KANNADA

ಇಷ್ಟು ಮೊತ್ತದ ಹಣವನ್ನು ಬ್ಯಾಂಕ್‌ ಖಾತೆಗೆ ಹಾಕಿದ್ರೆ ಐಟಿ ನೋಟೀಸ್ ಬರೋದು ಖಂಡಿತ..!

maximum amount you can keep in a bank account: ಬ್ಯಾಂಕ್ ಖಾತೆಯಲ್ಲಿ ಹಣ ಸುರಕ್ಷಿತವಾಗಿರುವುದು ಮಾತ್ರವಲ್ಲ, ಅದರ ಮೇಲೆ ಬಡ್ಡಿಯೂ ಸಿಗುತ್ತದೆ. ಕಳೆದ ಕೆಲವು ವರ್ಷಗಳಲ್ಲಿ, ಭಾರತದಲ್ಲಿ ಹೆಚ್ಚಿನ ಜನಸಂಖ್ಯೆಯು ಬ್ಯಾಂಕಿಂಗ್ ವ್ಯವಸ್ಥೆಗೆ ಸಂಪರ್ಕ ಹೊಂದಿದೆ. ವಿಶೇಷವೆಂದರೆ ಭಾರತದಲ್ಲಿ ಉಳಿತಾಯ ಖಾತೆ ತೆರೆಯಲು ಯಾವುದೇ ಮಿತಿಯಿಲ್ಲ. ಅಂದರೆ ಒಬ್ಬ ವ್ಯಕ್ತಿಯು ಎಷ್ಟು ಉಳಿತಾಯ ಖಾತೆಗಳನ್ನು ಬೇಕಾದರು ತೆರೆಯಬಹುದು. ಇದನ್ನೂ ಓದಿ: Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ, ಇಂದಿನ ರೇಟ್‌ ಹೇಗಿದೆ? ಒಬ್ಬ ವ್ಯಕ್ತಿಯು ಉಳಿತಾಯ ಖಾತೆಯಲ್ಲಿ ಎಷ್ಟು ಹಣವನ್ನು ಠೇವಣಿ ಇಡಬಹುದು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಅಂದರೆ, ಉಳಿತಾಯ ಖಾತೆಯಲ್ಲಿ ನೀವು ಎಷ್ಟು ಹಣವನ್ನು ಠೇವಣಿ ಮಾಡಬಹುದು ಎಂದು. ಶೂನ್ಯ ಬ್ಯಾಲೆನ್ಸ್ ಖಾತೆಯನ್ನು ಹೊರತುಪಡಿಸಿ, ಇತರ ಎಲ್ಲಾ ಉಳಿತಾಯ ಬ್ಯಾಂಕ್ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸುವುದು ಕಡ್ಡಾಯವಾಗಿದೆ. ಉಳಿತಾಯ ಖಾತೆಯಲ್ಲಿ ಹಣವನ್ನು ಇಡಲು ಯಾವುದೇ ಮಿತಿಯಿಲ್ಲದಿರಬಹುದು. ಆದರೆ ನೀವು ಒಂದು ಹಣಕಾಸು ವರ್ಷದಲ್ಲಿ ರೂ 10 ಲಕ್ಷಕ್ಕಿಂತ ಹೆಚ್ಚು ಠೇವಣಿ ಮಾಡಿದರೆ, ಬ್ಯಾಂಕ್‌ಗಳು ಕೇಂದ್ರೀಯ ನೇರ ತೆರಿಗೆಗಳ ಮಂಡಳಿಗೆ (CBDT) ತಿಳಿಸುತ್ತವೆ. ಇದೇ ನಿಯಮವು ಎಫ್‌ಡಿಯಲ್ಲಿನ ನಗದು ಠೇವಣಿ, ಮ್ಯೂಚುವಲ್ ಫಂಡ್‌ಗಳು, ಬಾಂಡ್‌ಗಳು ಮತ್ತು ಷೇರುಗಳಲ್ಲಿನ ಹೂಡಿಕೆಗಳಿಗೂ ಅನ್ವಯಿಸುತ್ತದೆ. ಲೈವ್ ಮಿಂಟ್‌ ವರದಿಯ ಪ್ರಕಾರ, ತೆರಿಗೆ ಮತ್ತು ಹೂಡಿಕೆ ಸಲಹೆಗಾರ ಬಲ್ವಂತ್ ಜೈನ್ ಅವರು ಭಾರತೀಯರು ಉಳಿತಾಯ ಖಾತೆಯಲ್ಲಿ ಎಷ್ಟು ಹಣವನ್ನು ಇಟ್ಟುಕೊಳ್ಳಬಹುದು