NEWS

Beauty Tips: ಮೊಣಕೈ-ಮೊಣಕಾಲು ತುಂಬಾನೇ ಕಪ್ಪಾಗಿದೆಯೇ? ನಿಮ್ಮ ಮನೆಯಲ್ಲಿಯೇ ಇರುವ ಈ ಪದಾರ್ಥವನ್ನು ಹಚ್ಚಿ

ಪ್ರಾತಿನಿಧಿಕ ಚಿತ್ರ ಸೌಂದರ್ಯದ ವಿಚಾರದಲ್ಲಿ ಸ್ತ್ರೀಯರು ಕೊಂಚ ಹೆಚ್ಚು ಮುತುವರ್ಜಿ ವಹಿಸುತ್ತಾರೆ. ದೇಹದ ವಿವಿಧ ಭಾಗಗಳಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಕೈ, ಕತ್ತು, ತೋಳು, ಕಾಲು, ಮೊಣಕಾಲು, ಮೊಣಕೈ, ಮುಖ ಹೀಗೆ ಪ್ರತಿಯೊಂದು ದೇಹ ಭಾಗಗಳಿಗೂ ಆರೈಕೆ ಮಾಡುವುದು ಮುಖ್ಯವಾಗಿರುತ್ತದೆ. ಆದರೆ ಹೆಚ್ಚಿನವರಿಗೆ ತಮ್ಮ ಮೊಣಕಾಲು ಹಾಗೂ ಮೊಣಕೈ ಎಷ್ಟೇ ಕಾಳಜಿ ವಹಿಸಿದರೂ ಕಪ್ಪಗಿರುವುದು ಪೇಚಿಗೆ ಸಿಲುಕುವಂತೆ ಮಾಡುತ್ತದೆ. ಇದರಿಂದ ಶಾರ್ಟ್ ಟಾಪ್ ಹಾಕುವುದಾಗಿರಬಹುದು ಇಲ್ಲವೇ ಸ್ಲೀವ್‌ಲೆಸ್ ಡ್ರೆಸ್‌ಗಳನ್ನು ಹಾಕುವುದನ್ನು ಅವರು ಇಷ್ಟಪಡುವುದಿಲ್ಲ. ಈ ಭಾಗ ಕಪ್ಪಗಿರಲು ಕಾರಣವೇನು? ನಿಮ್ಮ ಮೊಣಕೈ ಹಾಗೂ ಮೊಣಕಾಲುಗಳಲ್ಲಿರುವ ಟಿಶ್ಯೂಗಳು ತೆಳುವಾಗಿರುತ್ತವೆ. ಹಾಗಾಗಿ ಇದು ಬೇಗ ಹಾನಿಗೊಳಗಾಗುತ್ತವೆ. ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳುವುದರಿಂದ ದೇಹದ ಈ ಭಾಗ ಬೇಗ ಕಪ್ಪಗಾಗಿಬಿಡುತ್ತವೆ. ಮೊಣಕೈ ಹಾಗೂ ಮೊಣಕಾಲುಗಳ ಕಪ್ಪನೆಯ ಬಣ್ಣವನ್ನು ಹೋಗಲಾಡಿಸಲು ಹಲವಾರು ಮನೆಮದ್ದುಗಳಿದ್ದು ಅವುಗಳನ್ನು ನೀವು ಸುರಕ್ಷಿತವಾಗಿ ಬಳಸಬಹುದಾಗಿದೆ. ಲಿಂಬೆ ರಸ ಲಿಂಬೆಯಲ್ಲಿ ವಿಟಮಿನ್ ಸಿ ಅಂಶವಿದ್ದು ಇದು ನೈಸರ್ಗಿಕ ಆ್ಯಂಟಿ ಆ್ಯಕ್ಸಿಡೆಂಟ್ ಆಗಿ ಕೆಲಸ ಮಾಡುತ್ತದೆ ಹಾಗೂ ಬ್ಲೀಚ್ ಕೂಡ ಮಾಡುತ್ತದೆ. ಈ ಭಾಗಗಳಲ್ಲಿರುವ ಕಪ್ಪು ಬಣ್ಣವನ್ನು