Namma Yatri Auto Issue: ಆಟೋ ಚಾಲಕರು ಹೇಳಿದ ಜಾಗಕ್ಕೆ ಬರಲ್ಲ, ಹೆಚ್ಚು ದುಡ್ಡು ಕೇಳುತ್ತಾರೆ ಎನ್ನುವ ದೂರುಗಳು ಕೇಳಿಬರುತ್ತಿದ್ದವು. ಇದೀಗ ಓಲಾ, ಉಬರ್, ನಮ್ಮ ಯಾತ್ರಿಯಂತಹ ಬುಕ್ಕಿಂಗ್ ಆ್ಯಪ್ ಗಳ ಮೂಲಕ ಆಟೋ ಬುಕ್ ಮಾಡುವುದರಿಂದ ಕಿ.ಮೀ. ಲೆಕ್ಕದಲ್ಲಿ ಮೊದಲೇ ದರ ಫಿಕ್ಸ್ ಆಗಿರುತ್ತದೆ. ಹಾಗಾಗಿ, ನಿಶ್ಚಿಂತೆಯಾಗಿ ಆಟೋ, ಕಾರ್ ಬುಕ್ ಮಾಡಿ ಪ್ರಯಾಣಿಸಬಹುದು. ಜೊತೆಗೆ ಆ್ಯಪ್ ಮೂಲಕ ಬುಕ್ ಮಾಡುವುದರಿಂದ ಪ್ರಯಾಣವೂ ಸೇಫ್ ಆಗಿರುತ್ತದೆ ಎಂದು ಭಾವಿಸಲಾಗುತ್ತದೆ. ಆದರೆ, ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದಿರುವ ಘಟನೆ 'ನಮ್ಮ ಯಾತ್ರಿ' ಆಟೋ ಪ್ರಯಾಣ ಮಹಿಳೆಯರಿಗೆ ಸೇಫ್ ಅಲ್ವಾ... ಎಂಬ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಆಟೋ ಪ್ರಯಾಣ ಮಾಡುವವರಿಗೆ, ಅದೂ ಮಹಿಳಾ ಪ್ರಯಾಣಿಕರಿಗೆ ಹೊಸ ವರ್ಷದಲ್ಲೇ ಒಂದು ಕೆಟ್ಟ ಸುದ್ದಿ. ನಮ್ಮ ಯಾತ್ರಿ ಆಟೋ ಚಾಲಕರು ಕೂಡ ಹೇಳಿದ ಕಡೆ ಬರಲ್ಲ, ಜೊತೆಗೆ ಅನುಚಿತವಾಗಿ ನಡೆದುಕೊಳ್ಳುತ್ತಾರೆ ಎನ್ನುವ ಆರೋಪಗಳು ಕೇಳಿಬಂದಿವೆ. ಇದಕ್ಕೆ ಸಂಬಂಧಿಸಿದಂತೆ ಸಿಟಿ ಪೋಲೀಸರ ಬಳಿ ದೂರು ದಾಖಲಾಗಿದೆ. ಇದನ್ನೂ ಓದಿ- Zomatoದಲ್ಲಿ 'Girl Friend' ಸಿಗ್ತಾರಾ... ಹೊಸ ವರ್ಷದ ಹೊತ್ತಲ್ಲಿ ಆಗಿದ್ದೇನು...? ಹೊಸ ವರ್ಷದ ದಿನ ಮಹಿಳೆಯೊಬ್ಬರು ಕೆಲಸದ ನಿಮಿತ್ತ ಹೊರಮಾವಿನಿಂದ ಥಣಿಸಂದ್ರಕ್ಕೆ ಆಟೋ ಬುಕ್ ಮಾಡಿದ್ದಾರೆ. ಆದರೆ ಆಟೋ ಚಾಲಕ ಹೊರಟಿದ್ದು ಹೆಬ್ಬಾಳದ ಕಡೆಗೆ. ಇದನ್ನು ಪ್ರಶ್ನೆ ಮಾಡಿದಾಗ ಚಾಲಕ ಬಾಯಿಗೆ ಬಂದ ಹಾಗೆ ಮಾತನ್ನಾಡಿದ್ದಾರೆ. ನಿಮಗೆ ಇಷ್ಟ ಇಲ್ಲ ಅಂದರೆ ಆಟೋದಿಂದ ಜಂಪ್ ಮಾಡಿಬಿಡಿ, ಗಾಡಿ ನಿಲ್ಲಿಸಲ್ಲ ಅಂತಾ ಕಿರಿಕ್ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಇದನ್ನೂ ಓದಿ- ಉಬರ್ ಕ್ಯಾಬ್‌ನಲ್ಲಿ ರಾಹುಲ್ ಗಾಂಧಿ ರೈಡ್: ಚಾಲಕರ ಸಮಸ್ಯೆಗಳ ಬಗ್ಗೆ ಚರ್ಚೆ ಆಟೋ ಚಾಲಕ ಕುಡಿದ ನಶೆಯಲ್ಲಿ ಆಟೋ ಚಾಲನೆ ಮಾಡುತ್ತಿದ್ದರು. ನಶೆಯಲ್ಲಿ ಅನುಚಿತವಾಗಿ ವರ್ತಿಸಿದ್ದಾರೆ. ಈ ತರಹದ ಚಾಲಕರಿಂದ ಮಹಿಳೆಯರು ಆಟೋಗಳಲ್ಲಿ ಹೇಗೆ ತಾನೇ ಸೇಫ್ ಆಗಿ ಪ್ರಯಾಣ ಮಾಡಲು ಸಾಧ್ಯ ಎಂದು ಸಿಟಿ ಪೊಲೀಸರಿಗೆ ದೂರು ನೀಡಿರುವ ಮಹಿಳೆ ಅಂತಹ ಆಟೋ ಚಾಲಕನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. #Nammayatri Namma Yatri Auto Issue! My wife booked a auto from Horamavu to Thanisandra, Bangalore, but the driver was drunk and took her towards the wrong location near Hebbal. Despite repeatedly asking him to stop, he didn’t listen, forcing her to jump out of the moving auto. pic.twitter.com/qAulNu3yc9 — Azhar Khan (@AzharKh35261609) January 2, 2025 ಇನ್ನೂ ಈ ಘಟನೆ ಸಂಬಂಧ ಮಹಿಳೆಯ ಪತಿ ಸಾಮಾಜಿಕ ಜಾಲತಾನದಲ್ಲಿ Nammayatri ಹ್ಯಾಶ್ ಟ್ಯಾಗ್ ಬಳಸಿ ಪೋಸ್ಟ್ ಮಾಡಿದ್ದು ಘಟನೆ ಬಗ್ಗೆ ವಿವರಿಸಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ನಮ್ಮ ಯಾತ್ರಿ ಆ್ಯಪ್ ವಿರುದ್ಧ ಪ್ರಯಾಣಿಕರ ಆಕ್ರೋಶ ಹೊರಹಾಕುತ್ತಿದ್ದಾರೆ. ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - ಸಬ್ ಸ್ಕ್ರೈಬ್ಆಗಿರಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. None
Popular Tags:
Share This Post:
What’s New
Spotlight
Today’s Hot
Featured News
ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರು ಹಾಕಿದ ಡೆಲ್ಲಿ ಸಿಎಂ ಅತಿಶಿ
- By Sarkai Info
- January 6, 2025
Latest From This Week
ಶೀಘ್ರದಲ್ಲೇ ಬರಲಿದೆ ವಾಟಾಪ್ಸ್ ಹೊಸ ಫೀಚರ್! ಫೋಟೋ ಹುಡುಕಾಟಕ್ಕೆ ಬೀಳಲಿದೆ ಕಡಿವಾಣ
KANNADA
- by Sarkai Info
- January 6, 2025
ತುರ್ತು ಔಷಧಿ ಖರೀದಿಗೂ ರಾಜ್ಯ ಸರ್ಕಾರದಲ್ಲಿ ಹಣವಿಲ್ಲ: ಸಂಸದ ಬಸವರಾಜ ಬೊಮ್ಮಾಯಿ ಆರೋಪ
KANNADA
- by Sarkai Info
- January 6, 2025
ನಿಮ್ಮ ಲ್ಯಾಪ್ಟಾಪ್ನಲ್ಲಿ ಈ ರೀತಿಯ ಲಕ್ಷಣಗಳು ಕಾಣಿಸುತ್ತಿದೆಯಾ? ಹಾಗಿದ್ರೆ ಪಕ್ಕಾ ಹ್ಯಾಕ್!
KANNADA
- by Sarkai Info
- January 6, 2025
Subscribe To Our Newsletter
No spam, notifications only about new products, updates.