KANNADA

ಇಂದಿನಿಂದ ಧರ್ಮಸ್ಥಳದಲ್ಲೂ ತಿರುಪತಿ ಮಾದರಿ: ಏನೆಲ್ಲಾ ಹೊಸ ವ್ಯವಸ್ಥೆ ಮಾಡಲಾಗಿದೆ ಗೊತ್ತಾ...?

Sri Kshetra Dharmasthala New Rules: ಇಡೀ ದಕ್ಷಿಣ ಭಾರತದಲ್ಲೇ ಅತ್ಯಂತ ಹೆಚ್ಚು ಭಕ್ತರನ್ನು ಹೊಂದಿರುವ ತಿರುಪತಿ ತಿರುಮಲ ದೇವಸ್ಥಾನದಲ್ಲಿ ದರ್ಶನ ಮಾಡಲು, ಸರದಿ ಸಾಲಿನಲ್ಲಿ ನಿಲ್ಲಲು, ಪ್ರಸಾದ ಪಡೆಯಲು ಅದರದ್ದೇಯಾದ ವ್ಯವಸ್ಥೆ ಇದೆ. ಈಗ ಇದೇ ತಿರುಪತಿ ಮಾದರಿಯ ವ್ಯವಸ್ಥೆಯನ್ನು ಕರ್ನಾಟಕದ ಪ್ರಸಿದ್ಧ ಧರ್ಮಸ್ಥಳದ ದೇವಸ್ಥಾನವೂ ಅಳವಡಿಸಿಕೊಳ್ಳಲು ಮುಂದಾಗಿದೆ. ಇನ್ನು ಮುಂದೆ ಧರ್ಮಸ್ಥಳದ ಶ್ರೀ ಮಂಜುನಾಥ ದೇವರ ದರ್ಶನಕ್ಕೆ ತಿರುಪತಿಯ ತಿರುಮಲ ದೇವಸ್ಥಾನದಲ್ಲಿ ಇರುವ ಸರದಿ ಸಾಲಿನ ವ್ಯವಸ್ಥೆಯನ್ನು ಮಾಡಲಾಗುತ್ತದೆ. ತಿರುಪತಿಯಲ್ಲಿ ಕರ್ನಾಟಕವು ಸೇರಿದಂತೆ ಬೇರೆ ರಾಜ್ಯಗಳಿಂದ ಬರುವ ಭಕ್ತರು ಸರದಿ ಸಾಲಿನಲ್ಲಿ ಗಂಟೆ ಗಟ್ಟಲೆ ನಿಂತು ಕಾಯುವ ಬದಲು ವಿಶಾಲವಾದ ವಿಶ್ರಾಂತಿ ಭವನದಲ್ಲಿ ಉಳಿಯುತ್ತಾರೆ. ನಂತರ ಒಂದೊಂದೇ ಕೊಠಡಿಯ ಭಕ್ತರನ್ನು ದರ್ಶನಕ್ಕೆ ಬಿಡಲಾಗುತ್ತದೆ. ಈ ಪ್ರತ್ಯೇಕ ಕೊಠಡಿಗಳಲ್ಲಿ ಮೂಲಸೌಕರ್ಯ, ಆಹಾರ ಮತ್ತಿತರ ವ್ಯವಸ್ಥೆಗಳಿರುತ್ತವೆ. ಇದನ್ನೂ ಓದಿ- 2025ರ ವರ್ಷ ಯಾವ ರಾಶಿಯವರಿಗೆ ತರಲಿದೆ ಅದೃಷ್ಟ, ಯಾರು ತಾಳ್ಮೆಯಿಂದಿರಬೇಕು..! ಇಲ್ಲಿದೆ ನಿಮ್ಮ ವಾರ್ಷಿಕ ಭವಿಷ್ಯ ಕರ್ನಾಟಕದ ಮಟ್ಟಿಗೆ ಅತಿ ಹೆಚ್ಚು ಭಕ್ತರು ಬರುವ ಧರ್ಮಸ್ಥಳದಲ್ಲಿ ಇಂತಹ ವ್ಯವಸ್ಥೆ ಇರಲಿಲ್ಲ. ದೂರದ ಊರುಗಳಿಂದ ಬಂದ ಭಕ್ತರು ಸರದಿ ಸಾಲಿನಲ್ಲಿ ಗಂಟೆ ಗಟ್ಟಲೆ ಕಾದು ಬಳಲಿ ಬೆಂಡಾಗಿ ಅಂತಿಮವಾಗಿ ಮಂಜುನಾಥನ ದರ್ಶನ ಪಡೆಯಬೇಕಾಗಿತ್ತು. ಈ ಸಮಸ್ಯೆ ತಪ್ಪಿಸಲು ಈಗ ತಿರುಪತಿ ಮಾದರಿಯನ್ನು ಧರ್ಮಸ್ಥಳದಲ್ಲೂ ಅಳವಡಿಸಿಕೊಳ್ಳಲಾಗುತ್ತಿದೆ. ಇದನ್ನೂ ಓದಿ- Money Horoscope 2025: ಹೊಸ ವರ್ಷದಲ್ಲಿ ಈ ರಾಶಿಯವರಿಗೆ ಇರಲ್ಲ ಹಣದ ಚಿಂತೆ, ಕುಬೇರನ ಸಂಪತ್ತೇ ಕೈ ಸೇರಲಿದೆ..! ಧರ್ಮಸ್ಥಳದಲ್ಲೂ ಈಗ ತಿರುಪತಿಯ ರೀತಿ ಸುಸಜ್ಜಿತವಾದ 16 ಭವನಗಳನ್ನು ನಿರ್ಮಿಸಲಾಗಿದೆ. ಒಂದು ಭವನದಲ್ಲಿ ಒಮ್ಮೆಗೆ 800 ಮಂದಿ ಉಳಿಯಬಹುದಾಗಿದೆ. ಅಲ್ಲಿ ಕೂರಲು ಆಸನದ ವ್ಯವಸ್ಥೆ ಇರುತ್ತದೆ. ತಿರುಪತಿ ಮಾದರಿಯಂತೆ ಧರ್ಮಸ್ಥಳದಲ್ಲೂ ಒಂದು ಭವನದ ನಂತರ ಇನ್ನೊಂದು ಭವನದ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಅಲ್ಲಿಯವರೆಗೂ ಅವರು ವಿಶ್ರಾಂತಿ ಪಡೆಯಬಹುದಾಗಿದೆ. ಈ ಹೊಸ ಪದ್ಧತಿ ಇಂದಿನಿಂದ (ಜನವರಿ 7) ಜಾರಿಯಾಗುತ್ತಿದ್ದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ನೂತನ ಕಟ್ಟಡಗಳನ್ನು ಉದ್ಘಾಟಿಸಲಿದ್ದಾರೆ. ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - ಸಬ್ ಸ್ಕ್ರೈಬ್ಆಗಿರಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.