ಬೆಂಗಳೂರು : ನಗರದ ನರಸಿಂಹ ರಾಜ ಕಾಲೋನಿಯಲ್ಲಿನ ಆಚಾರ್ಯ ಪಾಠ ಶಾಲಾ ಕಾಲೇಜಿನ ಸೆಮಿನಾರ್ ಹಾಲಿನಲ್ಲಿ ಇಂದು ʼವರ್ಲ್ಡ್ ಬ್ರೈಲ್ ಡೇ' ಮತ್ತು ಟ್ರಸ್ಟ್ ನ ನರ್ಮದಾ ವಿಭಾಗ (ವಿಭಿನ್ನಚೇತನರ)ದ ಪ್ರಾರಂಭ ಅಂಗವಾಗಿ 'ವರ್ಲ್ಡ್ ಬ್ರೈಲ್ ಡೇ- ಮತ್ತು ನರ್ಮದಾ ಡೇ ಯನ್ನು ಏರ್ಪಡಿಸಲಾಗಿತ್ತು. ಎ.ಪಿ. ಎಸ್. ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಸಿ.ಎ ಡಾ, ವಿಷ್ಣು ಭಾರತ್ ಆಲಂಪಲ್ಲಿ ಯವರ ಅಧ್ಯಕ್ಷತೆ ಯಲ್ಲಿ ಕಾರ್ಯ ಕ್ರಮವು ಜರುಗಿತು. ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲಾ ತರಬೇತಿಗಳನ್ನು ಒದಗಿಸುತ್ತಿರುವ ಮತ್ತು ನರ್ಮದಾ ವಿಭಾಗದ ಕೋಆರ್ಡಿನೇಟರ್ ಆಗಿರುವ ಶ್ರೀಮತಿ ಹೇಮಾವತಿ ಎಸ್ ರವರ ನಿರೂಪಣೆ ಮತ್ತು ಇವರ ಉಸ್ತುವಾರಿಯಲ್ಲಿ ಕಾರ್ಯಕ್ರಮವು ಅಚ್ಚುಕಟ್ಟಾಗಿ ನಡೆಯಿತು. ಇದನ್ನೂ ಓದಿ: ರಾಜ್ಯದ ಯಶಸ್ವಿನಿ ಯೋಜನೆಯಡಿಯಲ್ಲಿ ಸಹಕಾರಿಗಳಿಗೆ ಚಿಕಿತ್ಸೆ ಸೌಲಭ್ಯ ಮುಖ್ಯ ಅತಿಥಿಯಾಗಿ ಕರ್ನಾಟಕ ಸರ್ಕಾರದ, ಮೆಡಿಕಲ್ ಎಜುಕೇಷನ್‌ನ ನಿರ್ದೇಶಕರಾದ ಡಾ,ಬಿ.ಎಲ್. ಸುಜಾತ ರಾತೋಡ್ ರವರು ಆಗಮಿಸಿದ್ದರು. ವಿಶೇಷ ಆಹ್ವಾನಿತರಾಗಿ ದೃಷ್ಟಿ ಚೇತನರಾದ ಸಿ.ಎ ರಜನಿ ಗೋಪಾಲಕೃಷ್ಣ ರವರು ಆಗಮಿಸಿದ್ದರು. ಟ್ರಸ್ಟ್ ನ ಜನರಲ್ ಸೆಕ್ರೆಟರಿ ಆದ ಪ್ರೋ, ಎ.ಪ್ರಕಾಶ್ ರವರು, ನರ್ಮದಾ ಗ್ರೂಪ್ ನ ಚೇರ್ಮನ್ ಆದ ಪ್ರೊಫೆಸರ್ ಎಸ್. ಸಿ ಶರ್ಮ ಹಾಗೂ ಇತರ ಗಣ್ಯರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ದೃಷ್ಟಿ ಚೇತನ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು ಪ್ರಸಿದ್ಧ ಜನಪದ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಟ್ರಸ್ಟ್ ನ ಅಧ್ಯಕ್ಷರಾದ ಸಿ.ಎ ಡಾ. ವಿಷ್ಣು ಭಾರತ್ ಆಲಂಪಲ್ಲಿರವರು ಬಹುಮಾನಗಳನ್ನು ವಿತರಿಸಿದರು. ಇದನ್ನೂ ಓದಿ: ಅಪ್ಪಟ ʼಅಪ್ಪುʼ ಅಭಿಮಾನಿ, ತಂದೆ-ತಾಯಿಯ ಮುದ್ದಿನ ಮಗಳು..! ಯಾರದ್ದೋ ತಪ್ಪಿಗೆ ಹಾರಿಹೋಯ್ತು ಪುಟ್ಟ ನೃತ್ಯಗಾರ್ತಿ ಜೀವ.. ನಂತರ ಮಾತನಾಡಿದ ಅಧ್ಯಕ್ಷರು ವಿದ್ಯಾರ್ಥಿಗಳ ಹುರುಪು, ಉತ್ಸಾಹ ಹಾಗೂ ಅವರ ಪ್ರತಿಭೆಗಳನ್ನು ಕೊಂಡಾಡಿದರು. ಸ್ಪೂರ್ತಿಯ ಮಾತುಗಳನ್ನು ಆಡಿದರು. ಅಲ್ಲದೆ, ದೃಷ್ಟಿ ಚೇತನರಿಗೆ ವಿಶೇಷ ವಿಶಿಷ್ಟವಾದ ಕನ್ನಡಕಗಳನ್ನು ತರಿಸುವ ಭರವಸೆಯನ್ನು ನೀಡಿದರು. ಯಾವುದೇ ಸವಾಲುಗಳಿದ್ದರೂ ಉತ್ಸಾಹ ಪರಿಶ್ರಮದಿಂದ ಎಲ್ಲವನ್ನು ಗೆಲ್ಲಬಹುದು ಎಂಬ ಸಂದೇಶವನ್ನು ಸಾರಿದರು. ನಂತರ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಡಾ, ಸುಜಾತ ರಾಥೋಡ್ ರವರು ಮಾತನಾಡಿ, ಪ್ರತಿದಿನ ಮುಂಜಾನೆಯು ಸಾಮಾನ್ಯ ದಿನದಂತಿದ್ದರೆ ಇಂದಿನ ದಿನ ಅತ್ಯಂತ ವಿಶೇಷವಾದ ದಿನ ತಮಗಾಗಿದೆ ಎನ್ನುತ್ತಾ ಮಾತನ್ನು ಪ್ರಾರಂಭಿಸಿದರು. ರಕ್ತ ಸಂಬಂಧಗಳಲ್ಲೆ ಆಗುವ ಮದುವೆಯಿಂದ ಆಗುವ ದುಷ್ಪರಿಣಾಮಗಳು ಇರುಳುಗಣ್ಣು ಹಾಗೂ ಇತರ ಸಮಸ್ಯೆಗಳ ಬಗ್ಗೆ ಎಚ್ಚರಿಸಿದರು. ಎಲ್ಲಕ್ಕಿಂತಲೂ ಮಿಗಿಲಾದದ್ದು ಮಾನವೀಯತೆ, ಈ ನಿಟ್ಟಿನಲ್ಲಿ ಎಪಿಎಸ್ ಪಾಠಶಾಲಾ ಎಜುಕೇಶನ್ ಟ್ರಸ್ಟ್ ನರ್ಮದಾ ವಿಭಾಗವು ಮಾಡುತ್ತಿರುವ ಕಾರ್ಯವನ್ನು ಶ್ಲಾಘಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಕ್ಯಾಬಿನೆಟ್ ಪುನರ್‌ರಚನೆಗೆ ತೀವ್ರ ಚರ್ಚೆ: ಸಂಕ್ರಾಂತಿ ನಂತರ ಕಾರ್ಯರೂಪ ಪಡೆಯುವ ಸಾಧ್ಯತೆ ನಂತರ ಕಾರ್ಯಕ್ರಮದಲ್ಲಿ ಉಚಿತವಾಗಿ ಬ್ರೈಲ್ ಲಿಪಿಯನ್ನು ನೀಡುವ ಉದಾರಿ ವೈಭವ್ ರವರನ್ನು ಸನ್ಮಾನಿಸಲಾಯಿತು. ಮುಂದೆ ಕಾರ್ಯಕ್ರಮವು ಕ್ರೀಡಾ ಚಟುವಟಿಕೆಗಳಲ್ಲಿ ಜಯಶೀಲರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಲಾಯಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. None
Popular Tags:
Share This Post:
![post](https://n.sarkariinfo.co.in/images/xfJpoglj8f0.jpeg)
![post](https://n.sarkariinfo.co.in/images/au6oqxfYcY0.jpeg)
What’s New
Spotlight
Today’s Hot
Featured News
ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರು ಹಾಕಿದ ಡೆಲ್ಲಿ ಸಿಎಂ ಅತಿಶಿ
- By Sarkai Info
- January 6, 2025
Latest From This Week
ಶೀಘ್ರದಲ್ಲೇ ಬರಲಿದೆ ವಾಟಾಪ್ಸ್ ಹೊಸ ಫೀಚರ್! ಫೋಟೋ ಹುಡುಕಾಟಕ್ಕೆ ಬೀಳಲಿದೆ ಕಡಿವಾಣ
KANNADA
- by Sarkai Info
- January 6, 2025
ತುರ್ತು ಔಷಧಿ ಖರೀದಿಗೂ ರಾಜ್ಯ ಸರ್ಕಾರದಲ್ಲಿ ಹಣವಿಲ್ಲ: ಸಂಸದ ಬಸವರಾಜ ಬೊಮ್ಮಾಯಿ ಆರೋಪ
KANNADA
- by Sarkai Info
- January 6, 2025
ನಿಮ್ಮ ಲ್ಯಾಪ್ಟಾಪ್ನಲ್ಲಿ ಈ ರೀತಿಯ ಲಕ್ಷಣಗಳು ಕಾಣಿಸುತ್ತಿದೆಯಾ? ಹಾಗಿದ್ರೆ ಪಕ್ಕಾ ಹ್ಯಾಕ್!
KANNADA
- by Sarkai Info
- January 6, 2025
Subscribe To Our Newsletter
No spam, notifications only about new products, updates.