KANNADA

ನೀವು 250 ರೂಪಾಯಿ ಕೊಟ್ಟು ಸಿನಿಮಾ ಟಿಕೆಟ್​ ಖರೀದಿಸಿದರೆ ಅದರಲ್ಲಿ ನಿರ್ಮಾಪಕನಿಗೆ ಸಿಗುವ ಹಣ ಎಷ್ಟು? ಸರ್ಕಾರಕ್ಕೆ ಹೋಗೋದೆಷ್ಟು?

Movie Producer : ಸಿನಿಮಾಗಳ ಟಿಕೆಟ್‌ ದರ ಪ್ರತಿ ಬಾರಿಯೂ ಏರಿಳಿಕೆ ಆಗುತ್ತದೆ. ಸ್ಟಾರ್‌ ಹೀರೋಗಳ ಸಿನಿಮಾಗೆ ಕೆಲವು ಬಾರಿ ಟಿಕೆಟ್‌ ದರ ಹೆಚ್ಚಿರುತ್ತದೆ. ಇತ್ತೀಚೆಗೆ ಸಾಮಾನ್ಯವಾಗಿ ಎಲ್ಲ ಸಿನಿಮಾಗಳಿಗೂ 250 ರೂಪಾಯಿ ಟಿಕೆಟ್‌ ದರವನ್ನೇ ಪಡೆಯಲಾಗುತ್ತಿದೆ. ಹೀಗಿರುವಾಗ ನಾವು ಸಿನಿಮಾ ನೋಡಲು ಕೊಟ್ಟ 250 ರೂಪಾಯಿಯಲ್ಲಿ ನಿರ್ಮಾಪಕನಿಗೆ ಹೋಗೋದು ಎಷ್ಟು ಎಂಬ ಲೆಕ್ಕಾಚಾರ ಇಲ್ಲಿದೆ... ಒಂದು ಸಿನಿಮಾ ರಿಲೀಸ್‌ ಆದ ಬಳಿಕ ಅದರ ಗಳಿಕೆಯನ್ನು 3 ರೀತಿಯಲ್ಲಿ ಲೆಕ್ಕಹಾಕಲಾಗುತ್ತದೆ. ನಿರ್ಮಾಪಕರು ಮತ್ತು ವ್ಯಾಪಾರದ ಅಂಕಿಅಂಶಗಳಲ್ಲಿ ಕಂಡುಬರುವ ಗ್ರಾಸ್​ (ಒಟ್ಟು), ನೆಟ್​ (ನಿವ್ವಳ) ಮತ್ತು ಷೇರು​ ಅಂಕಿಅಂಶಗಳ ಆಧಾರದ ಮೇಲೆ ಈ ಕಲೆಕ್ಷನ್‌ನ್ನು ವಿಂಗಡಿಸಲಾಗುತ್ತದೆ. ಇದನ್ನೂ ಓದಿ: ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ಗೆ ಹಣ ನೀರಿನಂತೆ ಹರಿದು ಬಂದಿದ್ದೇಗೆ? ಸೀಕ್ರೆಟ್ ಬಿಚ್ಚಿಟ್ಟ ದಿನಕರ್ ತೂಗುದೀಪ!! ನಿರ್ಮಾಪಕ ನಾಗವಂಶಿ ಇತ್ತೀಚೆಗೆ ಈ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ. ಗ್ರಾಸ್, ನೆಟ್ ಮತ್ತು ಷೇರು ನಡುವಿನ ವ್ಯತ್ಯಾಸದ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಸಿನಿಮಾ ರಿಲೀಸ್‌ ಆದ ಬಳಿಕ ಥಿಯೇಟರ್‌ಗಳಲ್ಲಿ ಟಿಕೆಟ್ ಮಾರಾಟ ಮಾಡಿದಾಗ ಬರುವ ಒಟ್ಟು ಕಲೆಕ್ಷನ್​ ಅನ್ನು ಗ್ರಾಸ್​ ಎನ್ನಲಾಗುತ್ತದೆ. ಸರ್ಕಾರವು ಅದಕ್ಕೆ ತೆರಿಗೆಯನ್ನು ವಿಧಿಸುತ್ತದೆ ಎಂದಿದ್ದರು. ಪ್ರತಿ ಟಿಕೆಟ್‌ ಮೇಲೆಯೂ ತೆರಿಗೆ ಕಡಿತಗೊಳ್ಳುತ್ತದೆ. ಉಳಿದಿದ್ದನ್ನು ನೆಟ್​ (ನಿವ್ವಳ) ಕಲೆಕ್ಷನ್​ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿಯೂ ಪ್ರದರ್ಶಕರು ಮತ್ತು ಥಿಯೇಟರ್‌ಗಳ ಶೇಕಡಾವಾರು ಕಟ್‌ ಆಗುತ್ತದೆ. ನಿರ್ಮಾಪಕರಿಗೆ ಬರುವ ಅಂತಿಮ ಪಾಲನ್ನು ಷೇರು ಎಂದು ಹೇಳುತ್ತಾರೆ ಅಂತ ನಿರ್ಮಾಪಕ ನಾಗವಂಶಿ ತಿಳಿಸಿದ್ದರು. ಉದಾಹರಣೆ ಕೊಟ್ಟು ನಿರ್ಮಾಪಕ ನಾಗವಂಶಿ ಇದೆ ಬಗ್ಗೆ ವಿವರಿಸಿದ್ದರು. ಟಿಕೆಟ್ ದರ 250 ರೂಪಾಯಿ ಆಗಿದ್ದಾಗ ಅದರಲ್ಲಿ ನಿರ್ಮಾಪಕರಿಗೆ ಸಿಗುವುದು ಕೇವಲ 100 ರೂಪಾಯಿ. 18% ಸರ್ಕಾರದ ತೆರಿಗೆಯಾಗಿ ಕಡಿತವಾಗುತ್ತದೆ. ಚಿತ್ರಮಂದಿರಗಳಲ್ಲಿ ಎಷ್ಟು ವಾರಗಳವರೆಗೆ ಸಿನಿಮಾ ಪ್ರದರ್ಶಿಸಲಾಗುತ್ತದೆ ಎಂಬುದರ ಆಧಾರದ ಮೇಲೆ ಉಳಿದ ಒಂದಷ್ಟು ಭಾಗವನ್ನು ಪ್ರದರ್ಶಕರು ಪಡೆಯುತ್ತಾರೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಮತ್ತೊಂದು ಒಳ್ಳೆಯ ಕೆಲಸಕ್ಕೆ ಕೈ ಹಾಕಿದ ಕಿಚ್ಚ ಸುದೀಪ್!‌ ನಟನ ಹಾಲಿನಂತ ಮನಸ್ಸಿಗೆ ಅಭಿಮಾನಿಗಳ ಮೆಚ್ಚುಗೆ!! ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - ಸಬ್ ಸ್ಕ್ರೈಬ್ಆಗಿರಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.