NEWS

Bollywood Movie: ಇದು 24 ಗಂಟೆಗಳಲ್ಲೇ ಅತಿ ಹೆಚ್ಚು ವೀವ್ಸ್ ಪಡೆದ ಹಿಂದಿ ಸಿನಿಮಾ ಟ್ರೇಲರ್! ಜವಾನ್​, ಅನಿಮಲ್​, ಪಠಾಣ್ ಅಲ್ಲವೇ ಅಲ್ಲ!

ಈಗೆಲ್ಲಾ ಚಲನಚಿತ್ರ (Movie) ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುವ ಮುಂಚೆಯೇ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಇನ್ನಿತರೆ ಮಾಧ್ಯಮಗಳಲ್ಲಿ ಚಿತ್ರದ ಟ್ರೈಲರ್, ಟೀಸರ್ ಮತ್ತು ಫರ್ಸ್ಟ್ ಲುಕ್ ಎಲ್ಲವೂ ಭಾರಿ ಸಂಚಲನವನ್ನೆ ಸೃಷ್ಟಿ ಮಾಡಿರುತ್ತವೆ ಅಂತ ಹೇಳಬಹುದು. ಹೌದು.. ಅದರಲ್ಲೂ ಪ್ಯಾನ್ ಇಂಡಿಯಾ (Pan India Movie) ಚಲನಚಿತ್ರಗಳಂತೂ ಥಿಯೇಟರ್‌ಗಳಲ್ಲಿ ಭಾರಿ ನಿರೀಕ್ಷೆಯ ಮಟ್ಟದಲ್ಲಿ ಬಿಡುಗಡೆಯಾಗಿ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಮೊತ್ತದ ಹಣವನ್ನು ಗಳಿಸುತ್ತವೆ ಅಂತ ಹೇಳಬಹುದು. ಅರೇ ಈಗೇಕೆ ಚಿತ್ರದ ಟ್ರೈಲರ್, ಟೀಸರ್ ಮತ್ತು ಚಲನಚಿತ್ರದ ಬಗ್ಗೆ ಮಾತಾಡುತ್ತಿದ್ದೇವೆ ಅಂತ ನಿಮಗೆ ಅನ್ನಿಸಬಹುದು. ಇಲ್ಲೊಂದು ಚಿತ್ರದ ಟ್ರೈಲರ್ ಭಾರಿ ಸದ್ದು ಮಾಡಿದ್ದು, ಈ ಟ್ರೈಲರ್ ಇದುವರೆಗೆ ಹಿಂದಿ ಚಲನಚಿತ್ರೋದ್ಯಮದಲ್ಲಿ ತೆರೆ ಕಂಡ ಚಿತ್ರದ ಟ್ರೈಲರ್ ಅನ್ನು ವೀಕ್ಷಿಸಿದಕ್ಕಿಂತ ಹೆಚ್ಚು ಬಾರಿ ವೀಕ್ಷಿಸಲಾಗಿದೆಯಂತೆ. ಈ ಚಿತ್ರದ ಟ್ರೈಲರ್ ತುಂಬಾನೇ ಹವಾ ಸೃಷ್ಟಿಸಿದೆಯಂತೆ ನೋಡಿ.. ಹಿಂದಿ ಚಿತ್ರೋದ್ಯಮದ ಜನಪ್ರಿಯ ನಿರ್ದೇಶಕರಲ್ಲಿ ಒಬ್ಬರಾದ ರೋಹಿತ್ ಶೆಟ್ಟಿಯವರ ಆಕ್ಷನ್-ಥ್ರಿಲ್ಲರ್ ಸಿಂಗಮ್ ಎಗೇನ್ (Singam Again) ಚಿತ್ರ ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಇದೇ ದೀಪಾವಳಿಗೆ ತೆರೆಗೆ ಬರಲಿರುವ ಈ ಸಿನಿಮಾ ಈಗಾಗಲೇ ಅಭಿಮಾನಿಗಳಲ್ಲಿ ಭಾರೀ ಕುತೂಹಲವನ್ನು ಮೂಡಿಸಿದೆ ಅಂತ ಹೇಳಬಹುದು. ಆದಾಗ್ಯೂ, ಸಿಂಗಮ್ ಎಗೇನ್ ಟ್ರೈಲರ್ “24 ಗಂಟೆಗಳಲ್ಲಿ ಅತಿ ಹೆಚ್ಚು ವೀಕ್ಷಿಸಿದ ಹಿಂದಿ ಚಲನಚಿತ್ರದ ಟ್ರೈಲರ್” ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ನಿಮಗೆ ತಿಳಿದಿದೆಯೇ? ಈ ಟ್ರೈಲರ್ ಅಕ್ಟೋಬರ್ 7 ರಂದು ಬಿಡುಗಡೆಯಾದಾಗಿನಿಂದ ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ 138 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಸಿಂಗಮ್ ಎಗೇನ್ ಚಿತ್ರದ ಟ್ರೈಲರ್ ಸುದ್ದಿಯನ್ನು