ಹೋಗಲಾಡಿಸಲು ಲಿಂಬೆ ಸಹಕಾರಿಯಾಗಿದೆ. ಒಂದು ಅರ್ಧ ಹೋಳು ಲಿಂಬೆಯನ್ನು ಕಪ್ಪಗಿರುವ ಭಾಗಕ್ಕೆ ಹಚ್ಚಿ ಮಸಾಜ್ ಮಾಡಿ 10 ನಿಮಿಷ ಬಿಟ್ಟು ನಂತರ ತೊಳೆದುಕೊಳ್ಳಿ. ಉತ್ತಮ ಫಲಿತಾಂಶಕ್ಕಾಗಿ ಆಗಾಗ್ಗೆ ಇದನ್ನು ಮಾಡುತ್ತಿರಿ ಆಲೂಗಡ್ಡೆ ಬಳಸಿ ತ್ವಚೆಯ ಬ್ಲೀಚಿಂಗ್‌ಗೆ ಆಲೂಗಡ್ಡೆ ಸಹಕಾರಿಯಾಗಿದ್ದು ಇದು ಕಪ್ಪು ಕಲೆಗಳನ್ನು ನಿವಾರಿಸುತ್ತದೆ. ನಿಮ್ಮ ಮೊಣಕೈ ಹಾಗೂ ಕಾಲುಗಳಿಗೆ ಆಲೂಗಡ್ಡೆ ರಸವನ್ನು ಹಚ್ಚಿಕೊಳ್ಳಿ. ಇದಕ್ಕೆ ಕೆಲವು ಹನಿ ಲಿಂಬೆ ರಸ ಕೂಡ ಮಿಶ್ರ ಮಾಡಿ ಅದ್ಭುತ ಫಲಿತಾಂಶ ಪಡೆಯಬಹುದು. ಅಲೋವೇರಾದ ಬಳಕೆ ಹೈಪರ್‌ಪಿಗ್ಮೆಂಟೇಶನ್‌ಗೆ ಅಲೋವೇರಾ ಅತ್ಯುತ್ತಮವಾಗಿದೆ. ನೈಸರ್ಗಿಕ ಡಾರ್ಕ್ ನೀಸ್ ಪರಿಹಾರಕ್ಕಾಗಿ ಅನ್ವೇಷಿಸುತ್ತಿರುವಿರಾದರೆ ಅಲೋವೇರಾ ಬೆಸ್ಟ್ ಎಂದೆನ್ನಿಸಿದೆ. ಅಲೋವೇರಾ ಜೆಲ್ ಅನ್ನು ನೇರವಾಗಿ ಕಪ್ಪಗಾದ ಮೊಣಕೈ ಹಾಗೂ ಮೊಣಕಾಲುಗಳಿಗೆ ಹಚ್ಚಿ. ಆಲೀವ್ ಆಯಿಲ್ ಹಾಗೂ ಶುಗರ್ ಸ್ಕ್ರಬ್ ಒಮ್ಮೊಮ್ಮೆ ಮೊಣಕೈ ಹಾಗೂ ಮೊಣಕಾಲುಗಳಲ್ಲಿ ಮೃತ ಕೋಶಗಳು ನಿರ್ಮಾಣವಾಗಿದ್ದರೆ ಕೂಡ ಈ ಭಾಗ ಕಪ್ಪಗಾಗಿ ಕಾಣುತ್ತದೆ. ಆ ಸಮಯದಲ್ಲಿ ನಿಮಗೆ ಪರಿಣಾಮಕಾರಿ ಪರಿಹಾರ ಬೇಕಾಗುತ್ತದೆ. ಎರಡು ಚಮಚ ಆಲೀವ್ ಆಯಿಲ್‌ಗೆ ಒಂದು ಚಮಚ ಸಕ್ಕರೆ ಹಾಕಿ. ಬೇಕಾದರೆ ಎಸನ್ಶಿಯಲ್ ಆಯಿಲ್ಸ್ ಕೂಡ ಬಳಸಿಕೊಳ್ಳಬಹುದು. ನಿಮ್ಮ ಮೊಣಕೈ ಹಾಗೂ ಮೊಣಕಾಲುಗಳಿಗೆ ಈ ಮಿಶ್ರಣವನ್ನು ಹಚ್ಚಿ. ಚೆನ್ನಾಗಿ ಮಸಾಜ್ ಮಾಡಿ ಹಾಗೂ ಐದು ನಿಮಿಷ ಹಾಗೆಯೇ ಬಿಡಿ ಬೇಕಿಂಗ್ ಸೋಡಾ ಹಾಗೂ ಹಾಲು ಬೇಕಿಂಗ್ ಸೋಡಾ ಹಾಗೂ ಹಾಲು ಬಳಸಿ ಕೂಡ ಮೊಣಕೈ, ಮೊಣಕಾಲುಗಳ ಕಪ್ಪು ವರ್ತುಲಗಳನ್ನು ನಿವಾರಿಸಬಹುದಾಗಿದೆ. ಒಂದು ಚಮಚ ಬೇಕಿಂಗ್ ಸೋಡಾಕ್ಕೆ ಒಂದು ಚಮಚ ಹಾಲು ಹಾಕಿ ಮಿಶ್ರಣ ಸಿದ್ಧಪಡಿಸಿ. ಇದನ್ನು ನಿಮ್ಮ ಮೊಣಕೈ ಹಾಗೂ ಮೊಣಕಾಲಿಗೆ ಹಚ್ಚಿ. ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ ಗ್ರೀನ್ ಟೀಯ ಬಳಕೆ ಗ್ರೀನ್ ಟೀಯಲ್ಲಿ ಎಪಿಗಾಲೊಕ್ಟೆನಿನ್ ಗ್ಯಾಲೆಟ್ (EGCG) ಎಂಬ ಅಂಶವಿದೆ. ಇದು ಮೆಲನಿನ್ ಸಂಗ್ರಹವಾಗುವುದನ್ನು ತಡೆಯುತ್ತದೆ. ಗ್ರೀನ್ ಟೀ ಕುದುಸಿ ಇದು ತಣ್ಣಗಾದ ನಂತರ ಹತ್ತಿಯ ಉಂಡೆಯನ್ನು ಬಳಸಿಕೊಂಡು ಕಪ್ಪಗಾದ ಮೊಣಕೈ ಹಾಗೂ ಮೊಣಕಾಲಿಗೆ ಇದನ್ನು ಹಚ್ಚಿಕೊಳ್ಳಿ. ಅರಶಿನ, ಜೇನು, ಹಾಲು ಅರಶಿನದಲ್ಲಿ ಕರ್ಕ್ಯುಮಿನ್ ಅಂಶವಿದೆ ಇದು ಕಪ್ಪು ಕಲೆಗಳನ್ನು ನಿವಾರಿಸುತ್ತದೆ. ಹಾಲು ತ್ವಚೆಯನ್ನು ಮಾಯಿಶ್ಚರೈಸ್ ಮಾಡಿ ಹೊಳೆಯುವಂತೆ ಮಾಡುತ್ತದೆ. ಜೇನು ಕೂಡ ಉತ್ತಮ ನೈಸರ್ಗಿಕ ಪರಿಹಾರಕವಾಗಿದೆ. ಮೊಣಕೈ ಹಾಗೂ ಮೊಣಕಾಲುಗಳ ಕಪ್ಪು ಕಲೆಗಳನ್ನು ಹೋಗಲಾಡಿಸಲು ಅರಶಿನ, ಜೇನು, ಹಾಲನ್ನು ಮಿಶ್ರ ಮಾಡಿಕೊಂಡು ಪೇಸ್ಟ್ ತಯಾರಿಸಿ ಇದನ್ನು ಆ ಭಾಗಗಳಿಗೆ ಹಚ್ಚಿ. ಓಟ್‌ಮೀಲ್ ಹಾಗೂ ಯೋಗರ್ಟ್ ಓಟ್‌ಮೀಲ್‌ ಎಕ್ಸ್‌ಫೋಲಿಯೇಟರ್ ಎಂದೆನಿಸಿದ್ದು ನಿಮ್ಮ ಮೊಣಕೈ, ಮೊಣಕಾಲುಗಳಲ್ಲಿರುವ ಮೃತ ಕೋಶಗಳನ್ನು ನಿವಾರಿಸುತ್ತದೆ. ಯೋಗರ್ಟ್‌ನಲ್ಲಿ ಲ್ಯಾಕ್ಟಿಕ್ ಆ್ಯಸಿಡ್ ಇದ್ದು, ಇದು ತ್ವಚೆಯನ್ನು ಮಾಯಿಶ್ಚರೈಸ್ ಮಾಡಿ ಹೊಳೆಯುವಂತೆ ಮಾಡುತ್ತದೆ. ಇದೆರಡನ್ನು ಮಿಶ್ರ ಮಾಡಿಕೊಳ್ಳಿ ನಂತರ ಕಪ್ಪಾದ ಭಾಗಕ್ಕೆ ಹಚ್ಚಿ. ಹತ್ತು ನಿಮಿಷಗಳ ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.