KANNADA

ಮುಕೇಶ್ ಅಂಬಾನಿಯ ಆಂಟಿಲಿಯಾ ಇರುವ ಸ್ಥಳದಲ್ಲಿ ಈ ಹಿಂದೆ ಏನಿತ್ತು? ಆ ಜಾಗದ ಒಡೆಯ ಯಾರಾಗಿದ್ರು ಗೊತ್ತೇ?

Mukesh Ambani and Nita Ambani: ಮುಖೇಶ್ ಅಂಬಾನಿ ಅವರು ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ. ಮುಂಬೈನಲ್ಲಿರುವ ಅಂಬಾನಿ ಅವರ ಮನೆ ಆಂಟಿಲಿಯಾ ವಿಶ್ವದ ಅತ್ಯಂತ ದುಬಾರಿ ಮನೆಗಳಲ್ಲಿ ಒಂದಾಗಿದೆ. ನೀವು ಎಂದಾದರೂ ಮುಂಬೈಗೆ ಹೋಗಿದ್ದರೆ 27 ಅಂತಸ್ತಿನ ಭವ್ಯ ಕಟ್ಟಡ ಆಂಟಿಲಿಯಾ ದೂರದಿಂದಲೇ ಗೋಚರಿಸುತ್ತದೆ. ಆಂಟಿಲಿಯಾದ ಆರು ಮಹಡಿಗಳಲ್ಲಿ 168 ಕಾರುಗಳಿಗೆ ಪಾರ್ಕಿಂಗ್ ಇದೆ. ಇದಲ್ಲದೇ ಪ್ರಪಂಚದ ಆಯ್ದ ಐಷಾರಾಮಿ ಸೌಲಭ್ಯಗಳನ್ನು ಇದರಲ್ಲಿ ನೀಡಲಾಗಿದೆ. ಜಿಮ್, ಸ್ಪಾ, ಥಿಯೇಟರ್, ಟೆರೇಸ್ ಗಾರ್ಡನ್, ಸ್ವಿಮ್ಮಿಂಗ್ ಪೂಲ್‌ನಿಂದ ಹಿಡಿದು ದೇವಸ್ಥಾನ ಮತ್ತು ಹೆಲ್ತ್‌ ಸೆಂಟರ್‌ವರೆಗೆ ಎಲ್ಲವೂ ಆಂಟಿಲಿಯಾದಲ್ಲಿ ಇದೆ. ಇಂದು ಆಂಟಿಲಿಯಾ ಮೌಲ್ಯ ಸುಮಾರು 15000 ಕೋಟಿ ರೂಪಾಯಿ. ಮುಂಬೈನ ಕುಂಬ್ಲಾ ಹಿಲ್‌ನಲ್ಲಿರುವ ಅಲ್ಟಾಮೌಂಟ್ ರಸ್ತೆಯಲ್ಲಿರುವ ಆಂಟಿಲಿಯಾವನ್ನು 1.120 ಎಕರೆ ಭೂಮಿಯಲ್ಲಿ ನಿರ್ಮಿಸಲಾಗಿದೆ. 2014 ರಲ್ಲಿ ಇದನ್ನು ವಿಶ್ವದ ಅತ್ಯಂತ ದುಬಾರಿ ಮನೆ ಎಂದು ಘೋಷಿಸಲಾಗಿದೆ. ಇದರ ನಿರ್ಮಾಣಕ್ಕೆ ಸುಮಾರು 6000 ಕೋಟಿ ರೂಪಾಯಿ ವ್ಯಯಿಸಲಾಗಿದೆ. ಇದರ ನಿರ್ಮಾಣ ಕಾರ್ಯ ನಾಲ್ಕು ವರ್ಷಗಳ ಕಾಲ ನಡೆಯಿತು. ಅಂಬಾನಿ ಕುಟುಂಬವು 2006 ರಲ್ಲಿ ಮನೆ ನಿರ್ಮಾಣ ಕೆಲಸವನ್ನು ಪ್ರಾರಂಭಿಸಿತು ಮತ್ತು ಅದು 2010 ರಲ್ಲಿ ಪೂರ್ಣಗೊಂಡಿತು. ಇದು ಭೂಕಂಪಗಳನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಆಂಟಿಲಿಯಾ 8 ರಿಕ್ಟರ್ ಸ್ಕೇಲ್ ವರೆಗಿನ ಭೂಕಂಪಗಳನ್ನು ತಡೆದುಕೊಳ್ಳಬಲ್ಲದು. ಆದರೆ ಆಂಟಿಲಿಯಾವನ್ನು ನಿರ್ಮಿಸಿದ ಭೂಮಿಯಲ್ಲಿ ಹಿಂದೆ ಏನಿತ್ತು ಎಂದು ನಿಮಗೆ ತಿಳಿದಿದೆಯೇ? ಇದನ್ನೂ ಓದಿ: RBI: ಕರ್ನಾಟಕ ಮತ್ತು ಮಹಾರಾಷ್ಟ್ರದ ಈ ಬ್ಯಾಂಕುಗಳ ವಿಲೀನಕ್ಕೆ ಒಪ್ಪಿಗೆ ನೀಡಿದ ಆರ್‌ಬಿಐ!! ಆಂಟಿಲಿಯಾ ನಿರ್ಮಾಣವಾದ ಈ ಜಾಗದಲ್ಲಿ ಅನಾಥಾಶ್ರಮವಿತ್ತು. ಈ ಅನಾಥಾಶ್ರಮವನ್ನು 1895 ರಲ್ಲಿ ಅತ್ಯಂತ ಶ್ರೀಮಂತ ವ್ಯಕ್ತಿ ಕರೀಂಬಾಯಿ ಇಬ್ರಾಹಿಂ ನಿರ್ಮಿಸಿದ್ದರು. ಈ ಅನಾಥಾಶ್ರಮವನ್ನು ವಿಶೇಷವಾಗಿ ಪೋಷಕರಿಲ್ಲದ ಮತ್ತು ಖೋಜಾ ಸಮುದಾಯಕ್ಕೆ ಸೇರಿದ ಮಕ್ಕಳಿಗಾಗಿ ನಿರ್ಮಿಸಲಾಗಿದೆ. ಈ ಅನಾಥಾಶ್ರಮವನ್ನು ವಕ್ಫ್ ಬೋರ್ಡ್ ನಡೆಸುತ್ತಿತ್ತು. 2002ರಲ್ಲಿ ಈ ಭೂಮಿಯನ್ನು ಮಾರಾಟ ಮಾಡಲು ಟ್ರಸ್ಟ್ ಅನುಮತಿ ಕೋರಿತ್ತು. ಸರ್ಕಾರದ ಪರವಾಗಿ ದತ್ತಿ ಆಯುಕ್ತರು ಕೆಲವು ತಿಂಗಳ ನಂತರ ಅದನ್ನು ಮಾರಾಟ ಮಾಡಲು ಅನುಮತಿ ನೀಡಿದರು. ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಾರ, ಈ ಭೂಮಿಯನ್ನು ಮುಖೇಶ್ ಅಂಬಾನಿ ಕಂಪನಿಗೆ ಮಾರಾಟ ಮಾಡಲಾಗಿದೆ. ಆ ಸಮಯದಲ್ಲಿ ಮುಖೇಶ್ ಅಂಬಾನಿಯವರ ಆಂಟಿಲಿಯಾ ಕಮರ್ಷಿಯಲ್ ಪ್ರೈವೇಟ್ ಲಿಮಿಟೆಡ್ ಇದನ್ನು 2.5 ಮಿಲಿಯನ್ ಡಾಲರ್‌ಗೆ ಖರೀದಿಸಿತ್ತು. ಆ ಸಮಯದಲ್ಲಿ ಅದರ ಮಾರುಕಟ್ಟೆ ಮೌಲ್ಯವು 1.5 ಬಿಲಿಯನ್ ಡಾಲರ್ ಆಗಿತ್ತು. ಭೂಮಿಯನ್ನು ಖರೀದಿಸಿದ ನಂತರ ಅಂಬಾನಿ ಕುಟುಂಬವು ಇಲ್ಲಿ ಕಟ್ಟಡವನ್ನು ನಿರ್ಮಿಸಲು ಅನುಮತಿ ಕೇಳಿತು. 2003 ರಲ್ಲಿ, ಈ ಕಟ್ಟಡವನ್ನು ನಿರ್ಮಿಸುವ ಯೋಜನೆಯನ್ನು BMC ಅನುಮೋದಿಸಿತು. ಅದರ ನಿರ್ಮಾಣವು 2006 ರಲ್ಲಿ ಪ್ರಾರಂಭವಾಯಿತು. ಅಂಬಾನಿ ಅವರ ಮನೆಗೆ ಸ್ಪೇನ್‌ನಲ್ಲಿರುವ ಆಂಟಿಲಿಯಾ ಎಂಬ ದ್ವೀಪದ ಹೆಸರನ್ನು ಇಡಲಾಗಿದೆ. ಇದನ್ನು ಅಮೇರಿಕನ್ ಆರ್ಕಿಟೆಕ್ಚರ್ ಕಂಪನಿ ಪರ್ಕಿನ್ಸ್ ಮತ್ತು ವಿಲ್ ವಿನ್ಯಾಸಗೊಳಿಸಿದ್ದಾರೆ. 600 ಜನ ಸಿಬ್ಬಂದಿ ಆಂಟಿಲಿಯಾದಲ್ಲಿ ಕೆಲಸ ಮಾಡುತ್ತಾರೆ. ಅವರ ಸಂಬಳ ಲಕ್ಷಗಳಲ್ಲಿದೆ ಎಂದು ಹೇಳಲಾಗುತ್ತದೆ. ಅಂಬಾನಿ ಚಾಲಕನ ವೇತನವು ತಿಂಗಳಿಗೆ ಸುಮಾರು 2.5 ಲಕ್ಷ ರೂಪಾಯಿ ಎಂದು ಹಲವು ಮಾಧ್ಯಮ ವರದಿಗಳಲ್ಲಿ ಹೇಳಲಾಗಿದೆ. ಇದನ್ನೂ ಓದಿ: ವ್ಯಾಪಾರದಲ್ಲಿ ಅಂಬಾನಿಗೂ ಪೈಪೋಟಿ ನೀಡುವ ಈತ ಒಬ್ಬ ಶಾಲಾ ಶಿಕ್ಷಕರ ಮಗ! ಈ ಪ್ರಸಿದ್ಧ ನಟಿಯ ಪತಿ ಈ ಉದ್ಯಮಿ! ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - ಸಬ್ ಸ್ಕ್ರೈಬ್ಆಗಿರಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.