NEWS

Actor Death: ಡ್ಯಾನ್ಸ್ ಮಾಡ್ತಿದ್ದ ವೇಳೆ ಕುಸಿದು ಬಿದ್ದ ಹಾಸ್ಯ ನಟ! 'ಸಿಂಗಾಪುರ ಶಿವಾಜಿ' ನಿಧನ

ಸಿಂಗಾಪುರ ಶಿವಾಜಿ (Singapore Shivaji) ಎಂದೇ ಖ್ಯಾತರಾಗಿದ್ದ ಕಾಮಿಡಿ ನಟ ಅಶೋಕನ್ ಮುನಿಯಾಂಡಿ ಸಮಾರಂಭವೊಂದರಲ್ಲಿ ವೇದಿಕೆ ಮೇಲೆ ಕಾರ್ಯಕ್ರಮ ನೀಡುತ್ತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. 60 ವರ್ಷದ ಅಶೋಕನ್ ಮುನಿಯಾಂಡಿ ಅವರು ತಮಿಳು ಹಾಸ್ಯ ನಟ ಹಾಗೂ ಖ್ಯಾತ ಮಿಮಿಕ್ರಿ ಕಲಾವಿದರಾಗಿ ಹೆಸರು ಮಾಡಿದ್ರು. ವೇದಿಕೆ ಮೇಲೆ ನಟ ಕುಸಿದು ಬಿದ್ದು ಸಾವನ್ನಪ್ಪಿದ ಸುದ್ದಿ ವಿಡಿಯೋ ಇದೀಗ ವೈರಲ್ ಆಗ್ತಿದೆ. ಡ್ಯಾನ್ಸ್ ಮಾಡ್ತಿದ್ದ ಅಶೋಕನ್ ಮುನಿಯಾಂಡಿ ಶನಿವಾರ ಸಿಂಗಾಪುರದಲ್ಲಿ ಅಶೋಕನ್ ಮುನಿಯಾಂಡಿ ಅವರು ಕಾರ್ಯಕ್ರಮ ನಡೆಸಿಕೊಡ್ತಿದ್ರು. ಬರ್ತ್ ಡೇ ಪಾರ್ಟಿಯಲ್ಲಿ ಅಶೋಕನ್, ಶಿವಾಜಿ ಗಣೇಶ್​ ಅವರಂತೆ ವೇಷ ತೊಟ್ಟು ಮಿಮಿಕ್ರಿ ಮಾಡ್ತಾ ಪ್ರದರ್ಶನ ನೀಡುತ್ತಿದ್ರು. ಮಹಿಳೆಯ ಜೊತೆ ಡ್ಯಾನ್ಸ್ ಮಾಡಿ ಜನರನ್ನು ರಂಜಿಸಿದ್ರು. ಕುಸಿದು ಬಿದ್ದ ಹಾಸ್ಯ ನಟ! ಹಾಡಿಗೆ ಚಪ್ಪಾಳೆ ತಟ್ಟುತ್ತಾ ಹೆಜ್ಜೆ ಹಾಕುತ್ತಿದ್ದಾಗ ಹಾಡಿನ ಕೊನೆಯಲ್ಲೇ ಹಠಾತ್ ಕುಸಿದು ಬಿದ್ದಿದ್ದಾರೆ. ಕುಸಿದು ಬಿದ್ದ ನಟನನ್ನು ಕಂಡು ಜನ ಬೆಚ್ಚಿಬಿದ್ದಿದ್ದಾರೆ. ಈ ವೇಳೆ ಪರೀಕ್ಷಿಸಿದಾಗ ಹಾಸ್ಯ ನಟ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. 800ಕ್ಕೂ ಅಧಿಕ ಶೋ ನೀಡಿದ ನಟ ಅಶೋಕ್ ಮುನಿಯಾಂಡಿ ಅಲಿಯಾಸ್ ಸಿಂಗಾಪುರ ಶಿವಾಜಿ ಅವರು ಎಂ.ಜಿ.ಆರ್ ಅವರಂತೆ ಮಿಮಿಕ್ರಿ ಮಾಡುತ್ತಾ ಜನಪ್ರಿಯರಾಗಿದ್ರು. ಈವರೆಗೂ 800ಕ್ಕೂ ಅಧಿಕ ಶೋಗಳನ್ನು ನೀಡಿದ್ದಾರೆ. ಸಿಂಗಾಪುರ್ ಶಿವಾಜಿ ಅವರು 30 ನಿಮಿಷಗಳ ಶೋ ನೀಡಲು ಬರೊಬ್ಬರಿ 38,336 ರೂಪಾಯಿ ಚಾರ್ಜ್ ಮಾಡುತ್ತಿದ್ದರಂತೆ. 80ಕ್ಕೂ ಹೆಚ್ಚು ಹಾಡುಗಳನ್ನು ಕಂಠ ಪಾಠ ಮಾಡಿದ್ದ ನಟ! ಶಿವಾಜಿ ಗಣೇಶನ್ ಸಿನಿಮಾಗೆ ಸಂಬಂಧಿಸಿದ ಸುಮಾರು 100ಕ್ಕೂ ಅಧಿಕ ಕಾಸ್ಟ್ಯೂಮ್ ಗಳನ್ನು ಇವರು ಸಂಗ್ರಹಿಸಿದ್ರಂತೆ. ಬಟ್ಟೆಗಳನ್ನು ಇಡಲು 5 ಬೆಡ್ ರೂಂನ ಪ್ರತ್ಯೇಕ ಫ್ಲ್ಯಾಟ್ ಹೊಂದಿದ್ರು ಎನ್ನಲಾಗಿದೆ. ಅಲ್ಲದೆ ಶಿವಾಜಿ ಗಣೇಶನ್ ಅಭಿನಯದ 80ಕ್ಕೂ ಹೆಚ್ಚು ಹಾಡುಗಳನ್ನು ಯಾವುದೇ ಚೀಟಿ ಸಹಾಯವಿಲ್ಲದೇ ಅಶೋಕನ್ ಹಾಡುತ್ತಿದ್ರಂತೆ. ಇದನ್ನೂ ಓದಿ: Bigg Boss Kannada: ಕ್ಯಾಮೆರಾನೇ ಒಡೆದು ಹಾಕಿದ್ರಾ ಜಗದೀಶ್​, ರಂಜಿತ್? ಇಬ್ಬರನ್ನೂ ಬಿಗ್​ ಬಾಸ್​ ಹೊರದಬ್ಬಿದ್ದು ಇದಕ್ಕೇನಾ? ಅಶೋಕ್ ಮುನಿಯಾಂಡಿ ಅವರು ಮಲೇಷ್ಯಾದಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ್ದರು ಎನ್ನಲಾಗಿದೆ. ನಟನ ಆಕಸ್ಮಿಕ ನಿಧನಕ್ಕೆ ಕಲಾವಿದರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.