರ, ಉಜೈಕಿಸ್ತಾನದ ಪಾರ್ಕೆಂಟ್‌ನಲ್ಲಿ ಡಿಸೆಂಬರ್ 17ರಂದು ಈ ಘಟನೆ ನಡೆದಿದ್ದು, ಸಿಂಹದ ಬೋನಿನೊಳಗೆ ನುಗ್ಗಿದ ಆತ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಇದನ್ನೂ ಓದಿ: Delhi Assembly Election: 29 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಿದ ಬಿಜೆಪಿ ಮೃಗಾಲಯದಲ್ಲಿ ಕೆಲಸ ಮಾಡುತ್ತಿದ್ದ ಎಫ್ ಐರಿಸ್ಕುಲೋವ್(F. Iriskulov) ಎಂಬ 44 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ತನ್ನ ಗೆಳತಿಯನ್ನು ಇಂಪ್ರೆಸ್ ಮಾಡುವ ಉದ್ದೇಶದಿಂದ ಮುಂಜಾನೆ 5 ಗಂಟೆ ವೇಳೆ ಆಫ್ರಿಕನ್ ಸಿಂಹಗಳಿದ್ದ ಬೋನಿಗೆ ಪ್ರವೇಶಿಸಿ ವಿಡಿಯೋ ಮಾಡಲು ಮುಂದಾಗಿದ್ದಾನೆ. ಹೀಗೆ ವಿಡಿಯೋ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಆತನ ಮೇಲೆ ಸಿಂಹಗಳು ದಾಳಿ ಮಾಡಿ ಆತನನ್ನು ತಿಂದು ಹಾಕಿವೆ. @RebelwoaReason ಹೆಸರಿನ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿರುವ ಈ ವಿಡಿಯೋದಲ್ಲಿ ಮೃಗಾಲಯದ ಸಿಬ್ಬಂದಿ ವಿಡಿಯೋ ಮಾಡುತ್ತಲೇ ಸಿಂಹದ ಬೋನಿನ ಬೀಗ ತೆಗೆದು ʼಸಿಂಬಾ ಸಿಂಬಾ...ʼ ಎನ್ನುತ್ತಾ ಒಳಗೆ ಹೋಗುತ್ತಿರುವ ದೃಶ್ಯವನ್ನು ನೀವು ಕಾಣಬಹುದು. ನಂತರ ಸಿಂಹಗಳು ಇದ್ದಕ್ಕಿದ್ದಂತೆಯೇ ಆತನ ಮೇಲೆರಗಿವೆ. (Daily Mail) A shocking video shows the moment a zookeeper is fatally attacked and eaten alive by lions after going inside their cage to 'impress his girlfriend'. The guard, named as F. Iriskulov, 44, unknowingly caught his final moments on camera as he filmed himself entering… pic.twitter.com/lVIkisFnmG — RebelwithoutaReason (@RebelwoaReason) December 31, 2024 ಇದನ್ನೂ ಓದಿ: ಲೈಂಗಿಕ ಕ್ರಿಯೆಗೆ ಒಪ್ಪದ ಅತ್ತಿಗೆಯನ್ನು ಕೊಂದು ಶವದ ಜೊತೆ ಆಸೆ ಈಡೇರಿಸಿಕೊಂಡ ಪಾಪಿ ಮೈದುನ..! ಈ ವಿಡಿಯೋ 22 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, ಆಘಾತಕ ವ್ಯಕ್ತಪಡಿಸಿ ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಇದು 'ಹುಚ್ಚುತನದ ಪರಮಾವಧಿ' ಅಂತಾ ಕೆಲವರು ಕಾಮೆಂಟ್ ಮಾಡಿದ್ರೆ, ʼಈ ರೀತಿಯ ಸಾಹಸ ಪ್ರದರ್ಶಿಸುವ ಮುನ್ನ ನೂರು ಬಾರಿ ಯೋಚಿಸಿʼ ಅಂತಾ ಹೇಳಿದ್ದಾರೆ. ʼಸುಖಾಸುಮ್ಮನೇ ಪ್ರಾಣಿಗಳ ತಂಟೆಗೆ ಹೋದ್ರೆ ಹೀಗೆ ಆಗೋದುʼ ಅಂತಾ ಇನ್ನೂ ಕೆಲವರು ಕಾಮೆಂಟ್ ಮಾಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್. None
Popular Tags:
Share This Post:


What’s New
Spotlight
Today’s Hot
Featured News
ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರು ಹಾಕಿದ ಡೆಲ್ಲಿ ಸಿಎಂ ಅತಿಶಿ
- By Sarkai Info
- January 6, 2025
Latest From This Week
ಶೀಘ್ರದಲ್ಲೇ ಬರಲಿದೆ ವಾಟಾಪ್ಸ್ ಹೊಸ ಫೀಚರ್! ಫೋಟೋ ಹುಡುಕಾಟಕ್ಕೆ ಬೀಳಲಿದೆ ಕಡಿವಾಣ
KANNADA
- by Sarkai Info
- January 6, 2025
ತುರ್ತು ಔಷಧಿ ಖರೀದಿಗೂ ರಾಜ್ಯ ಸರ್ಕಾರದಲ್ಲಿ ಹಣವಿಲ್ಲ: ಸಂಸದ ಬಸವರಾಜ ಬೊಮ್ಮಾಯಿ ಆರೋಪ
KANNADA
- by Sarkai Info
- January 6, 2025
ನಿಮ್ಮ ಲ್ಯಾಪ್ಟಾಪ್ನಲ್ಲಿ ಈ ರೀತಿಯ ಲಕ್ಷಣಗಳು ಕಾಣಿಸುತ್ತಿದೆಯಾ? ಹಾಗಿದ್ರೆ ಪಕ್ಕಾ ಹ್ಯಾಕ್!
KANNADA
- by Sarkai Info
- January 6, 2025
Subscribe To Our Newsletter
No spam, notifications only about new products, updates.