ಹಂಚಿಕೊಂಡ ನಟ ಅಜಯ್ ಈ ಸುದ್ದಿಯನ್ನು ಖುದ್ದು ಚಿತ್ರದ ನಟ ಅಜಯ್ ದೇವಗನ್ ಅವರೇ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ ಖಾತೆಯ ಪುಟದಲ್ಲಿ ನಟ ಅಜಯ್ ಅವರು ಸಿಂಗಮ್ ಎಗೇನ್ ಚಿತ್ರದ ಟ್ರೈಲರ್ ಇತಿಹಾಸವನ್ನು ಸೃಷ್ಟಿಸಿದೆ ಎಂದು ಬಹಿರಂಗಪಡಿಸುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಚಿತ್ರದ ಟ್ರೈಲರ್ ಕೇವಲ 24 ಗಂಟೆಗಳಲ್ಲಿ ಹೆಚ್ಚು ವೀಕ್ಷಿಸಿದ ಹಿಂದಿ ಚಲನಚಿತ್ರ ಟ್ರೈಲರ್ ಆಗಿ ಹೊರ ಹೊಮ್ಮಿದೆ. ಈ ಪೋಸ್ಟ್ ಅನ್ನು ಹಂಚಿಕೊಳ್ಳುತ್ತಾ, ಅಜಯ್ ಅವರು “ಹೇಳಿದ್ವಲ್ಲ, ಇತಿಹಾಸವನ್ನು ಮರುಕಳಿಸುವವರಿದ್ದೇವೆ ಅಂತ! #ಸಿಂಗಮ್ ಎಗೇನ್ ಮತ್ತೆ ಇತಿಹಾಸವನ್ನು ಸೃಷ್ಟಿಸಿದೆ ಅಂತ ಬರೆದು ಕೊಂಡಿದ್ದಾರೆ. ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಈ ಟ್ರೈಲರ್, ಆಕ್ಷನ್, ನಾಟಕ, ಭಾವನೆಗಳು ಮತ್ತು ಎಲ್ಲದರ ನಡುವೆ ಭರವಸೆ ನೀಡುತ್ತದೆ. ಈ ಚಿತ್ರದಲ್ಲಿ ಅಜಯ್ ದೇವಗನ್, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ಟೈಗರ್ ಶ್ರಾಫ್ ಮತ್ತು ಅಕ್ಷಯ್ ಕುಮಾರ್ ಪೊಲೀಸ್ ಪಾತ್ರದಲ್ಲಿದ್ದಾರೆ. ಜೊತೆಗೆ, ಕರೀನಾ ಕಪೂರ್ ಕೂಡ ಚಿತ್ರದಲ್ಲಿ ನಟಿಸಿದ್ದಾರೆ ಮತ್ತು ಅರ್ಜುನ್ ಕಪೂರ್ ಪ್ರತಿನಾಯಕನಾಗಿ ನಟಿಸಿದ್ದಾರೆ. ಈ ಚಿತ್ರ ರಾಮಾಯಣದಿಂದ ಭಗವಾನ್ ರಾಮ ಮತ್ತು ಹನುಮಾನ್ ಉಲ್ಲೇಖಗಳನ್ನು ಒಳಗೊಂಡಿದೆ, ಭಾರತೀಯ ಪುರಾಣಗಳ ಸ್ಪರ್ಶದೊಂದಿಗೆ ಆಕ್ಷನ್-ಪ್ಯಾಕ್ಡ್ ಕಥೆಯನ್ನು ಈ ಚಿತ್ರವು ಹೊಂದಿದೆ. 2014 ರಲ್ಲಿ ಬಿಡುಗಡೆಯಾದ ಸಿಂಗಮ್ ರಿಟರ್ನ್ಸ್ ಚಿತ್ರದ ಮುಂದಿನ ಭಾಗವು ಬ್ಲಾಕ್ಬಸ್ಟರ್ ಆಗಿ ಹೊರಹೊಮ್ಮಿತು. ಏತನ್ಮಧ್ಯೆ, ನವೆಂಬರ್ 1, 2024 ರಂದು ಥಿಯೇಟರ್‌ಗಳಿಗೆ ಬರಲಿರುವ ಸಿಂಗಮ್ ಎಗೇನ್, ಕಾರ್ತಿಕ್ ಆರ್ಯನ್ ಅವರ ಭೂಲ್ ಭುಲೈಯಾ 3 ರೊಂದಿಗೆ ಘರ್ಷಣೆಗೆ ಸಿದ್ಧವಾಗಿದೆ. ಇದನ್ನು ಹೊರತುಪಡಿಸಿ ನಟ ಅಜಯ್ ದೇವಗನ್ ರೈಡ್ 2, ದೇ ದೇ ಪ್ಯಾರ್ ದೇ 2 ಮತ್ತು ಸನ್ ಆಫ್ ಸರ್ದಾರ್ 2 ಚಿತ್ರಗಳನ್ನು ಹೊಂದಿದ್ದಾರೆ. ಈ ನಟ ಕೊನೆಯದಾಗಿ ಟಬು ಜೊತೆಗೆ ಔರೋ ಮೇ ಕಹಾ ದಮ್ ಥಾ, ಶೈತಾನ್, ಆರ್ಟಿಕಲ್ 370 ಮತ್ತು ಜೀವನಚರಿತ್ರೆಯ ಆಧಾರಿತವಾದ ಚಲನಚಿತ್ರ ಮೈದಾನದಲ್ಲಿ ಕಾಣಿಸಿಕೊಂಡಿದ್ದರು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.