NEWS

Balayya Movie: ಸೆಟ್ಟೇರಿತು ಬಾಲಯ್ಯ-ಬೋಯಪತಿ ಶ್ರೀನು ಮತ್ತೊಂದು ಸಿನಿಮಾ; ಅಖಂಡ 2 ಚಿತ್ರಕ್ಕೆ ರೆಡಿ ಆದ್ರು ಈ ಜೋಡಿ!

ಟಾಲಿವುಡ್‌ನ ಬಾಲಯ್ಯ-ಬೋಯಪತಿ ಶ್ರೀನು ಮತ್ತೊಂದು ಸಿನಿಮಾ; ಅಖಂಡ 2 ಚಿತ್ರಕ್ಕೆ ರೆಡಿ ಆದ ಈ ಸಕ್ಸಸ್‌ಫುಲ್ ಜೋಡಿ! ಟಾಲಿವುಡ್‌ನ ಬಾಲಯ್ಯ (Balayya) ಮತ್ತೊಂದು ಚಿತ್ರ ಮಾಡುತ್ತಿದ್ದಾರೆ. ಈ ಮತ್ತೊಂದು ಚಿತ್ರಕ್ಕೆ ಬೋಯಪತಿ ಶ್ರೀನು (Boyapati Srinu) ಡೈರೆಕ್ಷನ್ ಮಾಡುತ್ತಿದ್ದಾರೆ. ಬೋಯಪತಿ ಶ್ರೀನು ಮತ್ತು ಬಾಲಯ್ಯ (Balayya) ಈಗಾಗಲೇ ಮೂರು ಸಿನಿಮಾಗಳನ್ನ ಮಾಡಿದ್ದಾರೆ. ಇದೀಗ ನಾಲ್ಕನೆ ಚಿತ್ರಕ್ಕೆ ಸಜ್ಜಾಗಿದ್ದಾರೆ. ಆ ನಾಲ್ಕನೆ ಚಿತ್ರ ಬೇರೆ ಯಾವುದೋ ಅಲ್ಲ. 2021 ರಲ್ಲಿ ಬಂದ ಅಖಂಡ ಚಿತ್ರದ ಮುಂದುವರೆದ ಭಾಗವೇ ಆಗಿದೆ. ಈ ಚಿತ್ರಕ್ಕೆ ಅಖಂಡ-2 (Akhanda-2) ಅಂತಲೇ ಹೆಸರಿಡಲಾಗಿದೆ. ಈಗೊಂದು ಇದರ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಈ ಮೂಲಕ ನಾಲ್ಕನೆ ಚಿತ್ರ ಜೊತೆಗೆ ಮಾಡ್ತಿರೋ ಮಾಹಿತಿ ಹೊರ ಬಂದಿದೆ. ಇದರ ಸುತ್ತ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ. ಬಾಲಯ್ಯ-ಬೋಯಪತಿ ಶ್ರೀನು ಸಿನಿಮಾ ಬೋಯಪತಿ ಶ್ರೀನು ಈಗಾಗಲೇ ಮೂರು ಸಿನಿಮಾ ಮಾಡಿದ್ದಾರೆ. ಅದರಲ್ಲಿ ಒಂದು ಅಖಂಡ ಚಿತ್ರವೇ ಆಗಿದೆ. ಈ ಚಿತ್ರ ಸೂಪರ್ ಹಿಟ್ ಆಗಿದೆ. ಈ ಮೂಲಕ ಬಾಲಯ್ಯನ ಹೊಸ ಅವತಾರ ಕೂಡ ಟಾಲಿವುಡ್ ಮಂದಿಗೆ ಸಿಕ್ಕಿದೆ. ಆದರೆ, ಇದಕ್ಕೂ ಮೊದಲು ಬಂದ ಸಿಂಹ ಚಿತ್ರದ ಖದರ್ ಬೇರೆ ಇತ್ತು. ಹಾಗೆ ಲೆಂಜೆಂಡ್ ಚಿತ್ರದ ಖದರ್ ಕೂಡ ವಿಭಿನ್ನವಾಗಿಯೇ ಇತ್ತು. ಈ ಎರಡೂ ಸಿನಿಮಾದ ಬಳಿಕ ಬಾಲಯ್ಯ ಮತ್ತು ಬೋಯಪತಿ ಶ್ರೀನು ಮತ್ತೊಂದು ಚಿತ್ರ ಮಾಡಿದ್ರು. ಅದುವೇ ಅಖಂಡ ಚಿತ್ರ ಆಗಿದೆ. ಈ ಸಿನಿಮಾ ಎಲ್ಲರಿಗೂ ಒಳ್ಳೆ ಹೆಸರು ತಂದು ಕೊಟ್ಟಿದೆ. ಇದನ್ನೂ ಓದಿ: Martin Movie: ಮಾರ್ಟಿನ್ ಸಕ್ಸಸ್ ಮೀಟ್‌ನಲ್ಲಿ ಧ್ರುವ ಸರ್ಜಾ ಖಡಕ್ ಮಾತು; ನೆಗೆಟಿವ್ ಕಾಮೆಂಟ್ ಹೊಡೆಯೋರಿಗೆ ಸಖತ್ ಟಾಂಗ್ ಕೊಟ್ಟ ಆ್ಯಕ್ಷನ್ ಪ್ರಿನ್ಸ್! 