NEWS

Bollywood: ಸಿನಿಮಾ ಮಾಡ್ತೀನಿ ಎಂದಿದ್ದಕ್ಕೆ ಅಪ್ಪ ಕಪಾಳಮೋಕ್ಷ ಮಾಡಿದ್ರು! ಮಗನ ಮೂವಿ ಥಿಯೇಟರ್​​ನಲ್ಲೂ OTTನಲ್ಲೂ ಬ್ಲಾಕ್​ಬಸ್ಟರ್ ಹಿಟ್

ಬಾಲಿವುಡ್ ಮೂವಿ ಡೈರೆಕ್ಟರ್ ಬಾಲಿವುಡ್​ನ (Bollywood) ಖ್ಯಾತ ಡೈರೆಕ್ಟರ್ ಹಿಂದೊಮ್ಮೆ ಎಕಾನಮಿಕ್ಸ್ (Economics) ಟಾಪರ್ ಆಗಿದ್ದರು. ಕ್ಲಾಸ್ ಟಾಪರ್, ಎಕಾನಮಿಕ್ಸ್ ಟಾಪರ್ ಎನಿಸಿಕೊಂಡಿದ್ದ ಬಾಲಿವುಡ್​ನ (Bollywood) ಖ್ಯಾತ ನಿರ್ದೇಶಕ ಮೊದಲ ಬಾರಿಗೆ ತಂದೆಯ ಬಳಿ ಅಪ್ಪಾ ನಾನು ಸಿನಿಮಾ ಮಾಡ್ಬೇಕು ಎಂದಾಗ ಕಪಾಳಮೋಕ್ಷ ಮಾಡಿದ್ದರಂತೆ ತಂದೆ. ಆದರೆ ಆ ನಂತರ ಅವರು ಬಾಲಿವುಡ್​ನಲ್ಲಿಯೇ ಖ್ಯಾತ ಸಿನಿಮಾ ನಿರ್ದೇಶಕರಾಗಿ ಬಂದಿದ್ದಷ್ಟೇ ಅಲ್ಲದೆ ಅವಾರ್ಡ್​ಗಳನ್ನೂ ಪಡೆದರು. ಕಳೆದ ವರ್ಷ ವಿಧು ವಿನೋದ್ ಚೋಪ್ರಾ ಅಭಿನಯದ ‘12ನೇ ಫೇಲ್’ ಸಿನಿಮಾ ತೆರೆಕಂಡಿತ್ತು. ಈ ಚಿತ್ರವು ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಸಾಕಷ್ಟು ಪ್ರೀತಿಯನ್ನು ಪಡೆಯಿತು. ಹೌದು ಈ ಸಿನಿಮಾ ಡೈರೆಕ್ಟರ್ ಕಥೆ ಇದು. ಬಾಲಿವುಡ್ ನ ಹಿರಿಯ ನಿರ್ದೇಶಕ ವಿಧು ವಿನೋದ್ ಚೋಪ್ರಾ ಅವರು ‘ಪರಿಂದಾ’, ‘ಖಾಮೋಶ್’, ‘1942: ಎ ಲವ್ ಸ್ಟೋರಿ’ ಮುಂತಾದ ಹಲವು ಉತ್ತಮ ಚಿತ್ರಗಳನ್ನು ನೀಡಿದ್ದಾರೆ. ಇತ್ತೀಚೆಗೆ, ಐಎಫ್‌ಪಿ ಉತ್ಸವದ ಸಂದರ್ಭದಲ್ಲಿ, ಅವರು ತಮ್ಮ ತಂದೆಯ ಮುಂದೆ ಮೊದಲ ಬಾರಿಗೆ ಚಿತ್ರ ಮಾಡುವ ಬಗ್ಗೆ ಮಾತನಾಡಿದಾಗ, ಅವರು ಕಪಾಳಮೋಕ್ಷ ಮಾಡಿದ್ದಾರೆ ಎಂದು ಹೇಳಿದರು. ಈ ಒಂದು ಘಟನೆಯ ಬಗ್ಗೆ ವಿವರಿಸಿದ ಅವರು’ನಾನು ಸಿನಿಮಾ ಮಾಡುತ್ತೇನೆ ಎಂದು ನನ್ನ ತಂದೆಗೆ ಹೇಳಿದಾಗ, ಅವರು ನನಗೆ ಕಪಾಳಮೋಕ್ಷ ಮಾಡಿದರು. ನಾನು ಹಸಿವಿನಿಂದ ಸಾಯುತ್ತೇನೆ ಎಂದು ಹೇಳಿದರು. ಮುಂಬೈನಲ್ಲಿ ಹೊಸಬರ ಜೀವನ ಹೇಗಿರುತ್ತೆ? ನನ್ನನ್ನು ಸಿನಿಮಾ ಶಾಲೆಗೆ ಕಳುಹಿಸಲು ಅವರ ಬಳಿ ಹಣವಿರಲಿಲ್ಲ. ನಾನು ತುಂಬಾ ಕಷ್ಟಪಟ್ಟೆ. ನಾನು ಕಾಶ್ಮೀರ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದ ಗೌರವಗಳಲ್ಲಿ ಅಗ್ರಸ್ಥಾನ ಪಡೆದಿದ್ದೇನೆ. ಇದರಿಂದ ನಾನು ಭಾರತ ಸರ್ಕಾರದಿಂದ ರಾಷ್ಟ್ರೀಯ ವಿದ್ಯಾರ್ಥಿವೇತನವನ್ನು ಪಡೆಯಬಹುದು ಎಂದು ನನಗೆ ಗೊತ್ತಿತ್ತು ಎಂದಿದ್ದಾರೆ. 