NEWS

Cauvery River: ಕಾವೇರಿ ತೀರ್ಥೋದ್ಭವ; ಇಳಿದು ಬಾ ತಾಯೇ, ಇಳಿದು ಬಾ! ಜೀವನದಿ ಕಾವೇರಿ ಮೈದುಂಬೋ ವಿಸ್ಮಯ ದೃಶ್ಯ!

ಕಾವೇರಿ ತೀರ್ಥೋದ್ಭವ ಮಡಿಕೇರಿ: ನಾಡಿನ ಜೀವನಾಡಿ ಕಾವೇರಿಯ (Cauvery River) ಉಗಮಸ್ಥಾನ ತಲಕಾವೇರಿಯಲ್ಲಿ ತೀರ್ಥೋದ್ಭವ (Talakaveri) ನಡೆದಿದೆ. ಬೆಳಗ್ಗೆ 7:40ರ ತುಲಾ ಲಗ್ನ ಸುಮುಹೂರ್ತದಲ್ಲಿ ತೀರ್ಥೋದ್ಭವವಾಗಿದೆ. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳು ತೀರ್ತೋದ್ಭವದ ಕ್ಷಣವನ್ನು ಕಣ್ತುಂಬಿಕೊಂಡಿದ್ದಾರೆ. 9 ಜನರ ಅರ್ಚಕರ ತಂಡದಿಂದ ತಲಕಾವೇರಿಯಲ್ಲಿ ಬೆಳಗ್ಗೆಯಿಂದಲೂ ಕೂಡಾ ವಿಶೇಷ ಪೂಜಾ ಕೈಂಕರ್ಯ ನಡೆದವು. ತೀರ್ಥೋದ್ಭವದ ವೇಳೆ ಭಕ್ತಾದಿಗಳ ಜಯಘೋಷಗಳು ಮುಗಿಲು ಮುಟ್ಟಿತ್ತು. ಇಂದು ಬೆಳಗ್ಗೆ 7:40ಕ್ಕೆ ಕರುನಾಡ ಜೀವನದಿ ಕಾವೇರಿಯ ಪವಿತ್ರ ತೀರ್ಥೋದ್ಭವ ಆಗಿದ್ದು, ಸಹಸ್ರಾರು ಭಕ್ತರು ಪುಣ್ಯ ಕ್ಷಣವನ್ನು ಕಣ್ತುಂಬಿಕೊಂಡಿದ್ದಾರೆ. ಕೊಡಗು ಜಿಲ್ಲೆಯ ಇತಿಹಾಸ ಪ್ರಸಿದ್ಧ ತಲಕಾವೇರಿಯ ಕಾವೇರಿ ಜಾತ್ರೆ ಸಂಭ್ರಮ ಮನೆಮಾಡಿದೆ. ಜೀವನದಿ ಕಾವೇರಿ ಜಲ ರೂಪಿಣಿಯಾಗಿ ದರ್ಶನ ನೀಡಿದ್ದು, ದೇಶದ ಮೂಲೆಮೂಲೆಯಿಂದ ಭಕ್ತರು ಆಗಮಿಸಿ ವರ್ಷಕ್ಕೊಮ್ಮೆ ನಡೆಯುವ ವಿಸ್ಮಯ ಕಣ್ತುಂಬಿಕೊಂಡಿದ್ದಾರೆ. ಇದಕ್ಕೂ ಮುನ್ನ ಅರ್ಚಕರು ಪೂಜಾ ಕೈಂಕರ್ಯಗಳನ್ನು ನಡೆಸಿ ಕಾವೇರಿಯನ್ನು ಸ್ವಾಗತ ಮಾಡಿದ್ದಾರೆ. ತೀರ್ಥೋದ್ಭವಕ್ಕೆ ಬರುವ ಭಕ್ತರಿಗೆ ಯಾವುದೇ ಸಮಸ್ಯೆ ಆಗದಂತೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ದೇವಸ್ಥಾನ ಆವರಣದಲ್ಲಿ ಜನರ ನಿಯಂತ್ರಣಕ್ಕೆ ಹೆಚ್ಚುವರಿ ಬ್ಯಾರಿಕೇಡ್​​ ಅಳವಡಿಸಲಾಗಿತ್ತು. ಭಾಗಮಂಡಲ ಮತ್ತು ತಲಾಕಾವೇರಿಯಲ್ಲಿ 20ಕ್ಕೂ ಹೆಚ್ಚು ಸಿಸಿ ಕ್ಯಾಮರಾ ಹಾಗೂ ತಿರ್ಥೋದ್ಭವ ವೀಕ್ಷಣೆಗೆ ಎಲ್‌ಸಿಡಿಯನ್ನೂ ಆಳವಡಿಸಲಾಗಿತ್ತು. ಸಣ್ಣ ಕುಂಡಿಕೆಯಲ್ಲಿ ಹುಟ್ಟಿ ಹರಿಯುವ ಕಾವೇರಿ ಮಾತೆಯನ್ನ ದಕ್ಷಿಣ ಭಾರತದ ಗಂಗೆ ಅಂತಾನೇ ಪೂಜೆ ಮಾಡ್ತಾರೆ. ಕಾವೇರಿ ತೀರ್ಥೋದ್ಭವಕ್ಕೆ ಸಾಕಷ್ಟು ಐತಿಹಾಸಿಕ ಮತ್ತು ಪೌರಾಣಿಕ ಹಿನ್ನೆಲೆಗಳೂ ಇವೆ. (ವರದಿ: ಪ್ರೇಮ್ ಕುಮಾರ್, ನ್ಯೂಸ್ 18 ಕನ್ನಡ, ಕೊಡಗು) ಇದನ್ನೂ ಓದಿ: Currency note: ಕರೆನ್ಸಿ ನೋಟಿನ ಮೇಲೆ ಬರೆದಿದ್ದಾರೆ ಅಂತ ಯಾರು ತೆಗೆದುಕೊಳ್ಳುತ್ತಿಲ್ವಾ? ಇಲ್ಲಿದೆ ನಿಮಗೆ ಗುಡ್​​ನ್ಯೂಸ್​! ಇನ್ನು, ಬೆಂಗಳೂರಲ್ಲಿ 3ನೇ ದಿನವೂ ಭಾರೀ ಮಳೆಯಾಗಿದೆ. ರಾತ್ರಿ ಕೂಡಾ ಬಹುತೇಕ ಕಡೆ ಮಳೆ ಸುರಿದಿದೆ. ಇಂದು ಭಾರೀ ಮಳೆ ಬರೋ ಮುನ್ಸೂಚನೆ ನೀಡಲಾಗಿದೆ. ಇನ್ನೊಂದ್ಕಡೆ ತಗ್ಗು ಪ್ರದೇಶಗಳಲ್ಲಿ ನಿಂತ ನೀರು ತೆರವಿಗೆ ಬಿಬಿಎಂಪಿ ಹರಸಾಹಸ ಮಾಡ್ತಿದೆ. ಅಕ್ಟೋಬರ್ ಮಳೆಗೆ ಇಡೀ ಬೆಂಗಳೂರು ಜನ ಹೈರಾಣಾಗಿದ್ದಾರೆ. ಕಾರವಾರದಲ್ಲಿ ಸಿಡಿಲು ಗುಡುಗು ಸಹಿತ ಭಾರೀ ಮಳೆ ಆಗಿದೆ. ಬೈತ್ಕೋಲ್ ಭಾಗದಲ್ಲಿ ಮೋಡದ ನಡುವೆ ಸಿಡಿಲು ಮಿಂಚಿನ ದೃಶ್ಯ ನ್ಯೂಸ್18 ಕ್ಯಾಮರಾದಲ್ಲಿ ಸೆರೆಯಾಗಿದೆ. ಸಿಡಿಲು ಹೊಡೆಯುವ 6 ಸೆಕೆಂಡ್‌ಗಳ ಕಾಲ ಅದ್ಭುತ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಇತ್ತ, ಬಾಗಲಕೋಟೆ ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರೆದಿದ್ದು ಜನ-ಜೀವನ ಅಸ್ತವ್ಯಸ್ತವಾಗಿದೆ. ಮಳೆ ನೀರು ರಸ್ತೆ ತುಂಬೆಲ್ಲಾ ಹರಿದಿದ್ದು ಸವಾರರು ಪರದಾಡಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ಕಳೆದ 4 ದಿನದಿಂದ ನಿರಂತರ ಮಳೆಯಾಗ್ತಿದ್ದು, ಕೋಲಾರ ಮಲೆನಾಡ ಸೊಬಗಿನಂತೆ ಕಂಗೊಳಿಸುತ್ತಿದೆ. ಮಳೆ, ಗಾಳಿಯಿಂದ ಜಿಲ್ಲೆಯಲ್ಲಿ ಕೂಲ್ ಕೂಲ್ ವಾತಾವರಣ ನಿರ್ಮಾಣಗೊಂಡಿದೆ. ಬೆಟ್ಟ ಗುಡ್ಡಗಳ ತುದಿಯಲ್ಲಿ ಮೋಡಗಳ ಹಾದು ಹೋಗುತ್ತಿದ್ದು, ಆಕಾಶವೇ ಬೆಟ್ಟ ಗುಡ್ಡಗಳಲ್ಲಿ ಸೇರಿಕೊಂಡಂತ ದೃಶ್ಯಗಳು ಕಾಣಸಿಗುತ್ತಿವೆ. ಕೋಲಾರದ ವಕ್ಕಲೇರಿ ಗ್ರಾಮದ ಸುತ್ತಮುತ್ತಲ ಬೆಟ್ಟ ಗುಡ್ಡಗಳಲ್ಲಿ ಹಸಿರ ವಾತಾವರಣ ಕಂಗೊಳಿಸುತ್ತಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.