NEWS

Ranjani Raghavan: 'ಹುಚ್ಚು ಕೋಡಿ ಮನಸು' ಅಂತ ಹಾಡ್ತಿದ್ದಾರೆ ರಂಜನಿ ರಾಘವನ್; ನಿಮ್ಮಷ್ಟೇ ಸುಂದರ ನಿಮ್ಮ ಧ್ವನಿ ಎಂದ ಫ್ಯಾನ್ಸ್!

ರಂಜನಿ ರಾಘವನ್ 'ಹುಚ್ಚು ಕೋಡಿ ಮನಸು' ಗಾನ; ನಿಮ್ಮಷ್ಟೇ ಸುಂದರ ನಿಮ್ಮ ಧ್ವನಿ ಎಂದ ಫ್ಯಾನ್ಸ್! ಕನ್ನಡತಿ ಸೀರಿಯಲ್ ಖ್ಯಾತಿಯ ನಟಿ ರಂಜನಿ ರಾಘವನ್ (Ranjani Raghavan) ಮಾಡ್ರನ್ ಡ್ರೆಸ್ ತೊಟ್ಟು ಮಿಂಚುತ್ತಿದ್ದಾರೆ. ಸದಾ ಸೀರೆಯಲ್ಲಿ ನೋಡಿದವ್ರಿಗೆ ರಂಜನಿ ರಾಘವನ್ (Ranjani Raghavan) ತಮ್ಮ ಮಾಡ್ರನ್ ಬ್ಯೂಟಿಯನ್ನೂ ತೋರಿದ್ದಾರೆ. ಈ ಮೂಲಕ ನಿಮ್ಮಷ್ಟೆ ನಿಮ್ಮ ಧ್ವನಿ ಕೂಡ ಸುಂದರ ಅಂತಲೂ ಹೇಳುವಂತೆ ಮಾಡಿದ್ದಾರೆ. ಕಾರಣ, ರಂಜನಿ ರಾಘವನ್ ಈಗೊಂದು ಹಾಡು ಹಾಡಿದ್ದಾರೆ. ಎಚ್.ಎಸ್. ವೆಂಕಟೇಶ್‌ ಮೂರ್ತಿ (H. S. Venkatesh Murthy) ಅವರು ಬರೆದ ಹುಚ್ಚು ಕೋಡಿ ಮನಸ (Hucchu Kodi Manasu) ಹಾಡನ್ನ ಮನದುಂಬಿ ಹಾಡಿದ್ದಾರೆ. ಈ ಹಾಡಿನ ವಿಡಿಯೋ ನೋಡಿದವ್ರು ಮೆಚ್ಚುಗೆ ಮಾತುಗಳನ್ನೆ ಆಡಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ. ಹುಚ್ಚು ಕೋಡಿ ಮನಸು ಗಾನ ನಟಿ ರಂಜನಿ ರಾಘವನ್ ಬಹುಮುಖ ಪ್ರತಿಭಾವಂತೆ ಆಗಿದ್ದಾರೆ. ಸಾಹಿತ್ಯದ ಬಗ್ಗೆ ಹೆಚ್ಚಿನ ಆಸಕ್ತಿ ಇದೆ. ಸಣ್ಣ ಕಥೆಗಳನ್ನ ಕೂಡ ಬರೆದಿದ್ದಾರೆ. ಒಳ್ಳೆ ಹಾಡುಗಾರ್ತಿ ಅನ್ನೋದನ್ನೂ ಆಗಾಗ ತೋರಿಸಿಕೊಡ್ತಾನೇ ಇರ್ತಾರೆ. ಆ ಸಾಲಿಗೆ ಇದೀಗ ಹುಚ್ಚು ಕೋಡಿ ಮನಸು ಹಾಡಿನ ರೀಲ್ಸ್ ವಿಡಿಯೋ ಗಮನ ಸೆಳೆಯುತ್ತಿದೆ. ಹುಚ್ಚು ಕೋಡಿ ಮನಸು ಹಾಡನ್ನ ಎಚ್‌.ಎಸ್.ವೆಂಕಟೇಶ್ ಮೂರ್ತಿ ಬರೆದಿದ್ದಾರೆ. ಇದನ್ನ ತಮ್ಮದೇ ವಿಶೇಷ ಕಂಠಸಿರಿಯಲ್ಲಿ ರಜನಿ ರಾಘವನ್ನ ಹಾಡಿದ್ದಾರೆ. ಹೀಗೆ ಹಾಡಿರೋ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲೂ ಶೇರ್ ಆಗಿದೆ. ನಿಮ್ಮ ನಗುವಿನಷ್ಟೇ ಸುಂದರ ನಿಮ್ಮ ಧ್ವನಿ ರಂಜನಿ ರಾಘವನ್ ಹಾಡುಗಾರಿಕೆಯನ್ನ ಅನೇಕರು