KANNADA

ನಿಮ್ಮ ದೇಹದಲ್ಲಿ ಈ ವಿಟಮಿನ್ ಕೊರತೆಯುಂಟಾಗಿದೆಯೇ?; ಕೀಲು ನೋವು & ಸ್ನಾಯುಗಳಲ್ಲಿ ದೌರ್ಬಲ್ಯಕ್ಕೆ ಇದೇ ಕಾರಣ!!

Vitamin D Deficiency: ದೇಹದಲ್ಲಿ ಯಾವುದೇ ಅಗತ್ಯ ವಿಟಮಿನ್ ಅಥವಾ ಖನಿಜದ ಕೊರತೆಯಿದ್ದರೆ, ನೀವು ವಿವಿಧ ರೀತಿಯ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಕೀಲು ನೋವು ಸಹ ವಿಟಮಿನ್ ಕೊರತೆಯ ಸಂಕೇತವಾಗಿದೆ. ಈ ಅಗತ್ಯ ವಿಟಮಿನ್ ಕೊರತೆಯು ನಿಮ್ಮ ಆರೋಗ್ಯಕ್ಕೆ ದೊಡ್ಡ ಹಾನಿ ಉಂಟುಮಾಡಬಹುದು. ವಿಟಮಿನ್ ʼಡಿʼ ಕೊರತೆ ಕೀಲು ನೋವು ವಿಟಮಿನ್ ʼಡಿʼ ಕೊರತೆಯನ್ನು ಸೂಚಿಸುತ್ತದೆ. ದೇಹದಲ್ಲಿ ಈ ವಿಟಮಿನ್ ಕೊರತೆಯಿದ್ದರೆ, ಸ್ನಾಯುಗಳಲ್ಲಿ ದೌರ್ಬಲ್ಯ ಅಥವಾ ಸೆಳೆತವನ್ನು ಸಹ ಅನುಭವಿಸಬಹುದು. ಈ ವಿಟಮಿನ್ ಕೊರತೆಯಿಂದ ನಿಮ್ಮ ಮೂಳೆಗಳು ನೋವನ್ನು ಅನುಭವಿಸಲು ಪ್ರಾರಂಭಿಸುತ್ತವೆ. ಇದನ್ನೂ ಓದಿ: ಈ ಹಣ್ಣು ಹೃದಯಾಘಾತ ತಡೆಯಬಲ್ಲಷ್ಟು ಶಕ್ತಿಶಾಲಿ: ಖಾಲಿ ಹೊಟ್ಟೆಗೆ ತಿಂದರೆ ಹೃದಯ ಸಂಬಂಧಿ ಕಾಯಿಲೆಗಳೇ ಬರಲ್ಲ! ಬ್ಲಡ್‌ ಪ್ರೆಶರ್‌ಗೆ ತುಂಬಾ ಒಳ್ಳೆಯದು ರೋಗಲಕ್ಷಣಗಳನ್ನು ನಿರ್ಲಕ್ಷಿಸಬೇಡಿ ಸ್ನಾಯು ಅಥವಾ ಮೂಳೆ ನೋವಿನ ಹೊರತಾಗಿ, ನೀವು ಕೆಲವು ರೋಗಲಕ್ಷಣಗಳನ್ನು ಸಹ ನೋಡಬಹುದು. ನೀವು ದಿನವಿಡೀ ದಣಿದ ಅಥವಾ ದುರ್ಬಲತೆಯನ್ನು ಅನುಭವಿಸುತ್ತಿದ್ದರೆ, ನಿಮ್ಮ ದೇಹದಲ್ಲಿ ಈ ವಿಟಮಿನ್ ಕೊರತೆಯ ಸಾಧ್ಯತೆಯಿದೆ. ನೀವು ಖಿನ್ನತೆಗೆ ಒಳಗಾಗಲು ಪ್ರಾರಂಭಿಸಿದರೆ, ಈ ಲಕ್ಷಣಗಳು ವಿಟಮಿನ್ ʼಡಿʼ ಕೊರತೆಯ ಸಂಕೇತವೂ ಆಗಿರಬಹುದು. ಇಂತಹ ರೋಗಲಕ್ಷಣಗಳನ್ನು ನಿರ್ಲಕ್ಷಿಸಿದರೆ ನಿಮ್ಮ ಆರೋಗ್ಯದ ಮೇಲೆ ದೊಡ್ಡ ಪರಿಣಾಮವನ್ನುಂಟು ಮಾಡುತ್ತದೆ. ಆದ್ದರಿಂದ ಸಮಯಕ್ಕೆ ಸರಿಯಾಗಿ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ. ಆಹಾರದಲ್ಲಿ ಏನು ಸೇರಿಸಬೇಕು? ವಿಟಮಿನ್ ʼಡಿʼ ಕೊರತೆಯನ್ನು ಹೋಗಲಾಡಿಸಲು, ನಿಮ್ಮ ಆಹಾರದಲ್ಲಿ ಈ ವಿಟಮಿನ್ ಸಮೃದ್ಧವಾಗಿರುವ ಆಹಾರವನ್ನು ನೀವು ಸೇರಿಸಿಕೊಳ್ಳಬೇಕು. ಮೊಟ್ಟೆಯ ಹಳದಿ ಲೋಳೆಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ʼಡಿʼ ಕಂಡುಬರುತ್ತದೆ. ನೀವು ಸಸ್ಯಾಹಾರಿಗಳಾಗಿದ್ದರೆ ವಿಟಮಿನ್ ʼಡಿʼ ಸಮೃದ್ಧವಾಗಿರುವ ಚೀಸ್ ಅನ್ನು ಸೇವಿಸುವ ಮೂಲಕ ಈ ವಿಟಮಿನ್ ಕೊರತೆಯನ್ನು ನೀಗಿಸಬಹುದು. ಉತ್ತಮ ಪ್ರಮಾಣದ ವಿಟಮಿನ್ ʼಡಿʼ ಅಣಬೆಗಳಲ್ಲಿ ಸಹ ಕಂಡುಬರುತ್ತದೆ. ಈ ವಿಟಮಿನ್ ಕೊರತೆಯನ್ನು ಹೋಗಲಾಡಿಸಲು ಹಾಲನ್ನು ಸಹ ಸೇವಿಸಬಹುದು. ಇದನ್ನೂ ಓದಿ: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿಂದ್ರೆ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣವಾಗುತ್ತೆ: ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ; ಒಂದು ದಿನಕ್ಕೆ ಎಷ್ಟು ತಿನ್ನಬೇಕು ಗೊತ್ತಾ? (ಗಮನಿಸಿರಿ: ಈ ಲೇಖನವು ಸಾಮಾನ್ಯ ಮಾಹಿತಿಗಾಗಿ, ದಯವಿಟ್ಟು ಯಾವುದೇ ಪರಿಹಾರವನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ. Kannada News ಇದನ್ನು ದೃಢಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.