KANNADA

ಮತ್ತೊಂದು ಒಳ್ಳೆಯ ಕೆಲಸಕ್ಕೆ ಕೈ ಹಾಕಿದ ಕಿಚ್ಚ ಸುದೀಪ್!‌ ನಟನ ಹಾಲಿನಂತ ಮನಸ್ಸಿಗೆ ಅಭಿಮಾನಿಗಳ ಮೆಚ್ಚುಗೆ!!

Sudeep: ಕನ್ನಡದ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ನಟನೆಯ ಜೊತೆಗೆ ಹಲವಾರು ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುತ್ತಿದ್ದಾರೆ. ಹಾಗಾಗಿ ಸ್ಟಾರ್ ಹೀರೋ ಅನೇಕರಿಗೆ ಉದಾಹರಣೆಯಾಗಿ ನಿಲ್ಲುತ್ತಾರೆ. ಈಗ ಸುದೀಪ್ ಮತ್ತೊಂದು ಒಳ್ಳೆಯ ಕೆಲಸಕ್ಕೆ ಕೈ ಹಾಕಿದ್ದಾರೆ. ಅವರು 'ಕಿಚ್ಚ ಸುದೀಪ್ ಕೇರ್ ಫೌಂಡೇಶನ್' ಎಂಬ ಹೊಸ ಚಾರಿಟಬಲ್ ಟ್ರಸ್ಟ್ ಅನ್ನು ಪ್ರಾರಂಭಿಸಿದರು. ಸುದೀಪ್ ಅವರ ಸೋದರ ಸಂಬಂಧಿ ಸಂಚಿತ್ ಸಂಜೀವ್ ಫೌಂಡೇಶನ್ ಲೋಗೋ, ಟೀ ಶರ್ಟ್ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದರು... ಈ ಮೂಲಕ ಸಮಾಜ ಸೇವೆ ಮಾಡಲು ಸುದೀಪ್ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ.. ಇದನ್ನೂ ಓದಿ- ಹೊರ ಹೋಗಲು ನಿರ್ಧರಿಸಿದ್ದೇಕೆ ಸಿಂಗರ್‌ ಹನುಮಂತ? ಬಿಗ್‌ ಬಾಸ್‌ʼನಲ್ಲಿ ಮಿಡ್‌ ವೀಕ್‌ ಎಲಿಮಿನೇಷನ್‌ ಶಾಕ್! ಸುದೀಪ್ ಈಗಾಗಲೇ 'ಕಿಚ್ಚ ಸುದೀಪ್ ಚಾರಿಟಬಲ್ ಸೊಸೈಟಿ' ನಡೆಸುತ್ತಿದ್ದಾರೆ. ಇದರ ಅಂಗವಾಗಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಲು ಶ್ರಮಿಸಲಾಗುತ್ತಿದೆ. ಬಡ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನೂ ನೀಡುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ತೊಂದರೆಯಲ್ಲಿದ್ದ ಕನ್ನಡದ ಹಿರಿಯ ಕಲಾವಿದರು ಮತ್ತು ತಂತ್ರಜ್ಞರಿಗೆ ಅವರು ದಿನಸಿಗಳನ್ನು ಒದಗಿಸಿದರು. ಇದೀಗ 'ಕಿಚ್ಚ ಸುದೀಪ್ ಕೇರ್ ಫೌಂಡೇಶನ್' ಮೂಲಕ ಸುದೀಪ್ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ಅಗತ್ಯವಿರುವವರಿಗೆ ಶಿಕ್ಷಣ ಮತ್ತು ವೈದ್ಯಕೀಯ ಸೇವೆಗಳನ್ನು ಒದಗಿಸುವುದು ಇವರ ಮುಖ್ಯ ಉದ್ದೇಶವಾಗಿದೆ.. ಇದಲ್ಲದೇ ಇನ್ನಷ್ಟು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಕಿಚ್ಚ ಸುದೀಪ್‌ ನಿರ್ಧರಿಸಿದ್ದಾರೆ. "Kichcha Sudeepa Care Foundation" is started to help people in need, & also to support people in Medical, Education, Educational Infrastructure. This foundation is started with the motive of lending supporting hand to the people who needs it. @KicchaSudeep @iampriya06 @NimmaKSCF pic.twitter.com/4ZJoKe8oIK — KICCHA SUDEEP FANS (A) (@KSFA_Official) January 5, 2025 ಇದನ್ನೂ ಓದಿ- ಶ್ರೇಯಾ ಘೋಷಾಲ್, ಶಂಕರ್ ಮಹದೇವನ್ ಮೊದಲಾದ ಖ್ಯಾತ ಗಾಯಕರ ಧ್ವನಿಯಲ್ಲಿ "ಕೊರಗಜ್ಜ" ಚಿತ್ರದ ಹಾಡುಗಳು ಸುದೀಪ್ ಈಗಾಗಲೇ 'ಬಿಲ್ಲ ರಂಗ ಭಾಷಾ' ಸಿನಿಮಾವನ್ನು ಫೈನಲ್ ಮಾಡಿದ್ದಾರೆ. ಅನೂಪ್ ಭಂಡಾರಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಮೇಲೆ ಅಭಿಮಾನಿಗಳು ಕೂಡ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದ್ಧೂರಿ ಬಜೆಟ್‌ನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಇನ್ನು ಕೆಲವು ಸಿನಿಮಾಗಳಲ್ಲಿ ಸುದೀಪ್ ಬ್ಯುಸಿಯಾಗಿದ್ದಾರೆ. ನಟ ವರ್ಷಕ್ಕೆ ಎರಡು ಸಿನಿಮಾ ಮಾಡುವ ಗುರಿ ಹೊಂದಿದ್ದಾರೆ. ಸದ್ಯ ಅವರು ಡೆಸುತ್ತಿರುವ 'ಬಿಗ್ ಬಾಸ್' ಶೋ ಇನ್ನು ಮೂರು ವಾರಗಳಲ್ಲಿ ಪೂರ್ಣಗೊಳ್ಳಲಿದೆ. ಅದಾದ ನಂತರ ಸುದೀಪ್ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಲಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.