KANNADA

ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರು ಹಾಕಿದ ಡೆಲ್ಲಿ ಸಿಎಂ ಅತಿಶಿ

Delhi CM Atishi : ರೋಹಿಣಿಯಲ್ಲಿ ನಡೆದ ಬಿಜೆಪಿಯ ಪರಿವರ್ತನಾ ರ್ಯಾಲಿಯಲ್ಲಿ ಮಾತನಾಡಿದ ಬಿಜೆಪಿಯ ಬಿಧುರಿ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು. ಕಲ್ಕಾಜಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರಾಗಿರುವ ಅತಿಶಿ. ಸ್ವಲ್ಪ ಸಮಯದ ಹಿಂದೆ ತಮ್ಮ ಉಪನಾಮ ಕೈಬಿಟ್ಟಿದ್ದಾರೆ ಎಂದು ವ್ಯಂಗ್ಯವಾಡಿದ್ದರು. ಬಿಜೆಪಿ ನಾಯಕ ರಮೇಶ್ ಬಿಧುರಿ ತಮ್ಮ ವಿರುದ್ಧ ನೀಡಿರುವ ವಿವಾದಾತ್ಮಕ ಹೇಳಿಕೆ ಕುರಿತು ಸೋಮವಾರ ಪತ್ರಿಕಾಗೋಷ್ಠಿ ಕರೆದಿದ್ದ ದೆಹಲಿ ಸಿಎಂ ಅತಿಶಿ, ಈ ಕುರಿತು ಮಾತನಾಡುವಾಗ ಕಣ್ಣೀರು ಹಾಕಿದ ಪ್ರಸಂಗ ನಡೆಯಿತು. ಕಲ್ಕಾಜಿ ಕ್ಷೇತ್ರದ ತಮ್ಮ ಪ್ರತಿಸ್ಪರ್ಧಿ ಅಭ್ಯರ್ಥಿ ಬಿಧುರಿ ತಮ್ಮ ವಿರುದ್ಧ ಅವಹೇಳನಕಾರಿ ಮಾತನಾಡಿದ್ದನ್ನು ಅವರು ಮಹಿಳೆಯರ ಮೇಲಿನ ದೌರ್ಜನ್ಯ ಎಂದು ಹೇಳಿದರು. ಇದನ್ನು ಓದಿ: ಹಾನಿಗೊಳಗಾದ ಚಾರ್ಜರ್ ವೈರ್‌ಗೆ ನೀವು ಟೇಪ್ ಸುತ್ತಿ ಬಳಸುತ್ತೀರಾ? ಮೊದಲು ನಿಲ್ಲಿಸಿ! ಇತ್ತೀಚೆಗೆ ಅತಿಶಿ ಅವರು ತಮ್ಮ ಉಪನಾಮವನ್ನು ಬದಲಾಯಿಸಿಕೊಂಡಿದ್ದರು. ಮರ್ಲೆನಾ ಎಂಬುದನ್ನು ಸಿಂಗ್‌ ಎಂದು ಬದಲಾಯಿಸಿದ್ದರು. ಇದೇ ವಿಚಾರದ ಬಗ್ಗೆ ಮಾತನಾಡಿದ್ದ ಬಿಧುರಿ, ಡೆಲ್ಲಿ ಸಿಎಂ ಅತಿಶಿ ತಮ್ಮ ತಂದೆಯನ್ನು ಬದಲಾಯಿಸಿಕೊಂಡಿದ್ದಾರೆ ಎಂದು ಟೀಕೆ ಮಾಡಿದ್ದರು. ಇದು ವಿವಾದಕ್ಕೆ ಕಾರಣವಾಗಿದೆ. ಬಿಧುರಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅತಿಶಿ, "ನಮ್ಮ ರಾಜಕೀಯ ಹೋರಾಟವು ಇಷ್ಟು ಕೆಳಮಟ್ಟಕ್ಕೆ ಇಳಿದಿರುವುದು ಆಘಾತಕಾರಿ. 10 ವರ್ಷಗಳ ಕಾಲ ಸಂಸದರಾಗಿದ್ದ ಅವರು ಕಲ್ಕಾಜಿ ಕ್ಷೇತ್ರಕ್ಕೆ ಏನು ಕೆಲಸ ಮಾಡಿದ್ದಾರೆ ಎಂಬುದನ್ನು ತೋರಿಸಲಿ" ಎಂದು ಸವಾಲು ಹಾಕಿದರು. ಅವರು ತಮ್ಮ ಕೆಲಸದ ಆಧಾರದ ಮೇಲೆ ಮತಗಳನ್ನು ಕೇಳಬೇಕು, ನನ್ನ ತಂದೆಯನ್ನು ನಿಂದಿಸುವ ಮೂಲಕ ಅಲ್ಲ ಎಂದು ಹೇಳಿದರು. ಇದನ್ನು ಓದಿ: ಶೀಘ್ರದಲ್ಲೇ ಬರಲಿದೆ ವಾಟಾಪ್ಸ್ ಹೊಸ ಫೀಚರ್! ಫೋಟೋ ಹುಡುಕಾಟಕ್ಕೆ ಬೀಳಲಿದೆ ಕಡಿವಾಣ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್‌ ಮಾಡಿ None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.