KANNADA

ಇಂತಹ ಕೀಳುಮಟ್ಟದ ಸರ್ಕಾರವನ್ನು ಇತಿಹಾಸದಲ್ಲೇ ನೋಡಿಲ್ಲ: ನಿಖಿಲ್ ಕುಮಾರಸ್ವಾಮಿ

ದೊಡ್ಡಬಳ್ಳಾಪುರ: ಇತ್ತೀಚಿಗೆ ನಿಧನರಾದ ದೊಡ್ಡಬಳ್ಳಾಪುರ ತಾಲ್ಲೂಕು ಜೆಡಿಎಸ್ ಹಿರಿಯ ಮುಖಂಡ ಹಾಡೋನಹಳ್ಳಿ ಅಪ್ಪಯ್ಯಣ್ಣನವರ ನಿವಾಸಕ್ಕೆ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಇದನ್ನೂ ಓದಿ: ಟ್ರೋಲಿಗರ ಚಳಿ ಬಿಡಿಸಿದ ಕಿಚ್ಚ ಸುದೀಪ್‌ ಅಭಿಮಾನಿಗಳು; ಅಷ್ಟಕ್ಕೂ ಆಗಿದ್ದೇನು? ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ವಿಧಾನಸಭಾ ಚುನಾವಣಾ ಸಮಯದಲ್ಲಿ 'ಪೇ ಸಿಎಂ' ಎಂಬ ಕ್ಯಾಂಪೇನ್ ಶುರು ಮಾಡಿದ್ರು, ಬಹಳ ಘಂಟಾಘೋಷವಾಗಿ ಇಡೀ ರಾಜ್ಯಕ್ಕೆ ಮನಮುಟ್ಟುವ ಕ್ಯಾಂಪೇನ್ ಮಾಡಿದ್ದರು. ಭ್ರಷ್ಟಾಚಾರವನ್ನ ಸಂಪೂರ್ಣವಾಗಿ ಹೋಗಲಾಡಿಸುತ್ತೇವೆ ಎಂದು ಸಿಎಂ ಮತ್ತು ಡಿಸಿಎಂ ಶಪಥ ಮಾಡಿದ್ದರು ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಕರ್ನಾಟಕವನ್ನು ಅನೇಕ ನಾಯಕರು, ಪಕ್ಷಗಳು ಆಳ್ವಿಕೆ ಮಾಡಿವೆ. ಆದರೆ ಈ ರೀತಿ ಒಂದೂವರೆ ವರ್ಷದಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಈ ಸರಕಾರ ಪ್ರತಿನಿತ್ಯ ಹಗರಣದಲ್ಲಿ ಮುಳುಗಿದೆ‌. ರಾಜ್ಯದಲ್ಲಿ ನೇರವಾಗಿ ಸಿಎಂ ಅವರು ಸಿಲುಕಿರುವುದು ನೋಡಿದ್ದೀರಿ. ಅನೇಕ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟಿರುವ ಹಣವನ್ನು ದುರ್ಬಳಕೆ ಮಾಡಿದ್ದಾರೆ‌, ಆ ಹಣವನ್ನ ಪಕ್ಕದ ರಾಜ್ಯಗಳ ಚುನಾವಣೆಗೆ ಬಳಕೆ ಮಾಡಿಕೊಂಡಿದ್ದಾರೆ. ಇಂಥ ಕೀಳು ಮಟ್ಟದ ಸರಕಾರವನ್ನು ಇದೇ ಮೊದಲ ಬಾರಿಗೆ ನೋಡಿರುವುದು ಎಂದು ನಿಖಿಲ್ ಕಿಡಿಕಾರಿದರು. ಪ್ರಿಯಾಂಕ್ ಖರ್ಗೆ ಪೆನ್ ಡ್ರೈವ್ ಪ್ರಶ್ನೆ ವಿಚಾರಕ್ಕೆ ಮಾತನಾಡಿದ ಅವರು, ಬೇರೆ ಪೆನ್ ಡ್ರೈವನ್ನು ಯಾವ ಒಬ್ಬ ಮಹಾನುಭಾವ ಬಿಡುಗಡೆ ಮಾಡಿದ ಎಂದು ಎಲ್ಲರಿಗೂ ಗೊತ್ತಿದೆ‌. ಹೆಣ್ಣು ಮಕ್ಕಳ ಮಾನವನ್ನ ಸಾರ್ವಜನಿಕವಾಗಿ ಕಳೆಯುವಂತ ಪ್ರಯತ್ನ ಆಗಿದೆ. ಕನಿಷ್ಠ ಪಕ್ಷ ಹೆಣ್ಣು ಮಕ್ಕಳ ಮುಖವನ್ನು ಬ್ಲರ್ ಮಾಡಿ ಬಿಡುಗಡೆ ಮಾಡಬೇಕು ಎಂಬ ಪರಿಜ್ಞಾನ ಇಲ್ಲದೇ ಮಾಡಿದ್ದಾರೆ‌. ಮುಂದಿನ ದಿನಗಳಲ್ಲಿ ಅವರಿಗೆ ಜನರೇ ಪಾಠ ಕಲಿಸುತ್ತಾರೆ‌ ಎಂದರು. ಇದನ್ನೂ ಓದಿ: ಇದು ತರಕಾರಿಯಲ್ಲ, ಸಂಜೀವಿನಿ!ಮಧುಮೇಹದಿಂದ ಕ್ಯಾನ್ಸರ್ ವರೆಗೆ ಮುಕ್ತಿ ನೀಡಬಲ್ಲ ಪರಮೌಷಧ! ವರ್ಷದಲ್ಲಿ ಮೂರೇ ತಿಂಗಳು ಸಿಗುವ ಕಾಯಿ ಇದು ! ನಿಖಿಲ್ ಸೋಲಿನ ವಿಚಾರಕ್ಕೆ ಕುಮಾರಸ್ವಾಮಿ ಹತಾಶೆಯಾಗಿದ್ದಾರೆ ಎಂಬ ಎಂ.ಬಿ ಪಾಟೀಲ್ ಹೇಳಿಕೆಗೆ ನಿಖಿಲ್ ಕುಮಾರಸ್ವಾಮಿ ಅವರು ಟಾಂಗ್ ಕೊಟ್ಟರು. ಕುಮಾರಸ್ವಾಮಿಯವರು ಕೇಂದ್ರದ ಸಚಿವರಾಗಿ ಇತ್ತೀಚಿಗೆ ಪಾರ್ಲಿಮೆಂಟ್ ಸೆಷನ್ ನಲ್ಲಿ ಬಹಳ ಕ್ರಿಯಾಶೀಲರಾಗಿ ಕೆಲಸ‌ ಮಾಡುತ್ತಿದ್ದಾರೆ. ರಾಜ್ಯಕ್ಕೆ ಯಾವ ರೀತಿ ಕೊಡುಗೆ ನೀಡಬೇಕು, ಉದ್ಯೋಗ, ಕೈಗಾರಿಕೆ ತರಬೇಕು ಎಂದು ನಿದ್ದೆಗೆಡುತ್ತಿದ್ದಾರೆ.‌ ನಿಖಿಲ್ ಕುಮಾರಸ್ವಾಮಿ ಸೋಲಿಗಲ್ಲ ನಿದ್ದೆಗೆಡುತ್ತಿರುವುದು ಎಂದು ತಿಳಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್‌ ಮಾಡಿ None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.