NEWS

Gold Cleaning Tips: ಕಪ್ಪಾಗಿರೋ ಚಿನ್ನವನ್ನ ಫಳ ಫಳ ಅಂತ ಹೊಳೆಯುವಂತೆ ಮಾಡ್ಬೇಕಾ? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ

ಸಾಂದರ್ಭಿಕ ಚಿತ್ರ ಬೀರುವಿನಲ್ಲಿಟ್ಟ, ಡೈಲಿ ಧರಿಸುವ ಚಿನ್ನದ ಆಭರಣಗಳನ್ನು (Gold Jewellery) ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಏಕೆಂದರೆ ಕಾಲಕ್ರಮೇಣ ಚಿನ್ನ ಕೂಡ ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ. ನಿಮ್ಮ ಚಿನ್ನದ ಆಭರಣಗಳು ಅದರ ನೈಸರ್ಗಿಕ ಹೊಳಪನ್ನು ಕಳೆದುಕೊಳ್ಳಲು ಸಾಮಾನ್ಯ ಕಾರಣವೆಂದರೆ ನಿಯಮಿತ ಬಳಕೆ. ನೀವು ಅವುಗಳನ್ನು ಹೆಚ್ಚು ಧರಿಸುತ್ತಿದ್ದರೆ, ಅವುಗಳು ಹೊಳಪನ್ನು ಕಳೆದುಕೊಳ್ಳುತ್ತವೆ. ಜೊತೆಗೆ ಡೈಲಿ ನೀವು ಹಾಕಿಕೊಳ್ಳುವ ಸುಗಂಧ ದ್ರವ್ಯಗಳು ಮತ್ತು ಮಾಯಿಶ್ಚರೈಸರ್‌ಗಳು ಕೂಡ ಚಿನ್ನಕ್ಕೆ ಹಾನಿಯುಂಟುಮಾಡಬಹುದು. ಮತ್ತೆ ಕಪಾಟಿನಲ್ಲಿ ಇದ್ದು ಇದ್ದು ಧೂಳು, ಕೊಳೆಯಂತಹ ಅಂಶಗಳು ಚಿನ್ನದ ಹೊಳಪನ್ನು ಮಂದ ಮಾಡಬಹುದು. ಹೀಗೆ ನಿಮ್ಮ ಚಿನ್ನದ ನೆಕ್ಲೇಸ್‌ಗಳು ಅಥವಾ ಕಿವಿಯೋಲೆಗಳು ತಮ್ಮ ಹೊಳಪನ್ನು ಕಳೆದುಕೊಳ್ಳಲು ಪ್ರಾರಂಭಿಸಿದಾಗ ನೀವು ಪ್ರತಿ ಬಾರಿ ಆಭರಣ ವ್ಯಾಪಾರಿಗಳ ಬಳಿಗೆ ಹೋಗಬೇಕಾಗಿಲ್ಲ. ಮನೆಯಲ್ಲೇ ನೀವು ಚಿನ್ನದ ಆಭರಣಗಳನ್ನು ಸ್ವಚ್ಛಗೊಳಿಸಬಹುದು. ಮನೆಯಲ್ಲಿ ನಿಮ್ಮ ಚಿನ್ನದ ಆಭರಣಗಳನ್ನು ಸ್ವಚ್ಛಗೊಳಿಸಲು ಕೆಲವು ಸರಳ ಮತ್ತು ಪರಿಣಾಮಕಾರಿ ಸಲಹೆಗಳು ಇಲ್ಲಿವೆ ನೋಡಿ ಈ ಕುರಿತು ತಿಳಿಯೋಣ ಬನ್ನಿ. ಇದನ್ನೂ ಓದಿ: ಮೊಣಕೈ-ಮೊಣಕಾಲು ತುಂಬಾನೇ ಕಪ್ಪಾಗಿದೆಯೇ? ನಿಮ್ಮ ಮನೆಯಲ್ಲಿಯೇ ಇರುವ ಈ ಪದಾರ್ಥವನ್ನು ಹಚ್ಚಿ ಚಿನ್ನದ ಆಭರಣಗಳನ್ನು ಸ್ವಚ್ಛಗೊಳಿಸಲು ಕೆಲವು ಸರಳ ಸಲಹೆಗಳು: - ನಿಮ್ಮ ಚಿನ್ನದ ಆಭರಣಗಳನ್ನು ಹಲ್ಲುಜ್ಜುವ ಬ್ರಷ್‌ನಿಂದ ಸ್ವಚ್ಛಗೊಳಿಸುವುದು ಸರಳ ಮತ್ತು ಅತ್ಯಂತ ಪರಿಣಾಮಕಾರಿ ವಿಧಾನಗಳಲ್ಲಿ ಒಂದಾಗಿದೆ. - ಸರಳವಾದ ಸಾಬೂನು ಮತ್ತು ನೀರಿನ ದ್ರಾವಣದಿಂದ ನಿಮ್ಮ ಸರಳ ಚಿನ್ನದ ನೆಕ್ಲೇಸ್‌ಗಳು, ಕಡಗಗಳು, ಕಿವಿಯೋಲೆಗಳು, ಬಳೆಗಳು ಮತ್ತು ಇತರ ಅಲಂಕಾರಗಳನ್ನು ನೀವು ಸ್ವಚ್ಛಗೊಳಿಸಬಹುದು. ನಿಮ್ಮ ಮೂಲ ಚಿನ್ನದ ಆಭರಣಗಳನ್ನು ಸೋಪ್ ನೀರಿನಿಂದ ಸ್ವಚ್ಛಗೊಳಿಸುವುದು ಸಂಗ್ರಹವಾದ ಕೊಳಕು ಮತ್ತು ಆಯಿಲ್‌ ಅನ್ನು ತೆಗೆದುಹಾಕುತ್ತದೆ. ನಿಮ್ಮ ಚಿನ್ನದ ಆಭರಣಗಳ ಹೊಳಪನ್ನು ಮರುಪಡೆಯಲು ಇದು ತ್ವರಿತ ಮತ್ತು ಸುಲಭವಾದ ಮಾರ್ಗಗಳಲ್ಲಿ ಒಂದಾಗಿದೆ. ಹಾಗಾದರೆ, ಸಾಬೂನು ಮತ್ತು ನೀರನ್ನು ಬಳಸಿ ನಿಮ್ಮ ಸರಳ ಚಿನ್ನದ ಆಭರಣಗಳನ್ನು ಹೇಗೆ ಸ್ವಚ್ಛಗೊಳಿಸಬಹುದು? ಬನ್ನಿ ಈ ಕುರಿತು ತಿಳಿಯೋಣ. - ಬಕೆಟ್‌ಗೆ ಅರ್ಧದಷ್ಟು ಬೆಚ್ಚಗಿನ ನೀರು ತುಂಬಿಸಿ. ಹಾಗೂ ಸೌಮ್ಯವಾದ ಸೋಪ್ ಅನ್ನು ಮಿಶ್ರಣ ಮಾಡಿ. ದ್ರಾವಣವನ್ನು ತಯಾರಿಸಲು, ನೀರಿನಲ್ಲಿ ಸೌಮ್ಯವಾದ ಮಾರ್ಜಕಗಳು ಅಥವಾ ಕೆಲವು ಹನಿ ಡಿಶ್ವಾಶಿಂಗ್ ದ್ರಾವಣಗಳನ್ನು ಮಿಶ್ರಣ ಮಾಡಿ. - ನಿಮ್ಮ ಚಿನ್ನದ ಆಭರಣಗಳನ್ನು ದ್ರಾವಣದಲ್ಲಿ ಅದ್ದಿ. 15-20 ನಿಮಿಷಗಳ ಕಾಲ ನೆನಸಿ. - ಅದರ ನಂತರ, ಅದನ್ನು ತಣ್ಣೀರಿನಿಂದ ತೊಳೆದು ಅದನ್ನು ಒಣ ಬಟ್ಟೆ ಅಥವಾ ಟವೆಲ್ ಮೇಲೆ ಇರಿಸಿ ಒಣಗಲು ಬಿಡಿ. - ಮೂಲೆಗಳಿಂದ ಕೊಳೆಯನ್ನು ತೆಗೆದುಹಾಕಲು ಮೃದುವಾದ ಬ್ರಷ್ ಅನ್ನು ಬಳಸಿ. ಆದರೆ ಆಭರಣಗಳನ್ನು ತುಂಬಾ ಗಟ್ಟಿಯಾಗಿ ಉಜ್ಜಬೇಡಿ. ಅದನ್ನು ಸುರಕ್ಷಿತವಾಗಿಡಲು ಮರೆಯದಿರಿ. - ನೀರು ಹೆಚ್ಚು ಬಿಸಿ ಇರಬಾರದು ಅಥವಾ ತಣ್ಣಗಾಗಬಾರದು, ಬೆಚ್ಚಗಿನ ನೀರಿನಿಂದ ತೊಳೆಯಬೇಕು. - ನೀವು ಟ್ಯಾಪ್ ವಾಟರ್ ಬದಲಿಗೆ ಸೋಡಿಯಂ-ಮುಕ್ತ ಸೆಲ್ಟ್ಜರ್ ನೀರು ಅಥವಾ ಕ್ಲಬ್ ಸೋಡಾವನ್ನು ಸಹ ಬಳಸಬಹುದು. - ಈ ಕಾರ್ಬೊನೇಟೆಡ್ ದ್ರವಗಳು ಆಭರಣಗಳಲ್ಲಿ ಸಂಗ್ರಹವಾದ ಕೊಳೆಯನ್ನು ತೆಗೆದುಹಾಕಬಹುದು. ಜೊತೆಗೆ ವೃತ್ತಿಪರ ಆಭರಣ ಸ್ವಚ್ಛಗೊಳಿಸುವ ದ್ರಾವಕಗಳನ್ನು ಸಹ ಖರೀದಿಸಬಹುದು. ಆದರೆ ನೆನಪಿಡಿ ರತ್ನದ ಕಲ್ಲುಗಳಿಂದ ಕೂಡಿದ ಆಭರಣಗಳನ್ನು ಸ್ವಚ್ಛಗೊಳಿಸಲು ನೀವು ಈ ಮೇಲಿನ ವಿಧಾನವನ್ನು ಅನುಸರಿಸಬಾರದು. ನೀವು ಸೋಪ್ ವಾಟರ್ ದ್ರಾವಣವನ್ನು ಬಳಸಿದರೂ ರತ್ನಗಳಿಂದ ಕೂಡಿದ ಆಭರಣಗಳನ್ನು ನೀರಿನಲ್ಲಿ ಕ್ಲಿನ್‌ ಮಾಡಬೇಡಿ ಎಂದು ದಿಶಿಸ್ ಡಿಸೈನರ್ ಜ್ಯುವೆಲರಿ ನಿರ್ದೇಶಕ ದಿಶಿ ಸೋಮಾನಿ ಹೇಳುತ್ತಾರೆ. ನಿಮ್ಮ ಬಂಗಾರ ಹೊಳಪು ಕಳೆದುಕೊಂಡಿಂದೆ ಅಂತಾ ನಿಮಗೆ ಅನಿಸಿದರೆ ಈ ಟ್ರಿಕ್ಸ್‌ ಫಾಲೋ ಮಾಡಿ None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.