NEWS

Viral Story: 20 ಸಾವಿರ ಕಟ್ಟಿ ಲೋನ್​​ನಲ್ಲಿ ಮೊಪೆಡ್ ಖರೀದಿಸಿದ ಚಾಯ್​ವಾಲಾ! ಸಂಭ್ರಮಾಚರಣೆಗೆ 60 ಸಾವಿರ ಖರ್ಚು ಮಾಡಿದ ಭೂಪ!

ಸಾಂದರ್ಭಿಕ ಚಿತ್ರ ಈ ಪ್ರಪಂಚವೇ (world) ಹಾಗೇ, ಇಲ್ಲಿ ಹುಚ್ಚರ (crazy) ಸಂಖ್ಯೆ ಜಾಸ್ತಿ. ಹುಚ್ಚರು ಎಂದರೆ, ಮಾನಸಿಕ ರೋಗಿಗಳಲ್ಲ, ಶೋಕಿಗಾಗಿ ಬದುಕುವ ಹುಚ್ಚರು. ಹೌದು ಅಂತಹ ಒಬ್ಬ ಶೋಕಿಲಾಲನ (Shokilalala) ಬಗ್ಗೆ ಇಲ್ಲಿದೆ ಮಾಹಿತಿ. ಮಧ್ಯಪ್ರದೇಶದಲ್ಲಿ (Madhya Pradesh) ಚಹಾ ಮಾರುವವ (tea seller) ಕುಶ್ವಾಹಾ ಎನ್ನುವವನೊಬ್ಬ ಮೊಪೆಡ್ ಖರೀದಿಸಿದ, ಬಹುಶಃ ಅದು ಅವನ ಕನಸಿನ ಬೈಕು. ಆದಕ್ಕಾಗಿ ಅವನು ಸಾಲವನ್ನು ಮಾಡಿದೆ. ಅಂದರೆ, ಆ ಮೊಪೆಡ್ (moped) ಅವನಿಗೆ ಎಷ್ಟರಮಟ್ಟಿಗೆ ಇತ್ತು ಎಂಬುದನ್ನು ನೀವು ಊಹಿಸ ಬಹುದು. ಅದರ ಗೃಹಪ್ರವೇಶವನ್ನು (Homecoming) ಆಚರಿಸಲು ಮತ್ತು ಆದರ ಆಗಮನದ ಖುಷಿಗಾಗಿ ಆಯೋಜಿಸಿದ್ದ ಡಿಜೆ ಪಾರ್ಟಿಗಾಗಿ (DJ party) ಅವನು ಖರ್ಚು ಮಾಡಿದ್ದು, ಬರೋಬ್ಬರಿ 60,000 ರೂಪಾಯಿ. ಪಾರ್ಟಿಯ ಹಣವನ್ನು ಅವನೇನಾದರೂ ಮೊಪೆಡ್ಗಾಗಿ ಬಳಸಿದ್ದರೆ ಅವನಿಗೆ ಸಾಲದ ಅಗತ್ಯವಿಲ್ಲದೇ ಅದನ್ನು ಖರೀದಿ ಮಾಡಬಹುದಾಗಿತ್ತು. ಆದರೆ ಅವನ ಖುಷಿ ಕೇವಲ ಆಚರಣೆಗಳಿಗೆ ನಿಲ್ಲಲಿಲ್ಲ. ಕುಶ್ವಾಹಾ ಅವರು ಹೊಸದಾಗಿ ಖರೀದಿಸಿದ ಮೊಪೆಡ್ ಅನ್ನು ಗಾಳಿಯಲ್ಲಿ ಎತ್ತಲು ಜೆಸಿಬಿ ಯಂತ್ರವನ್ನು ಬಾಡಿಗೆಗೆ ತೆಗೆದುಕೊಳ್ಳುವವರೆಗೂ ಹೋಗಿದ್ದಾನೆ. ಆದರೆ ಅವರ ಕುಟುಂಬ, ಸ್ನೇಹಿತರು ಹಾಗೂ ದಾರಿಹೋಕರು ಕುತೂಹಲದಿಂದ ಅವನನ್ನು ಹುರಿದುಂಬಿಸಿದ್ದಾರೆ. ಆದರೆ ತಕ್ಷಣವೇ ಅವನ ಕುಟುಂಬದವರು ಅವನನ್ನು ತರಾಟೆಗೆ ತಗೆದುಕೊಂಡರು. ನಂತರ ಅವರು ಮನೆಗೆ ತಗೆದುಕೊಂಡು ಹೋಗಿದ್ದಾರೆ. ಆದರೆ, ನೀವು ಕುಶ್ವಾಹಾ ಅವರು ಶೋರೂಮ್‌ನಿಂದ ವಾಹನವನ್ನು ಮನೆಗೆ ಓಡಿಸಿದನೆಂದು ಭಾವಿಸಿದರೆ, ನೀವು ತಪ್ಪಾಗಿ ಭಾವಿಸುತ್ತೀರಿ. ಬದಲಿಗೆ ಅವರು ಮೊಪೆಡ್ನನ್ನು ಅಲಂಕರಿಸಿದ ಬಗ್ಗಿಯಲ್ಲಿ ಸಾಗಿಸಿದ್ಧಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಕುಶ್ವಾಹ ಮೊಪೆಡ್‌ಗೆ ಸಾಲ ಮಾಡಿ 20,000 ರೂಪಾಯಿಗಳನ್ನು ಡೌನ್ ಪೇಮಂಟ್ ಮಾಡಿದ್ದಾರೆ. ಹೌದು, ನೀವು ಸರಿಯಾಗಿ ಓದಿದ್ದೀರಿ! ಅವರು ತನ್ನ ಮೂರು ಬಾರಿ ಡೌನ್ ಪೇಮೆಂಟ್ ಮೊತ್ತವನ್ನು ಮೊಪೆಡ್ನ ಖರೀದಿಯ ಆಚರಣೆಗಳಿಗಾಗಿ ಖರ್ಚು ಮಾಡಿದ್ದಾರೆ. ಕುಶ್ವಾಹ ಅವರು, ತನ್ನ ಐದು ಜನರ ಕುಟುಂಬ ಮತ್ತು ಸ್ನೇಹಿತರೊಂದಿಗೆ ಡಿಜೆ ಸಂಗೀತಕ್ಕೆ ನೃತ್ಯ ಮಾಡಿದ್ದಾರೆ. ನಂತರ ಬಾರಾತ್ (ಈ ಬಾರಿ ವಧುವಿನ ಬದಲಿಗೆ ಬೈಕ್ ತರಲು). ಶೋರೂಂ ತಲುಪಿದಾಗ ಕುಶ್ವಾಹ ಅವರು ಮೊಪೆಡ್ಗೆ ಹಾರ ಹಾಕಿ ಜೆಸಿಬಿ ಬಳಸಿ ಆಕಾಶದಲ್ಲಿ ಎತ್ತರಕ್ಕೆ ಎತ್ತಿ ಸೆಲ್ಫಿ ತೆಗೆದುಕೊಂಡಿದ್ದಾರೆ. ಕುಶ್ವಾಹಾ ಅವರು “ನಾನು ಮೊಪೆಡ್ ತೆಗೆದುಕೊಂಡಿರುವುದರಿಂದ ನನ್ನ ಕುಟುಂಬವನ್ನು ಪೂರೈಸಲು ನನಗೆ ಸಂತೋಷವಾಗಿದೆ. ಪ್ರತಿ ಆಚರಣೆಯು ನನ್ನ ಮಕ್ಕಳಿಗೆ ಸಂತೋಷವನ್ನು ತರುವ ಮಾರ್ಗವಾಗಿದೆ”ಎಂದಿದ್ದಾರೆ. ಇನ್ನು ಕುಶ್ವಾಹಾ ಅವರು ಮೂರು ಮಕ್ಕಳನ್ನು ಹೊಂದಿದ್ದು - ಪ್ರಿಯಾಂಕಾ ಎಂಬ ಮಗಳು ಮತ್ತು ಇಬ್ಬರು ಗಂಡುಮಕ್ಕಳಾದ ರಾಮ್ ಮತ್ತು ಶ್ಯಾಮ್ ಇದ್ದಾರೆ. ಕುಶ್ವಾಹ ಮತ್ತು ಅವರ ಪ್ರೀತಿಪಾತ್ರರು ಮೊಪೆಡ್‌ಗೆ ನಡೆದ ಭವ್ಯವಾದ ಗೃಹಪ್ರವೇಶವನ್ನು ಆನಂದಿಸಿದ್ದಾರೆ. ಇದರಿಂದ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡಿದ್ದು, ಡಿಜೆ ಉಪಕರಣಗಳನ್ನು ವಶಪಡಿಸಿಕೊಳ್ಳುವುದರೊಂದಿಗೆ ಶಬ್ದ ಮಾಲಿನ್ಯಕ್ಕೆ ಕಾರಣವಾದ ಆಪರೇಟರ್ ಮತ್ತು ಕುಶ್ವಾಹಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆದಾಗ್ಯೂ, ಕುಶ್ವಾಹಾ ಅವರಂಥೆ ಹೊಸ ಖರೀದಿಗೆ ಪಾರ್ಟಿ ನೀಡಿದ್ದು ಇದೇ ಮೊದಲಲ್ಲ. ಶಿವಪುರಿಯ ದುರ್ಗಾದಾಸ್ ರಾಥೋಡ್ ಎಂಬುವವರು ಚೌರಾಹಾದಲ್ಲಿ ಬಂಡಿಯಲ್ಲಿ ಚಹಾ ಮಾರುತ್ತಾರೆ. ಇವರು ಮೂರು ವರ್ಷಗಳ ಹಿಂದೆ ತನ್ನ ಮಗಳಿಗಾಗಿ 12,500 ರೂಪಾಯಿ ಮೌಲ್ಯದ ಸ್ಮಾರ್ಟ್‌ಫೋನ್ ಖರೀದಿಸಿದ್ದಾರೆ. ಆದರೆ ಇದರ ಸಂಭ್ರಮಾಚರಣೆಗೆ ಅವರು ಅಂದು ಬರೋಬ್ಬರಿ 25,000 ರೂಪಾಯಿ ಖರ್ಚು ಮಾಡಿದ್ದ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.