3 ವರ್ಷದ ಬಳಿಕ ಅಖಂಡ-2 ಸಿನಿಮಾ ಅಖಂಡ ಸಿನಿಮಾ ಬಂದು ಮೂರು ವರ್ಷಗಳೇ ಕಳೆದಿವೆ. ಆದರೆ, ಈಗ ಅಖಂಡ-2 ಸಿನಿಮಾ ಮಾಡೋ ಪ್ಲಾನ್ ಆಗಿದೆ. ಅದರ ಅಧಿಕೃತ ಮಾಹಿತಿ ಕೂಡ ಹೊರ ಬಂದಿದೆ. ಈ ಚಿತ್ರಕ್ಕಾಗಿಯೇ ಬಾಲಯ್ಯ ಮತ್ತು ಬೋಯಪತಿ ಶ್ರೀನು ಮತ್ತೊಮ್ಮೆ ಒಂದಾಗಿದ್ದಾರೆ. ರಾಮ್ ಅಚಂತಾ ಮತ್ತು ಗೋಪಿ ಅಚಂತಾ ಈ ಚಿತ್ರಕ್ಕೆ ದುಡ್ಡು ಹಾಕಿದ್ದಾರೆ. ಸಂಗೀತ ನಿರ್ದೇಶಕ ತಮನ್ ಎಸ್ ಈ ಚಿತ್ರಕ್ಕೆ ಸಂಗೀತ ಕೊಡುತ್ತಿದ್ದಾರೆ. ಅತೀ ಶ್ರೀಘ್ರದಲ್ಲಿ ಶೂಟಿಂಗ್ ಶುರು ಅಖಂಡ-2 ಚಿತ್ರದ ಶೂಟಿಂಗ್ ತಯಾರಿ ಶುರು ಆಗಿದೆ. ಚಿತ್ರಕ್ಕೆ ಅಖಂಡ-2 ಅಂತಲೂ ಹೆಸರಿಡಲಾಗಿದೆ. ಸಿನಿಮಾದ ಎಲ್ಲ ತಯಾರಿ ಆಗಿದೆ. ಇನ್ನೇನು ಸಿನಿಮಾ ಶುರು ಆಗುತ್ತಿದೆ. ಈ ಒಂದು ಮಾಹಿತಿಯನ್ನ ಸಿನಿಮಾ ವಿಶೇಷಕ ತರಣ್ ಆದರ್ಶ ಹಂಚಿಕೊಂಡಿದ್ದಾರೆ. ತಮ್ಮ ಟ್ವಿಟರ್ ಪೇಜ್‌ನಲ್ಲಿಯೇ ಎಲ್ಲ ಮಾಹಿತಿಯನ್ನ ಶೇರ್ ಮಾಡಿಕೊಂಡಿದ್ದಾರೆ. ಇನ್ನುಳಿದಂತೆ ಈ ಒಂದು ಸಿನಿಮಾ ವಿಚಾರ ಟ್ವಿಟರ್‌ನಲ್ಲಿ ಟಾಪ್ ಟ್ರೆಂಡಿಂಗ್‌ನಲ್ಲೂ ಓಡುತ್ತಿದೆ. BALAKRISHNA - BOYAPATI SREENU REUNITE FOR 'AKHANDA 2'… #NandamuriBalakrishna and director #BoyapatiSreenu - who delivered a hat-trick with #Simha , #Legend and #Akhanda - join forces for the fourth time [ #BB4 ]: #Akhanda2 . Produced by #RaamAchanta and #GopiAchanta ... Music by… pic.twitter.com/rUMTVr7pr2 ಬಾಲಯ್ಯನ ಸಿನಿಮಾಗಳು ಬಾಲಯ್ಯ ಅಭಿನಯದ ಭಗವತ್ ಕೇಸರಿ ಬಂದು ಹೋಗಿದೆ. ಮುಂದಿನ ವರ್ಷ ಬಾಲಯ್ಯನ 109 ನೇ ಚಿತ್ರ ಬರ್ತಿದೆ. ಇದನ್ನ ಬಾಬಿ ಕೊಲ್ಲಿ ಡೈರೆಕ್ಷನ್ ಮಾಡಲಿದ್ದಾರೆ. ಬಿಬಿ೪ ಚಿತ್ರವೂ ಇದೆ. ಅದರ ಮಧ್ಯೆ ಈ ಅಂಖಡ-2 ಚಿತ್ರದ ಸುದ್ದಿ ಸದ್ದು ಮಾಡುತ್ತಿದೆ. ಇನ್ನುಳಿದಂತೆ ಬಾಲಯ್ಯ ತಮ್ಮ 64 ನೇ ವಯಸ್ಸಿನಲ್ಲೂ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿದ್ದಾರೆ. ಸಿನಿಮಾ ಅಲ್ಲದೇ ಬೇರೆ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಂಡು ತಮ್ಮ ಫ್ಯಾನ್ಸ್ ಜೊತೆಗೆ ಕನೆಕ್ಟ್ ಆಗಿಯೇ ಇರ್ತಾರೆ ಅಂತಲೂ ಹೇಳಬಹುದು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.