KANNADA

ಮುಗಿಲೆತ್ತರಕ್ಕೆ ಹಾರುವ ಜಿಂಕೆಯನ್ನು ಕಂಡಿದ್ದೀರಾ ? ಆಶ್ಚರ್ಯ ಆದರೂ ಸತ್ಯ ಎನ್ನುತ್ತದೆ ಈ ವಿಡಿಯೋ ಇಲ್ಲಿದೆ

ಬೆಂಗಳೂರು : ಪ್ರಾಣಿಗಳ ಆಟ ನೋಡುವುದೇ ಚೆಂದ.ಪ್ರಾಣಿಗಳ ಆಟ ತುಂಟಾಟ ಮನಸ್ಸಿಗೆ ಮುದ ನೀಡುತ್ತದೆ. ಕೆಲವೊಮ್ಮೆ ಈ ಪ್ರಾಣಿಗಳ ವರ್ತನೆ, ಚಟುವಟಿಕೆಗಳು ಆಶ್ಚರ್ಯವನ್ನು ಉಂಟು ಮಾಡುತ್ತದೆ. ಅಂಥದ್ದೇ ಆಶ್ಚರ್ಯ ಹುಟ್ಟಿಸುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಪ್ರಕೃತಿಯೇ ಹಾಗೆ ಹತ್ತು ಹಲವು ವೈಚಿತ್ರ್ಯಗಳನ್ನು ತನ್ನ ಮಡಿಲಲ್ಲಿ ಬಚ್ಚಿಟ್ಟುಕೊಂಡಿದೆ. ಈ ವಿಡಿಯೋವನ್ನು ನೋಡಿದ ಮೇಲೆ ನೀವು ಕೂಡಾ ಪ್ರಕೃತಿಯ ವಿಶೇಷತೆಗೆ ತಲೆ ಬಾಗಲೇ ಬೇಕು. ಇದನ್ನೂ ಓದಿ : Viral video: ಮದುವೆ ವೇದಿಕೆಯ ಮೇಲೆಯೇ ನವ ಜೋಡಿಯ ರೊಮ್ಯಾನ್ಸ್‌.. ವಿಡಿಯೋ ಮಾಡಿ ಹರಿಬಿಟ್ಟ ಅತಿಥಿಗಳು..! ಇಲ್ಲಿ ಜಿಂಕೆಯೊಂದು ಸುಮಾರು 7 ಅಡಿ ಎತ್ತರಕ್ಕೆ ಜಿಗಿಯುತ್ತಿರುವುದನ್ನು ಈ ಕಾಣಬಹುದು. ವಿಡಿಯೋ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿದೆ. ಜಿಂಕೆಯೊಂದು ರಸ್ತೆ ದಾಟುವ ಪ್ರಯತ್ನದಲ್ಲಿ ಒಂದು ತುದಿಯಿಂದ ಇನ್ನೊಂದು ತುದಿಗೆ ಅತಿ ಎತ್ತರಕ್ಕೆ ಜಿಗಿದಿದೆ.ಈ ವಿಡಿಯೋ ನೋಡಿದ ಮೇಲೆ ಜಿಂಕೆ ವೇಗವಾಗಿ ಓಡುವುದು ಮಾತ್ರವಲ್ಲ ಆಕಾಶದೆತ್ತರಕ್ಕೆ ಹಾರುವುದು ಕೂಡಾ ಸಾಧ್ಯ ಎಂದೆನಿಸುತ್ತದೆ. And the gold medal for long & high jump goes to....... @ParveenKaswan Forwarded as received pic.twitter.com/iY8u37KUxB — WildLense® Eco Foundation 🇮🇳 (@WildLense_India) January 15, 2022 ಇದನ್ನೂ ಓದಿ : Viral Video: ಕೋತಿ ಮನುಜನ ರೂಪ ಎನ್ನುವುದಕ್ಕೆ ಇದೇ ಸಾಕ್ಷಿ ಗುರು.. ಪಾತ್ರೆನೂ ತೊಳಿತೈತೆ ಈ ಮಂಗ.. ಚಪಾತಿ ಮಾಡೋದ್ರಲ್ಲಂತೂ ಈತ ಪಂಟ ಈ ಜಿಂಕೆ ಅಷ್ಟು ಎತ್ತರಕ್ಕೆ ಜಿಗಿದದ್ದು ಮಾತ್ರವಲ್ಲ ಅಷ್ಟೇ ಸುರಕ್ಷಿತವಾಗಿ ವಿರುದ್ಧ ದಿಕ್ಕಿನಲ್ಲಿ ಭೂಮಿ ಮೇಲೆ ಇಳಿದಿದೆ. ವೈಲ್ಡ್‌ಲೆನ್ಸ್ ಇಕೋ ಫೌಂಡೇಶನ್ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದೆ. ಈ ವಿಡಿಯೋ ವೈರಲ್ ಆಗಿದ್ದು, ಪ್ರತಿಯೊಬ್ಬರ ಮೆಚ್ಚುಗೆಗೆ ಪಾತ್ರವಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.