KANNADA

ಗ್ರಹಚಾರ ಕೆಟ್ಟಂತೇ... ಕ್ರೀಸ್‌ನಲ್ಲಿದ್ರೂ ರನೌಟ್‌ ಆದ ಬ್ಯಾಟ್ಸ್‌ಮನ್‌: ವಿಡಿಯೋ ನೋಡಿದ್ರೆ ʼಹೀಗೂ ಔಟ್‌ ಆಗ್ತಾರಾ...?ʼ ಅನಿಸೋದು ಗ್ಯಾರಂಟಿ

mohammad waleed bizarre dismissal: ಕ್ರಿಕೆಟ್ ಇತಿಹಾಸದಲ್ಲೇ ವಿಚಿತ್ರ ರೀತಿಯಲ್ಲಿ ಬ್ಯಾಟ್ಸ್ ಮನ್ ರನ್ ಔಟ್ ಆಗಿದ್ದಾರೆ. ಕ್ರೀಸ್‌ನಿಂದ ಹೊರಬರದಿದ್ದರೂ ಔಟಾಗಿ ಪೆವಿಲಿಯನ್ ಸೇರಿದ್ದು ಹೇಗೆ ಅಂತಾ ಸದ್ಯ ಎಲ್ಲರಲ್ಲೂ ಪ್ರಶ್ನೆ ಮೂಡಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಡೈ ಮಾಡುವುದು ಬೇಕಿಲ್ಲ..! ಕೇವಲ ಎರಡು ವಾರ ಈ ಎಣ್ಣೆ ಬಳಸಿದರೆ ಬೆಳ್ಳಗಾಗಿರುವ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತೆ...! ಪಾಕಿಸ್ತಾನ ಡೊಮೆಸ್ಟಿಕ್ ಲೀಗ್ ಕ್ವೈಡ್-ಎ-ಅಜಮ್ ಟ್ರೋಫಿಯಲ್ಲಿ ಈ ಘಟನೆ ನಡೆದಿದೆ. ಟೂರ್ನಿಯ ಅಂಗವಾಗಿ ಪೇಶಾವರ-ಸಿಯಾಲ್ ಕೋಟ್ ಪಂದ್ಯ ಗುರುವಾರ ಆರಂಭವಾಗಿದೆ. ಈ ಪಂದ್ಯದಲ್ಲಿ ಸಿಯಾಲ್‌ಕೋಟ್ ಬ್ಯಾಟ್ಸ್‌ಮನ್ ಮೊಹಮ್ಮದ್ ವಲೀದ್ ದುರದೃಷ್ಟಕರ ರೀತಿಯಲ್ಲಿ ಔಟಾಗಿದ್ದಾರೆ. ಮೊದಲ ಇನಿಂಗ್ಸ್ ನಲ್ಲಿ ಅಮೀರ್ ಖಾನ್ ಎಸೆದ ಚೆಂಡನ್ನು ಸ್ಟ್ರೈಕ್ ನಲ್ಲಿದ್ದ ವಲೀದ್ ಆಡಿದ್ದರು. ಚೆಂಡು ನೇರವಾಗಿ ಬೌಲರ್ ಅಮೀರ್ ಪಾಲಾಗಿತ್ತು. ಅಮೀರ್ ತಕ್ಷಣವೇ ಚೆಂಡನ್ನು ವಿಕೆಟ್‌ಗಳ ಕಡೆಗೆ ಎಸೆದರು. ಆದರೆ ಕ್ರೀಸ್ ನಲ್ಲಿದ್ದ ವಲೀದ್ ಚೆಂಡು ತನಗೆ ತಾಕುತ್ತದೆಯೇ ಎಂದು ಹಾರಿದ್ದರು. ಗ್ರಹಚಾರ ಕೆಟ್ಟಂತೇ... ಚೆಂಡು ನೇರವಾಗಿ ಸ್ಟಂಪ್‌ಗೆ ಬಡಿಯಿತು. ತಕ್ಷಣ ಪೇಶಾವರ ಆಟಗಾರರು ರನೌಟ್‌ ಎಂದು ಮನವಿ ಸಲ್ಲಿಸಿದರು, ಫೀಲ್ಡ್ ಅಂಪೈರ್ ಮೂರನೇ ಅಂಪೈರ್‌ಗೆ ಸೂಚಿಸಿದರು. ಬಾಲ್‌ ಸ್ಟಂಪ್‌ಗೆ ಬಡಿದಾಗ ವಲೀದ್ ಹಾರುತ್ತಿರುವುದು ಕಂಡುಬಂದಿತ್ತು. ಇದರೊಂದಿಗೆ ಮೂರನೇ ಅಂಪೈರ್ ವಲೀದ್ ಔಟ್ ಎಂದು ಘೋಷಿಸಿದರು. Strange dismissal 😲 Mohammad Waleed gets out in a bizarre manner ❌ #QeAT | #SKTvPSH pic.twitter.com/0SEGUaqIC4 — Pakistan Cricket (@TheRealPCB) January 3, 2025 ಇದನ್ನೂ ಓದಿ: ಅಪರೂಪದ ಲಕ್ಷ್ಮೀ ನಾರಾಯಣ ಯೋಗ.. ಈ ರಾಶಿಗಳಿಗೆ ಬಂಪರ್ ಲಾಟರಿ, ಅದೃಷ್ಟದ ಬೆಂಬಲದಿಂದ ಪ್ರತಿ ಕೆಲಸದಲ್ಲೂ ಜಯ, ಬ್ಯಾಂಕ್ ಬ್ಯಾಲೆನ್ಸ್‌ ಹೆಚ್ಚಾಗೋದು ಪಕ್ಕಾ! ಆದರೆ, ಈ ರನೌಟ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕೆಲವರು ಇದು ತಮಾಷೆಯ ರನೌಟ್ ಎಂದು ಹೇಳಿದರೆ, ಇನ್ನು ಕೆಲವರು ಇದು ಸರಿಯಲ್ಲ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.