KANNADA

ತಿಂಗಳಿಗೆ ಕೈ ಸೇರುವುದು 20,500 ರೂಪಾಯಿ ಪಿಂಚಣಿ !ವೃದ್ದಾಪ್ಯದಲ್ಲಿ ನೆಮ್ಮದಿಯ ಜೀವನಕ್ಕೆ ಸರ್ಕಾರದ ಯೋಜನೆ

ಬೆಂಗಳೂರು : ಪ್ರತಿಯೊಬ್ಬರಿಗೂ ಹಣದ ಅವಶ್ಯಕತೆ ಇರುತ್ತದೆ. ವಯಸ್ಸಿಗೆ ತಕ್ಕಂತೆ ನಮ್ಮ ಹಣದ ಅಗತ್ಯವೂ ಬದಲಾಗುತ್ತದೆ. ವೃದ್ಧಾಪ್ಯದಲ್ಲಿ ಯೌವನದಂತೆ ಹಣ ಗಳಿಸುವುದು ಸಾಧ್ಯವಿಲ್ಲ. ಹಾಗಾಗಿ ವೃದ್ಧಾಪ್ಯದಲ್ಲಿ ಹಣವನ್ನು ಗಳಿಸುವ ಸುರಕ್ಷಿತ ಮಾರ್ಗವನ್ನು ಕಂಡು ಕೊಳ್ಳುವುದು ಬಹಳ ಮುಖ್ಯ. ಮಾಸಿಕ ಆದಾಯಕ್ಕೆ ಉತ್ತಮ ಆಯ್ಕೆ : ಹಿರಿಯ ನಾಗರಿಕರಿಗಾಗಿ ಸರ್ಕಾರವು ಹಲವಾರು ವಿಶೇಷ ಹೂಡಿಕೆ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಪೈಕಿ ಅತ್ಯಂತ ಜನಪ್ರಿಯ ಯೋಜನೆ ಎಂದರೆ ನಾಗರಿಕ ಉಳಿತಾಯ ಯೋಜನೆ (SCSS). ಅಂಚೆ ಇಲಾಖೆ ಈ ಯೋಜನೆಯನ್ನು ನಡೆಸುತ್ತದೆ. ಇದರಲ್ಲಿ ಹೂಡಿಕೆದಾರರು ಮಾಸಿಕ ಆದಾಯವನ್ನು ಪಡೆಯುತ್ತಾರೆ. ಪೋಸ್ಟ್ ಆಫೀಸ್‌ನ ಹಿರಿಯ ನಾಗರಿಕ ಉಳಿತಾಯ ಯೋಜನೆಯು ನಿವೃತ್ತಿಯ ನಂತರ ನಿಯಮಿತ ಮಾಸಿಕ ಆದಾಯದ ಚಿಂತೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಈ ಯೋಜನೆಯು ಹಿರಿಯ ನಾಗರಿಕರಿಗೆ ಸುರಕ್ಷಿತ ಮತ್ತು ಸ್ಥಿರವಾದ ಮಾಸಿಕ ಆದಾಯವನ್ನು ಖಾತ್ರಿಗೊಳಿಸುತ್ತದೆ. ನಿವೃತ್ತರಾದವರು ಮತ್ತು ತಮ್ಮ ಹಣವನ್ನು ಸುರಕ್ಷಿತ ಸ್ಥಳದಲ್ಲಿ ಹೂಡಿಕೆ ಮಾಡಲು ಬಯಸುವವರಿಗೆ ಈ ಯೋಜನೆಯು ಉಪಯುಕ್ತವಾಗಿದೆ. ಇದನ್ನೂ ಓದಿ : ವಾರದ ಮೊದಲ ದಿನವೇ ಇಳಿಕೆ ಕಂಡ ಚಿನ್ನದ ದರ! ಹಾಗಾದ್ರೆ ಇಂದೆಷ್ಟಿದೆ 10 ಗ್ರಾಂ ಬಂಗಾರದ ಬೆಲೆ?! ತಿಂಗಳಿಗೆ 20,500 ಆದಾಯ : SCSS ಮೇಲಿನ ಪ್ರಸ್ತುತ ಬಡ್ಡಿ ದರವು 8.2% ಆಗಿದೆ. ಸರ್ಕಾರದ ಇತರ ಯೋಜನೆಗಳಿಗೆ ಹೋಲಿಸಿದರೆ ಅತ್ಯಂತ ಹೆಚ್ಚು ಬಡ್ಡಿದರವನ್ನು ನೀಡುವ ಯೋಜನೆ ಇದು. ಇದರಲ್ಲಿ ಗರಿಷ್ಠ 30 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಪ್ರತಿ ವರ್ಷ ಸುಮಾರು 2,46,000 ರೂಪಾಯಿ ಬಡ್ಡಿ ಸಿಗುತ್ತದೆ. ಈ ಮೊತ್ತವನ್ನು ಪ್ರತಿ ತಿಂಗಳಿಗೆ ಲೆಕ್ಕ ಹಾಕಿದರೆ 20,500 ರೂಪಾಯಿ ಪಡೆಯಬಹುದು. ಈ ಹಣವನ್ನು ನೇರವಾಗಿ ಹೂಡಿಕೆದಾರರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. SCSS :ಹೂಡಿಕೆ ಮಿತಿ ಮತ್ತು ಅವಧಿ : - ಮೊದಲು ಈ ಯೋಜನೆಯಲ್ಲಿ ಗರಿಷ್ಠ ಹೂಡಿಕೆ ಮಿತಿ 15 ಲಕ್ಷ ರೂಪಾಯಿ ಆಗಿತ್ತು. ಇದೀಗ ಈ ಮಿತಿಯನ್ನು 30 ಲಕ್ಷ ರೂ.