ಮೆಚ್ಚಿಕೊಂಡಿದ್ದಾರೆ. ಹುಚ್ಚು ಕೋಡಿ ಮನಸು ಹಾಡನ್ನ ಬಹುವಾಗಿಯೇ ಮೆಚ್ಚಿಕೊಂಡಿದ್ದಾರೆ. ಅದೆಷ್ಟು ಅಂದ್ರೆ, ಕಾಮೆಂಟ್ ಬಾಕ್ಸ್‌ನಲ್ಲಿ ಪ್ರಶಂಸೆಯ ಸುರಿಮಳೆಯನ್ನಗೈದಿದ್ದಾರೆ. ಇದರಲ್ಲಿ ಹಲವು ವಿಶೇಷ ಸಾಲುಗಳೇ ಇವೆ. ಇದನ್ನೂ ಓದಿ: Ugramm Manju: ಉಗ್ರಂ ಮಂಜು-ಧರ್ಮ ಕೀರ್ತಿರಾಜ್ ಟೆನೆಂಟ್ ಸಿನಿಮಾ ರೆಡಿ; ಈ ಚಿತ್ರದಲ್ಲಿ ಇವರದ್ದೇ ಅಬ್ಬರ! ಹೌದು, ರಂಜನಿ ರಾಘವನ್ ಅವರ ಧ್ವನಿಯನ್ನ ಕೇಳಿದ ಅಭಿಮಾನಿಗಳು ಬಹುವಾಗಿಯೇ ಮೆಚ್ಚಿಕೊಂಡಿದ್ದಾರೆ. ನಿಮ್ಮ ನಗುವಿನಷ್ಟೇ ನಿಮ್ಮ ಧ್ವನಿ ಸುಂದರವಾಗಿಯೇ ಇದೆ ಅಂತಲೂ ಬಣ್ಣಿಸಿದ್ದಾರೆ. ಇದೇ ರೀತಿ ನಮ್ಮ ಕನ್ನಡತಿಯ ಕಂಠ ಕೇಳಲು ಬಲು ಇಂಪು ಅಂತಲೇ ಮತ್ಯಾರೋ ಬರೆದಿದ್ದಾರೆ. ರಂಜನಿ ರಾಘವನ್ ಮಾಡ್ರನ್ ಲುಕ್ ರಂಜನಿ ರಾಘವನ್ ಸದಾ ಸೀರೆಯಲ್ಲಿಯೇ ಇರ್ತಾ ಇದ್ದರು. ಹೆಚ್ಚಾಗಿ ಸೀರೆಯಲ್ಲಿಯೇ ಕಾಣಿಸಿಕೊಂಡಿದ್ದರು. ಆದರೆ, ಇದೀಗ ಮಾಡ್ರನ್ ಲುಕ್ ಅಲ್ಲಿಯೇ ಫೋಟೋ ಶೂಟ್ ಕೂಡ ಮಾಡಿಸಿದ್ದಾರೆ. ಅದೇ ಲುಕ್ ಅಲ್ಲಿಯೇ ಈ ಒಂದು ರೀಲ್ಸ್ ವಿಡಿಯೋ ಕೂಡ ಮಾಡಿದ್ದಾರೆ. ಹಾಗೇನೆ ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಈ ಒಂದಷ್ಟು ಫೋಟೋಸ್ ಹಾಗೂ ರೀಲ್ಸ್ ವಿಡಿಯೋವನ್ನ ಹಂಚಿಕೊಂಡಿದ್ದಾರೆ. ಒಟ್ಟಾರೆ, ರಂಜನಿ ರಾಘವನ್ ತಮ್ಮ ಅಭಿಮಾನಿಗಳ ಜೊತೆಗೆ ಒಂದು ವಿಶೇಷ ರೀಲ್ಸ್ ಶೇರ್ ಮಾಡಿದ್ದಾರೆ. ಈ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ರಂಜನಿ ರಾಘವನ್ ಸಿನಿಮಾಗಳು ರಂಜನಿ ರಾಘವನ್ ಸಿನಿಮಾಗಳನ್ನ ಮಾಡಿದ್ದಾರೆ. ರಾಜಹಂಸ, ಟಕ್ಕರ್, ನೈಟ್ ಕರ್ಫ್ಯೂ ಚಿತ್ರ ಮಾಡಿದ್ದಾರೆ. ಬರಗೂರು ಅವರ ಸ್ವಪ್ನ ಮಂಟಪ ಚಿತ್ರದಲ್ಲೂ ನಟಿಸಿದ್ದಾರೆ. ಸತ್ಯಂ ಹೆಸರಿನ ಚಿತ್ರದ ಮೂಲಕ ಟಾಲಿವುಡ್‌ಗೂ ಕಾಲಿಟ್ಟಿದ್ದಾರೆ. ಇದು ಕನ್ನಡದಲ್ಲೂ ರಿಲೀಸ್ ಆಗುತ್ತಿದೆ ಅಂತಲೂ ಹೇಳಬಹುದು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.