NEWS

Bengaluru: ತೀರ್ಥಹಳ್ಳಿಯ ತಹಶೀಲ್ದಾರ್ ಅನುಮಾನಾಸ್ಪದ ಸಾವು; ಬೆಂಗಳೂರಿನ ಲಾಡ್ಜ್‌ನಲ್ಲಿ ಶವ ಪತ್ತೆ!

ತೀರ್ಥಹಳ್ಳಿ ತಹಶೀಲ್ದಾರ್ ಜಕ್ಕಣ್ಣಗೌಡರ್​ ಬೆಂಗಳೂರು: ತೀರ್ಥಹಳ್ಳಿ ತಹಶೀಲ್ದಾರ್ (Thirthahalli Tahsildar) ಜಕ್ಕಣ್ಣಗೌಡರ್​ ಬೆಂಗಳೂರಿನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಹೃದಯಾಘಾತದಿಂದ (Heart Attack) ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕಾರ್ಯನಿಮಿತ್ತ ಬೆಂಗಳೂರಿಗೆ ಆಗಮಿಸಿದ್ದ ಜಕ್ಕಣ್ಣಗೌಡರ್ ಬೆಂಗಳೂರಲ್ಲಿ (Bengaluru) ರೂಮ್​ ಮಾಡಿ ಉಳಿದುಕೊಂಡಿದ್ದರು. ಕುಟುಂಬಸ್ಥರು ಕರೆ ಮಾಡಿದಾಗ ಸಂಪರ್ಕಕ್ಕೆ ಸಿಗದಿದ್ದಾಗ ತೀರ್ಥಹಳ್ಳಿ ಪೊಲೀಸರಿಗೆ (Police) ಮಾಹಿತಿ ತಿಳಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ತೀರ್ಥಹಳ್ಳಿ ಪೊಲೀಸರು ಉಪ್ಪಾರಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಉಪ್ಪಾರಪೇಟೆ ಪೊಲೀಸರು (Upparpet Police Station) ಭೇಟಿ ನೀಡಿದಾಗ ಶವ ಪತ್ತೆಯಾಗಿದೆ. 56 ವರ್ಷದ ಜಕ್ಕಣ್ಣ ಗೌಡರ್ ಅವರು ತೀರ್ಥಹಳ್ಳಿಯ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಕಾರ್ಯನಿಮಿತ್ತ ನ್ಯಾಯಾಲಯದ ಕೆಲಸಕ್ಕೆ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಹೋಟೆಲ್ ನಲ್ಲಿ ರೂಮ್ ಮಾಡಿ ಉಳಿದಿದ್ದು, ಅಕ್ಟೋಬರ್ 14 ರಂದು ಖಾಸಗಿ ಲಾಡ್ಜ್ ಬುಕ್ ಮಾಡಿದ್ದರು. ಮೊನ್ನೆ ರಾತ್ರಿ ಪತ್ನಿಗೆ ಕರೆ ಮಾಡಿ ಮಾತನಾಡಿದ್ದರಂತೆ. ಆದರೆ ಆ ಬಳಿಕ ಕುಟುಂಬದೊಂದಿಗೆ ಸಂಜೆ ವರೆಗೂ ಸಂಪರ್ಕಕ್ಕೆ ಸಿಗಲಿಲ್ಲವಂತೆ. ನಿನ್ನೆ ಬೆಳಗ್ಗೆಯಿಂದ ಸಂಪರ್ಕಕ್ಕೆ ಕುಟುಂಬಸ್ಥರು ಪ್ರಯತ್ನಿಸಿದ್ದರಂತೆ. ಪೊಲೀಸರಿಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಮೊಬೈಲ್ ನೆಟ್ ವರ್ಕ್ ಟ್ರೇಸ್ ಮಾಡಿದ್ದಾಗ ಬೆಂಗಳೂರಿನಲ್ಲಿ ಇರೋದು ಗೊತ್ತಾಗಿದೆ. ಕೂಡಲೇ ನಿನ್ನೆ ರಾತ್ರಿ ಎಂಟು ಗಂಟೆಯ ಸುಮಾರಿಗೆ ರೂಮ್ ಬಾಗಿಲು ಓಪನ್ ಮಾಡಿದ್ದು, ಈ ವೇಳೆ ಜಕ್ಕಣ್ಣ ಗೌಡರ್ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಮೇಲ್ನೋಟಕ್ಕೆ ಹೃದಯಾಘಾತದಿಂದ ಮೃತಪಟ್ಟಿರುದಾಗಿ ಬೆಳಕಿಗೆ ಬಂದಿದ್ದು, ಇದುವರೆಗೆ ಘಟನೆಯ ನಿಖರ ಸಮಯ ತಿಳಿದುಬಂದಿಲ್ಲ. ಸದ್ಯ ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತದೆ. ಸದ್ಯ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ UDR ದಾಖಲು ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: Currency note: ಕರೆನ್ಸಿ ನೋಟಿನ ಮೇಲೆ ಬರೆದಿದ್ದಾರೆ ಅಂತ ಯಾರು ತೆಗೆದುಕೊಳ್ಳುತ್ತಿಲ್ವಾ? ಇಲ್ಲಿದೆ ನಿಮಗೆ ಗುಡ್​​ನ್ಯೂಸ್​! ವಕೀಲರ ಮೇಲೆ ಯುವಕರಿಂದ ಹಲ್ಲೆ ಚಿಕ್ಕಮಗಳೂರು ನಗರದ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿ ವಕೀಲರ ಮೇಲೆ ಯುವಕರು ಹಲ್ಲೆ ಮಾಡಿದ್ದಾರೆ. ಈ ಹಿನ್ನೆಲೆ ಹಲ್ಲೆ ಮಾಡಿದ ಯುವಕರ ಮೇಲೆ ಪ್ರಕರಣ ದಾಖಲಿಸುವಂತೆ ವಕೀಲರು ಬಸವನಹಳ್ಳಿ ಪೊಲೀಸ್ ಠಾಣೆಯ ಮುಂಭಾಗ ಜಮಾಯಿಸಿ ಪಟ್ಟು ಹಿಡಿದಿದ್ದರು. ವೇಗವಾಗಿ ಬಂದ ವಕೀಲರ ಕಾರು ಬುಲೆರೋ ವಾಹನಕ್ಕೆ ಟಚ್‌ ಆಗಿದೆ. ಬಳಿಕ ವಕೀಲರು ಕಾರಿನಿಂದ ಇಳಿದು ಕ್ಷಮೆ ಕೇಳಿದ್ದಾರೆ. ಆದರೆ ನಾಲ್ವರು ಯುವಕರು ವಕೀಲ ಪೃಥ್ವಿ, ಮಂಜುನಾಥ್ ಮೇಲೆ ಹಲ್ಲೆ ಮಾಡಿದ್ದು, ಹಲ್ಲೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಕೀಲರ ಮೇಲೆ ಹಲ್ಲೆಗೆ ಚಿಕ್ಕಮಗಳೂರು ಬಾರ್ ಕೌನ್ಸಿಲ್ ಕಿಡಿಕಾರಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.