250 ರೂಪಾಯಿ ಸ್ಕಾಲರ್‌ಶಿಪ್ ಸಿಕ್ಕಿದ್ದು, ಅದರೊಂದಿಗೆ ನಾನು ಸಿನಿಮಾ ಶಾಲೆಗೆ ಹೋಗಿದ್ದೆ. ತಮಾಷೆಯೆಂದರೆ ನನ್ನ ಮೊದಲ ಚಿತ್ರ ಆಸ್ಕರ್‌ಗೆ ನಾಮನಿರ್ದೇಶನಗೊಂಡಾಗ ನಾನು ನನ್ನ ತಂದೆಗೆ ಕರೆ ಮಾಡಿ ತಂದೆ, ನನ್ನ ಚಿತ್ರ ಆಸ್ಕರ್‌ಗೆ ಹೋಗುತ್ತಿದೆ ಎಂದು ಹೇಳಿದೆ. ತುಂಬಾ ಚೆನ್ನಾಗಿದೆ ಅಂದರು, ಆದರೆ ಎಷ್ಟು ಹಣ ಬರುತ್ತಿದೆ ಎಂದು ಕೇಳಿದ್ದರು. ಬಾಲ್ಯದಿಂದಲೂ ಸಿನಿಮಾವನ್ನು ಪ್ರೀತಿಸುತ್ತಿದ್ದ ವಿಧು ವಿನೋದ್ ಚೋಪ್ರಾ, ಸಿನಿಮಾ ನಿರ್ಮಾಪಕ, ನಿರ್ದೇಶಕ, ಬರಹಗಾರರಾಗಿ ತಮ್ಮನ್ನು ತಾವು ಹಲವು ಬಾರಿ ಸಾಬೀತು ಮಾಡಿದ್ದಾರೆ. ಹಿಂದಿ ಚಲನಚಿತ್ರಗಳಿಗೆ ಅವರ ಅನುಪಮ ಕೊಡುಗೆಗಾಗಿ ಅವರು ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇದನ್ನೂ ಓದಿ: Pooja Hegde: ಶ್ರೀಲಂಕಾದಲ್ಲಿ ಕರಾವಳಿ ಚೆಲುವೆ! ಪೂಜಾ ಹೆಗ್ಡೆ ವೆಕೇಷನ್ ‘ಮುನ್ನಾಭಾಯಿ ಎಂಬಿಬಿಎಸ್’, ‘ಶಿಕಾರ’, ‘ಮಿಷನ್ ಕಾಶ್ಮೀರ್’, ‘3 ಈಡಿಯಟ್ಸ್’ ಚಿತ್ರಗಳನ್ನು ಬಾಲಿವುಡ್‌ಗೆ ನೀಡಿದ್ದಾರೆ. ಅವರ ಸಿನಿಮಾಗಳು ಪ್ರೇಕ್ಷಕರಿಂದ ಭಾರೀ ಮೆಚ್ಚುಗೆಯನ್ನೂ ಪಡೆದಿವೆ. ಅವರ ಸಿನಿಮಾ ರೀತಿಗೆ ಸಪರೇಟ್ ಫ್ಯಾನ್ಸ್ ಬೇಸ್ ಕೂಡಾ ಇದೆ. ಸೂಪರ್ ಹಿಟ್ ಆಗಿತ್ತು 12th ಫೇಲ್ ವಿಧು ವಿನೋದ್ ಚೋಪ್ರಾ ಅವರ 12ತ್ ಫೇಲ್ ಚಿತ್ರ ಇಡೀ ದೇಶವೇ ಬೆಚ್ಚಿ ಬೀಳುವಂತೆ ಮಾಡಿದೆ. ಇದು ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಮತ್ತು ಅವರ ಪತ್ನಿ, ಐಆರ್‌ಎಸ್ ಅಧಿಕಾರಿ ಶ್ರದ್ಧಾ ಜೋಶಿ ಅವರ ಜೀವನ ಕಥೆಯಾಗಿದ್ದು, ನಟರಾದ ವಿಕ್ರಾಂತ್ ಮಾಸ್ಸೆ ಮತ್ತು ಮೇಧಾ ಶಂಕರ್ ಅವರು ತೆರೆಯ ಮೇಲೆ ನಟಿಸಿದ್ದಾರೆ. ಅವರ ಹೃದಯಸ್ಪರ್ಶಿ ಕಥೆಯನ್ನು ಇಡೀ ದೇಶವೇ ಶ್ಲಾಘಿಸಿತ್ತು. ಸಾಮಾಜಿಕ ಮಾಧ್ಯಮಗಳು ಮೆಚ್ಚುಗೆಯ ಪೋಸ್ಟ್ ಗಳಿಂದ ತುಂಬಿದ್ದವು. ಈ ಸಿನಿಮಾಗೆ ವ್ಯಾಪಕವಾಗಿ ಮೆಚ್ಚುಗೆ ವ್ಯಕ್ತವಾಗಿತ್ತು. 20 ಕೋಟಿಯಲ್ಲಿ ರೆಡಿಯಾದ ಮೂವಿ 100 ಕೋಟಿಗೂ ಹೆಚ್ಚು ಗಳಿಸಿತ್ತು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.