NEWS

Apple Company: ಐಫೋನ್‌ 16 ಬೆನ್ನಲ್ಲೇ ಆ್ಯಪಲ್‌ ಕಂಪನಿಯ ಹೊಸ ಸಾಧನ ಮಾರುಕಟ್ಟೆಗೆ ಲಗ್ಗೆ! ಹೇಗಿರಲಿದೆ ಗೊತ್ತಾ ಫೀಚರ್ಸ್‌?

ಆ್ಯಪಲ್‌ ಐಪ್ಯಾಡ್‌ ಮಿನಿ 7 ಆ್ಯಪಲ್‌ ಕಂಪನಿ ತನ್ನ ಐಫೋನ್ 16 ಅನ್ನು (iPhone 16) ಬಿಡುಗಡೆ ಮಾಡಿದ ಕೆಲವೇ ದಿನಗಳಲ್ಲಿ ಸದ್ದಿಲ್ಲದೇ ತನ್ನ ಮತ್ತೊಂದು ಐಪ್ಯಾಡ್‌ (iPad) ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಎಲ್ಲಾ ಅಂದುಕೊಂಡಂತೆ ಆದರೆ ಈ ಐಪ್ಯಾಡ್‌ ಈ ತಿಂಗಳ ಕೊನೆಯಲ್ಲಿ ಮಾರುಕಟ್ಟೆಗೆ ಎಂಟ್ರಿಯಾಗಬಹುದು. ಐಪ್ಯಾಡ್‌ ಮಿನಿ 7 ಬಿಡುಗಡೆಗೆ ಸಜ್ಜು ಹೌದು, ಆ್ಯಪಲ್‌ ಕಂಪನಿ ಐಪ್ಯಾಡ್‌ ಮಿನಿ ಅನ್ನು ಈ ತಿಂಗಳ ಕೊನೆ ಅಥವಾ ನಂತರ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಹೊಸ ಐಪ್ಯಾಡ್‌ ಬಗ್ಗೆ ಕಂಪನಿಯು ಇನ್ನೂ ನಿರ್ದಿಷ್ಟತೆಯನ್ನು ಘೋಷಿಸದಿದ್ದರೂ, ಕೆಲ ವರದಿಗಳು ಹೊಸ ಐಪ್ಯಾಡ್‌ ಬಿಡುಗಡೆ ಬಗ್ಗೆ ಪಕ್ಕಾ ಮಾಹಿತಿ ನೀಡಿವೆ. ಐಪ್ಯಾಡ್‌ ಮಿನಿ 6 ಮೂರು ವರ್ಷಗಳ ಹಿಂದೆ ಅಂದರೆ ಸೆಪ್ಟೆಂಬರ್ 2021 ರಲ್ಲಿ ಬಿಡುಗಡೆಯಾಗಿತ್ತು. ಈಗ ಮೂರು ವರ್ಷ ಬ್ರೇಕ್‌ ತೆಗೆದುಕೊಂಡ ಕಂಪನಿ ಹೊಸ ಆವೃತ್ತಿ ಬಿಡುಗಡೆಗೆ ಎದುರು ನೋಡುತ್ತಿದೆ. ಇದನ್ನೂ ಓದಿ: ಎರಡು ಪ್ಲಾನ್​ಗಳ ನಡುವಿನ ವ್ಯತ್ಯಾಸ ಕೇವಲ 1 ರೂಪಾಯಿ, ಲಾಭ ನೋಡಿದ್ರೆ ರೀಚಾರ್ಜ್ ಮಾಡೋದು ಪಕ್ಕಾ! ಹೊಸ ಐಪ್ಯಾಡ್‌ ಹಲವಾರು ವಿಶೇಷತೆಗಳೊಂದಿಗೆ ಹೊರ ಬರಲಿದೆ ಎನ್ನಲಾಗಿದೆ. ಇದು ಹೊಸ ಹಾರ್ಡ್‌ವೇರ್ ಅಪ್‌ಡೇಟ್‌ ಜೊತೆಗೆ ಆಪಲ್ ಇಂಟೆಲಿಜೆನ್ಸ್ ವೈಶಿಷ್ಟ್ಯಗಳನ್ನು ಬೆಂಬಲಿಸಲಿದೆ. M4 ಮ್ಯಾಕ್‌ಬುಕ್ ಪ್ರೊ ಮಾದರಿಯೊಂದಿಗೆ ಹೊಸ ಐಪ್ಯಾಡ್ ಮಿನಿ ಮಾದರಿಯನ್ನು ತರಲು ಕಂಪನಿಯು ಪ್ಲ್ಯಾನ್‌ ಮಾಡಿಕೊಂಡಿತ್ತಾದ್ರೂ, ಅದಕ್ಕೂ ಮುನ್ನ ಅಂದ್ರೆ ಇದೇ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗಬಹುದು ಎನ್ನುತ್ತಿವೆ ವರದಿಗಳು. ಭಾರತದಲ್ಲಿ ಆ್ಯಪಲ್‌ ಐಪ್ಯಾಡ್‌ ಮಿನಿ 7 ಬೆಲೆ ಎಷ್ಟಿರಲಿದೆ? ಭಾರತದಲ್ಲಿ ಆ್ಯಪಲ್‌ ಐಪ್ಯಾಡ್‌ ಮಿನಿ 7 ಬೆಲೆ 128GB ವೈ-ಫೈ ಮಾದರಿಗೆ 49,900 ರೂ.ಗಳಿಂದ ಪ್ರಾರಂಭವಾಗುತ್ತದೆ, 512GB ವೈ-ಫೈ ರೂಪಾಂತರಕ್ಕೆ 79,900 ರೂ. ಇರಲಿದೆ. ಇನ್ನು ಐಪ್ಯಾಡ್‌ ಮಿನಿ 7 ನ 128GB ಸೆಲ್ಯುಲಾರ್ ಮಾದರಿಯು ರೂ 64,900 ರ ಆರಂಭಿಕ ಬೆಲೆಯಿಂದ ರೂ 94,900 ವರೆಗೆ ಇರುವ ಸಾಧ್ಯತೆ ಇದೆ. ಈಗಾಗ್ಲೇ ಫ್ರೀ ಬುಕ್ಕಿಂಗ್‌ಗೆ ಅವಕಾಶವಿದ್ದು, ಮುಂಗಡ ಬುಕ್ಕಿಂಗ್‌ ಮಾಡಿಕೊಳ್ಳಬಹುದಾಗಿದೆ. ಐಪ್ಯಾಡ್‌ ಮಿನಿ 7 ಫೀಚರ್ಸ್ ಹೊಸ ಐಪ್ಯಾಡ್‌ ಮಿನಿ ಹಲವು ಫೀಚರ್ಸ್‌ನೊಂದಿಗೆ ಬರಲಿದೆ. gen ಮಾದರಿಯು ಐಫೋನ್‌ ಪ್ರೋ ಮಾದರಿಗಳಿಂದ ಇತ್ತೀಚಿನ A- ಸರಣಿಯ ಚಿಪ್‌ಸೆಟ್‌ನಿಂದ ಚಾಲಿತವಾಗಿದೆ ಮತ್ತು ಇತ್ತೀಚಿನ ಆ್ಯಪಲ್‌ ಪೆನ್ಸಿಲ್‌ ಪ್ರೊ ಆವೃತ್ತಿಗೆ ಬೆಂಬಲವನ್ನು ಪಡೆಯುತ್ತದೆ. ಐಪ್ಯಾಡ್‌ ಮಿನಿ 7 ಹಳೇಯ ಆವೃತ್ತಿಯಂತೆ ಕಂಡರೂ ಒಲವು ಹೊಸ ವೈಶಿಷ್ಟ್ಯಗಳನ್ನು ಹೊತ್ತ ಬರಲಿದೆ. ನೀವು 8.3-ಇಂಚಿನ ಎಲ್ಇಡಿ ಲಿಕ್ವಿಡ್ ರೆಟಿನಾ ಡಿಸ್ಪ್ಲೇ ಜೊತೆಗೆ ಆ್ಯಂಟಿ-ರಿಫ್ಲೆಕ್ಟಿವ್ ಕೋಟಿಂಗ್ ಮತ್ತು 500 ನಿಟ್ಸ್ ಬ್ರೈಟ್ನೆಸ್ ಅನ್ನು ಈ ಐಪ್ಯಾಡ್‌ನಲ್ಲಿ ಪಡೆಯಬಹುದು. ಇದು A17 ಪ್ರೊ ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು ಅದು 16-ಕೋರ್ ನ್ಯೂರಲ್ ಎಂಜಿನ್ ಅನ್ನು ಹೊಂದಿದೆ, ಜೊತೆಗೆ ಆ್ಯಪಲ್ ಇಂಟೆಲಿಜೆನ್ಸ್ ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ. ಫೇಸ್‌ ಟೈಮ್ ಕರೆಗಳಿಗಾಗಿ ನೀವು 12MP ಹಿಂಭಾಗ ಮತ್ತು 12MP ಅಲ್ಟ್ರಾ ವೈಡ್ ಫ್ರಂಟ್ ಕ್ಯಾಮೆರಾವನ್ನು ಪಡೆಯುವಂತಹ ಫೀಚರ್‌ ಇದರಲ್ಲಿರಲಿದೆ. ಐಪ್ಯಾಡ್‌ ಮಿನಿ 7 ಬಯೋಮೆಟ್ರಿಕ್ ಭದ್ರತೆಗಾಗಿ ಪವರ್ ಬಟನ್‌ನಲ್ಲಿ ನಿರ್ಮಿಸಲಾದ ಟಚ್ ಐಡಿಯನ್ನು ಪಡೆಯುತ್ತದೆ ಮತ್ತು ಫೇಸ್ ಐಡಿಯನ್ನು ಬೆಂಬಲಿಸುವುದಿಲ್ಲ. ಇದು ಚಾರ್ಜಿಂಗ್‌ಗಾಗಿ USB C ಪೋರ್ಟ್ ಅನ್ನು ಹೊಂದಿರಲಿದೆ ಮತ್ತು iPadOS 18 ಆವೃತ್ತಿಯು ಈ ತಿಂಗಳು ಹೊರಬರುವ ಆವೃತ್ತಿ 18.1 ಅಪ್‌ಡೇಟ್‌ನೊಂದಿಗೆ ಸೂಪರ್‌ ಸ್ಪೀಡ್‌ ಆಗಿ ಕೆಲಸ ಮಾಡಲಿದೆ. ಹಿಂದಿನ ಐಪ್ಯಾಡ್‌ ಮಾದರಿಗಳಲ್ಲಿ ಕಂಡುಬಂದಿದ್ದ “ಜೆಲ್ಲಿ ಸ್ಕ್ರೋಲಿಂಗ್” ಸಮಸ್ಯೆಯನ್ನು ಪರಿಹರಿಸಲು ಡಿಸ್ಪ್ಲೈ ಟೆಕ್ನಾಲಜಿಯಲ್ಲಿ ಹಲವು ಸುಧಾರಣೆಗಳು ಬರಲಿವೆ. ಹಾಗೆಯೇ ಈ ಆವೃತಿಯಲ್ಲಿ OLED ಅಥವಾ ProMotion ಪರದೆಯ ನವೀಕರಣಗಳು ಇರುವುದಿಲ್ಲ ಎನ್ನಲಾಗಿದೆ. ಒಟ್ಟಾರೆ ವರದಿಗಳು ಈ ಸೂಪರ್‌ ಮಿನಿ ಐಪ್ಯಾಡ್‌ ಬಳಕೆ ಮಾಡಲು ಗ್ರಾಹಕರು ಒಂದಿಷ್ಟು ಕಾಯಲೇಬೇಕು ಎಂದಿವೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.