KANNADA

ಹೀಗೂ ಉಂಟು… ಹೆತ್ತ ತಾಯಿಯನ್ನೇ ಮದುವೆಯಾದ ಮಗ: ಇದು ವಿಚಿತ್ರವೋ, ವಿನಾಶವೋ… ಛೇ!!!

Viral Video: ನಿಜಕ್ಕೂ ಪ್ರಪಂಚದಲ್ಲಿ ಹೀಗೆ ನಡೆಯಲು ಸಾಧ್ಯವಾ? ಇದು ವಿಚಿತ್ರವೋ? ವಿನಾಶವೋ..? ಹೆತ್ತ ತಾಯಿಯನ್ನೇ ಮದುವೆಯಾಗಿದ್ದಾನೆ ಮಗ ಅಥವಾ ಹಡೆದ ಮಗನನ್ನೇ ಮದುವೆಯಾಗಿದ್ದಾಳೆ ಅಮ್ಮ! ಇಂಥದೊಂದು ವಿಚಿತ್ರ ಮತ್ತು ವಿಲಕ್ಷಣವಾದ ಮದುವೆಗೆ ಕುಟುಂಬದ ಬೇರೆಯವರು, ಸಂಬಂಧಿಕರು, ಸ್ನೇಹಿತರು ಕೂಡ ಸಮ್ಮತಿ ನೀಡಿದ್ದಾರೆ. ಅಮ್ಮ ಮತ್ತು ಮಗ ಮದುವೆ ಯಾಗಿ ದಂಪತಿಗಳಾದ ದರಿದ್ರ ಘಟನೆ ಇತ್ತೀಚಿಗೆ ಪಾಕಿಸ್ತಾನದಲ್ಲಿ ನಡೆದಿದೆ. ಅಬ್ದುಲ್ ಅಹಮದ್ ಎಂಬ 18 ವರ್ಷದ ಯುವಕ ಕೆಲ ದಿನಗಳ ಹಿಂದೆ ತನ್ನ ತಾಯಿಯನ್ನೇ ಮದುವೆಯಾಗಿದ್ದ. ಈಗ ಹೊರಜಗತ್ತಿಗೆ ಬಹಿರಂಗ ಪಡಿಸಿದ್ದಾನೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮದುವೆಯ ವಿಡಿಯೋ ಶೇರ್ ಮಾಡಿರುವ ಆತ ತಾನು ತಾಯಿಯನ್ನೇ ಏಕೆ ಮದುವೆ ಆಗಿರುವೆ ಎಂಬುದನ್ನೂ ಹೇಳಿಕೊಂಡಿದ್ದಾನೆ. ಇದನ್ನೂ ಓದಿ- ಇದುವೇ ವಿಶ್ವದ ಅತ್ಯಂತ ದುಬಾರಿ ಮಾನವ ಹಲ್ಲು!; ₹30 ಲಕ್ಷ ಬೆಲೆ ಬಾಳುವ ಇದರ ವಿಶೇಷತೆ ಏನು ಗೊತ್ತಾ? ಅಬ್ದುಲ್ ಅಹಮದ್ ತಾಯಿಗೆ ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿತ್ತು. ದಂಪತಿಗಳಿಗೆ ಒಂದು ಹೆಣ್ಣು ಮತ್ತು ಒಂದು ಗಂಡು ಹುಟ್ಟಿದ ನಂತರ ಪತಿ ಸಾವನ್ನಪ್ಪಿದ್ದರು. ಅಂದಿನಿಂದ ಆಕೆ ತೀವ್ರ ಆರ್ಥಿಕ ಸಮಸ್ಯೆಗಳ ನಡುವೆ ಮಕ್ಕಳ ಪೋಷಣೆ ಮಾಡಿದ್ದರು. ಈಗ ಮಗ ಅಬ್ದುಲ್ ತಾಯಿಗೆ ಮದುವೆಯಾಗುವಂತೆ ಒತ್ತಾಯಿಸಿ ಕಡೆಗೆ ಒಪ್ಪಿಸಿದ್ದಾರೆ. ಗಂಡ ಇಲ್ಲದ ನನ್ನ ತಾಯಿ ದೈಹಿಕ ಸುಖಕ್ಕಾಗಿ ಮದುವೆಯಾಗಿಲ್ಲ. ಬದಲಿಗೆ ಆಕೆಗೆ ಕಡೆಗಾಲದಲ್ಲಿ ಒಳ್ಳೆಯ ಜೀವನ ನೀಡಬೇಕು ಎಂಬ ಕಾರಣಕ್ಕಾಗಿ ಮದುವೆಯಾಗಿರುವುದಾಗಿ ಭಂಡತನದ ಸಮರ್ಥನೆ ನೀಡಿದ್ದಾನೆ. ಇದನ್ನೂ ಓದಿ- ಮೂರು ಚಿರತೆಗಳ ನಡುವೆ ಭಯಾನಕ ಕಾಳಗ ಕಣ್ತುಂಬಿಕೊಂಡ ಸಫಾರಿಗರು: ವಿಡಿಯೋ ವೈರಲ್ ಆರಂಭದಲ್ಲಿ ತಾಯಿ ಬೇರೆಯವರನ್ನು ಮದುವೆಯಾಗಲು ಮನಸ್ಸು ಮಾಡಿದ್ದರು. ಆದರೆ, ನಿಯಮಗಳ ತೊಡಕಿನಿಂದ ಇದು ಸಾಧ್ಯವಾಗಿರಲಿಲ್ಲ. ಅಲ್ಲದೆ, ಬೇರೆಯವರು ಆಕೆಯನ್ನು ಮದುವೆಯಾದರೆ ಚೆನ್ನಾಗಿ ನೋಡಿಕೊಳ್ಳುತ್ತಾರೋ/ಇಲ್ಲವೋ ಎಂಬ ಅನುಮಾನವೂ ಇತ್ತು. ಹಾಗಾಗಿ, ಚಿಕ್ಕಂದಿನಿಂದ ಕಷ್ಟದಲ್ಲೇ ಜೀವನ ಸಾಗಿಸಿರುವ ನನ್ನ ತಾಯಿಯನ್ನೂ ಮುಂದಾದರೂ ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಬಯಸಿ ಮದುವೆಯಾಗಲು ನಿರ್ಧರಿಸಿದ್ದಾರೆ ಆಟ ತಿಳಿಸಿದ್ದಾರೆ. A post shared by All About Pakistan (@all.about.pakistan) ಆರಂಭದಲ್ಲಿ ಅಮ್ಮ ಮತ್ತೊಂದು ಮದುವೆಯಾಗಲು ಅದೂ ಮಗನನ್ನೇ ಮದುವೆಯಾಗಲು ಒಪ್ಪಿರಲಿಲ್ಲ. ಆದರೆ ಮಗ ಅಬ್ದುಲ್ ಅಮ್ಮನನ್ನು ಒಪ್ಪಿಸಿ ಮದುವೆಯಾಗಿದ್ದಾನೆ. ಶುರುವಿನಲ್ಲಿ ಸಂಬಂಧಿಕರು ವಿರೋಧ ವ್ಯಕ್ತಪಡಿಸಿದ್ದರಾದರೂ ಕಡೆಗೆ ಅವರೂ ಒಪ್ಪಿಗೆ ಸೂಚಿಸಿದ್ದರಿಂದ ಎಲ್ಲರ ಸಮ್ಮುಖದಲ್ಲೇ ಮದುವೆಯಾಗಿದೆ. ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - ಸಬ್ ಸ್ಕ್ರೈಬ್ಆಗಿರಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.