ಗೆ ಏರಿಸಲಾಗಿದೆ. - ಈ ಯೋಜನೆಯ ಮುಕ್ತಾಯ ಅವಧಿ 5 ವರ್ಷಗಳು. ಮೆಚ್ಯುರಿಟಿ ನಂತರವೂ ಇದನ್ನು 3 ವರ್ಷಗಳವರೆಗೆ ವಿಸ್ತರಿಸಬಹುದು. ಇದನ್ನೂ ಓದಿ : ಪಿಂಚಣಿದಾರರಿಗೆ 20%-100% ಪಿಂಚಣಿ ಹೆಚ್ಚಳ:ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ಮಾರ್ಗಸೂಚಿಗಳ ಸಂಪೂರ್ಣ ವಿವರ ಇಲ್ಲಿದೆ SCSS :ಇದರಲ್ಲಿ ಯಾರು ಹೂಡಿಕೆ ಮಾಡಬಹುದು? : - 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಭಾರತೀಯ ನಾಗರಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. - 55 ರಿಂದ 60 ವರ್ಷದೊಳಗಿನ ಸ್ವಯಂ ನಿವೃತ್ತಿ ಹೊಂದಿರುವವರು ಸಹ ಈ ಪ್ರಯೋಜನವನ್ನು ಪಡೆಯಬಹುದು. - ಈ ಯೋಜನೆಯಲ್ಲಿ ಖಾತೆಯನ್ನು ತೆರೆಯಲು, ಹತ್ತಿರದ ಅಂಚೆ ಕಚೇರಿ ಅಥವಾ ಬ್ಯಾಂಕ್‌ನಲ್ಲಿ ಅರ್ಜಿ ಸಲ್ಲಿಸಬಹುದು. SCSS :ತೆರಿಗೆ ಮತ್ತು ಇತರ ಪ್ರಯೋಜನಗಳು : - ಈ ಯೋಜನೆಯಿಂದ ಬರುವ ಆದಾಯವು ತೆರಿಗೆಗೆ ಒಳಪಡುತ್ತದೆ. ಆದರೆ ಕೆಲವು ತೆರಿಗೆ ಉಳಿತಾಯ ಸೌಲಭ್ಯಗಳು SCSS ಅಡಿಯಲ್ಲಿ ಲಭ್ಯವಿದೆ. ಇದು ನಿಮ್ಮ ತೆರಿಗೆ ಹೊಣೆಗಾರಿಕೆಯನ್ನು ಕಡಿಮೆ ಮಾಡುತ್ತದೆ. SCSS:ಈ ಯೋಜನೆಯ ಪ್ರಯೋಜನಗಳು: - ಸುರಕ್ಷಿತ ಹೂಡಿಕೆ: ಸರ್ಕಾರವು ಈ ಯೋಜನೆಯನ್ನು ಪ್ರಾರಂಭಿಸಿರುವುದರಿಂದ, ಇದು ಸಂಪೂರ್ಣವಾಗಿ ಸುರಕ್ಷಿತವಾಗಿದೆ. - ಸ್ಥಿರ ಮಾಸಿಕ ಆದಾಯ: ನಿವೃತ್ತಿಯ ನಂತರ, ಹೂಡಿಕೆದಾರರು ನಿಯಮಿತ ವೆಚ್ಚಗಳಿಗಾಗಿ ಪ್ರತಿ ತಿಂಗಳು ಸ್ಥಿರ ಆದಾಯವನ್ನು ಪಡೆಯುತ್ತಾರೆ. - ಬಡ್ಡಿ ದರ: 8.2% ಬಡ್ಡಿಯನ್ನು ಗಳಿಸಬಹುದು. ಇದು ತುಲನಾತ್ಮಕವಾಗಿ ಹೆಚ್ಚಿನ ಬಡ್ಡಿ ದರವಾಗಿದೆ. ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - ಸಬ್ ಸ್ಕ್ರೈಬ್ಆಗಿರಿ. SCSS: ನಿಯಮಗಳು ಮತ್ತು ಷರತ್ತುಗಳು : ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವ ಮೊದಲು, ಅದರ ಎಲ್ಲಾ ನಿಯಮಗಳು ಮತ್ತು ಷರತ್ತುಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ಈ ಯೋಜನೆಯು ನಿವೃತ್ತಿಯ ನಂತರದ ಅವಧಿಗೆ ಆರ್ಥಿಕ ಭದ್ರತೆಯನ್ನು ಖಾತ್ರಿಗೊಳಿಸುತ್ತದೆ. ನಿವೃತ್ತಿಯ ನಂತರ ಆರಾಮದಾಯಕ ಮತ್ತು ಸುರಕ್ಷಿತ ಜೀವನವನ್ನು ನಡೆಸಲು ಬಯಸುವವರು ಈ ಯೋಜನೆಯಲ್ಲಿ ಹೂಡಿಕೆ ಮಾಡುವುದು ಸರಿಯಾದ ಆಯ್ಕೆಯಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.