NEWS

Heavy Rain: ವರುಣಾರ್ಭಟಕ್ಕೆ ನಲುಗಿದ ಕರುನಾಡು; ಇಂದು ಎಲ್ಲೆಲ್ಲಿ, ಎಷ್ಟು ಪ್ರಮಾಣದ ಮಳೆ? ಈ ಜಿಲ್ಲೆಗಳಲ್ಲಿ ಮುಂದುವರೆಯಲಿದೆ ಜಲಪ್ರಳಯ!

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಪರಿಣಾಮ ಹಲವು ರಾಜ್ಯಗಳಲ್ಲಿ ಮಳೆಯಾಗುತ್ತಿದೆ. ಕರ್ನಾಟಕದಲ್ಲೂ (Karnataka) ಕಳೆದೆರಡು ದಿನಗಳಿಂದ ಭಾರೀ ಮಳೆ (Heavy Rain) ಸುರಿಯುತ್ತಿದೆ. ಬೆಂಗಳೂರು (Bangalore) ಸೇರಿ ಕರ್ನಾಟಕದ 12 ಜಿಲ್ಲೆಗಳಲ್ಲಿ ಅಕ್ಟೋಬರ್ 20ರವರೆಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (Meteorological Department) ಮುನ್ಸೂಚನೆ ನೀಡಿದ್ದು ಆರೆಂಜ್ ಅಲರ್ಟ್ (Orange Alert)​ ಘೋಷಿಸಲಾಗಿದೆ. ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ವಿಪರೀತ ಮಳೆಯಾಗುತ್ತಿದೆ. ಇಂದು ಕೂಡ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ. ಇಂದು ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಮಾಣದ ಮಳೆಯಾಗಿದೆ ಎನ್ನುವುದನ್ನು ತಿಳಿಯಲು ಮುಂದೆ ಓದಿ… ಇಲ್ಲಿ ಆರೆಂಜ್ ಅಲರ್ಟ್… ಪಣಂಬೂರು, ಚಿಕ್ಕೋಡಿ, ಬೇಗೂರು, ರಾಯಲ್ಪಾಡು, ಗೌರಿಬಿದನೂರು, ತೊಂಡೇಭಾವಿ, ದಕ್ಷಿಣ ಕನ್ನಡ, ಸುಳ್ಯ, ಸೇಡಬಾಳ, ಚಿಕ್ಕಬಳ್ಳಾಪುರ, ಸಿರಾ, ನಾಪೋಕ್ಲು, ರಾಮನಗರದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರಿನಲ್ಲಿ ಭಾರಿ ಮಳೆಯಾಗುತ್ತಿದ್ದು ಹಾಗಾಗಿ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ಯಲ್ಲೋ ಅಲರ್ಟ್ ಎಲ್ಲೆಲ್ಲಿ? ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಕಲಬುರಗಿ, ಬೀದರ್​, ಬಾಗಲಕೋಟೆಯಲ್ಲಿ ಮಳೆಯಾಗುತ್ತಿದೆ. ವಿಜಯನಗರ, ಮೈಸೂರು, ಕೊಡಗು, ದಾವಣಗೆರೆ, ಚಿತ್ರದುರ್ಗ, ಚಾಮರಾಜನಗರ, ಹಾವೇರಿ, ಗದಗ, ಧಾರವಾಡ, ಬೆಳಗಾವಿ, ಉತ್ತರ ಕನ್ನಡದಲ್ಲಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಇದನ್ನೂ ಓದಿ: Rs 10 Coins: ನಿಮ್ಮ ಹತ್ರಾ ಖಂಡಿತ 10 ರೂಪಾಯಿ ಕಾಯಿನ್‌ ಇರುತ್ತೆ ಅಲ್ವಾ? ಹಾಗಿದ್ರೆ ಬಂಪರ್ ನ್ಯೂಸ್‌ ಇಲ್ಲಿದೆ! ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಮಳೆಯಾಗುತ್ತಿದ್ದು, ಮಾಗಡಿ, ಬೆಂಗಳೂರು ನಗರ, ಗುಬ್ಬಿ, ಸರಗೂರು, ಮಾಣಿ, ಹೊನ್ನಾವರ, ಬೆಳ್ತಂಗಡಿ, ರಬಕವಿ, ಧರ್ಮಸ್ಥಳ, ಕಾರ್ಕಳ, ನಿಪ್ಪಾಣಿ, ಮಧುಗಿರಿ, ಎಚ್​ಡಿ ಕೋಟೆ, ಹೊಸದುರ್ಗ, ಭಾಗಮಂಡಲ, ಚಿತ್ರದುರ್ಗ, ಪರಶುರಾಂಪುರ, ಚನ್ನಪಟ್ಟಣ, ತಿಪಟೂರಿನಲ್ಲಿ ಮಳೆಯಾಗಿದೆ. ಎಲ್ಲೆಲ್ಲಿ ಮಳೆ ಮುಂದುವರೆಯಲಿದೆ? ಅಕ್ಟೋಬರ್ 16 ರಿಂದ ಅ. 24 ರವರೆಗೆ ರಾಜ್ಯದ ಕರಾವಳಿ ಮತ್ತು ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಂತ ಮಲೆನಾಡು ಜಿಲ್ಲೆಗಳಿಗೆ ವ್ಯಾಪಕವಾಗಿ ಮಳೆಯಾಗುವ ನಿರೀಕ್ಷೆಯಿದೆ. ಉತ್ತರ ಒಳನಾಡು ಜಿಲ್ಲೆಗಳಿಗೆ ಅ. 22 ರವರೆಗೆ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ನಂತರ ಮಳೆ ತೀವ್ರತೆ ಕಡಿಮೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಅಕ್ಟೋಬರ್ 23 ರವರೆಗೆ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಮುಂದಿನ 5 ದಿನಗಳ ಕಾಲ ಮುಂದುವರೆಯಲಿದೆ ಮಳೆ.. ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆಯಾಗಿಲಿದೆ. ಉತ್ತರ ಒಳನಾಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆಯಾಗಲಿದ್ದು, ರಾಜ್ಯದ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ತುಮಕೂರು ಜಿಲ್ಲೆಗಳಿಗೆ ಅತೀ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಮುಂದಿನ 5 ದಿನಗಳ ಕಾಲ ರಾಜ್ಯದ ಕರಾವಳಿ ಮತ್ತು ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಂತ ಮಲೆನಾಡು ಜಿಲ್ಲೆಗಳಿಗೆ ಇಂದು ಗುಡುಗು ಮಿಂಚು ಮತ್ತು ಜೋರಾದ ಗಾಳಿಯೊಂದಿಗೆ ಹೆಚ್ಚುಮಳೆಯಾಗುವ ಸಾಧ್ಯತೆಯಿದೆ ಹಾಗಾಗಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಹವಾಮಾನ ಇಲಾಖೆ ಹೇಳಿದ್ದೇನು? ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಇಂದು ಮತ್ತು ನಾಳೆ ಗುಡುಗು ಮಿಂಚು ಮತ್ತು ಜೋರಾದ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡು ಜಿಲ್ಲೆಗಳಿಗೆ ಇಂದು ಮತ್ತು ನಾಳೆ ಗುಡುಗು ಮಿಂಚು ಮತ್ತು ಜೋರಾದ ಗಾಳಿಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ, ಇನ್ನುಳಿದ ದಿನಗಳಲ್ಲಿ ಮಳೆ ಕಡಿಮೆ ಇರುವ ಸಾಧ್ಯತೆಯಿದೆ. ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಅಸ್ತಿತ್ವದಲ್ಲಿರುವ ವಾಯುಭಾರ ಕುಸಿತದಿಂದಾಗಿ, ರಾಜ್ಯದ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಕೆಲವು ಭಾಗಗಳಲ್ಲಿಗುಡುಗು ಮಿಂಚು ಮತ್ತು ಜೋರಾದ ಗಾಳಿಯೊಂದಿಗೆ ವ್ಯಾಪಕವಾಗಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಇಂದು ಎಲ್ಲೆಲ್ಲಿ, ಎಷ್ಟು ಪ್ರಮಾಣ ಮಳೆ? ಬೆಂಗಳೂರು ಎಚ್ಎಎಲ್ 5.1MM ಬೆಂಗಳೂರು ನಗರ 6.8MM ಬೆಂಗಳೂರು ಕೆಐಎಎಲ್ 5.6MM ಬೆಂಗಳೂರು ನಗರ 6.5MM ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ 7.5MM ಹರದನಹಳ್ಳಿ (ಚಾಮರಾಜನಗರ)0.5MM ಮೂಡಿಗೆರೆ (ಚಿಕ್ಕಮಗಳೂರು) 2.0MM ಚಿಕ್ಕಬಳ್ಳಾಪುರ 5.5MM ಹಿರಿಯೂರು (ಚಿತ್ರದೂರ)8.5MM ಹನುಮನಹಟ್ಟಿ (ಹಾವೇರಿ) 42.5MM ಮಂಡ್ಯ ಕೆವಿಕೆ 0.5MM ದಕ್ಷಿಣ ಕನ್ನಡ (mng) 7.0MM ದಾವಣಗೆರೆ 2.0MM ಕಾರವಾರ 0.4 MM ಹೊನಾವರ್ 0.4MM ಬಜ್ಪೆ 64.2MM ಪಣಂಬೂರು 14.3MM ಆಗುಂಬೆ (ಶಿವಮೊಗ್ಗ) 0.5MM ಬೆಳಗಾವಿ ಎಪಿ 6.0MM ಗದಗ 0.4MM ಧಾರವಾಡ 0.4MM ಚಿತ್ರದುರ್ಗ 14.4MM ಹಾಸನ 362.0MM ಗದಗ 1.0MM ಗಂಗಾವತಿ(ಕೊಪ್ಪಳ) 3.0MM ಕವಡಿಮಟ್ಟಿ(ಯಾದಗಿರಿ) 22.5MM None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.