Mangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಸೌರ ಶಿಶಿರ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ಅಷ್ಟಮಿ ತಿಥಿಯ ಈ ದಿನ ಮಂಗಳವಾರ, ರೇವತಿ ನಕ್ಷತ್ರ, ಶಿವ ಯೋಗ, ಬಾಲವ ಕರಣ. ಮೇಷದಿಂದ ಮೀನ ರಾಶಿಯವರೆಗೆ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ. ಮೇಷ ರಾಶಿಯವರ ಭವಿಷ್ಯ (Aries Horoscope): ಇಂದು ನಿಮ್ಮ ದಿನವು ಉತ್ಸಾಹದಿಂದ ತುಂಬಿರುತ್ತದೆ. ಪ್ರಮುಖ ಯೋಜನೆಗಳಲ್ಲಿ ಸ್ನೇಹಿತರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಮನೆಯಲ್ಲಿ ಶುಭ ಕಾರ್ಯಗಳು ಜರುಗುವುವು. ಸಂಬಂಧಗಳಲ್ಲಿ ಮೂಡಿದ್ದ ಬಿರುಕು ಸರಿಹೋಗಲಿದೆ. ವೃಷಭ ರಾಶಿಯವರ ಭವಿಷ್ಯ (Taurus Horoscope): ಇಂದು ಇಡೀ ದಿನ ನೀವು ಸಂತಸದಿಂದ ಕಳೆಯುವಿರಿ. ಉದ್ಯೋಗದಲ್ಲಿ ಕೆಲಸದ ಒತ್ತಡ ಹೆಚ್ಚಿದ್ದರೂ ದಿಢೀರ್ ಧನಲಾಭವು ನಿಮ್ಮನ್ನು ಉತ್ಸಾಹದ ಚಿಲುಮೆಯಂತೆ ಇರಿಸಲಿದೆ. ದಾಂಪತ್ಯ ಜೀವನವು ಆನಂದದಾಯಕವಾಗಿರಲಿದೆ. ಮಿಥುನ ರಾಶಿಯವರ ಭವಿಷ್ಯ (Gemini Horoscope): ಇಂದು ನಿಮಗೆ ಶುಭ ಸುದ್ದಿಯೊಂದು ಕೇಳಿಬರಲಿದೆ. ಕೆಲಸದಲ್ಲಿ ಉನ್ನತ ಅಧಿಕಾರಿಗಳ ಮನ್ನಣೆಗೆ ಪಾತ್ರರಾಗುವಿರಿ. ವ್ಯಾಪಾರಸ್ಥರಿಗೆ ಬಂಪರ್ ಲಾಭವಾಗಲಿದೆ. ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಬಡ್ತಿ ಸಂಭವವಿದೆ. ಕುಟುಂಬದೊಂದಿಗೆ ಪ್ರವಾಸಕ್ಕಾಗಿ ಯೋಜಿಸಬಹುದು. ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): ಇಂದು ನೀವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯ ಸಾಧಿಸುವಿರಿ. ಮಾಡುವ ಕೆಲಸಗಳಲ್ಲಿ ಶಿವನ ಬೆಂಬಲವಿದ್ದು ಸೋಲೆಂಬುದೇ ಇಕೃವುದಿಲ್ಲ. ಉದ್ಯೋಗಸ್ಥರಿಗೆ ಕೆಲಸದ ಹೊರೆ ಹೆಚ್ಚಾಗಬಹುದು. ಹಣಕಾಸಿನ ಸ್ಥಿತಿ ಮೊದಲಿಗಿಂತ ಉತ್ತಮವಾಗಿರಲಿದೆ. ಇದನ್ನೂ ಓದಿ- ಇಂದಿನಿಂದ ಧರ್ಮಸ್ಥಳದಲ್ಲೂ ತಿರುಪತಿ ಮಾದರಿ: ಏನೆಲ್ಲಾ ಹೊಸ ವ್ಯವಸ್ಥೆ ಮಾಡಲಾಗಿದೆ ಗೊತ್ತಾ...? ಸಿಂಹ ರಾಶಿಯವರ ಭವಿಷ್ಯ (Leo Horoscope): ಬಹಳ ದಿನಗಳ ಬಳಿಕ ನೀವಿಂದು ಮಾನಸಿಕ ಶಾಂತಿಯನ್ನು ಅನುಭವಿಸುವಿರಿ. ಕುಟುಂಬದಲ್ಲಿ ಆಧ್ಯಾತ್ಮಿಕ ವಾತಾವರಣ ಇರುತ್ತದೆ. ಬೇರೆಯವರೊಂದಿಗೆ ನಿಮ್ಮ ನಡವಳಿಕೆಯಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಿ. ಕನ್ಯಾ ರಾಶಿಯವರ ಭವಿಷ್ಯ (Virgo Horoscope): ಸಮಾಜದಲ್ಲಿ ಇಂದು ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ. ಕುಟುಂಬದಲ್ಲಿ ಎಲ್ಲರೊಂದಿಗೆ ಒಟ್ಟಿಗೆ ಕುಳಿತು ಆಹ್ಲಾದಕರ ಸಮಯವನ್ನು ಆನಂದಿಸುವಿರಿ. ನಿಮ್ಮ ಆಲೋಚನೆಗಳಿಗೆ ವಿಶೇಷ ಪ್ರಾಮುಖ್ಯತೆ ಇರುತ್ತದೆ. ಹೊಸ ಕೆಲಸಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಶುಭ ಸುದ್ದಿ. ತುಲಾ ರಾಶಿಯವರ ಭವಿಷ್ಯ (Libra Horoscope): ಇಂದು ಹಳೆಯ ಸ್ನೇಹಿತರೊಬ್ಬರ ಭೇಟಿ ನಿಮ್ಮ ಮನಸ್ಸಿಗೆ ಮುದ ನೀಡಲಿದೆ. ಕೌಟುಂಬಿಕ ವಾತಾವರಣವು ಸಂತೋಷದಾಯಕವಾಗಿ ಇರಲಿದೆ. ವ್ಯವಹಾರದ ದೃಷ್ಟಿಯಿಂದ ಇಂದು ಅನಿರೀಕ್ಷಿತ ಆದಾಯ ಹೆಚ್ಚಾಗಲಿದೆ. ವಿದ್ಯಾರ್ಥಿಗಳು ನಿಮ್ಮ ಅಧ್ಯಯನದತ್ತ ಹೆಚ್ಚಿನ ಗಮನವಹಿಸಿ. ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope): ಇಂದು ದಿನವಿಡೀ ಭರವಸೆಯಿಂದ ತುಂಬಿರಲಿದೆ. ಮಕ್ಕಳ ಅಧ್ಯಯನದಲ್ಲಿ ಯಶಸ್ಸನ್ನು ಕಂಡು ಮನಸ್ಸು ಸಂತಸಗೊಳ್ಳಲಿದೆ. ಆಶಾದಾಯಕವಾಗಿ ಭವಿಷ್ಯಕ್ಕಾಗಿ ಹಣವನ್ನು ಕೂಡಿದಿ. ಕುಟುಂಬದಲ್ಲಿ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಇದನ್ನೂ ಓದಿ- ಗಜಕೇಸರಿ ರಾಜಯೋಗ: ಮೂರು ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ, ದಿಢೀರ್ ಧನಲಾಭ, ಮನೆ ಖರೀದಿ ಯೋಗ ಧನು ರಾಶಿಯವರ ಭವಿಷ್ಯ (Sagittarius Horoscope): ವೃತ್ತಿಪರರಿಗೆ ಬಾಸ್ ಇಂದು ನಿಮ್ಮನ್ನು ಹೊಗಳಬಹುದು. ಕುಟುಂಬ ಜೀವನದಲ್ಲಿ ಕೆಲವು ಶುಭ ಸುದ್ದಿಗಳನ್ನು ಕೇಳುವಿರಿ. ಕೆಲಸದಲ್ಲಿ ನಿಮ್ಮ ಸಾಮರ್ಥ್ಯವನ್ನು ಕಂಡು ಎದುರಿನವರು ಬೆರಗಾಗುವರು. ವ್ಯಾಪಾರಸ್ಥರಿಗೆ ಅದೃಷ್ಟ ಖುಲಾಯಿಸಲಿದೆ. ಮಕರ ರಾಶಿಯವರ ಭವಿಷ್ಯ (Capricorn Horoscope): ಇಂದು ನಿಮಗೆ ಅನುಕೂಲಕರವಾದ ದಿನ. ಕುಟುಂಬದೊಂದಿಗೆ ಎಲ್ಲಾದರೂ ಪ್ರಯಾಣಕ್ಕಾಗಿ ಯೋಜಿಸಬಹುದು. ನಿಮ್ಮ ಮನೆಗೆ ಇಂದು ಪುಟ್ಟ ಅತಿಥಿಗಳ ಆಗಮನವಾಗಲಿದ್ದು ಮನೆಯಲ್ಲಿ ಸಂಭ್ರಮ ಹೆಚ್ಚಾಗಲಿದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರಬಹುದು. ಕುಂಭ ರಾಶಿಯವರ ಭವಿಷ್ಯ (Aquarius Horoscope): ಇಂದು ಮಕ್ಕಳೊಂದಿಗೆ ಹೊರಹೋಗಲು ಯೋಜಿಸಬಹುದು. ಮನೆಗೆ ಅತಿಥಿಗಳ ಆಗಮನದಿಂದ ಸಂತೋಷದ ವಾತಾವರಣ ತುಂಬಲಿದೆ. ವ್ಯಾಪಾರಸ್ಥರಿಗೆ ಹಣಕಾಸಿನ ಹರಿವು ಹೆಚ್ಚಾಗಲಿದ್ದು ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿದೆ. ಮೀನ ರಾಶಿಯವರ ಭವಿಷ್ಯ (Pisces Horoscope): ಇಂದು ನೀವು ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಪಡೆಯುವಿರಿ. ನಿಮ್ಮ ಜೀವನಶೈಲಿಯನ್ನು ಬದಲಾಯಿಸುವ ಪ್ರಯತ್ನಕ್ಕೆ ಮನೆಯವರಿಗೆ ಬೆಂಬಲ ದೊರೆಯಲಿದೆ. ಉದ್ಯೋಗಸ್ಥರಿಗೆ ಇಂದು ಅನುಕೂಲಕರವಾದ ದಿನ. ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. NEWS ಇದನ್ನು ಖಚಿತಪಡಿಸುವುದಿಲ್ಲ. ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - ಸಬ್ ಸ್ಕ್ರೈಬ್ಆಗಿರಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. None
Popular Tags:
Share This Post:
What’s New
Spotlight
Today’s Hot
Featured News
ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರು ಹಾಕಿದ ಡೆಲ್ಲಿ ಸಿಎಂ ಅತಿಶಿ
- By Sarkai Info
- January 6, 2025
Latest From This Week
ಶೀಘ್ರದಲ್ಲೇ ಬರಲಿದೆ ವಾಟಾಪ್ಸ್ ಹೊಸ ಫೀಚರ್! ಫೋಟೋ ಹುಡುಕಾಟಕ್ಕೆ ಬೀಳಲಿದೆ ಕಡಿವಾಣ
KANNADA
- by Sarkai Info
- January 6, 2025
ತುರ್ತು ಔಷಧಿ ಖರೀದಿಗೂ ರಾಜ್ಯ ಸರ್ಕಾರದಲ್ಲಿ ಹಣವಿಲ್ಲ: ಸಂಸದ ಬಸವರಾಜ ಬೊಮ್ಮಾಯಿ ಆರೋಪ
KANNADA
- by Sarkai Info
- January 6, 2025
ನಿಮ್ಮ ಲ್ಯಾಪ್ಟಾಪ್ನಲ್ಲಿ ಈ ರೀತಿಯ ಲಕ್ಷಣಗಳು ಕಾಣಿಸುತ್ತಿದೆಯಾ? ಹಾಗಿದ್ರೆ ಪಕ್ಕಾ ಹ್ಯಾಕ್!
KANNADA
- by Sarkai Info
- January 6, 2025
Subscribe To Our Newsletter
No spam, notifications only about new products, updates.