ಎಂದು ಹೇಳುತ್ತಾರೆ. ಉಳಿತಾಯ ಖಾತೆಯಲ್ಲಿ ಹಣವನ್ನು ಠೇವಣಿ ಮಾಡಲು ಆದಾಯ ತೆರಿಗೆ ಕಾಯಿದೆ ಅಥವಾ ಬ್ಯಾಂಕಿಂಗ್ ನಿಯಮಗಳಲ್ಲಿ ಯಾವುದೇ ಮಿತಿಯನ್ನು ನಿಗದಿಪಡಿಸಲಾಗಿಲ್ಲ. ಬ್ಯಾಂಕ್ ಖಾತೆದಾರರು ಬ್ಯಾಂಕಿನ ಉಳಿತಾಯ ಖಾತೆಯಲ್ಲಿ ಇರಿಸಲಾದ ಮೊತ್ತದ ಮೇಲೆ ಗಳಿಸಿದ ಬಡ್ಡಿಗೆ ತೆರಿಗೆ ಪಾವತಿಸಬೇಕಾಗುತ್ತದೆ. ಬ್ಯಾಂಕ್ ಬಡ್ಡಿಯ ಮೇಲೆ 10 ಪ್ರತಿಶತ ಟಿಡಿಎಸ್ ಅನ್ನು ಕಡಿತಗೊಳಿಸುತ್ತದೆ. ಬಡ್ಡಿಯ ಮೇಲೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ ಆದರೆ ತೆರಿಗೆ ವಿನಾಯಿತಿಯನ್ನು ಸಹ ಪಡೆಯಬಹುದು ಎಂದು ಬಲ್ವಂತ್ ಜೈನ್ ಹೇಳುತ್ತಾರೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80TTA ಪ್ರಕಾರ, ಎಲ್ಲಾ ವ್ಯಕ್ತಿಗಳು 10,000 ರೂ.ವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು. 10 ಸಾವಿರಕ್ಕಿಂತ ಕಡಿಮೆ ಬಡ್ಡಿ ಬಂದರೆ ತೆರಿಗೆ ಕಟ್ಟಬೇಕಾಗಿಲ್ಲ. ಅದೇ ರೀತಿ 60 ವರ್ಷ ಮೇಲ್ಪಟ್ಟ ಖಾತೆದಾರರು 50 ಸಾವಿರ ರೂ.ವರೆಗಿನ ಬಡ್ಡಿಗೆ ತೆರಿಗೆ ಪಾವತಿಸಬೇಕಾಗಿಲ್ಲ. ಇದನ್ನೂ ಓದಿ: ವ್ಯಾಪಾರದಲ್ಲಿ ಅಂಬಾನಿಗೂ ಪೈಪೋಟಿ ನೀಡುವ ಈತ ಒಬ್ಬ ಶಾಲಾ ಶಿಕ್ಷಕರ ಮಗ! ಈ ಪ್ರಸಿದ್ಧ ನಟಿಯ ಪತಿ ಈ ಉದ್ಯಮಿ! ಖಾತೆದಾರರು ಆರ್ಥಿಕ ವರ್ಷದಲ್ಲಿ 10 ಲಕ್ಷ ರೂ.ಗಿಂತ ಹೆಚ್ಚಿನ ಹಣವನ್ನು ಉಳಿತಾಯ ಖಾತೆಯಲ್ಲಿ ಠೇವಣಿ ಇಟ್ಟರೆ, ಆದಾಯ ತೆರಿಗೆ ಇಲಾಖೆಯು ಹಣದ ಮೂಲದ ಬಗ್ಗೆ ಕೇಳಬಹುದು. ಖಾತೆದಾರರ ಪ್ರತಿಕ್ರಿಯೆಯಿಂದ ತೃಪ್ತರಾಗದಿದ್ದರೆ, ಅವರು ತನಿಖೆ ಮಾಡಬಹುದು. ತನಿಖೆಯ ಸಮಯದಲ್ಲಿ ಹಣದ ಮೂಲವು ತಪ್ಪು ಎಂದು ಕಂಡುಬಂದರೆ, ಆದಾಯ ತೆರಿಗೆ ಇಲಾಖೆಯು ಠೇವಣಿ ಮಾಡಿದ ಮೊತ್ತದ ಮೇಲೆ 60% ತೆರಿಗೆ, 25% ಹೆಚ್ಚುವರಿ ಶುಲ್ಕ ಮತ್ತು 4% ಸೆಸ್ ಅನ್ನು ವಿಧಿಸುವ ಸಾಧ್ಯತೆ ಇದೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.